Christmas 2022: ಕ್ರಿಸ್ಮಸ್ ಪಾರ್ಟಿ ಹ್ಯಾಂಗೊವರ್‌ನಿಂದ ಹೊರ ಬರೋದು ಹೇಗೆ?
ಪಾರ್ಟಿಯಲ್ಲಿ ಆಲ್ಕೋಹಾಲ್ ಹೊಟ್ಟೆ ಸೇರ್ತಿರುತ್ತೆ. ಪ್ರಪಂಚದಲ್ಲಿ ಏನಾಗ್ತಿದೆ ಎಂಬುದು ಗೊತ್ತಾಗದಷ್ಟು ನಶೆ ಏರಿರುತ್ತೆ. ಅದು ಆಗೇನೋ ಮಜ ನೀಡಬಹುದು, ಆದ್ರೆ ಮರುದಿನ ಕಾಡುವ ಹ್ಯಾಂಗೊವರ್ ಸುಸ್ತು ಮಾಡ್ಬಿಡುತ್ತೆ. ಅದ್ರಿಂದ ಫ್ರೆಶ್ ಆಗೋಕೆ ಮನೆಮದ್ದನ್ನು ಬಳಸ್ಲೇಬೇಕು.
ಕ್ರಿಸ್‌ಮಸ್ ಹಬ್ಬ ಹತ್ತಿರ ಬರ್ತಿದೆ. ಕ್ರಿಸ್ಮಸ್ ನಂತ್ರ ನ್ಯೂ ಇಯರ್. ಒಂದಾದ್ಮೇಲೆ ಒಂದು ಹಬ್ಬ ಬರ್ತಿರುವ ಕಾರಣ ಪಾರ್ಟಿ ಜೋರಾಗಿಯೇ ಇರುತ್ತೆ. ಕೆಲವರು ಕ್ರಿಸ್ಮಸ್ ಗೆ ಭರ್ಜರಿ ಪಾರ್ಟಿ ಮಾಡ್ತಾರೆ. ಸ್ನೇಹಿತರ ಜೊತೆ ಮೋಜು ಇದ್ದೇ ಇರುತ್ತೆ. ಪಾರ್ಟಿ ಅಂದ್ಮೇಲೆ ಡ್ರಿಂಕ್ಸ್ ಇರ್ಲೇಬೇಕಲ್ಲ. ಮಸ್ತಿ ಮಾಡ್ತಾ ಪೆಗ್ ಇಳಿದಿದ್ದು ಗೊತ್ತಾಗೋದಿಲ್ಲ. ಮರುದಿನ ಅದ್ರ ಹ್ಯಾಂಗೊವರ್ ಹೋಗೋದಿಲ್ಲ. ಮಿತಿಮಿರಿ ಆಲ್ಕೊಹಾಲ್ (Alcohol) ಸೇವಿಸಿದ ನಂತರ ಹ್ಯಾಂಗೊವರ್ ಕಾಣಿಸಿಕೊಳ್ಳೋದು ಸಹಜ. ಹ್ಯಾಂಗೊವರ್ (Hangover) ನಲ್ಲಿ ತಲೆನೋವು, ಆಯಾಸ, ವಾಕರಿಕೆ, ತಲೆತಿರುಗುವಿಕೆ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೀರಿನ ಕೊರತೆಯಾಗೋದ್ರಿಂದ ಈ ಸಮಸ್ಯೆ ಕಾಡುತ್ತದೆ.
ಹ್ಯಾಂಗೊವರ್ ಗೆ ನಿರ್ದಿಷ್ಟ ಚಿಕಿತ್ಸೆ (Treatment) ಇಲ್ಲ. ಹ್ಯಾಂಗೊವರ್ ಕಡಿಮೆಯಾಗಲು ಮಾತ್ರೆ ನುಂಗಲು ಸಾಧ್ಯವಿಲ್ಲ. ನೀವು ಮನೆಯಲ್ಲಿಯೇ ಕೆಲ ಮನೆ ಮದ್ದುಗಳನ್ನು ಮಾಡಿಕೊಂಡು ಹ್ಯಾಂಗೊವರ್ ನಿಂದ ಹೊರಗೆ ಬರಬಹುದು. ನಾವಿಂದು ಹ್ಯಾಂಗೊವರ್ ನಿಂದ ಹೊರಬರಲು ಏನು ಮಾಡ್ಬೇಕು ಅನ್ನೋದನ್ನು ಹೇಳ್ತೆವೆ.
ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ (Bath) : ಹಿಂದಿನ ರಾತ್ರಿ ಪಾರ್ಟಿ ಜೋರಾಗಿತ್ತು, ಆದ್ರೆ ಬೆಳಿಗ್ಗೆ ಕಚೇರಿಗೆ ಹೋಗೋಕೆ ಆಗ್ತಿಲ್ಲ, ತಲೆಯೆಲ್ಲ ಭಾರ ಎನ್ನುವವರು ಬೆಳಿಗ್ಗೆ ಎದ್ದು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದ್ರಿಂದ ನಿಮ್ಮ ಮೂಡ್ ಫ್ರೆಶ್ (Mood Fresh) ಆಗುತ್ತದೆ. ನೀವು ಸ್ನಾನ ಮಾಡುವ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಾಕಿ ನಂತ್ರ ಸ್ನಾನ ಮಾಡಿದರೆ ತಲೆನೋವನ್ನು ಗುಣಪಡಿಸಬಹುದು. ಆಲ್ಕೋಹಾಲ್ ಹ್ಯಾಂಗೊವರ್ ನಿಂದ ನೀವು ಹೊರಗೆ ಬರ್ತಿರಿ.
