ಕೆಲವೊಂದು ಚಿಕಿತ್ಸೆ, ಥೆರಪಿಗಳು ನಮಗೆ ವಿಚಿತ್ರವೆನ್ನಿಸುತ್ತವೆ. ಅದರಿಂದ ಸಿಗುವ ಲಾಭ ಮಾತ್ರ ಅಪಾರವಾಗಿರುತ್ತದೆ. ದೇಹದ ಎಲ್ಲ ಭಾಗಕ್ಕೆ ಟ್ಯಾಪ್ ಮಾಡೋದೂ ಒಂದು ಥೆರಪಿಯಾ ಅಂತಾ ನೀವು ಕೇಳಬಹುದು. ಆದ್ರೆ ಒಂದು ತಿಂಗಳು ಅದನ್ನು ಮಾಡಿ, ಪರಿಣಾಮ ನಿಮಗೆ ತಿಳಿಯುತ್ತೆ. 

ಹಗಲು – ರಾತ್ರಿ ಎನ್ನದೆ ಜನರು ಕೆಲಸದಲ್ಲಿ ಮಗ್ನರಾಗಿರ್ತಾರೆ. ಉದ್ಯೋಗ, ಕುಟುಂಬ ಸೇರಿದಂತೆ ನಾನಾ ವಿಚಾರದಿಂದಾಗಿ ಜನರಿಗೆ ನೆಮ್ಮದಿ ಇಲ್ಲದಂತಾಗುತ್ತದೆ. ಈ ಎಲ್ಲ ಒತ್ತಡದಲ್ಲಿ ಜನರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಮಯ ಸಿಗೋದಿಲ್ಲ. ಇದ್ರಿಂದ ಜನರ ಒತ್ತಡ ದುಪ್ಪಟ್ಟಾಗುತ್ತದೆ. ಇದು ವೈಯಕ್ತಿಕ ಜೀವನ ಹಾಗೂ ಉದ್ಯೋಗದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಯೋಗ, ಧ್ಯಾನ ಮತ್ತು ಕೆಲ ಚಿಕಿತ್ಸೆಯ ಮೂಲಕ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇವುಗಳ ಮೂಲಕ ಜೀವನದಲ್ಲಿ ಸದಾ ಸಂತೋಷ ಕಾಣಬಹುದು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಟ್ಯಾಪಿಂಗ್ ಥೆರಪಿ ಕೂಡ ಒಳ್ಳೆಯದು. ಇದು ಒತ್ತಡದಿಂದ ನಮ್ಮ ಮನಸ್ಸನ್ನು ಮುಕ್ತವಾಗಿಡುವ ಕೆಲಸವನ್ನು ಮಾಡುತ್ತದೆ. ನಾವಿಂದು ಟ್ಯಾಪಿಂಗ್ ಥೆರಪಿ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. 

