ಕೊರೋನಾ ವೈರಸ್ ನಮ್ಮ ದೇಶದಲ್ಲಿ ಹಬ್ಬುತ್ತಾ ಇದೆ. 60ಕ್ಕೂ ಹೆಚ್ಚು ಮಂದಿಗೆ ಸೋಂಕು ಪತ್ತೆಯಾಗಿದೆ. ಎಲ್ಲೆಡೆ ಆತಂಕ. ಇಂಥ ಪರಿಸ್ಥಿತಿಯಲ್ಲಿ ರೋಗದ ಬಗ್ಗೆ ಮಾಹಿತಿಯಂತೆಯೇ ಗಾಸಿಪ್‌ಗಳೂ ಹೆಚ್ಚು ಹರಡುತ್ತವೆ. ಸತ್ಯ ಯಾವುದು, ಸುಳ್ಳು ಯಾವುದು ಅಂತ ತಿಳಿದುಕೊಳ್ಳುವುದು ಮುಖ್ಯ.

ಕೊರೋನಾ ವೈರಸ್‌ಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮಿಥ್: ನಮ್ಮ ದೇಶದಲ್ಲಿ ಕೊರೊನಾ ಹೆಚ್ಚು ದಿನ ಇರೋಲ್ಲ.

ಸತ್ಯ: ಹೀಗಂತ ಖಚಿತವಾಗಿ ಹೇಳೋಕೆ ಆಗಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತ ಹೋದಂತೆ ವೈರಸ್ ದುರ್ಬಲವಾಗುವುದು ನಿಜ. ಆದರೆ ತೀರ ರೋಗನಿರೋಧಕ ಶಕ್ತಿ ಇರುವವರಲ್ಲಿ ಇದು ಉಗ್ರವಾಗಿ ಕಾಣಿಸಿಕೊಳ್ಳಬಹುದು. ನಮ್ಮದು ಉಷ್ಣ ವಲಯ, ಇಲ್ಲಿ ವೈರಸ್ ಬದುಕೊಲ್ಲ ಎಂಬುದು ಸುಳ್ಳು ನಂಬಿಕೆ. ಆದರೆ ಇದು ವೈಜ್ಞಾನಿಕವಾಗಿ ಪ್ರೂವ್ ಆಗಿಲ್ಲ.

 

ಮಿಥ್: ಕೆಮ್ಮಿದವರು, ಸೀನಿದವರಿಗೆಲ್ಲ ಕೊರೋನಾ ಇರಬಹುದು.

ಸತ್ಯ: ಇದು ಕೂಡ ನಿಜವಲ್ಲ. ಮಾಮೂಲಿ ಗಂಟಲ ಸೋಂಕಿನಿಂದಲೂ ಕೆಮ್ಮು ಬರಬಹುದು. ಕೆಮ್ಮುವಾಗ ಗಂಟಲಲ್ಲಿ ತೇವ ಇದೆಯಾ, ಅಥವಾ ಒಣಗಿದೆಯಾ ಖಚಿತಪಡಿಸಿಕೊಳ್ಳಬೇಕು. ಜ್ವರದ ಇತರ ಲಕ್ಷಣಗಳ ಜೊತೆಗೆ ಗಂಟಲು ತೀವ್ರವಾಗಿ ಒಣಗುತ್ತಿದ್ದರೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದು ಅಗತ್ಯ.

 

ಮಿಥ್: ಕೊರೊನಾ ಬಂದವರೆಲ್ಲ ಸತ್ತು ಹೋಗ್ತಾರೆ.

ಸತ್ಯ: ಇದಂತೂ ಪೂರ್ತಿ ಮಿಥ್ಯೆ. ಕೊರೊನಾ ಜ್ವರ ಬಂದವರಲ್ಲಿ ಮೋರ್ಟಾಲಿಟಿ ರೇಟ್ ಅಥವಾ ಮರಣ ದರ ಶೇ. 3 ಅಥವಾ ನೂರಕ್ಕೆ ಮೂವರು. ಮಕ್ಕಳು, ವೃದ್ಧರು, ಈಗಾಗಲೇ ಉಸಿರಾಟದ ಸಮಸ್ಯೆ ಇರುವವರು, ರೋಗ ನಿರೋಧಕ ಶಕ್ತಿ ತೀರಾ ಕಡಿಮೆ ಇರುವವರಿಗೆ ಅಪಾಯದ ಸಾಧ್ಯತೆ ಹೆಚ್ಚು.

