ಮೂರು ಮಕ್ಕಳಾದ್ಮೇಲೆ ತಾಯಿಗೆ Down Syndrome ಪತ್ತೆ, ಮಕ್ಕಳಿಗೆ? ಏನಿದು ರೋಗ?
ತಾಯಿ – ತಂದೆಯಲ್ಲಿರುವ ಕೆಲ ರೋಗಗಳು ಮಕ್ಕಳಿಗೆ ಆನುವಂಶಿಕವಾಗಿ ಬರುತ್ತದೆ. ಡೌನ್ ಸಿಂಡ್ರೋಮ್ ಕೂಡ ಇದ್ರಲ್ಲಿ ಒಂದು. ಆದ್ರೆ ಹೆತ್ತ ಮೂರೂ ಮಕ್ಕಳಿಗೆ ಇದು ಬಂದಿರೋದು ತಾಯಿಯ ಮನಸ್ಸು ಘಾಸಿಗೊಳಿಸಿದೆ.
ಮಗು ಹೆಣ್ಣಾಗಲಿ, ಗಂಡಾಗಲಿ ಆರೋಗ್ಯವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಿಲ್ಲ. 23 ವರ್ಷದ ಆಶ್ಲೇ ಜಾಂಬೆಲಿ ಕೂಡ ಬಯಸಿದ್ದು ಒಂದು, ಆಗಿದ್ದು ಇನ್ನೊಂದು. ಆಶ್ಲೇ ಮೂರು ಮಕ್ಕಳ ತಾಯಿ. ಆಕೆಗೆ ತನ್ನ ಜೀವನದ ದೊಡ್ಡ ಸತ್ಯ ತಡವಾಗಿ ಗೊತ್ತಾಗಿದೆ. ಮೂರನೇ ಮಗುವಿನ ಜನನದ ನಂತ್ರ ಆಶ್ಲೇ ಶಾಕ್ ಗೆ ಒಳಗಾಗಿದ್ದಾಳೆ. ತನಗೆ ಡೌನ್ ಸಿಂಡ್ರೋಮ್ ಇದೆ ಎಂಬುದು ಆಕೆಗೆ ಆಗ ತಿಳಿದಿದೆ. ಟಿಕ್ ಟಾಕ್ ನಲ್ಲಿ ಆಶ್ಲೇ ಇದೇ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಅದು ಈಗ ವೈರಲ್ ಆಗಿದೆ.
ಆಶ್ಲೇ (Ashley) ಮೊದಲೇ ಹೇಳಿದಂತೆ ಮೂರು ಮಕ್ಕಳ ತಾಯಿ. ಮೂವರೂ ಹೆಣ್ಣು ಮಕ್ಕಳು. ಲಿಲಿಯನ್, ಎವೆಲಿನ್ ಮತ್ತು ಕ್ಯಾಥರೀನ್ ಎಂದು ಹೆಸರಿಟ್ಟಿದ್ದಾಳೆ ಆಶ್ಲೇ. ತನಗೆ ಡೌನ್ ಸಿಂಡ್ರೋಮ್ (Down Syndrome) ಇದೆ ಎಂಬುದು ಗೊತ್ತಾಗ್ತಿದ್ದಂತೆ ಆಶ್ಲೇ, ಲಿಲಿಯನ್ ಮತ್ತು ಕ್ಯಾಥರೀನ್ ಗೆ ಪರೀಕ್ಷೆ ಮಾಡಿಸಿದ್ದಾಳೆ. ಅವರಿಗೂ ರೋಗ (Disease) ಇರುವುದು ಪತ್ತೆಯಾಗಿದೆ. ಕೊನೆಯ ಮಗುವಿಗೆ ಡೌನ್ ಸಿಂಡ್ರೋಮ್ ಇರುವುದು ಕಂಡುಬಂದಿದೆ. ಎಲ್ಲಾ ಮೂರು ಮಕ್ಕಳಲ್ಲಿ ಡೌನ್ ಸಿಂಡ್ರೋಮ್ ಇರುವುದು ಬಹಳ ಅಪರೂಪ ಎಂದು ಆಶ್ಲೇ ಬೇಸರ ವ್ಯಕ್ತಪಡಿಸಿದ್ದಾಳೆ. ನಾವಿಂದು ಡೌನ್ ಸಿಂಡ್ರೋಮ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
NATIONAL KISSING DAY: ಮುತ್ತಿಕ್ಕಿದರೆ ಮತ್ತಷ್ಟು ಯೌವನ! ಮತ್ತೇನಾಗುತ್ತೆ ಆರೋಗ್ಯಕ್ಕೆ?
ಡೌನ್ ಸಿಂಡ್ರೋಮ್ ಎಂದರೇನು? : ಡೌನ್ ಸಿಂಡ್ರೋಮ್ ಎನ್ನುವುದು ಮಗು ಮಾನಸಿಕ ಮತ್ತು ದೈಹಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ಸ್ಥಿತಿಯಾಗಿದೆ. ಡೌನ್ ಸಿಂಡ್ರೋಮ್ ನಲ್ಲಿ, ಮಗುವು ಅದರ 21 ನೇ ಕ್ರೋಮೋಸೋಮ್ ನ ಹೆಚ್ಚುವರಿ ನಕಲಿನೊಂದಿಗೆ ಜನಿಸುತ್ತದೆ. ಅದಕ್ಕಾಗಿಯೇ ಇದನ್ನು ಟ್ರೈಸೋಮಿ-2 ಎಂದೂ ಕರೆಯುತ್ತಾರೆ. ಇದೊಂದು ಆನುವಂಶಿಕ ಕಾಯಿಲೆ. ಇದು ಮಗುವಿನ ದೈಹಿಕ ಬೆಳವಣಿಗೆಯಲ್ಲಿ ವಿಳಂಬ, ಮುಖದ ವೈಶಿಷ್ಟ್ಯಗಳಲ್ಲಿ ವ್ಯತ್ಯಾಸ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ವಿಳಂಬವನ್ನು ಉಂಟುಮಾಡುತ್ತದೆ.
