Wedding Buffet: ಮದುವೆ ಊಟಾನಾ? ಹೊಟ್ಟೆ ಸರಿಯಾಗಿರ್ಬೇಕು ಎಂದರೆ ಹೀಗ್ಮಾಡಿ
ಸಮಾರಂಭಗಳ ಸೀಸನ್ ಆರಂಭವಾಗಿದೆ. ಸಮಾರಂಭ ಅಂದ ಮೇಲೆ ನಮ್ಮ ಊಟ-ತಿಂಡಿಯ ಪದ್ಧತಿಯೂ ವ್ಯತ್ಯಾಸವಾಗುತ್ತದೆ. ಆದರೆ, ಈ ವ್ಯತ್ಯಾಸದಿಂದ ಹೊಟ್ಟೆಯ ಆರೋಗ್ಯ ಕೆಡದಂತೆ ನೋಡಿಕೊಳ್ಳಬೇಕಾಗುತ್ತದೆ. ತೂಕ ಹೆಚ್ಚದಂತೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದಕ್ಕಾಗಿ ಕೆಲವು ಟಿಪ್ಸ್.
ಮದುವೆ (Marraige) ಮತ್ತು ಇನ್ನಿತರ ಸಮಾರಂಭಗಳ (Function) ಸೀಸನ್ (Season) ಶುರುವಾಗಿದೆ. ಸೀಸನ್ ಎಂದರೆ ಮುಗಿಯದ ತಿರುಗಾಟ, ಹಾಗೆಯೇ ಹೊರಗಿನ ಊಟ (Buffet). ಸಿಹಿ-ಕರಿದ ತಿನಿಸುಗಳ ಭರಾಟೆ. ಈ ನಡುವೆ, ಡಯೆಟ್ (Diet) ಮರೆತುಹೋಗುತ್ತದೆ. ಹಾಗೆಯೇ ಹೊಟ್ಟೆಯೂ ಕೆಡುತ್ತದೆ. ಆದರೆ, ನೆಂಟರಿಷ್ಟರ ಮನೆಯ ಕಾರ್ಯಕ್ರಮಗಳಿಗೆ ಹೋಗಲೇಬೇಕು, ಹೋಗದಿದ್ದರೆ ಅಭಾಸವಾಗುತ್ತದೆ, ಏನು ಮಾಡುವುದೆನ್ನುವ ಗೊಂದಲ, ಚಿಂತೆ ನಿಮಗಿದ್ದರೆ ಇಲ್ಲಿ ಕೇಳಿ.
ಆಹಾರ ತಜ್ಞರು (Food Expert) ನೀಡುವ ಸಲಹೆಯನ್ನು ಪಾಲಿಸಿದರೆ ನೀವು ಅಂದುಕೊಂಡಂತೆ ಮದುವೆ ಸಮಾರಂಭಗಳಿಗೂ ಹೋಗಬಹುದು, ಹೊಟ್ಟೆಯ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.
ಹಾಗೆ ನೋಡಿದರೆ, ಬಹಳಷ್ಟು ಜನರು ಕಳೆದ ಎರಡು ವರ್ಷಗಳಿಂದ ಮದುವೆ ಹಾಗೂ ಇನ್ನಿತರ ಸಮಾರಂಭಗಳನ್ನು ಅಟೆಂಡ್ ಮಾಡಿದ್ದೇ ಕಡಿಮೆ ಇರಬಹುದು. ಕೊರೋನಾ ಕಾಲದಲ್ಲಿ ಸಮಾರಂಭಗಳಿಗೆ ಕೆಲವು ನಿಯಮಗಳಿದ್ದ ಕಾರಣ ಜನ ಹೆಚ್ಚು ಸೇರುವುದು ಕಷ್ಟವಿತ್ತು. ತೀರ ಸಮೀಪದ ಬಂಧುಗಳ ಮನೆಯ ಸಮಾರಂಭಗಳಿಗಷ್ಟೇ ಭಾಗಿಯಾಗುವುದು ಸಾಧ್ಯವಿತ್ತು. ಹೀಗಾಗಿ, ಆರೋಗ್ಯವೂ ಸುಸ್ಥಿತಿಯಲ್ಲಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಈಗ, ಸಮಯ ಬದಲಾಗಿದೆ. ಮೊದಲಿನ ಆತಂಕ ಈಗಿಲ್ಲ. ಆದರೆ, ಆರೋಗ್ಯದ ದೃಷ್ಟಿಯಿಂದ ಆಹಾರದ ವಿಚಾರದಲ್ಲಿ ಕಾಳಜಿ ವಹಿಸಲೇಬೇಕು.
ಆಸೆಗೆ ಬೀಳಬೇಡಿ
ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ನೀವು ಮಾಡಬೇಕಾದುದಿಷ್ಟೆ. ನಿಮ್ಮ ಹೊಟ್ಟೆಗೆ ಆಗದ ಆಹಾರವನ್ನು ಸೇವಿಸಬಾರದು. ಅಲ್ಲದೆ, ಅಪರೂಪದ ಆಹಾರ ಕಂಡಾಗ ಆಸೆಗೆ (Cravings) ಬೀಳದೆ ಸಂಯಮದಿಂದ, ಎಚ್ಚರಿಕೆಯಿಂದ ಆಹಾರ ಸೇವನೆ ಮಾಡಬೇಕು. ಆಗ ತೂಕ (Weight) ಹೆಚ್ಚಳವಾಗುವ ಭಯವೂ ಇರುವುದಿಲ್ಲ, ಹಾಗೆಯೇ ಜೀರ್ಣಾಂಗದ (Digestion) ವ್ಯವಸ್ಥೆಯೂ ಹಾಳಾಗುವುದಿಲ್ಲ.
