Asianet Suvarna News Asianet Suvarna News

ಕೆಲಸದಿಂದ ಬ್ರೇಕ್ ಕೇಳುತ್ತೆ ಈ ಸಂಕೇತಗಳು!

ಜೀವನದಲ್ಲಿ ವೃತ್ತಿ ಅಥವಾ ಕೆಲಸ ಬಹಳ ಮುಖ್ಯ.ಹಾಗಂತ ಕೆಲಸಕ್ಕೆಂದೇ ಜೀವನವನ್ನು ಮುಡಿಪಿಡುವುದಲ್ಲ. ನಮ್ಮ ಆರೋಗ್ಯದ ಕಡೆಗೂ ಸ್ವಲ್ಪ ಗಮನಹರಿಸಬೇಕು. ಕೆಲಸದ ಒತ್ತಡದಿಂದ ತೊಂದರೆಗೆ ಒಳಗಾಗುವ ಮೊದಲು ಈ ಐದು ಸಂಕೇತಗಳು ನಮ್ಮ ಜೀವಕ್ಕೆ ಕುತ್ತು ತರಬಹುದು. ಈ ಮಾಹಿತಿ ಇಲ್ಲಿದೆ.
 

These are the signs to take a break from Work
Author
Bangalore, First Published Aug 23, 2022, 4:54 PM IST

ಜೀವನದಲ್ಲಿ ವೃತ್ತಿ ಅಥವಾ ಕೆಲಸ ಬಹಳ ಮುಖ್ಯ. ಮುಂದಿನ ಜೀವನ ಸಾಗಬೇಕೆಂದರೆ ಕೆಲಸ ಎಂಬುದು ಒಬ್ಬ ವ್ಯಕ್ತಿಗೆ ಬೇಕೆ ಬೇಕು. ಹಾಗಂತ ಕೆಲಸಕ್ಕೆಂದೇ ಜೀವನವನ್ನು ಮುಡಿಪಿಡುವುದಲ್ಲ. ನಮ್ಮ ಆರೋಗ್ಯದ ಕಡೆಗೂ ಸ್ವಲ್ಪ ಗಮನಹರಿಸಬೇಕು. ನಮ್ಮ ಸುತ್ತ ಮುತ್ತಲಿನವರ ಜೊತೆಗೂ ಟೈಂ ನೀಡಬೇಕು. ಭಾರತದಲ್ಲಿ ಶೇ.75ರಷ್ಟು ಜನರು ತಮ್ಮ ವೃತ್ತಿಯಲ್ಲಿನ ರಜೆಯಿಂದ ವಂಚಿತರಾಗಿದ್ದಾರೆ. 2018ರ ಒಂದು ವರದಿಯ ಪ್ರಕಾರ ಇತರೆ ದೇಶಗಳಿಗೆ ಹೋಲಿಸಿದರೆ ಭಾರತೀಯರು ವೃತ್ತಿಯಲ್ಲಿನ ರಜೆಯ ದಿನಗಳನ್ನು ತೆಗೆದುಕೊಳ್ಳುವುದು ಅತೀ ಕಡಿಮೆ ಎಂದು. ಈ ಬಗ್ಗೆ ಮಾಹಿತಿ ಇಲ್ಲಿದೆ.

ಕೆಲಸದಲ್ಲಿ ಒಂದಷ್ಟು ಬ್ರೇಕ್ ತೆಗೆದುಕೊಳ್ಳವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಇಲ್ಲವಾದಲ್ಲಿ ಯಾವ ಸ್ಥಿತಿಗೆ ತಲುಪುತ್ತೇವೆ ಎಂದು ಹೇಳುವುದು ಅಸಾಧ್ಯ. ಕೆಲ ದಿನಗಳ ವರೆಗೆ ದೂರ ಹೋಗುವುದು ಕಷ್ಟವಾಗಿಬಿಡುತ್ತದೆ. ಆದರೆ ದೀರ್ಘಾವಧಿಯಲ್ಲಿ ಇದು ನಮ್ಮ ಹಿತಾಸಕ್ತಿಗೆ ಧಕ್ಕೆಯಾಗುವುದಲ್ಲದೆ ಕಷ್ಟಕ್ಕೆ ನೂಕಬಹುದು. ಈ ಕೆಲಸದ ಒತ್ತಡದಿಂದ ತೊಂದರೆಗೆ ಒಳಗಾಗುವ ಮೊದಲು ಕೆಳಗಿನ ಈ ಐದು ಸಂಕೇತಗಳು ಕೆಲಸದಿಂದ ವಿರಾಮ ತೆಗೆದುಕೊಳ್ಳಬೇಕೆಂದು ಸೂಚಿಸುತ್ತವೆ.

ಎಚ್ಚರವಾದಾಗ ವಾಕರಿಕೆ ಅಥವಾ ಭಯಂಕರವಾದ ಭಾವನೆ 
ಭಾವನೆಗಳನ್ನು ನಿಗ್ರಹಿಸಿದರೆ ಮತ್ತು ಅವುಗಳನ್ನು ಒತ್ತಡಕ್ಕೆ ಒಳಪಡಿಸಿದರೆ ವಾಕರಿಕೆ, ಆಯಾಸ, ನೋವು ಮತ್ತು ತಲೆನೋವುಗಳಂತಹ ದೈಹಿಕ ಲಕ್ಷಣಗಳನ್ನು ಅನುಭವಿಸಬಹುದು. ವಿಶೇಷವಾಗಿ ಬೆಳಗ್ಗೆ ಎದ್ದೇಳುವಾಗ ಅದರಲ್ಲೂ ಕೆಲಸದ ದಿನಗಳಲ್ಲಿ ಈ ತೊಂದರೆಗಳನ್ನು ಅನುಭವಿಸಬಹುದು. ಜೊತೆಗೆ, ಮನಸ್ಸು ದೇಹದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ, ದೀರ್ಘಕಾಲದ ಒತ್ತಡವು ದೈಹಿಕ ಯೋಗಕ್ಷೇಮವನ್ನು ಗಂಭೀರವಾದ ಪರಿಣಾಮ ಬೀರುತ್ತದೆ.

ಆಫೀಸಿನಲ್ಲಿ ತುಂಬಾ ನಿದ್ರೆ ಬರುತ್ತಾ? ಓವರ್‌ಕಮ್ ಮಾಡಲಿವೆ ಟಿಪ್ಸ್

ಆರೋಗ್ಯದ ಗುಣಮಟ್ಟ ಕ್ಷೀಣ 
ನಿದ್ರಾಹೀನತೆ, ಹೆಚ್ಚಿದ ವಿಶ್ರಾಂತಿ ಹೃದಯ ಬಡಿತ, ತಲೆನೋವು, ತೂಕ ಹೆಚ್ಚಾಗುವುದು ಅಥವಾ ನಷ್ಟ, ಅಥವಾ ಆಗಾಗ್ಗೆ ಅಸ್ವಸ್ಥ ಭಾವನೆ ಮುಂತಾದ ರೋಗಲಕ್ಷಣಗಳನ್ನು ಅನುಭವಿಸಿದಾಗ ವಿರಾಮದ ಅಗತ್ಯತೆ ಹೆಚ್ಚಿರುತ್ತದೆ. ಅದು ಸದ್ಯದಲ್ಲಿ ಅಲ್ಪವಾಗಿದ್ದರೂ ಭವಿಷ್ಯದಲ್ಲಿ ಹೆಚ್ಚು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಾಕಷ್ಟು ನಿದ್ರೆ ಪಡೆದ ನಂತರ, ಆರೋಗ್ಯಕರ ಆಹಾರ ಸೇವಿಸಿದ ನಂತರ ಮತ್ತು ಸಂತೋಷ ತರುವ ಚಟುವಟಿಕೆಗಳನ್ನು ಹೊಂದಿದ ನಂತರ ಉತ್ತಮವಾಗಿ ಭಾವಿಸುತ್ತೀರಿ.

ಪ್ರೇರಣೆ
ಪ್ರತಿಯೊಂದು ಕೆಲಸ ಅಥವಾ ಜೀವನದಲ್ಲಿರಲಿ ಪ್ರೇರಣೆ ಎಂಬುದು ಬಹಳ ಮುಖ್ಯ. ತಜ್ಞರ ಪ್ರಕಾರ, ಕೆಲಸದಲ್ಲಿ ಪ್ರೇರಣೆ ಸಿಗದಿದ್ದಲ್ಲಿ ಕುಂಟಿತಗೊಳ್ಳವುದು, ಖಿನ್ನತೆ ಹೀಗೆ ಅನೇಕ ಮಾನಸಿಕ ತೊಂದರೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬರಿದಾಗುವುದು, ಸಣ್ಣ ಸಮಸ್ಯೆಗಳಿಗೂ ಸುಲಭವಾಗಿ ಕಿರಿಕಿರಿಗೊಳ್ಳುವುದು, ತಪ್ಪಾಗಿ ಅರ್ಥೈಸಿಕೊಳ್ಳುವುದು ಮತ್ತು ಕಡಿಮೆ ಮೌಲ್ಯಯುತಗೊಳ್ಳುವುದು. ಇದರ ಪರಿಣಾಮ ಆರೋಗ್ಯಕ್ಕೆ ಹಾನಿಯಾಗುವುದು ಮಾತ್ರವಲ್ಲ, ವಯಕ್ತಿಕ ಪ್ರೇರಣೆಯನ್ನು ಸಹ ಕಳೆದುಕೊಳ್ಳುತ್ತೇವೆ. ಇದು ಸಂತಾನೋತ್ಪತ್ತಿಗೂ ಹಾನಿಕಾರಕವಾಗಿದೆ. ಬೆಳಗ್ಗೆ ಎದ್ದೇಳುವಾಗಲೇ ಕಷ್ಟಪಡುತ್ತಿದ್ದರೆ ಮತ್ತು ಕೆಲಸಕ್ಕೆ ಸಂಬAಧಿಸಿದ ಉತ್ಸಾಹ ಕಡಿಮೆಯಾದರೆ ಈ ಸಮಯದಲ್ಲಿ ರಿಫ್ರೆಶ್ ಹಾಗೂ ಪ್ರೇರಣೆ ಹೊಂದುವುದು ಬಹಳ ಮುಖ್ಯ. ಇದರಿಂದ ನಮ್ಮಲ್ಲಿನ ಎನರ್ಜಿ ಲೆವೆಲ್ ಹೆಚ್ಚುತ್ತದೆ.

ಏಕಾಗ್ರತೆಯಲ್ಲಿರಲು ಕಷ್ಟ
ಕೆಲಸದ ದಿನಗಳನ್ನು ಹಗಲುಗನಸು ಮಾಡುತ್ತಾ, ಫೇಸ್‌ಬುಕ್‌ನಲ್ಲಿ ಸ್ನೇಹಿತರೊಂದಿಗೆ ಚೆಕ್ ಇನ್ ಮಾಡುತ್ತಾ ಅಥವಾ ಇನ್‌ಸ್ಟಾಗ್ರಮ್ ಮೂಲಕ ಬ್ಲೆöÊಂಡ್ ಆಗಿ ಸ್ಕೊçÃಲ್ ಮಾಡುತ್ತಾ ಸಮಯ ಕಳೆಯುತ್ತಿದ್ದರೆ ನಂತರ ಕೆಲಸದಲ್ಲಿ ಕೇಂದ್ರೀಕರಿಸಲಾಗದ ಸಂದರ್ಭಗಳು ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ಸ್ವಲ್ಪ ಸಮಯದವರೆಗೆ ಕೆಲಸದ ಸ್ಥಳದಿಂದ ದೂರವಿರಬೇಕು. ಏಕೆಂದರೆ ಕೆಲಸದಲ್ಲಿ ಗಮನದ ಕೊರತೆಯು ಸಾಮಾನ್ಯವಾಗಿರುತ್ತದೆ. ಆದರೆ ಕಚೇರಿಯಲ್ಲಿ ಹೆಚ್ಚಿನ ಸಮಯ ತೆಗೆದುಕೊಂಡರೆ ನಮ್ಮ ಗುರಿಯನ್ನು ಮರು-ಮೌಲ್ಯಮಾಪನ ಮಾಡುವುದು ಅತ್ಯವಶ್ಯಕ.

ADHD Management: ಎಡಿಎಚ್‌ ಡಿ ಇದ್ರೂ ಕಚೇರಿಯಲ್ಲಿ ಬೆಸ್ಟ್‌ ಎಂಪ್ಲಾಯಿ ಆಗ್ಬೋದು

ಸಹೋದ್ಯೋಗಿಗಳ ನಡುವೆ ಸಂವಾದ 
ಸರಾಸರಿಯಾಗಿ ಒಬ್ಬ ವ್ಯಕ್ತಿ ವಾರಕ್ಕೆ ಸುಮಾರು 47 ಗಂಟೆಗಳನ್ನು ಕೆಲಸದಲ್ಲಿ ಕಳೆಯುತ್ತಾನೆ. ಇದು ಜೀವಿತಾವಧಿಯಲ್ಲಿ 109,980 ಗಂಟೆಗಳಷ್ಟಿರುತ್ತದೆ. ಸಹಜವಾಗಿ, ಇದರರ್ಥ ನಾವು ನಮ್ಮ ಸಹೋದ್ಯೋಗಿಗಳ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯುತ್ತೀವಿ ಎಂದು. ಯಾವ ವ್ಯಕ್ತಿ  ಅತಿಯಾದ ಕೆಲಸದ ಒತ್ತಡದಿಂದ ಬರ್ನ ಔಟ್ ಆಗಿರುತ್ತಾರೋ ಅವರು ಸಾಮಾನ್ಯವಾಗಿ ಸಾಮಾಜಿಕವಾಗಿ ತೊಡಗಿಕೊಳ್ಳುವುದರಿಂದ ದೂರ ಉಳಿದಿರುತ್ತಾರೆ. ಅಂದರೆ ಇತರರೊಂದಿಗೆ ಬೆರೆಯುವುದು,  ಉಪಾಹಾರ, ಸಭೆಗಳು, ಕಚೇರಿ ಪಾರ್ಟಿಗಳಿಂದ ದೂರವಿರುತ್ತಾರೆ. ಆದರೂ ಕೆಲಸದಲ್ಲಿ ಸ್ನೇಹಿತರ ಜೊತೆ ಸಂಪರ್ಕದಲ್ಲಿರುತ್ತಾರೆ ಇದೇ ಅವರಿಗೆ ಸಂತೋಷವನ್ನು ನೀಡುತ್ತದೆ ಕೂಡ. 

Follow Us:
Download App:
  • android
  • ios