ಇತ್ತೀಚಿನ ದಿನಗಳಲ್ಲಿ ಅನೇಕ ಕಂಪನಿಗಳು ನೈಟ್ ಶಿಫ್ಟ್ ಗೆ ಆದ್ಯತೆ ನೀಡ್ತಿವೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಕೆಲಸದ ಜೊತೆ ಆರೋಗ್ಯಬೇಕೆನ್ನುವವರು  ಕೆಲವೊಂದು ನಿಯಮ ಪಾಲಿಸಬೇಕು.  

ಉದ್ಯೋಗ (Job) ಸಿಗುವುದು ಈಗಿನ ದಿನಗಳಲ್ಲಿ ಸುಲಭವಲ್ಲ. ಕಾಂಪಿಟೇಶನ್ ಯುಗದಲ್ಲಿ ಉದ್ಯೋಗ ಸಿಕ್ಕರೆ ಸಾಕು ಎನ್ನುವವರು ಸಾಕಷ್ಟು ಮಂದಿ. ಯಾವುದೇ ಶಿಫ್ಟ್ (Shift )ಇರಲಿ ಉದ್ಯೋಗ ಮಾಡಲು ಸಿದ್ಧವಾಗಿರುತ್ತಾರೆ. ಹಳ್ಳಿ ಹಳ್ಳಿಗೆ ಇಂಟರ್ನೆಟ್ (Internet )ಬಂದಿದೆ. ವಿದೇಶಿ ಕಂಪನಿಗಳ ಕೆಲಸವನ್ನು ಮನೆಯಲ್ಲಿ ಕುಳಿತು ಮಾಡ್ಬಹುದಾಗಿದೆ. ಕೇವಲ ಐಟಿ (IT )ಕಂಪನಿಗಳು ಮಾತ್ರವಲ್ಲ ಮಾಧ್ಯಮ ಸೇರಿದಂತೆ ಅನೇಕ ಕಂಪನಿಗಳು ರಾತ್ರಿ ಪಾಳಿ (night Shift)ಯಲ್ಲೂ ಕೆಲಸ (Work )ಮಾಡುತ್ತವೆ. ಕೆಲ ಕಂಪನಿಗಳ ಕೆಲಸ ನಡೆಯುವುದು ರಾತ್ರಿ ಮಾತ್ರ.

ವಿದ್ಯಾಭ್ಯಾಸ (education)ಅಥವಾ ಬೇರೆ ಇನ್ನೊಂದು ಕೆಲಸಕ್ಕಾಗಿ ಕೆಲವರು ರಾತ್ರಿ ಪಾಳಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರಾತ್ರಿ ಪಾಳಿ ಕೆಲಸ ಆಕರ್ಷಕವಾಗಿ ಕಾಣುತ್ತದೆ. ರಾತ್ರಿ ಕೆಲಸ ಮಾಡಿದರೆ ನಂತರ ನಿಮ್ಮ ಇಡೀ ದಿನ ಆರಾಮವಾಗಿರಬಹುದು ಎಂದುಕೊಳ್ಳುತ್ತಾರೆ. ಆದರೆ ವಾಸ್ತವ ಬೇರೆಯಿರುತ್ತದೆ. ಬೆಳಿಗ್ಗೆ ಕೆಲಸ ಮಾಡುವುದಕ್ಕಿಂತ ರಾತ್ರಿ ಕೆಲಸ ಮಾಡಿದಾಗ ಸುಸ್ತು ಹೆಚ್ಚಿರುತ್ತದೆ. ರಾತ್ರಿ ಪಾಳಿ ಮುಗಿಸಿ ಮತ್ತೆ ಬೆಳಿಗ್ಗೆ ಕೆಲಸ ಮಾಡುವುದು ಸುಲಭವಲ್ಲ. ಹಾಗೆ ರಾತ್ರಿ ಕೆಲಸ ಮಾಡಿದ ನಂತರ ಬೆಳಿಗ್ಗೆ ಸರಿಯಾಗಿ ನಿದ್ರೆ ಬಂದಲ್ಲಿ ಸಮಸ್ಯೆಯಿಲ್ಲ. ರಾತ್ರಿಪಾಳಿ ಮಾಡುವ ಜನರು ಅಧಿಕ ತೂಕದ ಸಮಸ್ಯೆಗೆ ಒಳಗಾಗುತ್ತಾರೆ. ಇದಲ್ಲದೆ ದೀರ್ಘ ಕಾಲ ರಾತ್ರಿ ಪಾಳಿ ಮಾಡಿದವರಿಗೆ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತದೆ. ಗ್ಯಾಸ್ಟ್ರಿಕ್ (gastric) ಸೇರಿದಂತೆ ಮಾನಸಿಕ ಒತ್ತಡ ಶುರುವಾಗುತ್ತದೆ. ರಾತ್ರಿ ಕೆಲಸ ಮಾಡುವವರು ಅಚ್ಚುಕಟ್ಟಾಗಿ ನಿಯಮ ಪಾಲನೆ ಮಾಡಬೇಕು. ಆಗ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡಬಹುದು.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಏನು ಮಾಡ್ಬೇಕು ? 

