Asianet Suvarna News Asianet Suvarna News

Health Tips: ಪದೇ ಪದೇ ರಾತ್ರಿ ಎಚ್ಚರವಾಗ್ತಿದ್ದರೆ ಎಚ್ಚರ: ಈ ಕಾಯಿಲೆ ಇರಬಹುದು!

ಅಪರೂಪಕ್ಕೊಮ್ಮೆ ರಾತ್ರಿ ಎಚ್ಚರಾಗೋದು ಸಹಜ. ಕೆಲವರಿಗೆ ಪ್ರತಿ ದಿನ ರಾತ್ರಿ ಆಗಾಗ ಎಚ್ಚರವಾಗ್ತಿರುತ್ತದೆ. ನಿದ್ರೆ ಬರದೆ ಹೊರಳಾಡ್ತಿರುತ್ತಾರೆ. ಇದನ್ನು ನಿರ್ಲಕ್ಷ್ಯ ಮಾಡ್ಬೇಡಿ. ರಾತ್ರಿ ಆಗಾಗ ಏಳ್ತೆನೆ ಎನ್ನುವವರು ಲಿವರ್ ಚೆಕ್ ಮಾಡಿಸಿಕೊಳ್ಳೋದು ಒಳ್ಳೇದು.
 

Waking Up At Night Is A Sign Of Liver Disease
Author
First Published Dec 17, 2022, 3:35 PM IST

ರಾತ್ರಿ ಹಾಸಿಗೆ ಮೇಲೆ ತಲೆಯಿಟ್ರೆ ಬೆಳಿಗ್ಗೆ ಏಳುವವರಿದ್ದಾರೆ. ರಾತ್ರಿ ಏನಾಯ್ತು ಎಂಬುದು ಅವರಿಗೆ ಸ್ವಲ್ಪವೂ ತಿಳಿಯೋದಿಲ್ಲ. ಇದನ್ನು ನಾವು ಅತ್ಯುತ್ತಮ ನಿದ್ರೆ ಎನ್ನಬಹುದು. ಇಂಥ ನಿದ್ರೆ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಇನ್ನು ಕೆಲವರು ರಾತ್ರಿ ಪೂರ್ತಿ ನಿದ್ರೆ ಮಾಡೋದಿಲ್ಲ. ಅತಿ ಸೂಕ್ಷ್ಮ ನಿದ್ರೆಯಿಂದಾಗಿ ಅವರು ಕಿರಿಕಿರಿ ಅನುಭವಿಸುತ್ತಾರೆ. ಸರಿಯಾಗಿ ನಿದ್ರೆ ಬರದ ಕಾರಣ ಬಾತ್ ರೂಮಿಗೆ ಆಗಾಗ ಹೋಗುವವರಿದ್ದಾರೆ. ರಾತ್ರಿ ಮೂರ್ನಾಲ್ಕು ಬಾರಿ ವಾಶ್ ರೂಮಿಗೆ ಹೋಗುವವರನ್ನು ನೀವು ನೋಡಿರಬಹುದು. ಪದೇ ಪದೇ ಏಳೋದು ಒಳ್ಳೆಯ ಅಭ್ಯಾಸವಲ್ಲ. ಇದ್ರಿಂದ ನಿದ್ರೆ ಪೂರ್ಣಗೊಳ್ಳುವುದಿಲ್ಲ. ದೇಹಕ್ಕೆ ಸರಿಯಾಗಿ ವಿಶ್ರಾಂತಿ ಸಿಕ್ಕಿಲ್ಲವೆಂದ್ರೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತದೆ. ಪ್ರತಿ ದಿನ ರಾತ್ರಿ ನೀವು ಒಂದು ಸಮಯದಲ್ಲಿ ಎದ್ದು ವಾಶ್ ರೂಮಿಗೆ ಹೋಗ್ತಿದ್ದರೆ ಈ ಲೇಖನವನ್ನು ಅಗತ್ಯವಾಗಿ ಓದಿ. ಯಾಕೆಂದ್ರೆ ರಾತ್ರಿಯ ಒಂದಿಷ್ಟು ಸಮಯದಲ್ಲಿ ನಿಮಗೆ ಎಚ್ಚರವಾಗ್ತಿದೆ ಅಂದ್ರೆ ನಿಮಗೆ ಯಕೃತು ಸಮಸ್ಯೆಯಿದೆ ಎಂದರ್ಥ. ನಾವಿಂದು ಆ ಸಮಯ ಯಾವುದು ಹಾಗೆ ಸಮಸ್ಯೆ ಏನು ಎಂಬುದನ್ನು ನಿಮಗೆ ಹೇಳ್ತೆವೆ.

