ತಿಂಗಳಲ್ಲಿ ಕನಿಷ್ಠ 21 ಬಾರಿ ವೀರ್ಯಸ್ಖಲನ ಮಾಡುವ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಅತಿ ಕಡಿಮೆ ಅಂತ ಸಂಶೋಧನೆಯೊಂದು ತಿಳಿಸಿದೆ. ಇಪ್ಪತ್ತೊಂದೇ ಯಾಕೆ, ಇಪ್ಪತ್ತೆರಡು ಅಥವಾ ಇಪ್ಪತ್ತು ಯಾಕಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇದು ಸಮೀಕ್ಷೆಗಳನ್ನು ಆಧರಿಸಿದ ಸಂಶೋಧನೆ. ಅಂದರೆ ಒಂದಷ್ಟು ಪ್ರಾಸ್ಟೇಟ್ ಕ್ಯಾನ್ಸರ್ ಪೀಡಿತ ಪುರುಷರನ್ನೂ, ಕ್ಯಾನ್ಸರ್ ಪೀಡಿತರಲ್ಲದ, ಆದರೆ ಆಕ್ಟಿವ್ ಆದ ಸೆಕ್ಸ್ ಲೈಫ್ ಹೊಂದಿರುವ ಪುರುಷರನ್ನು ಸಂದರ್ಶಿಸಿ ಮಾಡಲಾದ ಸಂಶೋಧನೆ. ಇದು ಹಾರ್ವರ್ಡ್ ಯೂನಿವರ್ಸಿಟಿಯ ತಜ್ಞರು ನಡೆಸಿದ ಸಂಶೋಧನೆ.

ಪ್ರಾಸ್ಟೇಟ್ ಎಂಬುದು ಪುರುಷರಲ್ಲಿ ಮಾತ್ರ ಇರುವ ಒಂದು ಗ್ರಂಥಿ. ವೀರ್ಯದ್ರವವನ್ನು ಉತ್ಪಾದಿಸುವುದು ಇದರ ಕೆಲಸ. ವೀರ್ಯದ ಗುಣಮಟ್ಟದ, ಚಲನೆಯ ವೇಗ ಕ್ಷಿಪ್ರತೆ ಇತ್ಯಾದಿಗಳನ್ನು ಈ ವೀರ್ಯದ್ರವ ನಿರ್ಧರಿಸುತ್ತದೆ. ಇದರಲ್ಲಿ ವೀರ್ಯಾಣುಗಳಿರುತ್ತವೆ. ಒಮ್ಮೆ ಸ್ಖಲನಗೊಂಡ ನಂತರ, ಈ ದ್ರವವು ವೀರ್ಯಾಣುವನ್ನು ಗರ್ಭದತ್ತ ವೇಗವಾಗಿ ಒಯ್ಯುತ್ತದೆ. ಪುರುಷನಲ್ಲಿ ಹದಿಮೂರು- ಹದಿನಾಲ್ಕನೇ ವರ್ಷದಿಂದ ಎಂಬತ್ತರವರೆಗೂ ಇದು ಬಿಡುವಿಲ್ಲದೆ ಕೆಲಸ ಮಾಡುತ್ತದೆ. ಉತ್ಪತ್ತಿಯಾದ ವೀರ್ಯದ್ರವ ಆಗಾಗ ಹೊರಹೋಗುತ್ತಲೇ ಇರಬೇಕು. ಅದಕ್ಕಾಗಿಯೇ ಪುರುಷರಲ್ಲಿ ಸೆಕ್ಸ್ ತುಡಿತ ಉಂಟಾಗುತ್ತದೆ. ಸೆಕ್ಸ್ ಇಲ್ಲವಾದರೆ ಹಸ್ತಮೈಥುನದ ಮೂಲಕ ಸ್ಖಲನ ಮಾಡಿಕೊಂಡು ಈ ದ್ರವನ್ನು ಹೊರಹಾಕಬೇಕು. ತಿಂಗಳುಗಟ್ಟಲೆ ಸ್ಖಲನ ಆಗದೇ ಇದ್ದರೆ, ಕೆಲವೊಮ್ಮೆ, ರಾತ್ರಿ ನಿದ್ರೆಯಲ್ಲಿ ಸ್ವಪ್ನಸ್ಖಲನ ಆಗುವುದನ್ನು ನೀವು ಅನುಭವಿಸಿರಬಹುದು. ಇದು ವೀರ್ಯದ್ರವವನ್ನು ಹೊರಹಾಕಲು ಬಾಡಿ ಕಂಡುಕೊಂಡಿರುವ ಉಪಾಯ.

ಸಂಶೋಧಕರು ಹೇಳಿರುವ ಪ್ರಕಾರ, ತಿಂಗಳಲ್ಲಿ ಕನಿಷ್ಠ  21 ಬಾರಿ ವೀರ್ಯಸ್ಖಲನ ಮಾಡಿಕೊಳ್ಳುವ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಸಂಭವನೀಯತೆ ಅತಿ ಕಡಿಮೆ. ಕಡಿಮೆ ಬಾರಿ ಸ್ಖಲನ ಮಾಡುವವರಲ್ಲಿ ಇದರ ಸಾಧ್ಯತೆ ಹೆಚ್ಚು. ಹೀಗಾಗಿ ಆರೋಗ್ಯಕರ ಸೆಕ್ಸ್ ಬದುಕು ಕೂಡ ಪುರುಷರಿಗೆ ಕ್ಯಾನ್ಸರ್ ಬರದಂತಿರಲು ಮುಖ್ಯ ಎಂಬುದು ಗೊತ್ತಾಯಿತಲ್ಲ.

