Asianet Suvarna News Asianet Suvarna News

ನಿಮ್ಗೂ ಕೆಮ್ಮು ಬರ್ತಿದ್ಯಾ..? ಇದು ಮಾಲೀನ್ಯದಿಂದ ಬಂತಾ, ಕೊರೋನಾದಿಂದಲಾ..? ಪತ್ತೆ ಮಾಡೋದೇಗೆ

ಸತತವಾಗಿ ಕೆಮ್ಮು ಬರ್ತಿದ್ರೆ ಇದು ಯಾವ ರೀತಿ ಕೆಮ್ಮು ಎಂದು ತಿಳಿಯೋದು ಹೇಗೆ..? ಹೊರಗಿನ ಮಾಲೀನ್ಯದಿಂದ ಕೆಮ್ಮು ಬರ್ತಿದ್ಯಾ..? ಅಥವಾ ಕೊರೋನಾನಿಂದ ಕೆಮ್ಮು ಬರ್ತಿದ್ಯಾ ಎಂದು ಪತ್ತೆ ಹಚ್ಚೋದು ಹೇಗೆ..? ಇಲ್ಲಿ ಓದಿ

Delhi pollution: Is your cough because of a COVID-19 or pollution? Here's how you can find out dpl
Author
Bangalore, First Published Oct 25, 2020, 4:04 PM IST

ಕೊರೋನಾ ಬಂದಾಗಿನಿಂದ ಕೆಮ್ಮಿದ್ರೂ, ಸೀನಿದ್ರೂ, ಶೀತವಾದ್ರೂ ಭಯವಾಗಿಬಿಡುತ್ತದೆ. ಇದೇನಾದ್ರೂ ಕೊರೋನಾ ಇರ್ಬೋದು ಎಂದು ಭಯ ಕಾಡಲಾರಂಭಿಸುತ್ತದೆ. ಚಳಿಗಾಲದಲ್ಲಂತೂ ಕೆಮ್ಮು, ಶೀತ ಸಾಮಾನ್ಯ. ಆದರೂ ಕೊರೋನಾ ಇರೋದ್ರಿಂದ ಇದು ಸಾಮಾನ್ಯ ಎಂದು ಬಿಡೋ ಹಾಗೂ ಇಲ್ಲ.

ಸತತವಾಗಿ ಕೆಮ್ಮು ಬರ್ತಿದ್ರೆ ಇದು ಯಾವ ರೀತಿ ಕೆಮ್ಮು ಎಂದು ತಿಳಿಯೋದು ಹೇಗೆ..? ಹೊರಗಿನ ಮಾಲೀನ್ಯದಿಂದ ಕೆಮ್ಮು ಬರ್ತಿದ್ಯಾ..? ಅಥವಾ ಕೊರೋನಾನಿಂದ ಕೆಮ್ಮು ಬರ್ತಿದ್ಯಾ ಎಂದು ಪತ್ತೆ ಹಚ್ಚೋದು ಹೇಗೆ..? ಇಲ್ಲಿ ಓದಿ

ನಿಮಗೆ ಹೆಸರು ಬೇಳೆ ಮೊಟ್ಟೆ, ಸಸ್ಯಾಧರಿತ ಮಾಂಸ ಗೊತ್ತಾ?

ದೆಹಲಿಯ ವಾಯು ಮಾಲೀನ್ಯದ ಪರಿಣಾಮ ಕಳೆದ ವರ್ಷವೇ ನೋಡಿಯಾಗಿದೆ. ಕಲುಷಿತ ವಾಯು ಅತ್ಯಂತ ಅಪಾಯಕಾರಿಯಾಗಿ ಜನರನ್ನು ಕಾಡುವುದರೊಂದಿಗೆ ಕೆಮ್ಮು, ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ.

ಆದರೆ ಕೊರೋನಾ ಮಧ್ಯೆ ಸಣ್ಣ ಕೆಮ್ಮು ಬಂದರೂ ಭಯ ಬೀಳುವ ಪರಿಸ್ಥಿತಿ ಇದೆ. ಕೆಮ್ಮು ವಾಯು ಮಾಲೀನ್ಯದಿಂದ, ಶೀತದಿಂದ, ಅಲರ್ಜಿಯಿಂದ ಬರಬಹುದು. ಕೊರೋನಾದಿಂದಲೂ ಬರಬಹುದು ಎಂಬ ಸಾಧ್ಯತೆಯೇ ಜನರನ್ನು ಚಿಂತೆಗೀಡುವ ಮಾಡಿರುವುದಕ್ಕೆ ಕಾರಣ.