ರಾತ್ರಿ ಈ ಸಮಯದಲ್ಲಿ ಎಚ್ಚರವಾಗುತ್ತಾ?: ರಾತ್ರಿ 1 ಗಂಟೆಯಿಂದ 4 ಗಂಟೆಯ ನಡುವೆ ನಿಮಗೆ ಎಚ್ಚರವಾಗ್ತಿದೆಯಾ?  ಹಾಗಾದ್ರೆ ನೀವು ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು. ಇದು ಯಕೃತ್ತಿ (Liver) ನ ಕಾಯಿಲೆಯ ಲಕ್ಷಣವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.  

ಅಧ್ಯಯನದಲ್ಲಿ ಪತ್ತೆಯಾಗಿದ್ದು ಏನು?: ಈ ಬಗ್ಗೆ ಸಂಶೋಧನೆ (Research) ಯೊಂದು ನಡೆದಿದೆ. ಅದ್ರ ಪ್ರಕಾರ ನೀವು ಮಧ್ಯರಾತ್ರಿ ಒಂದು ಗಂಟೆಯಿಂದ 4 ಗಂಟೆಯೊಳಗೆ ಎಚ್ಚರಗೊಳ್ತಿದ್ದರೆ ನಿಮಗೆ ಯಕೃತ್ತಿನ ಸಮಸ್ಯೆಯಿದೆ ಎಂದರ್ಥ. ಈ ಯಕೃತ್ತಿನ ಕಾಯಿಲೆಯನ್ನು ಕೊಬ್ಬಿನ ಯಕೃತು ಎಂದು ಕರೆಯಲಾಗುತ್ತದೆ.  ಆರೋಗ್ಯ ತಜ್ಞರ ಪ್ರಕಾರ, ಇದನ್ನು ವೈದ್ಯಕೀಯ ಭಾಷೆಯಲ್ಲಿ ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ ಎಂದು ಇದನ್ನು ಕರೆಯುತ್ತಾರೆ. ಪಿತ್ತಜನಕಾಂಗದಲ್ಲಿ ಕೊಬ್ಬಿನ ಕೋಶಗಳು ಸಂಗ್ರಹವಾದಾಗ ಕಾಡುವ ಕಾಯಿಲೆ ಇದಾಗಿದೆ. ಇದ್ರಿಂದ ಲಿವರ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ವಿಷಕಾರಿ ತ್ಯಾಜ್ಯ ದೇಹದಿಂದ ಹೊರಗೆ ಹೋಗುವುದಿಲ್ಲ. ದೇಹದಲ್ಲಿಯೇ ಇದು ಸಂಗ್ರಹವಾಗಲು ಶುರುವಾಗುತ್ತದೆ. 

