Asianet Suvarna News Asianet Suvarna News

Health Tips: ಸಿಕ್ಕಾಪಟ್ಟೆ ಮಸಾಲೆ ಪದಾರ್ಥ ತಿಂತೀರಾ, ಕಡಿಮೆ ಮಾಡದಿದ್ರೆ ಕಾಡಲಿದೆ ಸಮಸ್ಯೆ

Side effects of eating spicy food: ಮಸಾಲೆ, ಆಹಾರದ ರುಚಿ ಹೆಚ್ಚಿಸುತ್ತದೆ. ಸ್ಪೈಸಿ ಅಡುಗೆ ಮಾಡುವಾಗ ಮಸಾಲೆ ಹಾಕೇ ಹಾಕ್ತೇವೆ. ಬರೀ ಅಡಿಗೆಗೆ ಮಾತ್ರವಲ್ಲ ಕಷಾಯ, ಔಷಧದ ರೂಪದಲ್ಲೂ ನಾವು ಮಸಾಲೆ ಸೇವನೆ ಮಾಡ್ತೇವೆ. ಆದ್ರೆ ಮಸಾಲೆ ಬಳಕೆ ಮಾಡುವಾಗ ಕೆಲವೊಂದು ಎಚ್ಚರಿಕೆ ವಹಿಸ್ಬೇಕು.
 

This Spicy Food Avoid Summer
Author
Bangalore, First Published May 4, 2022, 3:30 PM IST

ಇಂಗು (Asafetida) – ತೆಂಗು (Coconut) ಇದ್ದರೆ ಮಂಗನೂ ಅಡುಗೆ (Cooking ) ಮಾಡುತ್ತೆ ಎಂಬ ಮಾತಿದೆ. ಅಡುಗೆ ರುಚಿಯಾಗಿರ್ಬೇಕೆಂದ್ರೆ ಅದಕ್ಕೆ ಒಂದಿಷ್ಟು ಮಸಾಲೆ (Spice) ಹಾಕ್ಲೇಬೇಕು. ಎಲ್ಲ ತರಕಾರಿ (Vegetable) ಗಳ ರುಚಿಯನ್ನು ಮಸಾಲೆ ಪದಾರ್ಥಗಳು ದುಪ್ಪಟ್ಟು ಮಾಡ್ತವೆ.  ಆದ್ರೆ ಎಲ್ಲ ಋತುವಿನಲ್ಲೂ ಒಂದೇ ಪ್ರಮಾಣದಲ್ಲಿ ಮಸಾಲೆ ಬಳಕೆ ಸೂಕ್ತವಲ್ಲ. ಬೇಸಿಗೆ (Summer) ಯಲ್ಲಿ ಕೆಲವು ಮಸಾಲೆಗಳನ್ನು ತಿನ್ನಬಾರದು. ಸಂಪೂರ್ಣವಾಗಿ ಮಸಾಲೆಗಳನ್ನು ತ್ಯಜಿಸಬೇಕೆಂಬುದು ಇದರ ಅರ್ಥವಲ್ಲ. ನೀವು ಈ ಮಸಾಲೆಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ  ಯಾವುದೇ ಹಾನಿಯಾಗುವುದಿಲ್ಲ.  ಈ ಮಸಾಲೆಗಳನ್ನು ಬೇಸಿಗೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಸಮಸ್ಯೆ ಎದುರಾಗುತ್ತದೆ.  ಬೇಸಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕಾದ ಮಸಾಲೆ ಪದಾರ್ಥಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ.

ಬೇಸಿಗೆಯಲ್ಲಿ ಈ ಮಸಾಲೆ ಪದಾರ್ಥಗಳಿಂದ ದೂರವಿರಿ : 

ಅರಿಶಿನ (Turmeric) ದ ಅತಿಯಾದ ಬಳಕೆ ತಪ್ಪಿಸಿ : ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಮೊದಲು ಬರುವುದೇ ಅರಿಶಿನ ಅಂದ್ರೆ ತಪ್ಪಾಗಲಾರದು. ಭಾರತೀಯರು ಅರಿಶಿನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡ್ತಾರೆ. ಇದು ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆಹಾರಕ್ಕೆ ಬಣ್ಣ ನೀಡುತ್ತದೆ. ನಮ್ಮ ದೇಹಕ್ಕೆ ಅರಿಶಿನ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಅನೇಕ ಖಾಯಿಲೆಗಳಿಗೆ ಅರಿಶಿನ ಮದ್ದು. ಪ್ರತಿ ದಿನ ರಾತ್ರಿ ಹಾಲಿನ ಜೊತೆ ಅರಿಶಿನ ಬೆರೆಸಿ ಕುಡಿಯಬೇಕೆಂದು ಸಲಹೆ ನೀಡಲಾಗುತ್ತದೆ. ಆದ್ರೆ ಬೇಸಿಗೆಯಲ್ಲಿ ಅರಿಶಿನವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬಳಸಿದ್ರೆ ಒಳ್ಳೆಯದು.  ವಿಶೇಷವಾಗಿ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅರಿಶಿನವನ್ನು ಸೀಮಿತ ಪ್ರಮಾಣದಲ್ಲಿ ಬಳಸಬೇಕು. ಈ ಸಮಯದಲ್ಲಿ ಹೆಚ್ಚು ಅರಿಶಿನ ಬಳಕೆ ಮಾಡಿದ್ರೆ ಹೆಚ್ಚು ರಕ್ತಸ್ರಾವವಾಗುವ ಸಾಧ್ಯತೆಯಿರುತ್ತದೆ.

