ವರ್ಷಕ್ಕೆ ಎರಡು ಬಾರಿ ಇಂಜೆಕ್ಷನ್‌ : ಹೆಚ್‌ಐವಿ ರೋಗದ ಚಿಕಿತ್ಸೆಯಲ್ಲಿ ಮಹತ್ವದ ಮೈಲಿಗಲ್ಲು

ಎಳೆಯ ಪ್ರಾಯದ ಹೆಣ್ಣು ಮಕ್ಕಳು ವರ್ಷಕ್ಕೆರಡು ಬಾರಿ ಪಡೆಯುವ ಇಂಜೆಕ್ಷನ್ ರೂಪದಲ್ಲಿರುವ ಹೊಸದಾದ ರೋಗ ನಿರೋಧಕ ಔಷಧಿಯೂ ಹೆಚ್‌ಐವಿ ಸೋಂಕಿನಿಂದ ಅವರಿಗೆ ರಕ್ಷಣೆ ನೀಡುತ್ತದೆ ಎಂಬ ವೈದ್ಯಕೀಯ ವರದಿಯೊಂದು ಈಗ ಸಂಚಲನ ಸೃಷ್ಟಿಸಿದೆ. 

Twice a year injection dont need to take daily pill A major milestone in the treatment of HIV disease akb

ಎಳೆಯ ಪ್ರಾಯದ ಹೆಣ್ಣು ಮಕ್ಕಳು ವರ್ಷಕ್ಕೆರಡು ಬಾರಿ ಪಡೆಯುವ ಇಂಜೆಕ್ಷನ್ ರೂಪದಲ್ಲಿರುವ ಹೊಸದಾದ ರೋಗ ನಿರೋಧಕ ಔಷಧಿ (new pre-exposure prophylaxis drug)ಯೂ ಹೆಚ್‌ಐವಿ ಸೋಂಕಿನಿಂದ ಅವರಿಗೆ ರಕ್ಷಣೆ ನೀಡುತ್ತದೆ ಎಂಬ ವೈದ್ಯಕೀಯ ವರದಿಯೊಂದು ಈಗ ಸಂಚಲನ ಸೃಷ್ಟಿಸಿದೆ.  ದಕ್ಷಿಣ ಆಫ್ರಿಕಾ ಹಾಗೂ ಉಗಾಂಡದಲ್ಲಿ ನಡೆದ ದೊಡ್ಡ ಮಟ್ಟದ ವೈದ್ಯಕೀಯ ಪ್ರಯೋಗವೊಂದರಿಂದ ಇದು ಸಾಬೀತಾಗಿದೆ. ಆರು ತಿಂಗಳಿಗೊಮ್ಮೆ ಪಡೆದುಕೊಳ್ಳುವ ಲೆನಾಕಾಪಾವಿರ್‌ ( lenacapavir) ಚುಚ್ಚು ಮದ್ದು, ಈಗಾಗಲೇ ಹೆಚ್‌ಐವಿ ಸೋಂಕಿತರಿಗೆ ನೀಡಲಾಗುವ ಇತರ ಎರಡು ಔಷಧಿಗಳಿಗಿಂತ (ಎರಡೂ ದೈನಂದಿನ ಮಾತ್ರೆಗಳು. ಎಲ್ಲಾ ಮೂರು ಔಷಧಿಗಳು) ಉತ್ತಮ ರಕ್ಷಣೆ ನೀಡಬಹುದೆ ಎಂದು ಪ್ರಯೋಗ ನಡೆಸಲಾಗಿತ್ತು. ಅದರಲ್ಲಿ ಧನಾತ್ಮಕ ಫಲಿತಾಂಶ ಬಂದಿದೆ ಎಂದು ವರದಿ ಆಗಿದೆ. 