ಟ್ಯಾಪಿಂಗ್ ಥೆರಪಿ (Tapping Therapy ) ಅಂದ್ರೇನು? : ಫೋರ್ಬ್ಸ್ ಪ್ರಕಾರ, ಇಎಫ್ ಟಿ (EFT) ಟ್ಯಾಪಿಂಗ್‌ನ ಪ್ರಾರಂಭ ಅಂದರೆ ಭಾವನಾತ್ಮಕ ಸ್ವಾತಂತ್ರ್ಯ ತಂತ್ರ ಟ್ಯಾಪಿಂಗ್, ಫೀಲ್ಡ್ ಥೆರಪಿಗೆ ಸಂಬಂಧಿಸಿದೆ. 1980 ರ ದಶಕದಲ್ಲಿ ಮನಶ್ಶಾಸ್ತ್ರಜ್ಞ ರೋಜರ್ ಕ್ಯಾಲಹನ್ ಹುಟ್ಟು ಹಾಕಿದ್ರು. ಟಿಎಫ್ ಟಿ ಎಂಬುದು ಇಎಫ್ ಟಿ ಯಂತೆಯೇ ಇರುವ ತಂತ್ರವಾಗಿದ್ದು, ಒಂದು ಸಮಸ್ಯೆಯನ್ನು ಹೋಗಲಾಡಿಸಲು ದೇಹದ ವಿಭಿನ್ನ ಬಿಂದುಗಳನ್ನು ಟ್ಯಾಪ್ ಮಾಡಲಾಗುತ್ತದೆ. ಟ್ಯಾಪಿಂಗ್ ಥೆರಪಿ ಒಂದು ರೀತಿಯ ವಿಶ್ರಾಂತಿ (Rest) ಥೆರಪಿಯಾಗಿದೆ ಎಂದು ತಜ್ಞರು ಹೇಳ್ತಾರೆ. ಈ ಥೆರಫಿಯಲ್ಲಿ ನೀವು ದೇಹದ ಒಂದು ಭಾಗವನ್ನು ಟ್ಯಾಪ್ ಮಾಡ್ತೀರಿ. ಆಗ ಒತ್ತಡ ಹೆಚ್ಚಾಗಿ ನಂತ್ರ ದೇಹ ವಿಶ್ರಾಂತಿ ಪಡೆಯುತ್ತದೆ. ಉದಾಹರಣೆಗೆ ನೀವು ಕೈ ಮುಷ್ಟಿ ಕಟ್ಟಿದಾಗ ಒತ್ತಡ ಹೆಚ್ಚಾಗುತ್ತದೆ. ತಕ್ಷಣ ನೀವು ಮುಷ್ಟಿ ಬಿಡ್ತಿದ್ದಂತೆ ಒತ್ತಡ ಕಡಿಮೆಯಾಗಲು ಶುರುವಾಗುತ್ತದೆ. ಆತಂಕ, ಚಡಪಡಿಕೆ ಕಡಿಮೆಯಾಗುತ್ತದೆ. ಅಲ್ಲದೆ ಉತ್ತಮ ಹಾರ್ಮೋನುಗಳು ನಿಮ್ಮ ದೇಹದಿಂದ ಬಿಡುಗಡೆಯಾಗಲು ಶುರುವಾಗುತ್ತದೆ. 

Health Tips: ಯುವಜನರಲ್ಲಿ ಕಾಡುವ ಮಾನಸಿಕ ರೋಗಕ್ಕೆ ಕುಟುಂಬವೇ ಕಾರಣ!

ಟ್ಯಾಪಿಂಗ್ ಚಿಕಿತ್ಸೆ (Treatment) ಯಿಂದ ಆಗುವ ಲಾಭ : ಟ್ಯಾಪಿಂಗ್ ಚಿಕಿತ್ಸೆ ಪಾದದಿಂದ ಶುರುವಾಗಿ ತಲೆಯವರೆಗೆ ನಡೆಯುತ್ತದೆ. ನಿಯಮಿತವಾಗಿ ನೀವು ಟ್ಯಾಪಿಂಗ್ ಥೆರಪಿ ಪಡೆದಲ್ಲಿ ಇದರಿಂದ ಅನೇಕ ಪ್ರಯೋಜನವಿದೆ.

ಮಾನಸಿಕ ಮತ್ತು ದೈಹಿಕ ಕಾರ್ಯಕ್ಷಮತೆ ಹೆಚ್ಚಳ : ಟ್ಯಾಪಿಂಗ್ ಥೆರಪಿಗೆ ನೀವು ಒಳಗಾಗುವುದ್ರಿಂದ ನಿಮ್ಮೊಳಗೆ ಸ್ಥಿರತೆ ಬರುತ್ತದೆ. ಮನಸ್ಸು ಹಾಗೂ ದೇಹದ ಮಧ್ಯೆ ಸಮತೋಲನವನ್ನು ನೀವು ಕಾಪಾಡಬಹುದು. ಟ್ಯಾಪಿಂಗ್ ಥೆರಪಿಯಿಂದ ಸಂತೋಷದ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರ ಪರಿಣಾಮವನ್ನು ನೀವು ಕೆಲಸದಲ್ಲಿ ಕಾಣಬಹುದು. 

ರಕ್ತದ ಹರಿವು ಹೆಚ್ಚಳ : ಟ್ಯಾಪಿಂಗ್ ಥೆರಪಿ ಸ್ವಲ್ಪ ಆಕ್ಯುಪ್ರೆಶರ್‌ನಂತೆಯೇ ಇರುತ್ತದೆ. ಟ್ಯಾಪಿಂಗ್ ಚಿಕಿತ್ಸೆಯಲ್ಲಿ ದೇಹದ ಮೇಲಿನ ಬಿಂದುಗಳನ್ನು ಒತ್ತಲಾಗುತ್ತದೆ ಇಲ್ಲವೆ ಟ್ಯಾಪ್ ಮಾಡಲಾಗುತ್ತದೆ. ಇದ್ರಿಂದ ದೇಹದ ಬಿಂದುಗಳಲ್ಲಿ ರಕ್ತ ಪರಿಚಲನೆ ಹೆಚ್ಚಲು ಪ್ರಾರಂಭವಾಗುತ್ತದೆ. ರಕ್ತದ ಹರವು ಹೆಚ್ಚಾಗ್ತಿದ್ದಂತೆ ದೇಹದಲ್ಲಿನ ನೋವು ದೂರವಾಗುತ್ತದೆ.

ದುಃಖ ಆದಾಗ ಮಾತ್ರವಲ್ಲ ಖುಷಿಯಾದಾಗ್ಲೂ ಅತ್ತುಬಿಡಿ, ಹೆಲ್ದೀ ಆಗಿರ್ಬೋದು

ನಿದ್ರೆಗೆ ಟ್ಯಾಪಿಂಗ್ ಥೆರಪಿಯಿಂದ ಪರಿಹಾರ : ಒತ್ತಡ ನಿದ್ರಾಭಂಗಕ್ಕೆ ಕಾರಣವಾಗುತ್ತದೆ. ರಾತ್ರಿ ಪೂರ್ತಿ ಒಂದಲ್ಲ ಒಂದು ಚಿಂತೆಯಲ್ಲಿರುವ ಜನರು ಸರಿಯಾಗಿ ನಿದ್ರೆ ಮಾಡೋದಿಲ್ಲ. ನಿದ್ರಾಹೀನತೆ ಬೆಳಿಗ್ಗೆ ಸಮಸ್ಯೆ ಹೆಚ್ಚು ಮಾಡುತ್ತದೆ. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಿ ತೊಂದರೆಯಾಗುತ್ತದೆ. ಟ್ಯಾಪಿಂಗ್ ಥೆರಪಿ ನಿಮ್ಮ ನಿದ್ರೆ ಸಮಸ್ಯೆಗೆ ಮದ್ದಿನಂತೆ ಕೆಲಸ ಮಾಡುತ್ತದೆ. ಇದ್ರಿಂದ ಒತ್ತಡ ದೇಹದಿಂದ ಬಿಡುಗಡೆಯಾಗುತ್ತದೆ. ದೇಹ ಹಾಗೂ ಮನಸ್ಸು ಎರಡರ ಆರೋಗ್ಯ ಸುಧಾರಿಸುವ ಕಾರಣ ನಿದ್ರೆ ಸದ್ದಿಲ್ಲದೆ ಬರುತ್ತದೆ.

ಒತ್ತಡ ಓಡಿಸುತ್ತೆ ಟ್ಯಾಪಿಂಗ್ ಥೆರಪಿ : ಮನುಷ್ಯನ ಇಡೀ ಬದುಕನ್ನು ಹಾಳು ಮಾಡುವ ಶಕ್ತಿ ಒತ್ತಡಕ್ಕಿದೆ. ಈಗಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಜನರು ಒತ್ತಡಕ್ಕೊಳಗಾಗ್ತಾರೆ. ಅಂಥವರು ಈ ಥೆರಪಿ ಪಡೆಯುವ ಮೂಲಕ ಒತ್ತಡವನ್ನು ಹೊಡೆದೋಡಿಸಬಹುದು.