Asianet Suvarna News Asianet Suvarna News

Vyvuz Capsule : ಒಮಿಕ್ರಾನ್ ಭೀತಿ ಮಧ್ಯೆ ಮಾರುಕಟ್ಟೆಗೆ ಬಂತು ವೈರಸ್ ತಡೆಗಟ್ಟುವ ಮಾತ್ರೆ!

ಒಮಿಕ್ರಾನ್ ಭೀತಿ ಮಧ್ಯೆ ಮಾರುಕಟ್ಟೆಗೆ ಬಂದ ಕ್ಯಾಪ್ಸುಲ್
ಡೆಲ್ಟಾ ಹಾಗೂ ಒಮಿಕ್ರಾನ್ ವೈರಸ್ ತಡೆಗಟ್ಟಲು ಪರಿಣಾಮಕಾರಿ ಎಂದು ಸಾಬೀತು
30 ಸಸ್ಯಗಳಿಗೆ ವೈರಸ್ ತಡೆಯುವ ಶಕ್ತಿ ಇದೆ ಎನ್ನುವುದು ದೃಢ

vyvuz will control Covid 19 virus says Plant based medication company atrimed san
Author
Bengaluru, First Published Dec 24, 2021, 11:10 PM IST

ಬೆಂಗಳೂರು (ಡಿ.24): ದಿನಕ್ಕೊಂದು ಹೊಸ ರೂಪಾಂತರ, ಮಾಸ್ಕ್, ಸ್ಯಾನಿಟೈಜರ್ ಗಳಲ್ಲೇ ಎರಡು ವರ್ಷ ದೂಡಿದ ವಿಶ್ವಕ್ಕೆ ಹೊಸ ಆಶಾಕಿರಣ ಸಿಕ್ಕಿದೆ. ಈವರೆಗೂ ಕೋವಿಡ್-19 ವೈರಸ್ ಅನ್ನು ನಿಯಂತ್ರಿಸುವ ಸಲುವಾಗಿ ಲಸಿಕೆಗಳನ್ನು ನೀಡುತ್ತಿರುವ ದೇಶಗಳಿಗೆ, ಸಂಪೂರ್ಣ ಕೋವಿಡ್-19 ವೈರಸ್ (COVID-19) ಅನ್ನು ತಡೆಗಟ್ಟುವ ಮಾತ್ರೆ ಮಾರುಕಟ್ಟೆಗೆ ಬಂದಿದೆ ಎಂದರೆ ಅಚ್ಚರಿಯಾಗದೇ ಇರದು. ಇಂಥದ್ದೊಂದು ಸಾಧನೆ ಮಾಡಿದ್ದಾಗಿ ಬೆಂಗಳೂರು ಮೂಲದ ಸಸ್ಯ ಆಧಾರಿತ ಔಷಧ (Plant Based Medication)ಕಂಪನಿ ಆಟ್ರಿಮೆಡ್ ಫಾರ್ಮಾಸ್ಯುಟಿಕಲ್ (Atrimed Pharmaceuticals) ಹೇಳಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುವ ವಿಶ್ವಕ್ಕೆ, ಸಂಶೋಧಕರು ಹೊಸ ಹೊಸ ಬಗೆಯ ಸಲ್ಯೂಷನ್ ಗಳನ್ನು ಹುಡುಕುವ ಮೂಲಕ ಹೋರಾಟಕ್ಕೆ ಜೊತೆಯಾಗಿದ್ದಾರೆ. ಅದರಲ್ಲಿ ಒಂದು ಆಟ್ರಿಮೆಡ್ ಫಾರ್ಮಾಸ್ಯುಟಿಕಲ್ ಸಂಸ್ಥೆ ತಯಾರಿಸಿರುವ ಕ್ಯಾಪ್ಸುಲ್ (Capsule).