ದಕ್ಷಿಣ ಆಫ್ರಿಕಾ ಅಧ್ಯಯನ ಭಾಗದ ಪ್ರಮುಖ ತನಿಖಾಧಿಕಾರಿ ಹಾಗೂ ವೈದ್ಯ ವಿಜ್ಞಾನಿ ಲಿಂಡಾ ಗೈಲ್ ಬೆಕ್ಕರ್ ಅವರು ಈ ವೈದ್ಯಕೀಯ ಪ್ರಗತಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು  ನಾಡಿನ್ ಡ್ರೇಯರ್‌ಗೆ (ವೈದ್ಯಕೀಯ ನಿಯತಕಾಲಿಕೆ) ತಿಳಿಸಿದ್ದಾರೆ.

ಉಗಾಂಡದ ಮೂರು ಹಾಗೂ ದಕ್ಷಿಣ ಆಫ್ರಿಕಾದ 25 ಪ್ರದೇಶಗಳಲ್ಲಿ ಲೆನಾಕಾಪಾವಿರ್ ಮತ್ತು ಇತರ ಎರಡು ಔಷಧಿಗಳ ಪರಿಣಾಮವನ್ನು ಪ್ರಯೋಗ ಮಾಡಲಾಯ್ತು. ಈ ಪ್ರಯೋಗದಲ್ಲಿ 5 ಸಾವಿರ ಜನ ಭಾಗವಹಿಸಿದ್ದರು. ಲೆನಾಕಾವಿರ್ (ಲೆನ್ ಲಾ) ಒಂದು ಸಮ್ಮಿಳಿತ ಕ್ಯಾಪ್ಸೈಡ್ ಪ್ರತಿರೋಧಕವಾಗಿದೆ.  ಇದು ಹೆಚ್‌ಐವಿ ಕ್ಯಾಪ್ಸಿಡ್‌ನ್ನು (ಕ್ಯಾಪ್ಸಿಡ್ ಎಂದರೆ ವೈರಸ್‌ನ ಪ್ರೊಟೀನ್ ಸೆಲ್) ಅಡ್ಡಿಪಡಿಸುತ್ತದೆ.  ಇದು ಎಚ್‌ಐವಿಗೊಳಗಾಗದಂತೆ ಆನುವಂಶಿಕತೆಯನ್ನು ರಕ್ಷಿಸುವ ಮತ್ತು ಪುನರಾವರ್ತನೆಗೆ ಬೇಕಾದ ಕಿಣ್ವಗಳನ್ನು ರಕ್ಷಿಸುವ ಪ್ರೊಟೀನ್ ಶೆಲ್ ಆಗಿದ್ದು, ಇದನ್ನು ಕೇವಲ ಆರು ತಿಂಗಳಿಗೊಮ್ಮೆ ನೀಡಲಾಗುತ್ತದೆ. 

ನಕಲಿ ಮದ್ವೆ ಗ್ಯಾಂಗ್‌ನ ವಧುವಿಗೆ HIV ಪಾಸಿಟಿವ್: ಈಕೆ ಮದ್ವೆಯಾದ ಹುಡುಗರ ಹುಡುಕಾಟದಲ್ಲಿ ಪೊಲೀಸರು

