ಸಣ್ಣ ಸಣ್ಣ ಮಕ್ಕಳಲ್ಲಿ ಕಾಣಿಸಿಕೊಳ್ತಿದೆ ಈ ಜಾಗತಿಕ ಖಾಯಿಲೆ: ಮಯೋಪಿಯಾ ಜಾಗೃತಿಗೆ ನಾರಾಯಣ ನೇತ್ರಾಲಯ ಪಣ
ಸ್ಮಾರ್ಟ್ ಫೋನ್ ಬಂದಾಗಿನಿಂದ ನಮ್ಮ ಬದುಕು ಬದಲಾಗಿದೆ. ಅದರ ಜೊತೆ ಪ್ರಕೃತಿಯೊಂದಿಗಿನ ನಮ್ಮ ಸಂಪರ್ಕವೂ ನಿಂತಿದೆ. ನೈಸರ್ಗಿಕವಾಗಿ ದೊರೆಯುವ ಪೋಷಕಾಂಶಗಳ ಬದಲಾಗಿ ಆರ್ಟಿಫಿಷಿಯಲ್ ಜಗತ್ತಿನ ಮೊರೆ ಹೋಗುತ್ತಿದ್ದೇವೆ.
ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು (ಜು.19): ಸ್ಮಾರ್ಟ್ ಫೋನ್ ಬಂದಾಗಿನಿಂದ ನಮ್ಮ ಬದುಕು ಬದಲಾಗಿದೆ. ಅದರ ಜೊತೆ ಪ್ರಕೃತಿಯೊಂದಿಗಿನ ನಮ್ಮ ಸಂಪರ್ಕವೂ ನಿಂತಿದೆ. ನೈಸರ್ಗಿಕವಾಗಿ ದೊರೆಯುವ ಪೋಷಕಾಂಶಗಳ ಬದಲಾಗಿ ಆರ್ಟಿಫಿಷಿಯಲ್ ಜಗತ್ತಿನ ಮೊರೆ ಹೋಗುತ್ತಿದ್ದೇವೆ. ಈ ನಡುವೆಯೇ ನಾರಾಯಣ ನೇತ್ರಾಲಯದ ವೈದ್ಯರು ನಡೆಸಿರುವ ಸರ್ವೇ ಆತಂಕಕಾರಿ ವಿಚಾರವನ್ನು ಬೆಳಕಿಗೆ ತಂದಿದೆ. ಹೌದು, ವಿಪರೀತ ಮೊಬೈಲ್ ಬಳಕೆ ಹುಟ್ಟಿನಿಂದಲೇ ಮಾರಕ ಖಾಯಿಲೆಗೆ ಕಾರಣವಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮಯೋಪಿಯಾ ( ಸಮೀಪದೃಷ್ಟಿ ) ರೋಗ ಕಾಣಿಸಿಕೊಳ್ಳುತ್ತಿದೆ.
ಈ ಪ್ರಮಾಣ ಸದ್ಯ 4:1 ರಷ್ಟಿದ್ದು ಕೆಲವೇ ವರ್ಷಗಳಲ್ಲಿ 2:1 ಆಗಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ನೇತ್ರಾಲಯದ ಅಧ್ಯಕ್ಷ, ಕಣ್ಣಿನ ತಜ್ಞ ಡಾ.ರೋಹಿತ್ ಶೆಟ್ಟಿ ಕೊರೋನಾ ಬಳಿಕ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಿದ್ದು ಆಟದ ಜೊತೆಗೆ ಪಾಠಕ್ಕೂ ಮೊಬೈಲೇ ಬಳಕೆಯಾಗುತ್ತಿದೆ. ಹೀಗಾಗಿ ಸೂರ್ಯನ ಬೆಳಕಿಗೆ ಮಕ್ಕಳು ಒಗ್ಗಿಕೊಳ್ಳುತ್ತಿಲ್ಲ. ಮಕ್ಕಳಲ್ಲಿ ದೈಹಿಕ ಆಟದ ಕೊರತೆ ಕಾಣಿಸುತ್ತಿದೆ. ಇದೇ ಈ ಮಯೋಪಿಯಾಗೆ ಕಾರಣ ಎಂದು ಅಭಿಪ್ರಾಯಪಟ್ಟರು.
ಜೊತೆಗೆ ಸದ್ಯ ಈ ಪ್ರಮಾಣ ಕೇವಲ 25ರಷ್ಟಿದ್ದು 2050ರ ಹೊತ್ತಿಗೆ 50-60% ಏರಿಕೆಯಾಗುವ ಸಾಧ್ಯತೆ ಇದೆ ಹಾಗಾಗಿ ಈಗಿನಿಂದಲೇ ಪೋಷಕರು ಮಕ್ಕಳ ಕುರಿತು ಎಚ್ಚರಿಕೆ ವಹಿಸಬೇಕು ಎಂದರು. ಈ ಖಾಯಿಲೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಾರಾಯಣ ನೇತ್ರಾಲಯ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಇದೇ ಬರುವ ಜುಲೈ 28 ರಂದು ಮಕ್ಕಳಿಗೆ ಆಟೋಟಗಳನ್ನು ಆಯೋಜಿಸಿದೆ. ಎಂಜಿ ರೋಡ್ ನಲ್ಲಿರುವ ರಾಜೇಂದ್ರ ಸಿಂಗ್ ಜಿ ಸೇನಾ ಅಧಿಕಾರಿಗಳ ಸಂಸ್ಥೆ ಆವರಣದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದೆ.
ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ಬಿಜೆಪಿ, ಎಲ್ಲಾ ಹಗರಣ ಹೊರತೆಗೆಯುವೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ನಾರಾಯಣ ನೇತ್ರಾಲಯದಿಂದ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳು
• 1.5 ಕೆ ಕುಟುಂಬದ ಓಟ
• ಮ್ಯಾಜಿಕ್ ಶೋ
• ಫೇಸ್ ಪೇಂಟಿಂಗ್
• ಬೌನ್ಸಿ ಕ್ಯಾಸಲ್
• ಮಕ್ಕಳಿಗಾಗಿ ಬಹುಮಾನಗಳೊಂದಿಗೆ ವಿನೋದ ಮತ್ತು ಶೈಕ್ಷಣಿಕ ಆಟಗಳು
• ಜಾನಪದ ಅಕಾಡೆಮಿಯಿಂದ ಸಾಂಪ್ರದಾಯಿಕ ಜಾನಪದ ಪ್ರದರ್ಶನ
• ಮಕ್ಕಳಿಗೆ ಆರೋಗ್ಯಕರ ತಿಂಡಿಗಳು ಮತ್ತು ಪೌಷ್ಟಿಕಾಂಶದ ಸಲಹೆ