Parenting Tips : ಮಕ್ಕಳ ಬೆವರಿನಲ್ಲಿ ವಾಸನೆ ಬರ್ತಿದ್ದರೆ ನಿರ್ಲಕ್ಷ್ಯ ಮಾಡ್ಬೇಡಿ
Children Health Tips in Kannada: ಬೆವರು ಬರುವುದು ಒಳ್ಳೆಯದು ಆದ್ರೆ ಬಂದ ಬೆವರು ವಾಸನೆಯಿಂದ ಕೂಡಿದ್ದರೆ ಸಮಸ್ಯೆಯಾಗುತ್ತದೆ. ಇದು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ
ಬೇಸಿಗೆ (Summer) ಯಲ್ಲಿ ಮೈನಿಂದ ಹೆಚ್ಚಿನ ಪ್ರಮಾಣದಲ್ಲಿ ಬೆವರು (Sweat) ಬರುತ್ತದೆ. ದೇಹ (Body) ದಿಂದ ಬರುವ ಬೆವರು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಬೆವರು ಬರುವುದು ಒಳ್ಳೆಯದು ಆದ್ರೆ ಬಂದ ಬೆವರು ವಾಸನೆಯಿಂದ ಕೂಡಿದ್ದರೆ ಸಮಸ್ಯೆಯಾಗುತ್ತದೆ. ಇದು ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಬ್ಯಾಕ್ಟೀರಿಯಾವು ಬೆವರು ಗ್ರಂಥಿಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದಾಗ ದೇಹದಿಂದ ಹೊರ ಬರುವ ಬೆವರು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಮೈನಿಂದ ವಾಸನೆ ಬರ್ತಿದ್ದರೆ ಯಾರೂ ಅವರ ಬಳಿ ಬರಲು ಇಚ್ಛಿಸುವುದಿಲ್ಲ. ಮಕ್ಕಳ ವಿಷ್ಯದಲ್ಲೂ ಇದು ಸತ್ಯ. ಮಕ್ಕಳಲ್ಲಿ ಬೆವರು ವಾಸನೆಯಿಂದ ಕೂಡಿದ್ದರೆ ಅವರ ಸ್ನೇಹಿತರು ಅವರಿಂದ ದೂರವಾಗಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಒತ್ತಡ, ಭಯ, ಆತಂಕದಿಂದಲೂ ಮಕ್ಕಳ ಬೆವರು ವಾಸನೆಯಾಗಲು ಶುರುವಾಗುತ್ತದೆ. ಚಿಕ್ಕ ಮಗುವಿನ ಬೆವರಿನಲ್ಲಿ ವಾಸನೆ ಇರುವುದಿಲ್ಲ. 8 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಬೆವರು ವಾಸನೆಯಾಗಲು ಶುರುವಾಗುತ್ತದೆ. ಮಕ್ಕಳಲ್ಲಿ ಬರುವ ವಾಸನೆ ಬೆವರು ಒಳ್ಳೆಯ ಸಂಕೇತವಲ್ಲ. ಇಂದು ನಾವು ಮಕ್ಕಳ ಬೆವರಿನ ವಾಸನೆಗೆ ಕಾರಣವೇನು ಹಾಗೆ ಪರಿಹಾರವೇನು ಎಂಬುದನ್ನು ಹೇಳ್ತೇವೆ.
ಬೆವರಿನ ವಾಸನೆಗೆ ಕಾರಣಗಳು ಯಾವುವು :
ಸ್ವಚ್ಛತೆಯ ಕೊರತೆ : ಮಕ್ಕಳ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಹರಿಸುವುದಿಲ್ಲ. ಇದರಿಂದಾಗಿ ಅವರ ಬೆವರು ವಾಸನೆಯಿಂದ ಕೂಡಿರುತ್ತದೆ. ಇದಲ್ಲದೇ ಸ್ವಚ್ಛವಿಲ್ಲದ ಕೋಣೆ, ಸರಿಯಾದ ಸಮಯಕ್ಕೆ ಸ್ನಾನ ಮಾಡದಿರುವುದು, ಕೊಳಕು ಬಟ್ಟೆಗಳಿಂದ ಬೆವರು ದುರ್ವಾಸನೆಯಿಂದ ಕೂಡಿರುತ್ತದೆ. ಮಗುವಿನ ದೇಹದಲ್ಲಿ ಇರುವ ಬ್ಯಾಕ್ಟೀರಿಯಾಗಳು ಬೆವರಿನ ದುರ್ವಾಸನೆಗೂ ಕಾರಣವಾಗುತ್ತವೆ.
ಹೆರಿಗೆಯ ಬಳಿಕ ದೇಹದ ತೂಕ ಸುಲಭವಾಗಿ ಇಳಿಸಿಕೊಳ್ಳುವುದು ಹೇಗೆ ?
ಕೆಟ್ಟ ಆಹಾರ ಪದ್ಧತಿ : ನಿಮ್ಮ ಮಗುವಿನ ವಾಸನೆಯುಕ್ತ ಬೆವರುವಿಕೆ ಕೆಟ್ಟ ಆಹಾರ ಪದ್ಧತಿಯೂ ಕಾರಣವಾಗಿರಬಹುದು. ಹೆಚ್ಚು ಕರಿದ ಆಹಾರ ಅಥವಾ ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಮಗುವಿನಲ್ಲಿ ಕೆಟ್ಟ ವಾಸನೆಯನ್ನುಂಟು ಮಾಡುತ್ತದೆ. ಆಹಾರವು ಜೀರ್ಣವಾದ ನಂತರ ಮಗುವಿನ ಚರ್ಮದ ರಂಧ್ರಗಳಲ್ಲಿ ನುಸುಳಬಹುದು ಮತ್ತು ವಾಸನೆಯನ್ನು ಉಂಟುಮಾಡಬಹುದು. ಇದರಿಂದಾಗಿ ಮಗುವಿನ ಉಸಿರಾಟದಲ್ಲಿಯೂ ದುರ್ವಾಸನೆ ಬರುವ ಸಾಧ್ಯತೆ ಇದೆ.