ಜನರಿಗೆ ಕೊರೋನಾ ಲಸಿಕೆ ಒದಗಿಸಲು 51 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ

ಗಂಟಲು ನೋವು ಮತ್ತು ಕೆಮ್ಮು ಕೊರೋನಾದ ಸಾಮಾನ್ಯ ಲಕ್ಷಣ. ಆದರೆ ವಾತಾವರಣದ ಮಾಲೀನ್ಯ ಮಟ್ಟ, ಹವಾಮಾನ ಬದಲಾವಣೆಯನ್ನೊಮ್ಮೆ ನೋಡಿ. ಇದೂ ಕೂಡಾ ಕೆಮ್ಮು ಗಂಟಲು ನೋವಿಗೆ ಕಾರಣವಿರಬಹುದಲ್ಲಾ..? ಮಾಲೀನ್ಯ ಗಂಟಲು ನೋವು ಮಾತ್ರವಲ್ಲದೆ ಕಣ್ಣಿನ ನೋವು, ತಲೆ ನೋವು, ಶೀತವನ್ನೂ ತರಬಹುದು. ಉಸಿರಾಟ ನಾಳದಲ್ಲಿ ಸಮಸ್ಯೆಯಾದಾಗ ಈ ರೀತಿಯಾಗುತ್ತದೆ.

ಕೊರೋನಾ ಪತ್ತೆ ಹಚ್ಚೋಕೆ ಪರೀಕ್ಷೆ ಮಾಡುವುದೊಂದೇ ದಾರಿ. ಆದರೆ ಕೊರೋನಾ ಇದ್ದಾಗ ದೇಹ ನೋವು, ವಾಸನೆ ಗ್ರಹಿಕೆ ಇಲ್ಲದಾಗುತ್ತದೆ. ಇದನ್ನು ನೆನಪಿನಲ್ಲಿಡಿ. ಶೀತ, ಕೆಮ್ಮು, ಗಂಟಲು ನೋವು ಕೊರೋನಾದಲ್ಲೂ ಇರುತ್ತದೆ. ಆದರೆ ಸಾಮಾನ್ಯ ಶೀತದಲ್ಲಿ ವಾಸನೆ ಗ್ರಹಿಕೆ ಇಲ್ಲದಾಗುವುದಿಲ್ಲ.

ಉಲ್ಟಾ ಹೊಡೀತು ಚೀನಾ ಗ್ರೀನ್ ಹೌಸಿಂಗ್ ಯೋಜನೆ: ಡ್ರ್ಯಾಗನ್ ಮನೆಗಳೀಗ ಸೊಳ್ಳೆ ಕಾಡು

ವಾಯು ಮಾಲೀನ್ಯ ಮಕ್ಕಳು ಮತ್ತು ವೃದ್ಧರಲ್ಲಿ ಬೇಗ ತೊಂದರೆ ಉಂಟು ಮಾಡುತ್ತದೆ. ವಾಯು ಮಾಲೀನ್ಯ ಹೆಚ್ಚಾಗುತ್ತಿರುವುದರಿಂದ ಕೊರೋನಾ ಪತ್ತೆ ಹಚ್ಚೋದು ಮತ್ತಷ್ಟು ತೊಂದರೆಯಾಗುತ್ತಿದೆ ಎನ್ನುತ್ತಿದ್ದಾರೆ ತಜ್ಞರು.

ಮಾಲೀನ್ಯ ನಿಮ್ಮ ಆರೋಗ್ಯವನ್ನು ಇನ್ನಷ್ಟು ಹಾಳು ಮಾಡಬಹುದು. ಕೊರೋನಾದಿಂದ ಮತ್ತು ಮಾಲೀನ್ಯದಿಂದ ಪಾರಾಗಲು ಅದ್ಯ ಎನ್‌95 ಮಾಸ್ಕ್ ಧರಿಸುವುದು ಉತ್ತಮ ಐಡಿಯಾ.

ನೀವು ಕೊರೋನಾ ಸಂದರ್ಭವೂ ಆಫೀಸ್, ಕಚೇರಿಗೆ ಹೋಗುವವರಾಗಿದ್ದರೆ ಮನೆಗೆ ಬಂದ ಕೂಡಲೇ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ, ಧರಿಸಿದ ಬಟ್ಟೆಯನ್ನೂ ಚೆನ್ನಾಗಿ ತೊಳೆಯಿರಿ. ಬಿಸಿ ನೀರನ್ನೇ ಬಳಸಿ. ನಂತರ ಇಮ್ಯುನಿಟಿ ಹೆಚ್ಚಿಸೋ ಟೀ ಅಥವಾ ಬೇರೆ ಪಾನೀಯ ಕುಡಿಯಿರಿ. ಇದನ್ನೇ ದಿನ ನಿತ್ಯದ ಅಭ್ಯಾಸ ಮಾಡಿಕೊಳ್ಳಿ. ಬಿಸಿ ಹಬೆ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಿ.

Follow Us:
Download App:
  • android
  • ios