ಸಂತಾನೋತ್ಪತ್ತಿಯ ಸಮಯದಲ್ಲಿ, ತಾಯಿ (xx) ಮತ್ತು ತಂದೆ (xy) ಇಬ್ಬರ ವರ್ಣತಂತುಗಳು ಮಗುವನ್ನು ತಲುಪುತ್ತವೆ. ಒಟ್ಟು 46 ವರ್ಣತಂತುಗಳಲ್ಲಿ, 23 ತಾಯಿಯಿಂದ ಮತ್ತು 23 ತಂದೆಯಿಂದ ಮಗುವಿಗೆ ಸಿಗುತ್ತದೆ. ಪೋಷಕರಿಬ್ಬರ ವರ್ಣತಂತುಗಳು ಸಂಧಿಸಿದಾಗ, 21 ನೇ ವರ್ಣತಂತುಗಳ ವಿಭಜನೆಯು ನಡೆಯುವುದಿಲ್ಲ. ಈ ಕಾರಣದಿಂದಾಗಿ, 21 ನೇ ಕ್ರೋಮೋಸೋಮ್ ಅದರ ಹೆಚ್ಚುವರಿ ನಕಲನ್ನು ಮಾಡುತ್ತದೆ. ಇದನ್ನು ಟ್ರೈಸೋಮಿ-2 ಎಂದು ಕರೆಯಲಾಗುತ್ತದೆ. ಅಮೆರಿಕಾದಲ್ಲಿ 700 ಮಕ್ಕಳಲ್ಲಿ ಒಬ್ಬರಿಗೆ ಈ ಡೌನ್ ಸಿಂಡ್ರೋಮ್ ಸಮಸ್ಯೆ ನೋಡಬಹುದು. ಅಮೆರಿಕಾದಲ್ಲಿಯೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಡೌನ್ ಸಿಂಡ್ರೋಮ್ ಹೊಂದಿರುವ ಮಕ್ಕಳು ಹೇಗಿರ್ತಾರೆ? : ಇಂಥ ಮಕ್ಕಳು ಚಪ್ಪಟೆಯಾದ ಬಾಯಿಯನ್ನು ಹೊಂದಿರುತ್ತಾರೆ. ವಿಶೇಷವಾಗಿ ಬಾದಾಮಿ ಆಕಾರದ ಕಣ್ಣುಗಳು, ಚಿಕ್ಕ ಕುತ್ತಿಗೆ, ಸಣ್ಣ ಕಿವಿಗಳು, ಬಾಯಿಯಿಂದ ಹೊರಬರುವ ನಾಲಿಗೆಯನ್ನು ಕಾಣಬಹುದು. ತೋಳುಗಳು ಮತ್ತು ಕಾಲುಗಳು ಚಿಕ್ಕದಾಗಿರುತ್ತವೆ. ಈ ಮಕ್ಕಳ ಎತ್ತರವೂ ಕಡಿಮೆ. ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಭಿನ್ನವಾಗಿ ವರ್ತಿಸುತ್ತಾರೆ. ಈ ಮಕ್ಕಳ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯು ಇತರ ಮಕ್ಕಳಿಗೆ ಹೋಲಿಸಿದರೆ ವಿಳಂಬವಾಗುತ್ತದೆ. ಅಂತಹ ಮಕ್ಕಳು ಯೋಚಿಸದೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಏಕಾಗ್ರತೆಯ ಕೊರತೆಯಿಂದಾಗಿ, ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಮಗುವಿಗೆ ಕಲಿಕೆಯ ಸಾಮರ್ಥ್ಯವೂ ಕಡಿಮೆ ಇರುತ್ತದೆ.
ಮಗುವಿನ ಕೂದಲು ದಟ್ಟವಾಗಿ ಬೆಳೆಯೋಕೆ ಚಿಕ್ಕಂದಿನಲ್ಲೇ ತಲೆಗೆ ಈ ಎಣ್ಣೆ ಹಾಕಿ
ಗರ್ಭಾವಸ್ಥೆಯಲ್ಲಿ ಇದನ್ನು ಪತ್ತೆ ಮಾಡಬಹುದೇ? : ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಇದನ್ನು ಪತ್ತೆ ಮಾಡಬಹುದು. ಗರ್ಭಾವಸ್ಥೆಯಲ್ಲಿ ಪ್ರಸವಪೂರ್ವ ಸ್ಕ್ರೀನಿಂಗ್ ಪರೀಕ್ಷೆಗಳೊಂದಿಗೆ ಡೌನ್ ಸಿಂಡ್ರೋಮ್ ಅನ್ನು ಕಂಡುಹಿಡಿಯಬಹುದು. ಕ್ಲಿನಿಕಲ್ ಪರೀಕ್ಷೆಗಳು ಗರ್ಭಾವಸ್ಥೆಯಲ್ಲಿ ಈ ಸ್ಥಿತಿಯನ್ನು ಸಹ ನಿರ್ಣಯಿಸಬಹುದು.