ಪುಟ್ಟ ಮಗುವಿಗೆ ಅಪರೂಪದ ಕಾಯಿಲೆ, 11 ಕೋಟಿ ನೆರವು ನೀಡಿದ ಅಪರಿಚಿತ ವ್ಯಕ್ತಿ!

ಇತ್ತೀಚಿಗೆ ಚಿತ್ರ-ವಿಚಿತ್ರ ಕಾಯಿಲೆಗಳು ವಕ್ಕರಿಸಿಕೊಳ್ಳುತ್ತಿವೆ. ಅವುಗಳನ್ನು ಗುಣಪಡಿಸಲು ಲಕ್ಷ ಲಕ್ಷಗಳೇ ಬೇಕಾಗುತ್ತವೆ. ಹಾಗೆಯೇ ಕೇರಳದಲ್ಲೊಂದು ಪುಟ್ಟ ಕಂದಮ್ಮ ಅಪರೂಪದ ಕಾಯಿಲೆಗೆ ತುತ್ತಾಗಿತ್ತು. ಆದ್ರೆ ಪುಟ್ಟ ಮಗುವಿನ ಚಿಕಿತ್ಸೆಗೆ ಅಪರಿಚಿತ ವ್ಯಕ್ತಿಯೊಬ್ಬರು 11 ಕೋಟಿ ನೆರವು ನೀಡಿದ್ದಾರೆ.

The unknown person who gave 11 crore aid for childrens treatment Vin

ತಿರುವನಂತಪುರಂ: ಒಂದೂವರೆ ವರ್ಷದ ಬಾಲಕ ನಿರ್ವಾಣ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು ಮಾಡಿದ ಸಹಾಯವು ಸಮಾಜದಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಕಳೆದ ಕೆಲವು ದಿನಗಳಲ್ಲಿ, ಸಾಮಾಜಿಕ ಮಾಧ್ಯಮವು ನಿರ್ವಾಣಕ್ಕಾಗಿ ಸಹಾಯವನ್ನು ಕೇಳುವ ಮೆಸೇಜ್‌ಗಳಿಂದ ತುಂಬಿತ್ತು. ಪ್ರಪಂಚದ ವಿವಿಧ ಭಾಗಗಳಿಂದ, ವಿವಿಧ ಪ್ರದೇಶಗಳಿಂದ ಜನರು ತಮ್ಮ ಕೈಲಾದಷ್ಟು ಸಹಾಯವನ್ನು ನೀಡುತ್ತಲೇ ಇದ್ದರು. ಆದರೆ 17 ಕೋಟಿ ರೂಪಾಯಿ ಮೊತ್ತವನ್ನು ತಲುಪುವುದು ಕಷ್ಟವಾಗಿತ್ತು. ಹೀಗಿರುವಾಗ ಅಪರಿಚಿತ ವ್ಯಕ್ತಿಯೊಬ್ಬರು ನಿರ್ವಾಣ್‌ಗೆ ವೈದ್ಯಕೀಯ ಸಹಾಯವಾಗಿ 11 ಕೋಟಿ ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದಾರೆ. 

ಆದರೆ ವ್ಯಕ್ತಿ ತಾನು ಯಾರೆಂಬ ವಿವರವನ್ನು ಎಲ್ಲಿಯೂ ತಿಳಿಸಿಲ್ಲ. 'ಹೆಸರು ಅಥವಾ ಪ್ರಸಿದ್ಧಿಗಾಗಿ ಇದನ್ನು ಮಾಡುತ್ತಿಲ್ಲ. ಮಗು ಗುಣಮುಖವಾದರಷ್ಟೇ ಸಾಕು' ಎಂದ ಸಂದೇಶ ರವಾನಿಸಿದ್ದಾರೆ. ಇನ್ನು 80 ಲಕ್ಷ ರೂಪಾಯಿ ಸಿಕ್ಕರೆ ನಿರ್ವಾಣದ ಔಷಧಿಗೆ (Medicine) ಬೇಕಾದ ಮೊತ್ತ ಪೂರ್ಣವಾಗುತ್ತದೆ.

ರಾತ್ರಿ ನಿದ್ದೆ ಮಾಡ್ದೆ ರಗಳೆ ಮಾಡ್ತಾರಾ ಮಕ್ಳು, ಬೇಗ ಮಲಗಿಸಲು ಈ ಟ್ರಿಕ್ ಯೂಸ್ ಮಾಡಿ

ನಿರ್ವಾಣ್ ಮರ್ಚೆಂಟ್ ನೇವಿಯಲ್ಲಿ ಅಧಿಕಾರಿಯಾಗಿದ್ದ ಸಾರಂಗ್ ಮೆನನ್ ಮತ್ತು ಅದಿತಿ ಅವರ ಪುತ್ರ. ಚಿಕ್ಕ ಕುಟುಂಬ ಖುಷಿಯಿಂದ ಜೀವನ ನಡೆಸುತ್ತಿತ್ತು. ಬಹಳ ನಿರೀಕ್ಷೆಗಳ ನಡುವೆ ಮಗ ನಿರ್ವಾಣ್‌ ಜನಿಸಿದನು. ಹದಿಮೂರು ತಿಂಗಳ ನಂತರ, ನಿರ್ವಾಣ ಆರೋಗ್ಯ ಹದೆಗೆಟ್ಟಿರುವುದು ತಿಳಿದುಬಂತು. ಇದಾದ ಬಳಿಕ ಮಗನ ರಕ್ತದ ಮಾದರಿಯನ್ನು ಆತನ ಪೋಷಕರು 9Parents) ತೆಗೆದುಕೊಂಡು ಪರೀಕ್ಷೆ ನಡೆಸಿದ್ದರು. ಮೂರು ವಾರಗಳ ಪರೀಕ್ಷೆಯ ನಂತರ, ನಿರ್ವಾನ್ ಅವರಿಗೆ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಎಂಬ ಅಪರೂಪದ ಕಾಯಿಲೆ ಇರುವುದು ಪತ್ತೆಯಾಯಿತು.

ನಿರ್ವಾಣ ಚಿಕಿತ್ಸೆಗೆ ಹದಿನೇಳೂವರೆ ಕೋಟಿ ರೂ. ಬೇಕಾಗಿತ್ತು. ಎರಡು ವರ್ಷದ ಮೊದಲು ನಿರ್ವಾಣಗೆ ಈ ಚಿಕಿತ್ಸೆ (Treatment)ಯನ್ನು ನೀಡಬೇಕು. ಆಗ ಮಾತ್ರ ಅದು ಪರಿಣಾಮಕಾರಿ ಎಂದು ತಿಳಿಸಲಾಯತು. ನಿರ್ವಾಣ್ ತಂದೆ ಸಾಮ್ರಾಂಗ್ ಮತ್ತು ತಾಯಿ ಅದಿತಿ ಔಷಧಿಗಾಗಿ ಹಣಕ್ಕಾಗಿ ಹರಸಾಹಸ ಪಡುತ್ತಿದ್ದರು. ಜೀವಮಾನವೆಲ್ಲ ಉಳಿತಾಯ ಮಾಡಿದರೂ ಇಷ್ಟು ಮೊತ್ತ ಕೈಸೇರಲ್ಲ ಎಂಬುದನ್ನು ಮನಗಂಡ ಈ ಕುಟುಂಬ ಸದ್ಭಾವನೆಯ ಸಹಾಯಕ್ಕೆ ಅರ್ಜಿ ಸಲ್ಲಿಸಿತು.ಆ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. ಅಪರಿಚಿತ ವ್ಯಕ್ತಿ ನಿರ್ವಾಣ್‌ಗೆ ವೈದ್ಯಕೀಯ ಸಹಾಯವಾಗಿ 11 ಕೋಟಿ ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದಾರೆ. 

ಇಷ್ಟು ದೊಡ್ಡ ಮೊತ್ತವನ್ನು ಯಾರು ಕಳುಹಿಸಿದ್ದಾರೆಂದು ಸಾರಂಗ್ ಮತ್ತು ಅದಿತಿಗೂ ತಿಳಿದಿಲ್ಲ. ಕ್ರೌಡ್‌ಫಂಡಿಂಗ್ ಮೂಲಕ ವಿದೇಶದಿಂದ ಸಹಾಯ ಬಂದಿತು. ಅನಾಮಧೇಯ ಮಾನವ ಪ್ರೇಮಿಯೊಬ್ಬರು ನಿರ್ವಾಣ್‌ಗೆ ಸಹಾಯ ಮಾಡಲು ಮುಂದೆ ಬಂದಿದ್ದು, ಅವರು ಹೆಸರಾಗಲಿ ಅಥವಾ ಪ್ರಸಿದ್ಧರಾಗಲಿ ಬಯಸುವುದಿಲ್ಲ ಮತ್ತು ತಮ್ಮ ಬಗ್ಗೆ ಯಾವುದೇ ಮಾಹಿತಿ ನೀಡಬಾರದು ಎಂದು ತಿಳಿಸಿದ್ದಾರೆ.

Baby Care: ಪುಟ್ಟ ಕಂದಮ್ಮಗಳಿಗೆ ಮುತ್ತು ಕೊಡೋ ಮುನ್ನ!

ಎರಡು ತಿಂಗಳ ಹಿಂದೆ ನಿರ್ವಾಣ್‌ನ ಕುಟುಂಬ ಸಹಾಯ ಕೋರಿ ಆತನ ಬಳಿ ಬಂದಿತ್ತು. ಇದಕ್ಕೆ ಏಷ್ಯಾನೆಟ್ ನ್ಯೂಸ್ ಸೇರಿದಂತೆ ಮಾಧ್ಯಮಗಳು ಉತ್ತಮ ಬೆಂಬಲ ನೀಡಿದ್ದವು. ಕಳೆದ ಫೆಬ್ರವರಿ 13ರವರೆಗೆ 4 ಕೋಟಿ ರೂ. ಆದರೆ ಈಗ ಸಿಕ್ಕಿರುವ ಸಹಾಯ ಅಪಾರ. 17.5 ಕೋಟಿ ತಲುಪಲು ಇನ್ನೂ 80 ಲಕ್ಷ ರೂಪಾಯಿ ಸಾಕು. ಒಂದು ದೊಡ್ಡ ಪವಾಡ ಸಂಭವಿಸಿದೆ ಎಂದು ನಿರ್ವಾನ್ ಅವರ ಕುಟುಂಬವು ಸಂತೋಷ ಮತ್ತು ನಿರಾಳವಾಗಿದೆ.

ಈಗ ಕೇವಲ 80 ಲಕ್ಷ ಹಣವನ್ನು ಹೊಂದಿಸುವುದು ಮಾತ್ರ ಬಾಕಿಯಿದೆ. ಔಷಧಿ ಕಂಪನಿಯೊಂದಿಗೆ ಮಾತನಾಡಿ ಈ ಮೊತ್ತವನ್ನು ತಡವಾಗಿ ನೀಡಲು ಅನುಮತಿಸುವಂತೆ ಕೇಳಿದ್ದೇವೆ ಎಂದು ಕುಟುಂಬದವರು ಹೇಳುತ್ತಾರೆ, ಶೀಘ್ರದಲ್ಲೇ ಔಷಧಿ ತಲುಪಿಸಲು ಕ್ರಮಕೈಗೊಳ್ಳುತ್ತೇವೆ ಎಂದು ಅದಿತಿ ಮತ್ತು ಸಾರಂಗ್ ಹೇಳುತ್ತಾರೆ. ಈಗ ಉಳಿದ ಹಣವನ್ನು ಸಂಗ್ರಹಿಸಿ ಮಗನ ಜೀವ ಮರಳಿ ಪಡೆಯಲು ಈ ಕುಟುಂಬ ಹರಸಾಹಸ ಪಡುತ್ತಿದೆ. ನೆರವು ನೀಡಲು ಇಚ್ಛಿಸುವವರು ಈ ಕೆಳಗಿನ ಅಕೌಂಟ್ ನಂಬರ್‌ಗೆ ಹಣ ವರ್ಗಾಯಿಸಬಹುದಾಗಿದೆ.

Bank Name: RBL Bank
Account Number: 2223330027465678
Account name; Nirvaan A Menon
IFSC code: RATN0VAAPIS
UPI ID: assist.babynirvaan@icici

Latest Videos
Follow Us:
Download App:
  • android
  • ios