ಔಷಧಿ ಉತ್ಪಾದನಾ ಸಂಸ್ಥೆ ಗಿಲಿಯಾಡ್ ಸೈನ್ಸಸ್‌ ನಡೆಸಿದ ಪ್ರಯೋಗ

ಔಷಧಿ ಉತ್ಪಾದನ ಸಂಸ್ಥೆ ಗಿಲಿಯಾಡ್ ಸೈನ್ಸಸ್‌ನ ಪ್ರಾಯೋಜಕತ್ವದಲ್ಲಿ ನಡೆದ ಈ ಪ್ರಯೋಗವೂ ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದೆ. ಅದರಲ್ಲಿ ಮೊದಲನೆಯದ್ದು ಲೆನಾಕಾಪವಿರ್‌ನ ಆರು ತಿಂಗಳಿಗೊಮ್ಮೆ ನೀಡುವ ಚುಚ್ಚುಮದ್ದು ಸುರಕ್ಷಿತವಾಗಿದೆ ಎಂಬುದು ಹಾಗೂ 2ನೇಯದಾಗಿ  ಇದು  16 ರಿಂದ 25 ವರ್ಷ ವಯಸ್ಸಿನ ಮಹಿಳೆಯರಿಗೆ ಹೆಚ್‌ಐವಿ ಸೋಂಕಿನ ವಿರುದ್ಧ  ಟ್ರುವಾಡಾ F/TDF ಗಿಂತಲೂ ಉತ್ತಮ ರಕ್ಷಣೆ ಒದಗಿಸುತ್ತದೆ ಎಂಬುದು. ಈ ಟ್ರುವಾಡಾ F/TDF ಮಾತ್ರೆಯೂ ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ವ್ಯಾಪಕವಾಗಿ ಬಳಕೆಯಲ್ಲಿರುವ ದೈನಂದಿನ PrEP ಮಾತ್ರೆಯಾಗಿದೆ. 

ಎರಡನೆಯದಾಗಿ, ಹೊಸ ದೈನಂದಿನ ಮಾತ್ರೆಯಾದ ಡೆಸ್ಕೋವಿ ಎಫ್/ಟಿಎಎಫ್ ಎಫ್/ಟಿಡಿಎಫ್‌ನಷ್ಟು ಪರಿಣಾಮಕಾರಿಯಾಗಿದೆಯೇ ಎಂಬುದನ್ನು ಕೂಡ ಪ್ರಯೋಗ ಮಾಡಲಾಗಿದೆ. ಈ ವೇಳೆ ಹೊಸ F/TAF F/TDF ಗಿಂತ ಉತ್ತಮವಾದ ಫಾರ್ಮಾಕೊಕಿನೆಟಿಕ್ ಗುಣಲಕ್ಷಣಗಳನ್ನು ಹೊಂದಿದೆ ಎಂಬುದು ತಿಳಿದು ಬಂದಿದೆ. ಫಾರ್ಮಾಕೊಕಿನೆಟಿಕ್ ಎಂದರೆ ದೇಹದೊಳಗೆ ಹಾಗೂ ಹೊರಗೆ ಔಷಧದ ಚಲನೆಯನ್ನು ಸೂಚಿಸುತ್ತದೆ. ಇನ್ನು ಎಫ್/ಟಿಎಎಫ್ ಮಾತ್ರೆಯೂ ಸಣ್ಣ ಮಾತ್ರೆಯಾಗಿದ್ದು, ಉತ್ತಮ ತಲಾದಾಯ ಇರುವ ದೇಶಗಳಲ್ಲಿ ಪುರುಷರು ಹಾಗೂ ಟ್ರಾನ್ಸ್‌ಜಂಡರ್ ಮಹಿಳೆಯರು ಬಳಸುತ್ತಾರೆ. ಪೂರ್ವ ಮತ್ತು ದಕ್ಷಿಣ ಆಫ್ರಿಕಾದಲ್ಲಿ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಎಚ್ಐವಿ ಸೋಂಕುಗಳನ್ನು ಹೊಂದಿದ್ದಾರೆ. ಅಲ್ಲಿರುವ ಹಲವಾರು ಸಾಮಾಜಿಕ ಹಾಗೂ ರಚನಾತ್ಮಕ ಕಾರಣಗಳಿಂದಾಗಿ ಅವರಿಗೆ ದಿನವೂ PrEP ಔಷಧಿಯನ್ನು ಸ್ವೀಕರಿಸುವುದು ಸವಾಲಾಗಿದೆ.

ಎಚ್‌ಐವಿ ಪಾಸಿಟಿವ್‌ ಅಂತ ಗೊತ್ತಾದ್ರೂ 200 ಜನರ ಜೊತೆ ಮಲಗಿದ ಮಹಿಳೆ! 

 

Latest Videos
Follow Us:
Download App:
  • android
  • ios