ಹೆಚ್ಚು ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವನೆ : ನಿಮ್ಮ ಮಗು ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸಿದರೆ, ಅವರ ಬೆವರು ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ನಾರಿನ ಕೊರತೆಯೂ ಬೆವರಿನ ವಾಸನೆಗೆ ಕಾರಣವಾಗಬಹುದು.
ಇತರ ರೋಗಗಳಿಂದಾಗಿ : ಮಗು ಯಾವುದೋ ಖಾಯಿಲೆಗೆ ತುತ್ತಾಗಿದ್ದರೆ ಬೆವರು ವಾಸನೆ ಬರಲು ಶುರುವಾಗುತ್ತದೆ. ಮಧುಮೇಹ, ಮೂತ್ರಪಿಂಡದ ತೊಂದರೆಗಳು ಮತ್ತು ಅಂಗಾಂಗಗಳ ಸಮಸ್ಯೆ ಕಾರಣದಿಂದಾಗಿ ಮಕ್ಕಳ ಬೆವರು ವಾಸನೆಯಿಂದ ಕೂಡಿರುತ್ತದೆ. ಹೈಪರ್ಹೈಡ್ರೋಸಿಸ್ ಎಂಬ ರೋಗವು ಮಗುವಿನ ಬೆವರು ವಾಸನೆಯಾಗಲು ಕಾರಣ. ಒಂದು ವೇಳೆ ಮಗುವಿಗೆ ಈ ರೋಗವಿದೆ ಎಂಬುದು ನಿಮ್ಮ ಗಮನಕ್ಕೆ ಬಂದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.
ಯೌವನದಲ್ಲಿ : ಮಗು ಪ್ರೌಢಾವಸ್ಥೆಗೆ ಪ್ರವೇಶಿಸುತ್ತಿದ್ದಂತೆ, ಬೆವರಿನ ವಾಸನೆ ಮತ್ತಷ್ಟು ಗಾಢವಾಗಬಹುದು. ಈ ಸಮಯದಲ್ಲಿ, ಮಗುವಿನ ದೇಹದಲ್ಲಿ ಹಾರ್ಮೋನುಗಳು ಬದಲಾಗುತ್ತವೆ. ಇದರಿಂದಾಗಿ ವಾಸನೆ ಬರಬಹುದು.
ಇನ್ಸುಲಿನ್ ಎಲೆಗಳನ್ನು ತಿಂದು ಡಯಾಬಿಟೀಸ್ ನಿಯಂತ್ರಿಸಬಹುದಾ ?
ಬೆವರಿನ ವಾಸನೆಯ ಲಕ್ಷಣಗಳು : ನಿದ್ರೆಯ ಸಮಯದಲ್ಲಿ ಮಗು ಬೆವರುವುದ್ರಿಂದ ಮಗುವಿನ ಬೆವರು ಸಾವನೆಯಾಗುವ ಸಾಧ್ಯತೆಯಿರುತ್ತದೆ. ಕೈಗಳು ತಣ್ಣಗಾಗುವುದು ಮತ್ತು ತೂಕ ನಷ್ಟ ಕೂಡ ಇದ್ರ ಲಕ್ಷಣವಾಗಿದೆ. ಉಸಿರಾಟದ ತೊಂದರೆ ಅಥವಾ ಸೋಂಕು,
ಬೆವರಿನ ವಾಸನೆಯನ್ನು ಹೀಗೆ ಕಡಿಮೆ ಮಾಡಿ : ಮಕ್ಕಳಲ್ಲಿ ಬೆವರಿನ ಕೆಟ್ಟ ವಾಸನೆ ಬರ್ತಿದ್ದರೆ ಅದನ್ನು ಕೆಲ ಉಪಾಯದ ಮೂಲಕ ಬಗೆಹರಿಸಬಹುದು. ಯಾವುದೇ ಆಂಟಿಬ್ಯಾಕ್ಟೀರಿಯಲ್ ಕ್ರೀಮ್ ಬಳಸಬಹುದು. ಇದರಿಂದ ಮಕ್ಕಳ ಬೆವರು, ವಾಸನೆ ಕಡಿಮೆಯಾಗುತ್ತದೆ. ಹಾಗ ಹೆಚ್ಚು ಎಣ್ಣೆ ಮತ್ತು ಮಸಾಲೆಗಳನ್ನು ಹೊಂದಿರುವ ಆಹಾರವನ್ನು ಮಕ್ಕಳಿಗೆ ನೀಡ್ಬೇಡಿ. ಮಗು ಮಾಂಸಾಹಾರಿ ತಿನ್ನುತ್ತಿದ್ದರೆ, ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಲು ಸಲಹೆ ನೀಡಿ. ಬೆವರಿನ ವಾಸನೆ ಗಾಢವಾಗಿದ್ದರೆ ವೈದ್ಯರನ್ನು ಭೇಟಿಯಾಗಲು ಹಿಂಜರಿಯಬೇಡಿ. ಮಗುವಿಗೆ ಸಾಧ್ಯವಾದಷ್ಟು ನೀರನ್ನು ಕುಡಿಯಲು ನೀಡಿ.