651 ಅಗತ್ಯ ಔಷಧಗಳ ಬೆಲೆ ಶೇ.6.73ರಷ್ಟು ಇಳಿಕೆ

ಏಪ್ರಿಲ್‌ ತಿಂಗಳಿಂದಲೇ 651 ಅತ್ಯಗತ್ಯ ಔಷಧಗಳ ಬೆಲೆ ಶೇ.6.73ರಷ್ಟುಇಳಿದಿದೆ ಎಂದು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ತಿಳಿಸಿದೆ. ಕೇಂದ್ರ ಸರ್ಕಾರ 870 ಅಗತ್ಯ ಔಷಧಗಳ ಪೈಕಿ 651 ಔಷಧಗಳ ಬೆಲೆ ಮೇಲೆ ಮಿತಿ ಹೇರಿದೆ.

The price of 651 essential medicines decreased by 6.73 percent akb

ನವದೆಹಲಿ:  ಏಪ್ರಿಲ್‌ ತಿಂಗಳಿಂದಲೇ 651 ಅತ್ಯಗತ್ಯ ಔಷಧಗಳ ಬೆಲೆ ಶೇ.6.73ರಷ್ಟುಇಳಿದಿದೆ ಎಂದು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ತಿಳಿಸಿದೆ. ಕೇಂದ್ರ ಸರ್ಕಾರ 870 ಅಗತ್ಯ ಔಷಧಗಳ ಪೈಕಿ 651 ಔಷಧಗಳ ಬೆಲೆ ಮೇಲೆ ಮಿತಿ ಹೇರಿದೆ. ಹೀಗಾಗಿ ಇದರಿಂದಾಗಿ ಈ ಔಷಧಗಳ ಬೆಲೆ ಇಳಿದಿದೆ. ವಾಸ್ತವವಾಗಿ ವಾರ್ಷಿಕ ದರ ಏರಿಕೆ ಪ್ರಕಾರ ಈ ಔಷಧಗಳ ಬೆಲೆ ಶೇ.12.12ರಷ್ಟು ಹೆಚ್ಚಾಗಿತ್ತು. ಆದರೆ ಸರ್ಕಾರವು ಬೆಲೆಗಳ ಮೇಲೆ ಮಿತಿ ಹೇರಿಕೆಗೆ ಸೂಚಿಸಿದ್ದರಿಂದ ಶೇ.12.12ರಷ್ಟು ಏರಿಕೆ ಹೊರತಾಗಿಯೂ ಇವುಗಳ ಬೆಲೆ ಶೇ.6.73ರಷ್ಟುಇಳಿಕೆ ಆಗಿದೆ ಎಂದು ಪ್ರಾಧಿಕಾರ ಹೇಳಿದೆ.

ಅಗತ್ಯ ಔಷಧಗಳ ಪಟ್ಟಿಗೆ ಕೊರೊನರಿ ಸ್ಟಂಟ್‌: ಜನರಿಗೆ ಅಗ್ಗದ ದರದಲ್ಲಿ ಹೃದಯದ ಸ್ಟಂಟ್ ಲಭ್ಯ

ಕೇಂದ್ರ ಆರೋಗ್ಯ ಸಚಿವಾಲಯವು ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ2022ರಲ್ಲಿ ಕೊರೊನರಿ ಸ್ಟಂಟ್‌ಗಳನ್ನು ಸೇರ್ಪಡೆ ಮಾಡಿದೆ. ಇದರಿಂದಾಗಿ ಜೀವ ಉಳಿಸುವ ಈ ವೈದ್ಯಕೀಯ ಸಾಧನಗಳು ಜನರಿಗೆ ಅಗ್ಗದ ದರದಲ್ಲೇ ಲಭ್ಯವಾಗಲಿವೆ.  ಸೆ.13 ರಂದು ಕೇಂದ್ರ ಸರ್ಕಾರ (central government) ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಕ್ಯಾನ್ಸರ್‌ ಔಷಧಿ (cancer drugs), ಆ್ಯಂಟಿ ಬಯಾಟಿಕ್‌ (antibiotics) ಹಾಗೂ ಕೆಲ ಲಸಿಕೆಗಳು ಸೇರಿ 34 ಹೊಸ ಸೇರ್ಪಡೆ ಮಾಡಿದ್ದು, ಔಷಧಿಗಳ ರಾಷ್ಟ್ರೀಯ ಸ್ಥಾಯಿಯ ಸಮಿತಿಯ (National Standing Committee) ಶಿಫಾರಸು ಆಧರಿಸಿ ಈಗ ಜೀವ ರಕ್ಷಕ ಕೊರೊನರಿ ಸ್ಟಂಟ್‌ಗಳನ್ನು ಸೇರ್ಪಡೆ ಮಾಡಲು ಮುಂದಾಗಿದೆ.

ಅಗತ್ಯ ಔಷಧಿ ಬೆಲೆ ಹೆಚ್ಚಳ ಬೆನ್ನಲ್ಲೇ ದುಬಾರಿಯಾದ ಕಾಂಡೋಮ್!

ಸಮಿತಿಯು ನ. 6ರಂದು ಕೇಂದ್ರ ಸರ್ಕಾರಕ್ಕೆ ಬೇರ್‌ ಮೆಟಲ್‌ ಸ್ಟಂಟ್ಸ್‌ (ಬಿಎಂಎಸ್‌) (metal stents) ಹಾಗೂ ಡ್ರಗ್‌ ಎಲ್ಯುಟಿಂಗ್‌ ಸ್ಟಂಟ್ಸ್‌ (ಎಸ್‌ಎನ್‌ಸಿಎಂ)ಗಳನ್ನು ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರಿಸಲು ಶಿಫಾರಸು ಮಾಡಿತ್ತು. ‘ಹೃದಯ ಸಂಬಂಧಿ ಕಾಯಿಲೆಗಳು (ಕೊರೊನರಿ ಆರ್ಟರಿ ಕಾಯಿಲೆ) ಹೆಚ್ಚುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊರೊನರಿ ಸ್ಟಂಟ್‌ಗಳ ಅಳವಡಿಕೆಯು ಜೀವ ಉಳಿಸಲು ಅಗತ್ಯವಾಗಿದ್ದಕ್ಕೆ ಇದನ್ನು ಅಗತ್ಯ ವಸ್ತುಗಳ ವಸ್ತುಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು’ ಎಂದು ಸಮಿತಿ ವರದಿ ನೀಡಿತ್ತು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವುದರೊಂದಿಗೆ ಇನ್ನು ಕೊರೊನರಿ ಸ್ಟಂಟ್‌ಗಳ ಬೆಲೆಯನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ನಿರ್ಧರಿಸಲಿದೆ. ಹೀಗಾಗಿ ಇನ್ನು ಅಗ್ಗದ ದರದಲ್ಲೇ ಸ್ಟಂಟ್‌ಗಳು ಜನರಿಗೆ ಲಭ್ಯವಾಗಲಿದೆ.


Rantac - Zinetac, White Petroleumಗೆ ನಿಷೇಧ

ಕೇಂದ್ರ ಪರಿಷ್ಕೃತ ಅಗತ್ಯ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಅತಿ ಹೆಚ್ಚು ಬಳಕೆಯಲ್ಲಿರುವ Rantac ಮತ್ತು Zinetac ಮಾತ್ರೆ ಸೇರಿದಂತೆ ಒಟ್ಟೂ 26 ಔಷಧಗಳ ಬಳಕೆ ನಿಷೇಧಿಸಿದೆ. ಇನ್ಮುಂದೆ ಎದೆಯುರಿ, ಗ್ಯಾಸ್ಟಿಕ್‌ಗೆ ಬಳಸುತ್ತಿದ್ದ Rantac ಮತ್ತು Zinetac ಮೆಡಿಕಲ್‌ ಶಾಪ್‌ನಲ್ಲಿ ಲಭ್ಯವಾಗುವುದಿಲ್ಲ. ಇಂದಿನವರೆಗೆ ಎದೆಯುರಿ, ಗ್ಯಾಸ್‌ ಸಮಸ್ಯೆಗೆ Rantidine ಔಷಧಿಯನ್ನು Aciloc, Rantac ಮತ್ತು Zinetac ಎಂಬ ಬ್ರ್ಯಾಂಡ್‌ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೊಟ್ಟೆ ಸಂಬಂಧಿತ ಸಮಸ್ಯೆಗೆ ಜನ ಹೆಚ್ಚು ಈ ಮಾತ್ರೆಗಳನ್ನು ಸೇವಿಸುತ್ತಿದ್ದರು. ಆದರೆ ಈ ಮಾತ್ರೆಗಳಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಯ ಹಿನ್ನೆಲೆ ಕೇಂದ್ರ ಈ ಕ್ರಮ ಕೈಗೊಂಡಿದೆ. ಹಲವಾರು ದೇಶಗಳಲ್ಲಿ ಈಗಾಗಲೇ ಈ ಮಾತ್ರೆಗಳನ್ನು ನಿಷೇಧಿಸಲಾಗಿದೆ. 

ಬಿಪಿ, ಶುಗರ್, ಕ್ಯಾನ್ಸರ್ ರೋಗಿಗಳಿಗೆ ಬಿಗ್ ಶಾಕ್: ಅಗತ್ಯ ಔಷಧ ಬೆಲೆ ಶೇ. 10.7 ರಷ್ಟು ಏರಿಕೆ!

Latest Videos
Follow Us:
Download App:
  • android
  • ios