ಬಾಳೆ ಹಣ್ಣು (Banana) ತಿಂದು ನೋಡಿ : ಮದ್ಯಪಾನ ಮಾಡಿದ ನಂತ್ರ ದೇಹದಲ್ಲಿ ಪೊಟ್ಯಾಸಿಯಮ್ ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದಾಗಿ ಆಯಾಸ ಮತ್ತು ಸುಸ್ತು ಕಂಡುಬರುತ್ತದೆ. ಎಲೆಕ್ಟ್ರೋಲೈಟ್ ಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣಿನ ಸ್ಮೂಥಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ನಿಮ್ಮ ಹ್ಯಾಂಗೊವರ್ ಕಡಿಮೆಯಾಗುತ್ತದೆ. ದೇಹಕ್ಕೆ ಪೊಟ್ಯಾಸಿಯಮ್ ಸಿಗುವ ಕಾರಣ ಬೆಟರ್ ಫೀಲ್ ಮಾಡ್ತಿರಿ.
WOMEN HEALTH: ಗರ್ಭಧಾರಣೆಗೆ ಮಾತ್ರವಲ್ಲ, ಈ ಕಾರಣಕ್ಕೂ ಮಿಸ್ ಆಗುತ್ತೆ ಪಿರಿಯಡ್ಸ್
ಬಿಸಿನೀರಿಗೆ ಜೇನು (Honey) ಮತ್ತು ನಿಂಬೆ ರಸ : ಬಿಸಿ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಹಾಕಿ, ಮಿಕ್ಸ್ ಮಾಡಿ ನಂತ್ರ ಸೇವನೆ ಮಾಡಿ. ಇದು ಹ್ಯಾಂಗೊವರ್ ನಿಂದ ನೀವು ಹೊರಗೆ ಬರಲು ನೆರವಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ. ದೇಹ ನಿರ್ಜಲೀಕರಣದ ಸಮಸ್ಯೆಯನ್ನು ನಿವಾರಿಸುತ್ತದೆ. ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಒಂದ್ವೇಳೆ ನಿಂಬೆ ಹಣ್ಣಿನ ರಸಕ್ಕೆ ನೀರು, ಜೇನುತುಪ್ಪ ಹಾಕಿ ಸೇವನೆ ಮಾಡಿದಾಗ ವಾಂತಿ ಬಂದ್ರೆ ಆತಂಕಪಡಬೇಕಾಗಿಲ್ಲ. ವಾಂತಿ ನಿಮ್ಮ ದೇಹವನ್ನು ಹಗುರಗೊಳಿಸುತ್ತದೆ. ನೀವು ಬೇಗ ಸಹಜ ಸ್ಥಿತಿಗೆ ಮರಳುತ್ತೀರಿ.
ಕಾಫಿ – ಟೀ ಸೇವನೆ ಮಾಡಿ : ಮಧ್ಯರಾತ್ರಿ ಮದ್ಯ ಹೆಚ್ಚು ಒಳಗೆ ಹೋಗಿದೆ ಎನ್ನಿಸಿದ್ರೆ ನೀವು ಬೆಳಿಗ್ಗೆ ಟೀ ಅಥವಾ ಕಾಫಿ ಸೇವನೆ ಮಾಡಬಹುದು. ಇದು ನಿಮ್ಮ ಮೂಡ್ ಫ್ರೆಶ್ ಮಾಡುತ್ತದೆ. ಜೊತೆಗೆ ಆಲ್ಕೋಹಾಲ್ ಹ್ಯಾಂಗೊವರ್ ನಿಂದ ನೀವು ಹೊರಗೆ ಬರಲು ಸಹಾಯಕಾರಿ.
ಪ್ರಯೋಜನ ಮಾತ್ರವಲ್ಲ, ಅಶ್ವಗಂಧ ಹೆಚ್ಚು ತಿನ್ನೋದ್ರಿಂದ ಗಂಡಸ್ರಿಗೆ ಕಾಡಬಹುದು ಸಮಸ್ಯೆ !
ಎಳನೀರು ಸೇವಿಸಿ ಫ್ರೆಶ್ ಆಗಿ : ಆಲ್ಕೋಹಾಲ್ ನಿಮ್ಮ ದೇಹವನ್ನು ಶುಷ್ಕಗೊಳಿಸಿರುತ್ತದೆ. ಈ ಸಂದರ್ಭದಲ್ಲಿ ನೀವು ಎಳನೀರಿನ ಸೇವನೆ ಮಾಡಬೇಕು. ಎಳನೀರು ನಿಮ್ಮ ದೇಹಕ್ಕೆ ಬೇಕಾದ ನೀರನ್ನು ನೀಡುತ್ತದೆ. ಅಲ್ಲದೆ ಎಳನೀರಿನಲ್ಲಿರುವ ಎಲೆಕ್ಟ್ರೋಲೈಟ್ ಹ್ಯಾಂಗೊವರ್ ದೂರ ಮಾಡುತ್ತದೆ. ನಿಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ನೋವನ್ನು ಕಡಿಮೆ ಮಾಡುತ್ತದೆ.