 

ಮಿಥ್: ಕೊರೋನಾ ರೋಗಿಗಳ ಸಂಪರ್ಕ ಮಾಡಿದವರೆಲ್ಲರಿಗೂ ಕೊರೋನಾ ಜ್ವರ ಬರುತ್ತೆ.

ಸತ್ಯ: ಈ ಮಾತು ನಿಜವಾಗಿದ್ದರೆ ಕೊರೋನಾ ಪೇಷೆಂಟ್‌ಗಳಿಗೆ ಟ್ರೀಟ್‌ಮೆಂಟ್ ಕೊಡ್ತಿರೋ ಡಾಕ್ಟರ್, ನರ್ಸ್‌ಗಳಿಗೆಲ್ಲ ಕೊರೋನಾ ಬರಬೇಕಿತ್ತು. ಹಾಗಿಲ್ಲ. ರೋಗಿಯ ಬಳಿ ಇದ್ದರೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡರೆ, ರೋಗನಿರೋಧಕ ಶಕ್ತಿ ದೇಹದಲ್ಲಿ ಸಾಕಷ್ಟು ಇದ್ದರೆ ಹೆದರಬೇಕಿಲ್ಲ. ರೋಗಿಯನ್ನು ಮುಟ್ಟಿದರೆ ಮಾತ್ರ ಕೈ ಸೋಪು ಹಾಕಿ ತೊಳೆದುಕೊಳ್ಳುವುದು ಅಗತ್ಯ. ರೋಗಿಯ ಬಟ್ಟೆ ಧರಿಸಬೇಡಿ. ರೋಗಿಯ ವಾಂತಿ, ನೆಗಡಿ ಇದ್ದಲ್ಲಿ ಕ್ರಿಮಿನಾಶಕ ಹಾಕಿ ಸ್ವಚ್ಛಗೊಳಿಸಿ, ನಿಮ್ಮ ಕೈಗಳನ್ನು ತೊಳೆದುಕೊಂಡು  ಸ್ಯಾನಿಟೈಸರ್ ಬಳಸಿ.

 

ಮಿಥ್: ತರಕಾರಿ, ಚಿಕನ್‌ನಲ್ಲಿ ಕೊರೋನಾ ಹರಡುತ್ತದೆ.

ಸತ್ಯ: ಇದು ಸುಳ್ಳು. ಹಾಗೆ ಹರಡಿದ ಉದಾಹರಣೆ ಇಲ್ಲ. ಸದ್ಯಕ್ಕೆ ಇದು ಮಾನವರಿಂದ ಮಾನವರಿಗೆ ಹರಡಿದ ದೃಷ್ಟಾಂತಗಳು ಇವೆ ಅಷ್ಟೇ. ಅದು ಹರಡುವುದೂ ಮನುಷ್ಯರ ಸ್ಪರ್ಶದಿಂದಲೇ. ಅತಿ ಸಮೀಪದಲ್ಲಿ ಇನ್ನೊಬ್ಬ ಮನುಷ್ಯ‌ ಸೀನುವುದು, ಕೆಮ್ಮುವುದು, ಆ ಗಾಳಿಯನ್ನು ಸೇವಿಸುವುದರಿಂದಲೂ ಬರಬಹುದು. ಆದರೆ ತರಕಾರಿ ಅಥವಾ ಮಾಂಸ ಕೊಳ್ಳುವಾಗ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ, ಆಗ ಅಪಾಯವಿದೆ.  

 

‘ಆಯುರ್ವೇದದಲ್ಲಿ ಮಾರಕ ಕೊರೋನಾಗೆ ಇದೆ ಮದ್ದು’ 

 

ಮಿಥ್: ಸಾಕುಪ್ರಾಣಿಗಳಿಂದ ಮನುಷ್ಯನಿಗೆ ಕೊರೋನಾ ಅಪಾಯವಿದೆ.

ಸತ್ಯ: ಇದು ನಿಜವಲ್ಲ. ಯಾವುದೇ ಪ್ರಾಣಿಯಿಂದ ಮನುಷ್ಯನಿಗೆ ಕೊರೋನಾ ಬಂದದ್ದು ಇದುವರೆಗೆ ಪತ್ತೆಯಾಗಿಲ್ಲ. ಹಾಗೇ, ಸಾಕುಪ್ರಾಣಿಗಳಿಗೆ ಮನುಷ್ಯನಿಂದ ಕೊರೋನಾ ಹೋಗುತ್ತೆ ಅನ್ನುವುದೂ ರುಜುವಾತು ಆಗಿಲ್ಲ. ಆದ್ರೆ ಉಸಿರಾಟದ ತೊಂದ್ರೆ ಇರುವವರು ಮೈತುಂಬ ರೋಮ ಇರೋ ಬೆಕ್ಕು, ನಾಯಿಗಳನ್ನು ಹತ್ತಿರ ಬಿಟ್ಟುಕೊಳ್ಳದೆ ಇರೋದು ಒಳಿತು. ಹಲವರಿಗೆ ಈ ರೋಮಗಳು ಅಲರ್ಜಿಕ್.

 

ಮಿಥ್: ಕೊರೋನಾ ಪತ್ತೆ ಪರೀಕ್ಷೆ ನಮ್ಮ ದೇಶದಲ್ಲಿ ದುರ್ಬಲವಾಗಿದೆ. ರಿಸಲ್ಟ್ ಬರುವಷ್ಟರಲ್ಲಿ ರೋಗಿಗೆ ಅಪಾಯ ಹೆಚ್ಚಾಗಿರುತ್ತೆ.

ಸತ್ಯ: ಒಂದು ತಿಂಗಳ ಹಿಂದೆ ಪರಿಸ್ಥಿತಿ ಹೀಗೆ ಇತ್ತು. ಆದರೆ ಈಗ ಹಲವು ಕಡೆ ಅಡ್ವಾನ್ಸ್‌ಡ್ ಟೆಸ್ಟ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ಒಂದು ದಿನದಲ್ಲಿ ರಿಸಲ್ಟ್ ಗೊತ್ತಾಗುತ್ತೆ. ಇಂಧು ಟೆಸ್ಟ್‌ ಕೊಟ್ಟರೆ ನಾಳೆ ರಿಸಲ್ಟ್ ಪಡೀಬಹುದು.

 

ಕೊರೋನಾ ವೈರಸ್‌ಗೆ ಹುಟ್ಟು ಚೀನಾ ಆದರೆ ಸಾವು ಯಾದಗಿರಿಯಲ್ಲಿ! 

 

ಮಿಥ್: ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯಲಾಗಿದೆ.

ಸತ್ಯ: ಇದು ಅರ್ಧ ಸತ್ಯ, ಲಸಿಕೆಗೆ ಸಂಶೋಧನೆ ನಡೆಯುತ್ತಿದೆ. ಕೊರೋನಾವೈರಸ್‌ಗೆ ಇದುವರೆಗೆ ಯಾವುದೇ ಔಷಧವಿಲ್ಲ. ಲಸಿಕೆಯಿಂದ ಕೊರೋನಾ ಜ್ವರ ಬರದಂತೆ ತಡೆಯಬಹುದೇ ಹೊರತು ಬಂದದ್ದನ್ನು ಗುಣಪಡಿಸುವುದು ಸಾಧ್ಯವಿಲ್ಲ. ಕೊರೊನಾದ ಜ್ವರದಲ್ಲಿ ಕಂಡುಬರುವ ಬೇರೆ ಬೇರೆ ಸಮಸ್ಯೆಗಳಿಗೆ ಬೇರೆ ಬೇರೆ ಔಷಧ ನೀಡಲಾಗುತ್ತದೆ. ಉದಾಹರಣೆಗೆ ಜ್ವರಕ್ಕೆ ಪ್ಯಾರಾಸಿಟಮಾಲ್‌, ಕೆಮ್ಮಿಗೆ ಕೆಮ್ಮಿನ ಔಷಧ ಹೀಗೆ.