Asianet Suvarna News Asianet Suvarna News

IIT Kanpur Study : ಭಾರತದಲ್ಲಿ ಫೆಬ್ರವರಿ ವೇಳೆಗೆ ಉತ್ತುಂಗಕ್ಕೇರಲಿದೆ Covid-19 ಮೂರನೇ ಅಲೆ!

ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕಾನ್ಪುರದ ಅಧ್ಯಯನ ವರದಿ
2022ರ ಫೆಬ್ರವರಿ 3ರ ವೇಳೆಗೆ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ
ದೇಶದ ಜನ ಎಚ್ಚರಿಕೆಯಲ್ಲಿರಬೇಕು ಎಂದು ಹೇಳಿದ ಸಂಸ್ಥೆ

Third Covid Wave in India May Peak in Early Feb says  IIT Kanpur Study san
Author
Bengaluru, First Published Dec 24, 2021, 8:24 PM IST

ನವದೆಹಲಿ (ಡಿ. 24): ಭಾರತದಲ್ಲಿ ಕೋವಿಡ್-19 ರೂಪಾಂತರ ಒಮಿಕ್ರಾನ್ ವೈರಸ್ ನ (Omicron)ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಿರುವ ಸಮಯದಲ್ಲಿಯೇ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಕಾನ್ಪುರ (Indian Institute of Technology Kanpur) ಆಘಾತಕಾರಿ ವರದಿಯೊಂದನ್ನು ನೀಡಿದೆ. ಹೀಗೆ ಮುಂದುವರಿಯುತ್ತಿದ್ದಲ್ಲಿ, 2022ರ ಫೆಬ್ರವರಿ 3ರ ವೇಳೆ ಭಾರತದಲ್ಲಿ ಕೋವಿಡ್-19 ನ ಮೂರನೇ ಅಲೆ ಉತ್ತುಂಗಕ್ಕೇರಬಹುದು ಎಂದು ಐಐಟಿ ಕಾನ್ಪುರದ ಸಂಶೋಧಕರು ಅಂದಾಜು ಮಾಡಿದ್ದಾರೆ. ಮಾಡೆಲಿಂಗ್ ಅಧ್ಯಯವನ್ನು ಆಧರಿಸಿ ಅವರು ಈ ಸಂಶೋಧನಾ ವರದಿ ನೀಡಿದ್ದಾರೆ.

ಜಾಗತಿಕವಾಗಿ ಕರೋನಾವೈರಸ್ ಒಮಿಕ್ರಾನ್ ರೂಪಾಂತರದಿಂದ ಅನೇಕ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ. ಇದೇ ಪ್ರವೃತ್ತಿಯನ್ನು ಭಾರತ ಅನುಸರಿಸುತ್ತದೆ ಎನ್ನುವ ಅಂದಾಜಿನ ಮೇಲೆ ಈ ಮುನ್ಸೂಚನೆಯನ್ನು ನೀಡಲಾಗಿದೆ. ಇನ್ನಷ್ಟೇ ಪರಿಶೀಲನೆ ಮಾಡಬೇಕಾದ ಈ ಅಧ್ಯಯನವನ್ನು ಪ್ರಿಪ್ರಿಂಟ್ ರೆಪೊಸಿಟರಿ ಮೆಡ್ ರೆಕ್ಸಿವ್ ನಲ್ಲಿ ಪ್ರಕಟಿಸಲಾಗಿದ್ದು, ಮೂರನೇ ತರಂಗವನ್ನು ಅಂದಾಜು ಮಾಡುವ ಸಲುವಾಗಿ ಗಾಸಿಯನ್ ಮಿಕ್ಸ್ಚರ್ ಮಾಡೆಲ್ (Gaussian Mixture model)  ಎಂಬ ಅಂಕಿ-ಅಂಶಗಳ ಸಾಧನವನ್ನು ಬಳಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಂಶೋಧಕರು ತಮ್ಮ ಅಧ್ಯಯನದಲ್ಲಿ ಈಗಾಗಲೇ ಕೋವಿಡ್-19 ನ ಮೂರನೇ ಅಲೆಯನ್ನು ಎದುರಿಸುತ್ತಿರುವ ದೇಶಗಳಾದ ಅಮೆರಿಕ (US), ಇಂಗ್ಲೆಂಡ್ (UK), ಜರ್ಮನಿ (Germany) ಹಾಗೂ ರಷ್ಯಾದ  (Russia)ಅಂಕಿ-ಅಂಶಗಳನ್ನು ಬಳಕೆ ಮಾಡಿದ್ದಾರೆ. ಈ ದೇಶಗಳ ದೈನಂದಿನ ಪ್ರಕರಣಗಳು ಹಾಗೂ ಅದರ ಏರಿಕೆ ಇಳಿಕೆಯನ್ನು ಗ್ರಹಿಸಿ ಭಾರತದಲ್ಲಿ ಸಂಭಾವ್ಯವಾಗಿ ಮೂರನೇ ಅಲೆ ಯಾವಾಗ ಉತ್ತುಂಗಕ್ಕೇರಬಹುದು ಹಾಗೂ ಇದರ ಪರಿಣಾಮ ಏನಾಗಬಹುದು ಎಂದು ಬರೆದಿದ್ದಾರೆ. ಅದರೊಂದಿಗೆ ಭಾರತದಲ್ಲಿನ ಮೊದಲ ಹಾಗೂ 2ನೇ ಅಲೆಯ ಮಾಹಿತಿಗಳನ್ನೂ ಸಂಗ್ರಹ ಮಾಡಿದ್ದು, ಅಲ್ಲಿನ ಪ್ರಕರಣಗಳ ಸಂಖ್ಯೆಯನ್ನು ತುಲನೆ ಮಾಡುವ ಮೂಲಕ ಮೂರನೇ ಅಲೆಯ ಸೂಚನೆಯನ್ನು ನೀಡಿದೆ.