ಆಹಾರ(Food)ದತ್ತ ಗಮನ ಹರಿಸಿ : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಜನರಿಗೆ ಬಾಯಿ ಚಪಲ ಹೆಚ್ಚು. ರಾತ್ರಿ ಆಗಾಗ ತಿನ್ನುವ ಬಯಕೆಯಾಗುತ್ತದೆ. ನಿದ್ರೆ ತಡೆಯಲು ಟೀ ಅಥವಾ ಕಾಫಿ ಸೇವನೆ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ರಾತ್ರಿ ಪಾಳಿ ಮುಗಿಯುವುದರಲ್ಲಿ ನಾಲ್ಕೈದು ಬಾರಿ ಟೀ ಸೇವನೆ ಮಾಡುವವರಿದ್ದಾರೆ. ಆದರೆ ಈ ಸಮಯದಲ್ಲಿ ಟೀ (Tea)ಅಥವಾ ಕಾಫಿ (Coffee) ಕುಡಿಯಬೇಡಿ. ಹಾಗೆ ಕುರುಕುಲು ತಿಂಡಿಯನ್ನು ತಿನ್ನಬೇಡಿ. ರಾತ್ರಿ ಸಮಯದಲ್ಲೂ ಹಣ್ಣುಗಳು ಅಥವಾ ಆರೋಗ್ಯಕರ ತಿಂಡಿಗಳನ್ನು ತಿನ್ನಬೇಕು. ಇದು ದೇಹದ ಶಕ್ತಿಯನ್ನು ಕಾಯ್ದುಕೊಳ್ಳು ನೆರವಾಗುತ್ತದೆ.

Heart Attack in Winter : ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು, ಇರಲಿ ಎಚ್ಚರ

ನಿದ್ರೆಯೊಂದಿಗೆ ರಾಜಿ ಮಾಡಬೇಡಿ : ಮೊದಲೇ ಹೇಳಿದಂತೆ ರಾತ್ರಿ ಪಾಳಿ ಮಾಡುವವರು ಬೆಳಿಗ್ಗೆ ನಿದ್ರೆ ಮಾಡಬೇಕಾಗುತ್ತದೆ. ರಾತ್ರಿ-ಬೆಳಿಗ್ಗೆ ಎರಡೂ ನಿದ್ರೆಯಾಗಿಲ್ಲವೆಂದರೆ ಆರೋಗ್ಯ ಹದಗೆಡುತ್ತದೆ. ಅನೇಕರು ರಾತ್ರಿ ಪಾಳಿ ಮುಗಿಸಿ,ಬೆಳಿಗ್ಗೆ ಕೇವಲ 3-4 ಗಂಟೆ ನಿದ್ರೆ ಮಾಡುತ್ತಾರೆ. ಕನಿಷ್ಠ 8 ಗಂಟೆ ನಿದ್ರೆ ಮಾಡಬೇಕಾಗುತ್ತದೆ. ಕೆಲವರು ತಿಂಗಳ ಪೂರ್ತಿ ರಾತ್ರಿ ಪಾಳಿ ಮಾಡುವುದಿಲ್ಲ. ತಿಂಗಳಿಗೆ ಒಂದು ವಾರ ಅಥವಾ ಎರಡು ವಾರ ರಾತ್ರಿ ಪಾಳಿ ಮಾಡುತ್ತಾರೆ. ಇದ್ರಿಂದ ನಿದ್ರೆ ಚಕ್ರದಲ್ಲಿ ಏರುಪೇರಾಗುತ್ತದೆ. ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಆಗ ಬಲವಂತವಾಗಿಯೇ ನಿದ್ರೆ ಮಾಡಬೇಕಾಗುತ್ತದೆ. 

Relationship Tips: ಸಂಗಾತಿ ಜೊತೆ ಹೇಗಿದ್ರೆ ಸಂಬಂಧ ಚೆನ್ನಾಗಿರುತ್ತೆ?

ವ್ಯಾಯಾಮ (Exercise) : ರಾತ್ರಿ ಪಾಳಿ ಕಾರಣಕ್ಕೆ ವ್ಯಾಯಾಮ ಮಾಡಲು ಮನಸ್ಸು ಬರುವುದಿಲ್ಲ. ನೈಟ್ ಶಿಫ್ಟ್ ಮಾಡುವ ಜನರು ಹೆಚ್ಚಾಗಿ ವ್ಯಾಯಾಮ ಸ್ಕಿಪ್ ಮಾಡ್ತಾರೆ. ಬೆಳಿಗ್ಗೆ ವ್ಯಾಯಾಮ ಮಾಡಲು ಸಾಧ್ಯವಾಗದೆ ಹೋದವರು ಹಗಲಿನಲ್ಲಿ ನಿದ್ರೆ ಮಾಡಿ,ಸಂಜೆ ಸಮಯದಲ್ಲಿ ಸ್ವಲ್ಪ ವ್ಯಾಯಾಮ ಮಾಡಬೇಕಾಗುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ದರಿಂದ ವ್ಯಾಯಾಮವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಬೇಕು.