ಈ 5 ಟಿಪ್ಸ್ ಫಾಲೋ ಮಾಡಿ, ಖುಷಿಯಾಗಿರಲಿಲ್ಲವೆಂದರೆ ನಮ್ಮನ್ನು ಕೇಳಿ!
ಕೆಲವೊಮ್ಮೆ ದಿನನಿತ್ಯದ ಬದುಕಿನಲ್ಲಿ ಸಣ್ಣ ಸಣ್ಣ ವಿಷಯಗಳೂ ಅದೆಷ್ಟು ಒತ್ತಡ ತಂದೊಡ್ಡುತ್ತವೆ ಎಂದರೆ ಅವು ನಮ್ಮ ನಗುವನ್ನು ಮರೆಸುತ್ತವೆ, ಕಡ್ಡಿಯನ್ನು ಗುಡ್ಡವಾಗಿಸುತ್ತವೆ. ಆದರೆ, ಈ ಸಣ್ಣ ಸಣ್ಣ ಒತ್ತಡಕಾರಕಗಳನ್ನು ಸಣ್ಣ ಪುಟ್ಟ ಅಭ್ಯಾಸಗಳಿಂದಲೇ ಹೊಡೆದೋಡಿಸಬಹುದು.
ಕೆಲವೊಂದು ದಿನಗಳು ಹೀಗಾಗುತ್ತವೆ. ಆಗಿನ್ನೂ ಹೊಸ ಬಟ್ಟೆ ಧರಿಸಿ ಹೊರ ಹೋಗಲು ರೆಡಿಯಾಗಿ ಕಾಫಿ ಕುಡಿದು ಹೊರಡೋಣವೆಂದುಕೊಳ್ಳುತ್ತೀರಿ, ಅಷ್ಟರಲ್ಲಿ ಕಾಫಿ ಜೀನ್ಸ್ ಮೇಲೆಲ್ಲಾ ಚೆಲ್ಲುತ್ತದೆ. ಅದನ್ನು ಸರಿಪಡಿಸಿಕೊಂಡು ಬೇಗ ಹೋಗುತ್ತೀರಿ. ದಾರಿಯಲ್ಲಿ ಟ್ರಾಫಿಕ್ ಪೋಲೀಸ್ ಅಡ್ಡ ಹಾಕುತ್ತಾರೆ, ವ್ಯಾಲೆಟ್ ಚೆಕ್ ಮಾಡಿದಾಗಲೇ ತಿಳಿಯುವುದು ಡಿಎಲ್ ಮರೆತುಬಂದಿದ್ದು, ಒಂದಿಷ್ಟು ಹಣ ಸುಖಾಸುಮ್ಮನೆ ಫೈನ್ ಕಟ್ಟಿ ಕಚೇರಿಗೆ ಹೋಗುತ್ತೀರಿ. ಅಷ್ಟರಲ್ಲಾಗಲೇ ಮನಸ್ಸು ಕೆಟ್ಟು ಹೋಗಿರುತ್ತದೆ. ಅರ್ಜೆಂಟಾಗಿ ಕೆಲಸ ಆಗಬೇಕು. ಕಂಪ್ಯೂಟರ್ ಹ್ಯಾಂಗ್ ಆಗಿ ತಾಳ್ಮೆ ಪರೀಕ್ಷಿಸುತ್ತದೆ. ಅಷ್ಟರಲ್ಲಿ ಸಹೋದ್ಯೋಗಿ ಆಡುವ ಸಾಮಾನ್ಯ ಮಾತು ನಿಮ್ಮನ್ನು ಕೆರಳಿಸುತ್ತದೆ. ಇವೆಲ್ಲವೂ ಪ್ರತಿದಿನ ಕಾಡುವ ಸಣ್ಣ ಸಣ್ಣ ಸ್ಟ್ರೆಸ್ಸರ್‌ಗಳು. ಇಂಥವು ಹಲವು ಆಗಾಗ ಆಗುತ್ತಲೇ ಇರುತ್ತದೆ. ಬಹುಷಃ ನೀವು ಕಾಫಿ ಚೆಲ್ಲಿದಾಗ ಮನಸ್ಸನ್ನು ಒಮ್ಮೆ ಕಾಮ್ ಮಾಡಿಕೊಂಡು ಯೋಚಿಸಿ ಹೊರಟಿದ್ದರೆ ಡಿಎಲ್ ಮರೆಯುತ್ತಿರಲಿಲ್ಲ. ಅಲ್ಲಿ ಫೈನ್ ಕಟ್ಟಿಲ್ಲವಾದರೆ ಇಲ್ಲಿ ಕಂಪ್ಯೂಟರ್ ಹ್ಯಾಂಗ್ ಆದಾಗಲೂ ಸಮಪ್ರಜ್ಞೆ ಕಾದಿಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. ಹಾಗೆ ತತ್‌ಕ್ಷಣಕ್ಕೆ ಒತ್ತಡ ನಿವಾರಿಸಿಕೊಂಡರೆ ಸಹೋದ್ಯೋಗಿಯ ಮಾತಿಗೆ ಕೆರಳಬೇಕಾದ ಅಗತ್ಯವಿರುತ್ತಿರಲಿಲ್ಲ.
ಇವತ್ತಿನ ದಿನ ಸರಿ ಇರಲಿಲ್ಲ ಎನ್ನುತ್ತೇವೆಲ್ಲ, ಅದು ಒಂದು ಅನುಭವದಿಂದಾಗಿ ಎಲ್ಲವನ್ನೂ ನೆಗೆಟಿವ್ ಆಗಿ ಯೋಚಿಸುವ ನಮ್ಮ ಯೋಚನೆಗಳ ಪರಿಣಾಮವೇ ಆಗಿರುತ್ತದೆ. ಹಾಗಾಗಿ, ಬೆಳಗೆದ್ದ ಕೂಡಲೇ ಅಥವಾ ಅಗತ್ಯ ಬಿದ್ದಾಗ ಮಾಡುವ ಈ ಕೆಲವೊಂದು ಸಣ್ಣಪುಟ್ಟ ಹವ್ಯಾಸಗಳು ಇಡೀ ದಿನ ನಿಮ್ಮನ್ನು ಟ್ರ್ಯಾಕ್‌ನಲ್ಲಿಡಬಲ್ಲವು.
ನೆಟ್ಟಿಗರ ಮನ ಗೆದ್ದ ಅಪ್ಪ-ಮಗಳ ಬಾಂಧವ್ಯ
ಆಶೀರ್ವಾದಗಳ ಪಟ್ಟಿ
ಪ್ರತಿ ಬೆಳಗ್ಗೆ ಎದ್ದೊಡನೆ ನೀವು ಎಷ್ಟೊಂದು ಲಕ್ಕಿ, ಎಂಥೆಂಥ ಆಶೀರ್ವಾದಗಳು ನಿಮಗೆ ಸಿಕ್ಕಿವೆ ಎಂಬುದನ್ನು ಪಟ್ಟಿ ಮಾಡಿ. ಯಾರೆಲ್ಲ ನಿಮ್ಮ ಬದುಕಿನಲ್ಲಿದ್ದಾರೆ ಎಂದು ನೆನೆಸಿಕೊಳ್ಳಿ. ನಿಮಗೆ ಸಿಕ್ಕಿದ್ದೆಲ್ಲದರ ಪಟ್ಟಿ ಮಾಡಿ ಆ ಬಗ್ಗೆ ಕೃತಜ್ಞತೆ ಹೊಂದುವುದರಿಂದ ಏನು ಸಿಕ್ಕಿಲ್ಲ ಎಂಬುದರ ಕುರಿತು ಕೊರಗುವ ನೆಗೆಟಿವ್ ಯೋಚನೆಗಳು ದೂರಾಗುತ್ತವೆ. ಇದು ನಿಮ್ಮ ಬದುಕನ್ನು ಸಾಕಷ್ಟು ಸರಳವಾಗಿಸುತ್ತದೆ. ಹಾಗಂಥ ಒತ್ತಾಯಕ್ಕೇನೋ ಬರೆಯಬೇಡಿ. ಹೃದಯದಾಳದಿಂದ ಬಂದಿದ್ದನ್ನು ಮಾತ್ರವೇ ಬರೆಯಿರಿ. ಮನೆಗೆ ಬರುತ್ತಿದ್ದಂತೆಯೇ ಕಿಸ್ ಮಾಡುವ, ಕುಣಿವ ನಾಯಿಮರಿಯಿಂದ ಹಿಡಿದು ನಿಮ್ಮ ಮಾತಿನ ಕಲೆ, ಚೆಂದದ ತ್ವಚೆ ಮುಂತಾದ ಎಲ್ಲಕ್ಕಾಗಿ ಸಂತೋಷ ಪಡಿ. ಯಾವುದೆಲ್ಲ ನಿಮ್ಮ ಜೀವನಕ್ಕೆ ಸಂತೋಷ, ಬೆಲೆ ಸೇರಿಸುತ್ತವೋ ಅವೆಲ್ಲವೂ ಈ ಪಟ್ಟಿಯಲ್ಲಿರಲಿ.
ಧ್ಯಾನ
ಬೆಳಗ್ಗೆ ಎದ್ದೊಡನೆ ಇರಬಹುದು, ಅಥವಾ ಯಾವುದೋ ಕಿರಿಕಿರಿ ಉಂಟಾದಾಗ ಇರಬಹುದು- ಐದರಿಂದ 10 ನಿಮಿಷ ಧ್ಯಾನದ ಮೊರೆ ಹೋಗಿ. ಇದು ಮನಸ್ಸನ್ನು ತಿಳಿಯಾಗಿಸಿ ಅಗತ್ಯವಿರುವುದರ ಮೇಲೆ ಫೋಕಸ್ ಮಾಡಲು ಸಹಾಯ ಮಾಡುತ್ತದೆ. ನೀವು ಧ್ಯಾನಕ್ಕೆ ಹೊಸಬರಾದರೆ ಸುಮ್ಮನೆ ನೇರವಾಗಿ ಕಣ್ಣುಮುಚ್ಚಿ ಕುಳಿತು ಉಸಿರಾಟದ ಕಡೆಗೆ ಗಮನ ಹರಿಸಿ. ಬೇರೆ ಯೋಚನೆಗಲು ಬಂದಾಗಲೆಲ್ಲ ಅದನ್ನು ಅಲ್ಲಿಯೇ ಬಿಟ್ಟು ಮತ್ತೆ ಉಸಿರಾಟದತ್ತ ಗಮನ ಎಳೆದು ತನ್ನಿ. ಸ್ವಲ್ಪ ದಿನಗಳ ಬಳಿಕ ನಿಮಗೆ ಧ್ಯಾನ ಅಭ್ಯಾಸವಾಗುತ್ತದೆ. ಆಗ ನೀವು ದಿನನಿತ್ಯದ ಕೆಲಸಗಳ ಮೇಲೆ ಮುಂಚಿಗಿಂತ ಹೆಚ್ಚು ಫೋಕಸ್ ಮಾಡಬಲ್ಲಿರಿ, ಹೆಚ್ಚು ಕಾಮ್ ಆಗಿ ಇರಬಲ್ಲಿರಿ ಎಂಬುದು ನಿಮ್ಮ ಗಮನಕ್ಕೇ ಬರುತ್ತದೆ.
