ಅಯ್ಯೋ, ಯಾಕೋ ಎಲ್ಲವೂ ಮರೆತು ಹೋಗುತ್ತಿದೆ, ಏನು ಮಾಡೋಣ?

ಎಲ್ಲಿ ಇಟ್ಟನೋ ನೆನಪೇ ಆಗ್ತಿಲ್ಲ… ಏನೋ ಹೇಳಿದ್ರು ಮರೆತೆ ಹೋಯ್ತು.. ಹೀಗೆ ಅನೇಕರು ಹೇಳೋದನ್ನು ನೀವು ಕೇಳಿರಬಹುದು. ನಿಮಗೂ ಮರೆವು ಶುರುವಾಗಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ. ಆರಂಭದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಿ. 
 

Tips For Memory Loss

ಕಣ್ಣಿಗೆ ಕನ್ನಡಕ ಹಾಕಿಕೊಂಡು ಊರು ತುಂಬಾ ಕನ್ನಡಕ ಹುಡುಕುವವರಿದ್ದಾರೆ. ಮನೆ ಕೀ ಎಲ್ಲೋ ಇಟ್ಟು, ಇನ್ನೆಲ್ಲೋ ತಡಕಾಡ್ತಿರುತ್ತಾರೆ. ಮಾರುಕಟ್ಟೆಗೆ ಹೋಗುವ ಮುನ್ನ ನೆನಪಿರುವ ಸಾಮಾನುಗಳ ಹೆಸ್ರು, ಅಂಗಡಿಗೆ ಹೋದಾಗ ಮರೆತಿರುತ್ತೆ. ಅಯ್ಯೋ ಪ್ರತಿ ದಿನ ಆ ಕೆಲಸ ಮಾಡೋಕೆ ಮರೆತು ಹೋಗುತ್ತೆ, ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದು ಗೋಳಾಡೋರಿದ್ದಾರೆ. ಆರಂಭದಲ್ಲಿ ಸಣ್ಣ -ಪುಟ್ಟ ವಿಷ್ಯಗಳು ಮರೆಯುತ್ತಿರುತ್ತದೆ. ಅದು ದೊಡ್ಡದಾಗ್ತಾ ಬಂದಾಗ ಸಮಸ್ಯೆ ಹೆಚ್ಚಾಗುತ್ತದೆ. ಇತ್ತೀಚಿನ ಜೀವನ ಶೈಲಿ, ನೆನಪಿನ ಶಕ್ತಿ ಕಡಿಮೆಯಾಗಲು ಒಂದು ದೊಡ್ಡ ಕಾರಣವಾಗಿದೆ. ನೆನಪಿನ ಶಕ್ತಿ ಕಡಿಮೆಯಾಗೋದು ಗಾಬರಿಪಡುವಂತಹದ್ದಲ್ಲದೆ ಹೋದ್ರೂ ನೆನಪಿನ ಶಕ್ತಿ ತುಂಬಾ ಕಡಿಮೆಯಾದ್ರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಹಾಗಾಗಿ ಆರಂಭದಲ್ಲಿಯೇ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದಲ್ಲಿ ಸಮಸ್ಯೆ ದೂರ ಮಾಡಬಹುದು. ನೆನಪಿನ ಶಕ್ತಿ ಕಡಿಮೆಯಾಗ್ತಿದೆ, ಸಣ್ಣಪುಟ್ಟ ವಿಷ್ಯಗಳನ್ನು ಮರೆಯುತ್ತಿರುತ್ತೀರಿ ಎಂದಾದ್ರೆ ನೀವು ನಿಮ್ಮ ಜೀವನ ಶೈಲಿನಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಇದ್ರಿಂದ ನಿಮ್ಮ ಮೆದುಳು ಆರೋಗ್ಯವಾಗಿರುವುದಲ್ಲದೆ ಜ್ಞಾಪಕಶಕ್ತಿ ತೀಕ್ಷ್ಣವಾಗುತ್ತದೆ. ನಾವಿಂದು ಜ್ಞಾಪಕ ಶಕ್ತಿ ಸುಧಾರಿಸಲು ಕೆಲ ಸಲಹೆಗಳನ್ನು ನಿಮಗೆ ನೀಡ್ತೇವೆ.

ಪಾಲಿಫಿನಾಲ್ (Polyphenols) ಕಡಿಮೆಯಾಗದಂತೆ ನೋಡಿಕೊಳ್ಳಿ : ಪಾಲಿಫಿನಾಲ್ ನಮ್ಮ ಮೆದುಳಿ (Brain) ನ ಆರೋಗ್ಯವನ್ನು ಸುಧಾರಿಸುತ್ತದೆ. ನೀವು ಜಾಮೂನ್, ಗ್ರೀನ್ ಟೀ, ಬ್ಲೂ ಬೆರ್ರಿ, ಬ್ಲ್ಯಾಕ್ ಬೆರ್ರಿ, ಕೋಕೋ ಪೌಡರ್, ಡಾರ್ಕ್ ಚಾಕೊಲೇಟ್ ಇತ್ಯಾದಿಗಳನ್ನು ಸೇವಿಸುವ ಮೂಲಕ ಪಾಲಿಫಿನಾಲ್ ಅಂಶ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಇದ್ರಿಂದ ಮೆದುಳು ಚುರುಕಾಗುವ ಜೊತೆಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೆ ವಿಟಮಿನ್ ಬಿ, ವಿಟಮಿನ್ ಬಿ 12 ಮತ್ತು ಬಿ 9 ಅಂಶ ಹೆಚ್ಚಿರುವ ಆಹಾರವನ್ನೂ ಸೇವನೆ ಮಾಡಬೇಕು.

ಪೋಷಕಾಂಶ ದೇಹಕ್ಕೆ ಆಮ್ಲಜನಕದಷ್ಟೇ ಮುಖ್ಯ, ಹೆಲ್ದೀಯಾಗಿರಬೇಕಾದ್ರೆ ಇವೆಲ್ಲಾ ತಿನ್ಬೇಕು

ಮೆಗ್ನೀಸಿಯಮ್ ನಲ್ಲಿದೆ ಜ್ಞಾಪಕ (Memory) ಶಕ್ತಿ ಚುರುಕುಗೊಳಿಸುವ ಗುಣ : ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರ (Food) ವನ್ನು ನೀವು ಸೇವಿಸುವುದು ಕೂಡ ಮುಖ್ಯ. ಪದೇ ಪದೇ, ಪ್ರತಿಯೊಂದು ವಿಷ್ಯವನ್ನು ನೀವು ಮರೆಯುತ್ತಿದ್ದೀರಿ ಎಂದಾದ್ರೆ ಮೆಗ್ನೀಸಿಯಮ್ ಇರುವ ಆಹಾರ ಸೇವನೆ ಮಾಡಿ.  ಮೆಗ್ನೀಸಿಯಮ್ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ಇದು ಒತ್ತಡ ನಿರೋಧಕ ಖನಿಜವಾಗಿದ್ದು, ಮೆಮೊರಿಯನ್ನು ಸುಧಾರಿಸುತ್ತದೆ. ಹಸಿರು ಎಲೆ ತರಕಾರಿಗಳು, ಡ್ರೈ ಫ್ರೂಟ್ಸ್, ಧಾನ್ಯಗಳು, ಸೋಯಾಬೀನ್, ಹಾಲು, ಸಮುದ್ರಾಹಾರದಲ್ಲಿ ನಿಮಗೆ ಮೆಗ್ನೀಸಿಯಂ ಹೆಚ್ಚಾಗಿ ಸಿಗುತ್ತದೆ.

ಒಮೆಗಾ -3 ಕೊಬ್ಬಿನಾಮ್ಲ ಸೇವನೆ : ಮೆದುಳನ್ನು ಚುರುಕುಗೊಳಿಸಲು ಒಮೆಗಾ – 3 ಕೊಬ್ಬಿನಾಮ್ಲ ಕೂಡ ಬಹಳ ಸಹಾಯಕವಾಗಿದೆ. ಪಾಲಿಫಿನಾಲ್‌ಗಳ ಜೊತೆಗೆ ಒಮೆಗಾ 3 ಕೊಬ್ಬಿನಾಮ್ಲ ಕೂಡ ನಿಮ್ಮ ಸ್ಮರಣ ಶಕ್ತಿಯನ್ನು ತೀಕ್ಷ್ಣಗೊಳಿಸುತ್ತವೆ.  

ಗಿಡಮೂಲಿಕೆ ಬಳಸಿ, ಜ್ಞಾಪಕ ಶಕ್ತಿ ಹೆಚ್ಚಿಸಿ : ಗಿಡಮೂಲಿಕೆಗಳು ಕೂಡ ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತವೆ. ನೀವು ಅತ್ಯಂತ ಹಳೆಯ ಗಿಡ ಮೂಲಿಕೆಯಾದ ಗಿಂಕ್ ಬಿಲೋಬ ಬಳಕೆ ಮಾಡಬಹುದು. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಗಿಡಮೂಲಿಕೆಯಾಗಿದೆ. ಇದು ಮೆಮೊರಿ ನಷ್ಟಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಮಾನಸಿಕ ಕಾರ್ಯವನ್ನು ಸುಧಾರಿಸುತ್ತದೆ.

ನೆನಪಿನ ಶಕ್ತಿ (Memory Power) ಹೆಚ್ಚಳಕ್ಕೆ ಧ್ಯಾನ : ಜ್ಞಾಪಕಶಕ್ತಿಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೆ ನಿಯಮಿತವಾಗಿ ಧ್ಯಾನ ಮಾಡುವುದು ಬಹಳ ಒಳ್ಳೆಯದು. ಇದು ನಿಧಾನವಾಗಿ ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. 

ಟ್ಯಾಬ್ಲೆಟ್ ತಗೊಂಡ್ರೂ ಜ್ವರ ಕಡಿಮೆಯಾಗಿಲ್ವಾ ? ಹಾಗಾದ್ರೆ ತಿನ್ನೋ ಆಹಾರ ಬದಲಾಯಿಸಿ

ಮೆದುಳಿಗೆ (Brain) ಸಂಬಂಧಿಸಿದ ವ್ಯಾಯಾಮ: ಪ್ರತಿ ದಿನ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ನೆನಪಿನ ಶಕ್ತಿ ಕಡಿಮೆಯಾಗ್ತಿದೆ ಎನ್ನುವವರು ಮೆದುಳಿನ ಆರೋಗ್ಯ ಸುಧಾರಿಸಬಲ್ಲ ವ್ಯಾಯಾಮವನ್ನು ಮಾಡಬೇಕಾಗುತ್ತದೆ. ಇದಲ್ಲದೆ ನೀವು ಮೈಂಡ್ ಗೆ ಕೆಲಸ ನೀಡುವ ಆಟಗಳನ್ನು ಹೆಚ್ಚಾಗಿ ಆಡಬೇಕು. ಚೆಸ್, ಒಗಟು, ಪ್ರಶ್ನೋತ್ತರಗಳು ನಿಮ್ಮ ಮೆದುಳಿಗೆ ಕೆಲಸ ನೀಡುತ್ತವೆ. 
 

Latest Videos
Follow Us:
Download App:
  • android
  • ios