ತಮ್ಮ ತ್ರಾಣವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳೋದು ಹೇಗೆ..?

ಆರೋಗ್ಯ ಮತ್ತು ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕೆ ನಾವು ದೈನಂದಿನ ಬದುಕಲ್ಲಿ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ನಮ್ಮ ಲೈಫ್‌ಸ್ಟೈಲ್ ಬದಲಾಯಿಸುವುದರಿಂದ ನಮ್ಮ ನೆಚ್ಚಿನ ಆಹಾರವನ್ನೂ ಬಿಟ್ಟುಕೊಡುವವರೆಗೆ ನಾವು ಕಾಂಪ್ರಮೈಸ್ ಮಾಡಿಕೊಳ್ಳುತ್ತೇವೆ. ಕೆಲಸದ ತರ್ತು ಇದ್ದಾಗಲೂ ವ್ಯಾಯಾಮಕ್ಕಾಗಿ ಸಮಯ ಮಾಡಿಕೊಳ್ಳುತ್ತೇವೆ. ಆರೋಗ್ಯವಾಗಿ ಫಿಟ್ ಆಗಿರುವ ವಿಚಾರ ಬಂದಾಗ ಇವೆಲ್ಲವೂ ಮಹತ್ವದ ವಿಚಾರಗಳೇ. ಆದರೆ ನೀವು ಮಾಡುವ ಚಿಕ್ಕದೊಂದು ಅಭ್ಯಾಸ ಈ ಎಲ್ಲ ಶ್ರಮವನ್ನು ವೇಸ್ಟ್ ಮಾಡಬಹುದು. 

ದೈಹಿಕವಾಗಿ ಆಕ್ಟಿವ್ ಆಗಿರಿ

ದಿನಾ ವ್ಯಾಯಾಮ ಮಾಡುವುದರಿಂದ ದೇಹದ ಫಿಟ್‌ನೆಟ್ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಬೆಳಗ್ಗೆ 30 ನಿಮಿಷ ವ್ಯಾಯಾಮ ಮಾಡಿ ದಿನಪೂರ್ತಿ ಸೋಂಬೇರಿಯಾಗಿ ಬಿದ್ದುಕೊಂಡಿದ್ದರೆ ನಿಮ್ಮ ವ್ಯಾಯಾಮದ ಫಲ ನಿಮಗೆ ಸಿಗದು. ನಿಮ್ಮ ವರ್ಕೌಟ್‌ ಸೆಷನ್ 30 ನಿಮಿಷದಲ್ಲಿ ಮುಗಿಯಬಾರದು. ದಿನಪೂರ್ತಿ ಚಟುವಟಿಕೆಯಿಂದಿರಬೇಕು.

ಒತ್ತಡ ಮುಕ್ತ ಬದುಕಿಗೆ ಉಸಿರಾಟ.. ಕಲಿತುಕೊಳ್ಳಲ್ಲೊಂದಿದೆ ಅವಕಾಶ...

ಜಡತ್ವದ ಜೀವನಶೈಲಿ ಒಳ್ಳೆಯದಲ್ಲ

ಸುಮ್ಮನೆ ದಿನಪೂರ್ತಿ ಸೋಂಬೇರಿಯಾಗಿರುವುದು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುದು. ಪುರುಷರಿಗೆ ಹಳಿಸಿದ್ದಲ್ಲಿ ಮನೆಯಲ್ಲೇ ಸುಮ್ಮನೆ ಕೂತ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇದೆ. ಶ್ವಾಸಕೋಶದ ಎಂಬಾಲಿಸಂ ಕಾಣಿಸಿಕೊಳ್ಳುತ್ತದೆ. ಅಂದರೆ ನಾವು ಯಾವುದೇ ಸ್ಥಳದಲ್ಲಿ ಒಂದೇ ಪೊಸಿಷನ್‌ನಲ್ಲಿ ಕೂತಿದ್ದಾದ ಕೆಲವು ಬ್ಲಡ್ ಕ್ಲಾಟ್ ರಕ್ತದ ಮೂಲಕ ಶ್ವಾಸಕೋಶಕ್ಕೆ ಬಂದು ಸೇರುತ್ತದೆ. ಈ ಮೂಲಕ ಶ್ವಾಸಕೋಶದಲ್ಲಿ ಬ್ಲಟ್ ಕಾಟ್ ಉಂಟಾಗುತ್ತದೆ. ಇದರಿಂದ ಎದೆನೋವು, ಉಸಿರಾಟದ ತೊಂದರೆ, ಕೆಮ್ಮು ಕೂಡಾ ಕಾಣಿಸಿಕೊಳ್ಳಬಹುದು.

ವ್ಯಾಯಾಮ ಮಾಡುವುದು ಮತ್ತು ಆಕ್ಟಿವ್ ಆಗಿರೋದರ ವ್ಯತ್ಯಾಸ ಏನು...?

ವ್ಯಾಯಾಮ ಮಾಡುವುದು ಮತ್ತು ದೈಹಿಕವಾಗಿ ಆಕ್ಟಿವ್ ಆಗಿರುವುದು ಎರಡು ವಿಭಿನ್ನ ಸಂಗತಿ. ವ್ಯಾಯಾಮ ನಮಗೆ ಮಸಲ್ಸ್ ಕೊಟ್ಟರೆ, ದಿನಪೂರ್ತಿ ಚಟುವಟಿಕೆಯಿಂದಿರುವುದು ನಿಮ್ಮ ಉಸಿರಾಟ ಕ್ರಿಯೆಯನ್ನು ಸುಗಮವಾಗಿಸುತ್ತದೆ.

ಅಷ್ಟಕ್ಕೂ ವ್ಯಾಯಾಮ ಎಂಬುದು ದೈಹಿಕ ಚಟುವಟಿಕೆಯ ಒಂದು ಭಾಗವಷ್ಟೇ. ವ್ಯಾಯಾಮ ಹಾಗೂ ದೈಹಿಕ ಚಟುವಟಿಕೆ ಎರಡೂ ಮುಖ್ಯ. ನಿಮ್ಮ ದಿನ ಬ್ಯಾಲನ್ಸ್‌ಡ್‌ ಆಗಿರಬೇಕು. ಚಟುವಟಿಕೆ ಇಲ್ಲದಿರುವುದು ಕ್ಯಾನ್ಸರ್‌ಗೂ ಕಾರಣವಾಗಬಹುದು