ಹೀಗ್ ಮಾಡಿದ್ರೆ ಶಾಪಿಂಗ್ ಖುಷಿ ನೀಡುತ್ತೆ
ಇಡೀ ದಿನ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿ
ಬೆಳಗ್ಗೆ ಧ್ಯಾನದ ನಂತರ ಒಂದೈದು ನಿಮಿಷ ಕುಳಿತು, ಆ ದಿನ ನೀವು ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿಕೊಳ್ಳಿ. ಹಿಂದಿನ ದಿನ ಮಾಡಿದ ಪಟ್ಟಿಯಲ್ಲಿ ಆದ ಕೆಲಸಗಳಿಗೆಲ್ಲ ಟಿಕ್ ಮಾರ್ಕ್ ಮಾಡಿ. ಇದರಿಂದ ಆ ಇಡೀ ದಿನ ನಿಮಗೆ ಆಗಬೇಕಾದ ಕೆಲಸಗಳು ನೆನೆಪಿನಲ್ಲುಳಿಯುತ್ತವಷ್ಟೇ ಅಲ್ಲದೆ, ಆ ಬಗ್ಗೆ ನೀವು ಹೆಚ್ಚು ಫೋಕಸ್ ಆಗಿರಬಲ್ಲಿರಿ.
ಗುರಿಗಳ ಮನನ
ಪ್ರತಿ ಬೆಳಗ್ಗೆ ಏಳುವಾಗ, ಹಾಗೂ ರಾತ್ರಿ ಮಲಗುವಾಗ ನಿಮ್ಮ ಗುರಿಗಳೇನೇನು, ಕನಸುಗಳೇನೇನು, ಬದುಕಿನಲ್ಲಿ ಏನು ಮಾಡಬೇಕೆಂದುಕೊಂಡಿದ್ದೀರಿ, ಏನೇನು ಕಲಿಯಬೇಕು, ಅದಕ್ಕಾಗಿ ಏನು ಮಾಡುತ್ತಿದ್ದೀರಿ, ಏನು ಮಾಡಬೇಕು ಎಂಬುದನ್ನೆಲ್ಲ ಒಮ್ಮೆ ಕುಳಿತು ಯೋಚಿಸಿ. ಇದರಿಂದ ನೀವು ನಿಮ್ಮ ಗುರಿಗಳ ಬಗ್ಗೆ ಸದಾ ಹೆಚ್ಚು ಗಂಭೀರವಾಗಿರುತ್ತೀರಿ ಹಾಗೂ ಆ ಬಗ್ಗೆ ಕೆಲಸ ಕೂಡಾ ಮಾಡುತ್ತೀರಿ. ಅಂದರೆ, ಖಂಡಿತಾ ಭವಿಷ್ಯದಲ್ಲಿ ಗುರಿ ಸಾಧನೆಯಾಗುತ್ತದೆ.
ಹೆಂಡತಿ ಖುಷಿಗಾಗಿ ಆಕೆಯನ್ನು ಪ್ರಿಯಕರನೊಂದಿಗೆ ಸೇರಿಸಿದ ಪತಿ
ಸ್ಟ್ರೆಚಿಂಗ್
ಬೆಳಗ್ಗೆ, ರಾತ್ರಿ ಹಾಗೂ ಉದ್ಯೋಗ ಸ್ಥಳದಲ್ಲಿ ಆಗಾಗ ಸ್ಟ್ರೆಚಿಂಗ್ ಎಕ್ಸರ್ಸೈಸ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕೇವಲ 5 ನಿಮಿಷ ಮಾಡಿದರೂ ದೇಹಕ್ಕೆ ಎಷ್ಟೊಂದು ಹಾಯೆನಿಸುತ್ತದೆ ಎಂಬುದನ್ನು ಅನುಭವದಿಂದ ಕಂಡುಕೊಳ್ಳಿ. ಇದರಿಂದ ನೋವುಗಳು ಕಡಿಮೆಯಾಗಿ ನಿಮ್ಮ ಮೂಡ್ ಚೆನ್ನಾಗಿ ಉಳಿಯುತ್ತದೆ.