ಈ ಕುರಿತಂತೆ ಮಾತನಾಡಿರುವ ಆಟ್ರಿಮೆಡ್ ಸಂಸ್ಥಾಪಕ ಡಾ. ಹೃಶಿಕೇಶ್ ದಾಮ್ಲೆ (Atrimed Pharmaceuticals MD Hrishikesh Damle), ತಮ್ಮ ಕಂಪನಿ ತಯಾರಿಸಿರುವ ಈ ಮಾತ್ರೆ ಕೋವಿಡ್-19 ಮಾತ್ರವಲ್ಲ, ಅದರ ರೂಪಾಂತರಗಳಾದ ಡೆಲ್ಟಾ, ಒಮಿಕ್ರಾನ್ ವೈರಸ್ ಗಳನ್ನು (Virus) ತಡೆಗಟ್ಟುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ. ವೈವಝ್ (Vyvuz) ಹೆಸರಿನ ಕ್ಯಾಪ್ಸುಲ್ ಅನ್ನು ಸಂಸ್ಥೆ ತಯಾರು ಮಾಡಿದ್ದು, ಕೇರಳ (Kerala) ಡ್ರಗ್ ಅಥಾರಿಟಿಯಿಂದ ಈಗಾಗಲೇ ಪ್ರಾಡಕ್ಟ್ ಲೈಸೆನ್ಸ್ ಅನ್ನೂ ಪಡೆದುಕೊಂಡಿದೆ. 

ಅದರಲ್ಲೂ ಪ್ರಸ್ತುತ ಭಾರತಕ್ಕೆ ಭೀತಿ ಹುಟ್ಟಿಸಿರುವ ರೂಪಾಂತರಗಳಾದ ಒಮಿಕ್ರಾನ್ (Omicron)ಹಾಗೂ ಡೆಲ್ಟಾ (Delta)ವೈರಸ್ ಗಳನ್ನು ಈ ಮಾತ್ರೆ ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲುದು. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಆಟ್ರಿಮೆಡ್ (Atrimed)ಸಂಸ್ಥೆ ಹೇಳಿದೆ. ಅದರೊಂದಿಗೆ ಭಾರತ ಸರ್ಕಾರದ ಬಯೋ ಟೆಕ್ನಾಲಜಿ ಪ್ರಯೋಗಾಲಯದಲ್ಲೂ ಈ ಮಾತ್ರೆಗಳ ಪರೀಕ್ಷೆ ಮಾಡಲಾಗಿದ್ದು, ಅಲ್ಲಿಯೂ ಉತ್ತಮ ಪರಿಣಾಮಕಾರಿತ್ವವನ್ನು ತೋರಿದೆ. ವೈರಸ್ ವಿರುದ್ಧ ಹೋರಾಟದಲ್ಲಿ ಶೇ. 99.9 ರಷ್ಟು ವೈವಝ್ ಮಾತ್ರೆಗಳು ಪರಿಣಾಮಕಾರಿ ಎನ್ನುವುದು ದೃಢವಾಗಿದೆ ಎಂದು ಸಂಸ್ಥೆ ತಿಳಿಸಿದೆ.