2022ರಲ್ಲಿ ಅತಿ ಹೆಚ್ಚು ಮಂದಿ ಫಾಲೋ ಮಾಡಿರೋ ಡಯೆಟ್‌ ಇದು, ನೀವೂ ಟ್ರೈ ಮಾಡ್ಬೋದು

ರಾತ್ರಿ ಒಂದು ಗಂಟೆಗೂ, ಲಿವರ್ ಗೂ ಏನು ಸಂಬಂಧ ? : ಲಿವರ್ ತಜ್ಞರ ಪ್ರಕಾರ, ರಾತ್ರಿ 1 ಗಂಟೆಯಿಂದ 4 ಗಂಟೆಯ ನಡುವೆ ಪದೇ ಪದೇ ನಿದ್ದೆ ಕೆಡುತ್ತಿದ್ದರೆ ಯಕೃತ್ತಿನ ಸಮಸ್ಯೆ ಇರಬಹುದು ಎಂದರ್ಥ. ಏಕೆಂದರೆ ಈ ಸಮಯದಲ್ಲಿ ಲಿವರ್ ನಮ್ಮ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ನಿಮಗೆ ಯಕೃತ್ತು ಕೊಬ್ಬಿನ ಸಮಸ್ಯೆಯಿದ್ದರೆ ಅಥವಾ ಲಿವರ್ ನಿಧಾನವಾಗಿ ಕೆಲಸ ಮಾಡ್ತಿದ್ದರೆ ದೇಹವನ್ನು ನಿರ್ವಿಷಗೊಳಿಸಲು ಮತ್ತು ಶುದ್ಧೀಕರಿಸಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಶಕ್ತಿ ಪಡೆಯಲು ನರಮಂಡಲವು ನಮ್ಮನ್ನು ಪ್ರಚೋದಿಸುತ್ತದೆ. ಇದ್ರಿಂದ ನಿದ್ರಾಭಂಗವಾಗುತ್ತದೆ. ನಿಮ್ಮ ಲಿವರ್ ಆರೋಗ್ಯವಾಗಿದ್ದರೆ ನಿಮ್ಮ ನಿದ್ರೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಲಿವರ್ ಅದ್ರ ಕೆಲಸವನ್ನು ಆರಾಮವಾಗಿ ಮಾಡುತ್ತದೆ. 

ಇವರನ್ನು ಕಾಡುತ್ತೆ ಲಿವರ್ ಖಾಯಿಲೆ : ಸಾಮಾನ್ಯವಾಗಿ ದಪ್ಪಗಿರುವ, ಕೊಬ್ಬು ಹೆಚ್ಚಿರುವ ಜನರಿಗೆ ಲಿವರ್ ಸಮಸ್ಯೆ ಮಾಮೂಲಿ. ಇದಲ್ಲದೆ ಟೈಪ್ 2 ಡಯಾಬಿಟಿಸ್ ಸಮಸ್ಯೆ ಇರುವವರನ್ನು ಕೂಡ ಲಿವರ್ ಖಾಯಿಲೆ ಕಾಡುತ್ತದೆ. ಕೊಲೆಸ್ಟರಾಲ್ ಮಟ್ಟ ಹೆಚ್ಚಾದಾಗ ಹಾಗೂ ಥೈರಾಯ್ಡ್ ಸಮಸ್ಯೆಯಿರುವ ಜನರು ಲಿವರ್ ಹಾಳಾಗುವ ಅಪಾಯವನ್ನು ಎದುರಿಸುತ್ತಾರೆ. 

Women's Health: ಗರ್ಭಧಾರಣೆ ಸಾಧ್ಯವಾಗ್ತಿಲ್ವಾ ? ಹಾಗಿದ್ರೆ ತಪ್ಪದೇ ಈ ಟೆಸ್ಟ್ ಮಾಡಿಸ್ಕೊಳ್ಳಿ

ಲಿವರ್ ಆರೋಗ್ಯ ನಿಮ್ಮ ಕೈನಲ್ಲೇ ಇದೆ : ಲಿವರ್ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ಜೀವನಶೈಲಿ ಮುಖ್ಯವಾಗುತ್ತದೆ. ನಾವು ಹಣ್ಣು, ಹಸಿರು ತರಕಾರಿ, ಧಾನ್ಯಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕಾಗುತ್ತದೆ. ತೂಕ ಇಳಿಕೆ ಮಾಡುವುದು ಮುಖ್ಯವಾಗುತ್ತದೆ. ದೈಹಿಕ ವ್ಯಾಯಾಮ ಮಾಡುವುದು ಒಳ್ಳೆಯದು.  

Follow Us:
Download App:
  • android
  • ios