ಡಯಾಬಿಟೀಸ್‌ನಿಂದ ಸೆಕ್ಸ್‌ ಲೈಫ್ ಮೇಲೆ ಪರಿಣಾಮ..! ...

ಇದರ ಜೊತೆಗೆ ಇನ್ನೂ ಅನೇಕ ಅಂಶಗಳೂ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಮೂಲವಾಗಿವೆ. ನಿಮ್ಮ ಕುಟುಂಬದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಆನುವಂಶಿಕ ಹಿನ್ನೆಲೆ ಇದ್ದರೆ, ನಿಮ್ಮ ಅತ್ಯಂತ ಹತ್ತಿರದ ಬಂಧುಗಳಿಗೆ ಅದು ಬಂದಿದ್ದರೆ, ನಿಮಗೂ ಬರಬಹುದು. ಡಯಾಬಿಟಿಸ್, ಬಿಪಿ ಮುಂತಾದ ಕಾಯಿಲೆಗಳು ಇದ್ದರೆ, ದೇಹದಲ್ಲಿ ಬೊಜ್ಜಿನಂಶ ಹೆಚ್ಚು ಇದ್ದರೆ ಕೂಡ ಇದು ಉಂಟಾಗಬಹುದು.50 ವರ್ಷ ದಾಟಿದವರಲ್ಲಿ ಇದರ ಸಂಭವನೀಯತೆ ಇದೆ. ಬದುಕಿಡೀ ವ್ಯಾಯಾಮ ಮಾಡದೆ ಜಡವಾಗಿ ಇರುವವರಲ್ಲಿ ಇದು ಜಾಸ್ತಿ. ನಿತ್ಯ ಮಾಂಸ ಸೇವನೆ ಮಾಡುವವರಲ್ಲಿ, ಆರೋಗ್ಯಕರ ಆಹಾರ ಹಣ್ಣುಗಳು ತರಕಾರಿ ನಾರಿನಂಶವುಳ್ಳ ಪದಾರ್ಥಗಳನ್ನು ಸೇವಿಸದೆ ಇರುವವರಲ್ಲಿ ಈ ಕ್ಯಾನ್ಸರ್ ಬರುವ ಸಂಭವ ಹೆಚ್ಚು.

ಮ್ಯಾರಥಾನ್ ಸೆಕ್ಸ್; ವಾರ್ನರ್‌ ಗಾಯಕ್ಕೆ ಅಸಲಿ ಕಾರಣ ಹೇಳಿದ ಪತ್ನಿ! ...

ಹಾಗಿದ್ದರೆ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ದೂರವಿರೋಕೆ ಏನು ಮಾಡಬೇಕ ಎಂಬುದೂ ನಿಮಗೆ ಅದರಿಂದಲೇ ಗೊತ್ತಾಗಿರಬೇಕು- ನಿಮ್ಮ ವಂಶದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಹಿನ್ನೆಲೆ ಇದ್ದರೆ ಎಚ್ಚರವಾಗಿರಿ, ಮಾಂಸ ಸೇವನೆ ಕಡಿಮೆ ಮಾಡಿ. ಸಾಕಷ್ಟು ತರಕಾರಿ ಹಣ್ಣು ಇತ್ಯಾದಿ ಆರೋಗ್ಯಕರ ಆಹಾರವನ್ನು ಸೇವಿಸಿ. ಡೇರಿ ಉತ್ಪನ್ನಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. 50 ವರ್ಷದ ಬಳಿಕ ರೆಗ್ಯುಲರ್ ಆಗಿ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳುತ್ತಿರಿ.

ಆಕ್ಟಿವ್ ಸೆಕ್ಸ್ ಲೈಫ್, ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಎಂಬುದು ಆಗಾಗ ಹಲವು ಸಂಶೋಧನೆಗಳಿಂದ ಗೊತ್ತಾಗುತ್ತಲೇ ಇದೆ. ಉದಾಹರಣೆಗೆ, ಸಣ್ಣ ಪ್ರಮಾಣದ ಮೈಗ್ರೇನ್‌ ಅನ್ನು ಹೊಡೆದೋಡಿಸಲು ಸೆಕ್ಸ್ ಸಹಕಾರಿ. ಬೆಳಗ್ಗೆ ಅಥವಾ ಸಂಜೆಯ ಅರ್ಧ ಗಂಟೆಯ ಸೆಕ್ಸ್ ಸೆಷನ್, ಒಂದು ಗಂಟೆ ಪಾರ್ಕ್‌ನಲ್ಲಿ ವ್ಯಾಯಾಮ ಮಾಡುವುದಕ್ಕೆ ಸಮಾನ. ಇದು ದೇಹವನ್ನು ಚುರುಕಾಗಿ, ಹೆಲ್ದಿಯಾಗಿಡುತ್ತದೆ. ಸುಖವೂ ಖಚಿತ, ಆರೋಗ್ಯ ಉಚಿತ!

ಸೆಕ್ಸ್ ಹಾರ್ಮೋನ್ ಬಿಡುಗಡೆಗೆ ಸಹಾಯ ಮಾಡುತ್ತೆ ದಾಳಿಂಬೆ ಹಣ್ಣಿನ ರಸ..! ...