ಶಾಲೆ ಪುನರಾರಂಭ: 2 ವಾರದಲ್ಲಿ ಅಮೆರಿಕದಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್..!

ಅಮೆರಿಕದಲ್ಲಿ ಶಾಲೆಗಳನ್ನು ಪುನಾರಂಭಿಸಿದ ಎರಡನೇ ವಾರದಲ್ಲಿ 97 ಸಾವಿರ ವಿದ್ಯಾರ್ಥಿಗಳಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

us schools reopen thousands of children test coronavirus positive

ವಾಷಿಂಗ್ಟನ್(ಆ.14): ಅಮೆರಿಕದಲ್ಲಿ ಶಾಲೆಗಳನ್ನು ಪುನಾರಂಭಿಸಿದ ಎರಡನೇ ವಾರದಲ್ಲಿ 97 ಸಾವಿರ ವಿದ್ಯಾರ್ಥಿಗಳಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಕ್‌ಡೌನ್ ನಂತರ ಶಾಲೆ ಆರಂಭವಾಗಿ ಕೊರೋನಾ ಸೋಂಕು ದೃಢಪಟ್ಟ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ 1 ಲಕ್ಷ.

ಜುಲೈನಲ್ಲಿ ಕೊರೋನಾ ವೈರಸ್‌ನಿಂದಾಗಿ ಅಮೆರಿಕದಲ್ಲಿ 25 ಜನ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಜುಲೈ 16ರಿಂದ 30ರ ತನಕ ಅಮೆರಿಕದಲ್ಲಿ 5 ಮಿಲಿಯನ್ ಕೊರೋನಾ ಪ್ರಕರಣ ಪತ್ತೆಯಾಗಿದೆ. ಇವರಲ್ಲಿ3,38,000 ಸೋಂಕಿತರು ವಿದ್ಯಾರ್ಥಿಗಳಾಗಿರುವುದು ಆಘಾತಕಾರಿ ವಿಚಾರ. 1,62,000 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ಬ್ರೆಜಿಲ್‌ನಿಂದ ತಂದ ಕೋಳಿ ಮಾಂಸದಲ್ಲಿ ಕೊರೋನಾ ಪಾಸಿಟಿವ್..!

ಕೊರೋನಾ ಮಹಾಮಾರಿ ಮಧ್ಯೆ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗು ಪಾಠ ಹೇಳುವ ಪ್ರಯತ್ನದಲ್ಲಿವೆ ಅಮೆರಿಕದ ಶಾಲೆ, ಶಿಕ್ಷಣ ಪ್ರಾಧಿಕಾರ. ಕೊರೋನಾ ಸೋಂಕಿತ ಮಕ್ಕಳ ಸಂಖ್ಯೆ ನೋಡುವಾಗಲೇ ಕೊರೋನಾ ಮಕ್ಕಳ ಮೂಲಕ ಎಷ್ಟು ವೇಗವಾಗಿ ಕೊರೋನಾ ಹರಡಿದೆ ಎಂಬುದು ಗೊತ್ತಾಗಿದೆ.

ಈ ನಿಟ್ಟಿನಲ್ಲಿ ಸುಮಾರು 2000 ಕುಟುಂಬಗಳಿಗೆ ಕೊರೋನಾ ಟೆಸ್ಟ್ ಕಿಟ್ ಕಳುಹಿಸಲಾಗಿದೆ ಎಂದು ವಂಡರ್‌ಬಿಲ್ಟ್ ವಿಶ್ವವಿದ್ಯಾಲಯದ ಡಾ. ಟೀನಾ ಹಾರ್ಟ್‌ರ್ಟ್ ತಿಳಿಸಿದ್ದಾರೆ. ಮನೆ ಮನೆಗೆ ಕೊರೋನಾ ಟೆಸ್ಟಿಂಗ್ ಕಿಟ್ ಕಳಿಸಿ ಪರೀಕ್ಷಿಸುವ ವಿಧಾನ ಹೇಳಿಕೊಟ್ಟು, ನಂತರ ಸ್ಯಾಂಪಲ್ ಕಳುಹಿಸುವಂತೆ ಹೇಳಲಾಗಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios