900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಈ ಪೈಕಿ ಕಾಂಡೋಮ್ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ. ಔಷಧಿಗಳ ಬೆಲೆ ಶೇ.10 ರಿಂದ ಶೇ.30ರಷ್ಟು ಬೆಲೆ ಏರಿಕೆಯಾಗಿದೆ.
ನವದೆಹಲಿ(ಏ.02): ಔಷಧಿಗಳ ಬೆಲೆ ಏರಿಕೆಯಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ಅನುಮತಿ ನೀಡಿದ ಬೆನ್ನಲ್ಲೇ ಔಷಧಿ ಉತ್ಪಾದಕ ಕಂಪನಿಗಳು 900ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಏರಿಕೆಯಾಗಿದೆ. ಪ್ಯಾರಾಸಿಟಮಲ್ ಮಾತ್ರೆ, ಪ್ಯಾರಸಿಟಮಲ್ ಸಿರಪ್, ಇಂಜೆಕ್ಷನ್, ಆ್ಯಂಟಿ ಬಯೋಟಿಕ್ ಅಮಾಕ್ಸಿಲಿನ್ ಸೇರಿದಂತೆ ಹಲವು ಅಗತ್ಯ ಔಷಧಿಗಳ ಬೆಲೆ ಶೇಕಡ 10 ರಿಂದ 30 ರಷ್ಟು ಏರಿಕೆಯಾಗಿದೆ. ಈ ಪೈಕಿ ಕಾಂಡೋಮ್ ಬಲೆಯೂ ಏರಿಕೆಯಾಗಿದೆ. ಇನ್ನು ಮುಂದೆ ಕಾಂಡೋಮ್ ದುಬಾರಿಯಾಗಿದೆ.
ದರ ನಿಯಂತ್ರಣ ಪಟ್ಟಿಯಲ್ಲಿರುವ 380ಕ್ಕೂ ಹೆಚ್ಚು ಸಾಮಾನ್ಯ ಔಷಧಗಳ ಬೆಲೆಯನ್ನು ದಾಖಲೆಯ ಶೇ.12.12ರಷ್ಟುಏರಿಕೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ ನೋವು ನಿವಾರಕ, ಆ್ಯಂಟಿ ಬಯಾಟಿಕ್ಸ್, ಸೋಂಕು ನಿವಾರಕ ಸೇರಿದಂತೆ ಹಲವು ಅಗತ್ಯ ಔಷಧಗಳ ಬೆಲೆ ಏ.1ರಿಂದ ಹೆಚ್ಚಳವಾಗಲಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ ಸಭೆಯಲ್ಲಿ, ಸಗಟುಬೆಲೆ ಸೂಚ್ಯಂಕ ಆಧರಿಸಿ ದಾಖಲೆ ಪ್ರಮಾಣದಲ್ಲಿ ದರ ಏರಿಕೆಗೆ ಅನುಮೋದನೆ ನೀಡಲಾಗಿದೆ. ಒಂದೇ ಬಾರಿಗೆ ಈ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ. ಈ ಔಷಧಗಳು ವಿವಿಧ ಸರ್ಕಾರಿ ಆರೋಗ್ಯ ಯೋಜನೆಯಡಿ ಬಳಸುವ ಮತ್ತು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಪಟ್ಟಿಯಲ್ಲಿ ಇರುವ ಕಾರಣ ಜನಸಾಮಾನ್ಯರಿಗೆ ಮತ್ತಷ್ಟುಬೆಲೆ ಏರಿಕೆ ಬಿಸಿ ತಟ್ಟಲಿದೆ.
ಅಗತ್ಯ ಔಷಧಗಳ ಬೆಲೆ ದುಬಾರಿ: ಜ್ವರ ಕಡಿಮೆಯಾಗಲು ಮಾತ್ರೆಯೇ ಬೇಕಿಲ್ಲ, ಈ ಮನೆಮದ್ದು ಟ್ರೈ ಮಾಡಿ
ಹೃದಯ ಸಂಬಂಧಿತ ಚಿಕಿತ್ಸೆ ದುಬಾರಿಯಾಗಲಿದೆ. ಕಾರಣ ಒಪನ್ ಹಾರ್ಟ್ ಬ್ಲಾಕೇಜ್ ಸರ್ಜರಿಗೆ ಬಳಸುವ ಸ್ಟಂಟ್ಸ್ ಬೆಲೆ ಏರಿಕೆಯಾಗಿದೆ. ಮಟಲ್ ಸ್ಟಂಟ್ಸ್ ಬೆಲೆ 10,509 ರೂಪಾಯಿಯಾಗಿದೆ. ಡ್ರಗ್ ಎಲ್ಯೂಟಿಂಗ್ ಸ್ಟಂಟ್ಸ್ ಅಳವಡಿಕೆ 38,265 ರೂಪಾಯಿ ಆಗಲಿದೆ.
ಕಳೆದ ವರ್ಷ ಕೂಡಾ ಅಗತ್ಯ ಔಷಧಗಳ ಬೆಲೆಯನ್ನು ಶೇ.10ರಷ್ಟುಹೆಚ್ಚಳ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಇದೀಗ ಮತ್ತೆ ಶೇ.12ರಷ್ಟುಏರಿಕೆಗೆ ಅನುಮೋದನೆ ನೀಡಿದೆ. ದರ ಹೆಚ್ಚಳವಾದ ಔಷಧಗಳ ಪಟ್ಟಿಯಲ್ಲಿ ಜ್ವರ, ಮಧುಮೇಹ, ಸೋಂಕು, ಹೃದಯ ಸಂಬಂಧಿ ಔಷಧ, ರಕ್ತದ ಅಸ್ವಸ್ಥತೆ, ಕ್ಷಯ, ರಕ್ತದೊತ್ತಡ, ಚರ್ಮರೋಗ, ಕ್ಯಾನ್ಸರ್, ಅನೀಮಿಯಾ ಮೊದಲಾದ ಸಮಸ್ಯೆಗೆ ನೀಡುವ ಔಷಧಗಳಿವೆ.
ಜನರಿಗೆ ಮತ್ತೊಂದು ಬರೆ, ಏ.1 ರಿಂದ ಅಗತ್ಯ ಔಷಧಿ ಬೆಲೆ ಏರಿಕೆಗೆ ಪ್ರಾಧಿಕಾರ ಅನುಮತಿ!
ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ನೀಡುವ 42 ಔಷಧಗಳ ಮೇಲಿನ ಲಾಭಾಂಶದ ಮಿತಿಯನ್ನು ಶೇ.30ರಷ್ಟುನಿಗದಿಪಡಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಚ್ ವಿಭಾಗೀಯ ಪೀಠ ಪುಸ್ಕರಿಸಿದೆ. ಕೇಂದ್ರ ಸರ್ಕಾರದ ಆದೇಶವನ್ನು ಪುರಸ್ಕರಿಸಿ ಹೈಕೋರ್ಚ್ ಏಕ ಸದಸ್ಯ ನ್ಯಾಯಪೀಠ 2022ರ ನ.30ರಂದು ಹೊರಡಿಸಿದ್ದ ತೀರ್ಪು ಪ್ರಶ್ನಿಸಿ ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯಪೀಠ ಸೋಮವಾರ ಆದೇಶಿಸಿದೆ. ಏಕಸದಸ್ಯಪೀಠದ ತೀರ್ಪು ಸರಿಯಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