ಈ ಎಲ್ಲಾ ಅಂಕಿ-ಅಂಶಗಳ ಅನ್ವಯ 2022ರ ಫೆಬ್ರವರಿ ಮೊದಲ ವಾರದ ವೆಳೆಗೆ ಭಾರತದಲ್ಲಿ ಮೂರನೇ ಅಲೆ ಉತ್ತುಂಗಕ್ಕೇರುವುದು ಆರಂಭವಾಗಲಿದೆ. "ಡಿಸೆಂಬರ್ 15 ರಿಂದ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗುವುದು ಆರಂಭವಾಗಲಿದ್ದು, ಮೂರನೇ ತರಂಗದ ಉತ್ತುಂಗವು 2022ರ ಫೆಬ್ರವರಿ 3 ರಂದು ಆಗುವ ಸಂಭವವಿದೆ" ಎಂದು ಸಂಶೋಧಕರು ತಮ್ಮ ಪ್ರಬಂಧದಲ್ಲಿ ಬರೆದಿದ್ದಾರೆ. ಕೋವಿಡ್-19 ಮೂರನೇ ತರಂಗವು ದೇಶಕ್ಕೆ ಅಪ್ಪಳಿಸಲಿದೆ. ಹಾಗೂ ಪ್ರಪಂಚದಾದ್ಯಂತ ಆಗುತ್ತಿರುವ ಪ್ರವೃತ್ತಿಗಳನ್ನು ಅನುಸರಿಸುತ್ತದೆ ಎನ್ನುವ ಊಹೆಗಳನ್ನು ಆಧರಿಸಿದೆ ಎಂದು ಅಧ್ಯಯನದ ಲೇಖಕರು ಬರೆದಿದ್ದಾರೆ.

Corona Third Wave: ರಾಜ್ಯದಲ್ಲಿ 3ನೇ ಅಲೆ ಭೀತಿ, ತಜ್ಞರ ಶಿಫಾರಸ್ಸುಗಳು ಇಲ್ಲಿವೆ
ದೇಶದಲ್ಲಿ ಈವರೆಗೂ ಹಾಕಲಾಗಿರುವ ಲಸಿಕೆಯ ಮಾಹಿತಿಯನ್ನು ಇಲ್ಲಿ ಪರಿಗಣಿಸದೇ ಇರುವ ಕಾರಣ, ಇಷ್ಟೇ ಪ್ರಮಾಣದ ಪ್ರಕರಣಗಳು ಇರಲಿವೆ ಎಂದು ಹೇಳುವುದು ಕಷ್ಟ ಎಂದಿದೆ. ಸಂಶೋಧನಾ ಸಮಿತಿಯಲ್ಲಿ ಐಐಟಿ ಕಾನ್ಪುರದ ಗಣಿತ ಹಾಗೂ ಅಂಕಿ-ಅಂಶಗಳ ವಿಭಾಗದವರಾದ ಸಬರ್ ಪರ್ಷದ್ ರಾಜೇಶ್ ಭಾಯ್ (Sabara Parshad Rajeshbhai), ಶುಭ್ರ ಶಂಕರ್ ಧಾರ್ (Subhra Sankar Dhar) ಹಾಗೂ ಶಲಭ್ (Shalabh) ಅವರನ್ನು ಒಳಗೊಂಡಿದೆ. ಕೇಂದ್ರ ಸರ್ಕಾರದ ಲಸಿಕಾ ಅಭಿಯಾನ ಉತ್ತಮ ಉಪಕ್ರಮ. ಆದರೆ, ಶೇ. 100ರಷ್ಟು ಲಸಿಕೆ ಪೂರೈಕೆಯಾಗಲು ಇನ್ನೂ ಕೆಲ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿದೆ Omicron ಆತಂಕ, ಮೋದಿಯಿಂದ ಉನ್ನತ ಮಟ್ಟದ ಸಭೆ!
ಅಮೆರಿಕ, ಇಂಗ್ಲೆಂಡ್, ಜರ್ಮನಿ ಹಾಗೂ ರಷ್ಯಾದಂಥ ದೇಶಗಳಲ್ಲಿ ಸಾಕಷ್ಟು ಜನರಿಗೆ ಸರ್ಕಾರ ಲಸಿಕೆ ಹಾಕಿದ್ದರೂ, ಈ ದೇಶಗಳು ಮೂರನೇ ತರಂಗವನ್ನು ಎದುರಿಸುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇನ್ನು ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಅಂದಾಜಿನ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿ ಮೂರನೇ ತರಂಗ ದೇಶಕ್ಕೆ ಅಪ್ಪಳಿಸಲಿದ್ದರೂ, 2ನೇ ಅಲೆಯಷ್ಟು ತೀವ್ರವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

Follow Us:
Download App:
  • android
  • ios