 IIT Kanpur Study : ಭಾರತದಲ್ಲಿ ಫೆಬ್ರವರಿ ವೇಳೆಗೆ ಉತ್ತುಂಗಕ್ಕೇರಲಿದೆ Covid-19 ಮೂರನೇ ಅಲೆ!
ಪ್ರಯೋಗಾಲಯದಲ್ಲಿ ಡೆಲ್ಟಾ ವೈರಸ್ ಮೇಲೆ ಈ ಮಾತ್ರೆಯ ಪ್ರಯೋಗ ಮಾಡಲಾಗಿದೆ ಹಾಗೂ ಈ ವೈರಸ್ ಮೇಲೆ ಸಂಪೂರ್ಣವಾಗಿ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ ಎಂದು ಆಟ್ರಿಮೆಡ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಹೃಶಿಕೇಶ್ ದಾಮ್ಲೆ ಹೇಳಿದ್ದಾರೆ. ನಾವು ನಡೆಸಿರುವ ಪ್ರಯೋಗಳ ಆಧಾರದ ಮೇಲೆ, ನಮ್ಮ ನಡುವೇ ಇರುವ 30 ಸಸ್ಯಗಳಿಗೆ ವೈರಸ್ ಅನ್ನು ನಿಯಂತ್ರಿಸುವ ಹಾಗೂ ನಮ್ಮ ದೇಹಕ್ಕೆ ಪ್ರವೇಶ ನೀಡದೇ ಇರುವ ಶಕ್ತಿಯನ್ನು ಹೊಂದಿದೆ. ಈ ಮಾತ್ರೆಗಳ ಸಂಶೋಧನೆ ವರ್ಷಗಳಿಂದ ನಡೆಯುತ್ತಿದ್ದು, ವೈರಸ್ ಅನ್ನು ನಿಯಂತ್ರಿಸಲು ಮಾತ್ರೆಗಳೇ ಪರಿಣಾಮಕಾರಿ ಎನ್ನುವುದು ನಮ್ಮ ಅಭಿಪ್ರಾಯ ಎಂದು ತಿಳಿಸಿದ್ದಾರೆ.

Delmicron Variant: ಪಾಶ್ಚಿಮಾತ್ಯ ದೇಶಗಳಲ್ಲಿ ಹೊಸ ರೂಪಾಂತರಿ: ಕೋವಿಡ್‌ ಹೆಚ್ಚಳಕ್ಕೆ ಡೆಲ್ಮಿಕ್ರೋನ್ ಕಾರಣ!
ಕೇರಳದಲ್ಲಿ ಈಗಾಗಲೇ ಬಳಕೆ ಆರಂಭ: ಭಾರತದಲ್ಲಿ ಪ್ರಸ್ತುತ 40 ಸಾವಿರ ಭಿನ್ನ ಮಾದರಿಯ ಸಸ್ಯಗಳಿದ್ದು, ಮನುಷ್ಯ ಕೇವಲ 3 ಸಾವಿರ ಸಸ್ಯಗಳನ್ನು ಮಾತ್ರವೇ ಉಪಯೋಗಿಸಿದ್ದಾನೆ. ಅಶ್ವಗಂಧ, ಮುತಿಲ್ ಹಾಗೂ ಕಿರಿಯಾಥ ಸಸ್ಯಗಳಿಂದ ವೈವಝ್ ಮಾತ್ರೆಗಳ ಸಂಶೋಧನೆ ಮಾಡಲಾಗಿದೆ ಎಂದು ಡಾ. ಹೃಶಿಕೇಶ್ ದಾಮ್ಲೆ ಹೇಳಿದ್ದಾರೆ. ಕೇರಳ  ಮಾರುಕಟ್ಟೆಗೆ ವೈವಝ್ ಮಾತ್ರೆಯನ್ನು ಪರಿಚಯಿಸಲಾಗಿದೆ. ದಿನಕ್ಕೆ 6 ಮಾತ್ರೆಗಳನ್ನು ತೆಗೆದುಕೊಳ್ಳಬೇಕಿದ್ದು, ಒಂದು ಮಾತ್ರೆಗೆ 6 ರೂಪಾಯಿ ದರ ನಿಗದಿ ಮಾಡಲಾಗಿದೆ. ಕೇರಳದಲ್ಲಿ ಕೋವಿಡ್ ವಿರುದ್ಧ ಹೋರಾಟಕ್ಕೆ ಇದು ಪ್ರಮುಖ ಪಾತ್ರ ವಹಿಸಿದ್ದು, ವ್ಯಕ್ತಿಯೊಬ್ಬ ಒಂದು ದಿನಕ್ಕೆ 36 ರೂಪಾಯಿಗಳ ಮಾತ್ರೆಯನ್ನು 14 ದಿನಗಳ ಕಾಲ ಸೇವಿಸಬೇಕಿದ್ದು, ಪ್ರಸ್ತುತ ಭಾರತದಾದ್ಯಂತ ಲಭ್ಯವಿದೆ.

Follow Us:
Download App:
  • android
  • ios