ಯಾದಗಿರಿ(ಮಾ.11): ವಿಶ್ವಾದ್ಯಂತ ಮಹಾಮಾರಿ ಕೊರೋನಾ ವೈರಸ್‌ ಭಾರಿ ಸಂಚಲನ ಮೂಡಿಸಿದೆ. ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿಗೂ ಕೊರೋನಾ ವೈರಸ್‌ ಕಾಲಿಟ್ಟಿದೆ. ಹೀಗಾಗಿ ರಾಜ್ಯದ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. 

ಆದರೆ, ಬಿಸಿಲು ನಾಡೇ ಎಂದು ಹೆಸರು ವಾಸಿಯಾಗಿರುವ ಕಲ್ಯಾಣ ಕರ್ನಾಟಕದ ಯಾದಗಿರಿಯ ಬಿಸಿಲಿಗೆ ಕರೊನಾ ವೈರಸ್ ಸತ್ತೆ ಹೋಗುತ್ತೆ ಎಂಬ ಮೆಸೇಜ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಹೀಗಾಗಿ ಹೆಚ್ಚು ಬಿಸಿಲಿರುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಗೆ ಭಾರೀ ಡಿಮ್ಯಾಂಡ್‌ ಬರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. 

ಕೊರೋನಾ ವೈರಸ್ ಜೀವಂತವಾಗಿರುವುದಕ್ಕೆ 28 ಡಿಗ್ರಿ ಉಷ್ಣಾಂಶ ಬೇಕು, ಆದರೆ, ಯಾದಗಿರಿ ಸೇರಿದಂತೆ ಕಲ್ಯಾಣ  ಕರ್ನಾಟಕ ಭಾಗದ ತಾಪಮಾನ ಈಗ 36 ಡಿಗ್ರಿ ಇದೆ. ಹೀಗಾಗಿ ಇಲ್ಲಿ ಕೊರೋನಾ ವೈರಸ್‌ ಏನಾದ್ರೂ ಬಂದರೆ ಸತ್ತೆ ಹೊಗುತ್ತೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಕಡಿಮೆ ಉಷ್ಣಾಂಶವಿರುವ ಬೆಂಗಳೂರಿನಂತಹ ನಗರದ ಜನರು ಬಿಸಿಲು ಹೆಚ್ಚಿರುವ ಜಿಲ್ಲೆಗಳತ್ತ ಮುಖ ಮಾಡಲಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹೆಚ್ಚು ಬಿಸಿಲಿರುವ ಪ್ರದೇಶದಲ್ಲಿ ಕೊರೋನಾ ವೈರಸ್‌ ಬದುಕುವುದಿಲ್ಲ ಎಂಬ ಚರ್ಚೆಗೆ ಆರೋಗ್ಯ ಇಲಾಖೆ ಉತ್ತರಿಸಬೇಕಿದೆ.