ಮಹಿಳೆ ಹೊಟ್ಟೆಯಲ್ಲಿದ್ದ ಬರೋಬ್ಬರಿ 2.5 ಕೆ.ಜಿ. ತೂಕದ ಗಡ್ಡೆ ಹೊರ ತೆಗೆದ ವೈದ್ಯರು!
ಮಹಿಳೆಯ ದೇಹದಲ್ಲಿದ್ದ ಸುಮಾರು ಎರಡೂವರೆ ಕೆ.ಜಿ. ತೂಕದ ಗಡ್ಡೆಯನ್ನು ಶಿರಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಶಿರಾ (ಜು.31): ಮಹಿಳೆಯ ದೇಹದಲ್ಲಿದ್ದ ಸುಮಾರು ಎರಡೂವರೆ ಕೆ.ಜಿ. ತೂಕದ ಗಡ್ಡೆಯನ್ನು ಶಿರಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಕೇರಳದ ಮೂಲದ 45 ವರ್ಷದ ಮಹಿಳೆಯೊಬ್ಬರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲೇ ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ನಿರ್ಧರಿಸಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಮಹಿಳೆಯು ಹೈಪರ್ ಥೈರಾಯ್ಡ್ ಹಾಗೂ ಸ್ಥೂಲಕಾಯದ ಕಾಯಿಲೆಯಿಂದ ಬಳಲುತ್ತಿದ್ದರು.
ದಿನಕ್ಕೆ ಅಷ್ಟು ನೀರು ಕುಡೀರಿ, ಇಷ್ಟು ನೀರು ಕುಡೀರಿ ಅಂತಾರೆ, ಭರ್ತಿ ನೀರು ಕುಡಿದೋನ ಕಥೆ ಏನಾಗಿತ್ತು?
ವೈದ್ಯರಾದ ಡಾ.ನರೇಂದ್ರ ಬಾಬು, ಡಾ.ರಘು, ಡಾ.ರಾಘವೇಂದ್ರ ಅವರು ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಮಹಿಳೆಯ ದೇಹದಿಂದ ಎರಡೂವರೆ ಕೆಜಿ ತೂಕದ ಬ್ರಾಡ್ ಲಿಗಮೆಂಟ್ ಫೈಬ್ರಾಡ್ ತೆಗೆದು ಹಾಕುವುದರಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಭಾಷೆ ಬಾರದ ಮಹಿಳೆಯೊಂದಿಗೆ ವೈದ್ಯರು ಮಲಯಾಳಂ ಭಾಷೆಯಲ್ಲಿ ವ್ಯವಹರಿಸಿ ಚಿಕಿತ್ಸೆ ನೀಡುವುದರಲ್ಲಿ ಸಫಲರಾಗಿದ್ದಾರೆ. ಈ ರೀತಿಯ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡಕ್ಕೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಡಿ.ಎಂ. ಗೌಡ ಹಾಗೂ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
30ಶಿರಾ2: ಶಿರಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮಹಿಳೆಯ ದೇಹದಿಂದ ಎರಡೂವರೆ ಕೆ.ಜಿ.ತೂಕದ ಗಡ್ಡೆಯನ್ನು ಹೊರತೆಗೆದಿರುವುದು.
ಬೆಳಗಾವಿ: ಮಹಿಳೆ ಹೊಟ್ಟೆಯಲ್ಲಿದ್ದ 3 ಕೆಜಿ ಗಡ್ಡೆ ತೆಗೆದ ವೈದ್ಯರು!