ಮೂತ್ರದ ಸೋಂಕು ಕಾಡುತ್ತಿದೆಯೇ? ಮಾನಸಿಕ ಸಮಸ್ಯೆಯೇ ಇದಕ್ಕೆ ಕಾರಣ….

ಬೇಸಿಗೆಯಲ್ಲಿ ತುಳಸಿ (Basil) ಯ ಅತಿಯಾಗಿ ಸೇವನೆ ಬೇಡ : ಕೊರೊನಾ ಸಂದರ್ಭದಲ್ಲಿ ಹೆಚ್ಚು ಬಳಕೆಗೆ ಬಂದಿದ್ದು ತುಳಸಿ. ತುಳಸಿ ಕಷಾಯ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಇದಲ್ಲದೆ ಶೀತ , ಕೆಮ್ಮು ಸೇರಿದಂತೆ ಕೆಲ ರೋಗಗಳನ್ನು ಇದು ಗುಣಪಡಿಸುವ ಶಕ್ತಿ ಹೊಂದಿದೆ. ಅನೇಕರು ಪ್ರತಿ ದಿನ ತುಳಸಿ ಬೆರೆಸಿದ ಕಷಾಯ ಸೇವನೆ ಇಷ್ಟಪಡ್ತಾರೆ . ತುಳಸಿಯನ್ನೂ ಕೂಡ ಬೇಸಿಗೆಯಲ್ಲಿ ಕಡಿಮೆ ಬಳಸಬೇಕು. ಇದನ್ನು ಅತಿಯಾಗಿ ಸೇವಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಕೆಲವೇ ಜನರಿಗೆ ತಿಳಿದಿದೆ. ಇದು ಮಹಿಳೆಯರ ವಂಶಾಭಿವೃದ್ಧಿ ಮೇಲೂ ಪರಿಣಾಮ ಬೀರುತ್ತದೆ.

ದಾಲ್ಚಿನಿ (Cinnamon) ಬಳಕೆಯನ್ನು ಕಡಿಮೆ ಮಾಡಿ :  ದಾಲ್ಚಿನಿ, ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಮಸಾಲೆಯಾಗಿ ಮಾತ್ರವಲ್ಲ ಔಷಧಿಯಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ಆದ್ರೆ ಬೇಸಿಗೆ ಸಮಯದಲ್ಲಿ ದಾಲ್ಚಿನಿಯ ಅತಿಯಾದ ಬಳಕೆಯು ಬಾಯಿಯಲ್ಲಿ ಗುಳ್ಳೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಅಲ್ಲದೆ ಹೆಚ್ಚು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚು – ಕಡಿಮೆಯಾಗುವ ಅಪಾಯವಿರುತ್ತದೆ.

Men Health : ಮೂತ್ರ ವಿಸರ್ಜನೆ ವೇಳೆ ವಿಪರೀತ ನೋವಾಗ್ತಿದೆಯಾ? ಎಚ್ಚರ

ಕಾಳು ಮೆಣಸು ( ಕರಿ ಮೆಣಸು) : ಕೆಮ್ಮು – ನೆಗಡಿ ಬಂದಾಗ ಮೊದಲು ಜನರು ಕೈನಲ್ಲಿ ಹಿಡಿಯೋದು ಕಾಳು ಮೆಣಸನ್ನು. ಕಾಳು ಮೆಣಸು ಸಾಕಷ್ಟು ಆರೋಗ್ಯ ಗುಣವನ್ನು ಹೊಂದಿದೆ. ಕಾಳು ಮೆಣಸು ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಆದರೆ, ಎಲ್ಲರಿಗೂ ಇದು ಒಳ್ಳೆಯದಲ್ಲ. ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇರುವವರು ಅತಿ ಹೆಚ್ಚು ಪ್ರಮಾಣದಲ್ಲಿ ಕಾಳು ಮೆಣಸಿನ ಬಳಕೆ ಮಾಡ್ಬಾರದು.  ಅದನ್ನು ಆದಷ್ಟು ಮಿತಿಯಲ್ಲಿ ಬಳಕೆ ಮಾಡ್ಬೇಕಾಗುತ್ತದೆ. ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಕಾಳು ಮೆಣಸನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು. ಇಲ್ಲವೆಂದ್ರೆ ಇದ್ರಿಂದ ಸಮಸ್ಯೆ ಎದುರಾಗುತ್ತದೆ. 

Follow Us:
Download App:
  • android
  • ios