ಸಮಾರಂಭಗಳ ಆಹಾರವನ್ನು ನೀವು ಎಂಜಾಯ್ (Enjoy) ಮಾಡಬೇಕು ಎಂದಾದರೆ, ಕೆಲವು ಟಿಪ್ಸ್ ಗಳನ್ನು ತಪ್ಪದೇ ಪಾಲಿಸಬೇಕು. ಆಗ ಮದುವೆ ಸೀಸನ್ ನಿಮಗೆ ಯಾವ ಕಿರಿಕಿರಿಯನ್ನೂ ನೀಡುವುದಿಲ್ಲ.
ಹೊಟ್ಟೆಯ ಆರೋಗ್ಯಕ್ಕೆ ಟಿಪ್ಸ್
* ತಜ್ಞರ ಪ್ರಕಾರ, ದೇಹ ಡಿಹೈಡ್ರೇಷನ್ (Dehydration) ಆಗದಂತೆ ನೋಡಿಕೊಳ್ಳಬೇಕು. ದೇಹಕ್ಕೆ ಬೇಕಾದಷ್ಟು ನೀರು ಲಭ್ಯವಾಗುತ್ತಿರಬೇಕು. ಇದೇ ಜೀರ್ಣಾಂಗದ ಆರೋಗ್ಯ ಕಾಪಾಡಿಕೊಳ್ಳುವ ಮೊದಲ ಸೂತ್ರ.
* ಸಮಾರಂಭಗಳಲ್ಲಿ ಬಿಸಿನೀರನ್ನು (Warm Water) ಹೆಚ್ಚು ಸೇವಿಸಬೇಕು. ಈಗಂತೂ ಬಹುತೇಕ ಎಲ್ಲ ಕಡೆ ಬಿಸಿನೀರನ್ನು ಕೇಳುತ್ತಾರೆ. ಅದನ್ನೇ ಸೇವಿಸುವುದು ಉತ್ತಮ.
* ಚೂರು ಶುಂಠಿ (Ginger) ಸೇರಿಸಿ ಕುದಿಸಿದ ನೀರನ್ನು ದಿನವಿಡೀ ಕುಡಿಯಬಹುದು.
* ದಿನವೂ ಬೆಳಗ್ಗೆ ಜೀರಿಗೆ ನೀರನ್ನು ಕುಡಿಯಬೇಕು.
* ಸಮಾರಂಭಕ್ಕೆ ಹೋಗುವ ದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಲಿಂಬೆ ರಸ ಹಾಗೂ ಜೇನುತುಪ್ಪ (Honey) ಸೇರಿಸಿ ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ.
* ಸಮಾರಂಭಗಳಲ್ಲಿ ಇತ್ತೀಚೆಗೆ ಸಾಮಾನ್ಯವಾಗಿ ಸಲಾಡ್ (Salad) ಗಳನ್ನು ಇಡುತ್ತಾರೆ. ಊಟಕ್ಕೆ ಮೊದಲು ಈ ಸಲಾಡ್ ಗಳನ್ನು ಸೇವನೆ ಮಾಡಿ. ಇದರಿಂದ ತೂಕ ಹೆಚ್ಚುವ ಭಯ ಇರುವುದಿಲ್ಲ. ಹಾಗೂ ಹೊಟ್ಟೆಗೂ ಒಳ್ಳೆಯದು.
* ಹೆಚ್ಚು ಆಹಾರ ಕಂಡಾಕ್ಷಣ ಹೆಚ್ಚು ತಿನ್ನಬೇಕೆಂದಿಲ್ಲ. ಸಣ್ಣ ಪ್ಲೇಟ್ ನಲ್ಲಿ ಪೂರ್ಣ ತುಂಬಿಸಿಕೊಳ್ಳಿ. ಏನೇ ತಿಂದರೂ ನಿಧಾನವಾಗಿ ತಿನ್ನಿ ಹಾಗೂ ಸರಿಯಾಗಿ ಅಗಿದು ತಿನ್ನಿ.
* ಸಮಾರಂಭಗಳಲ್ಲಿ ಆಹಾರ ಸೇವಿಸುವಾಗ ಯಾವುದೇ ಅಪರಾಧಿ ಪ್ರಜ್ಞೆ ಬೇಡ. ಭಯವೂ ಬೇಡ. ಕೃತಜ್ಞಾ (Gratitude) ಭಾವದಿಂದ ಆಹಾರ ಸೇವಿಸಿ. ಆ ಸಮಯವನ್ನು ಆನಂದಿಸಿ, ಕ್ಯಾಲರಿಯನ್ನು ಲೆಕ್ಕ ಹಾಕಬೇಡಿ.
* ಸಮಾರಂಭ ಮುಗಿಸಿ ಮನೆಗೆ ಬಂದಾಗಲೂ ಅಷ್ಟೆ, ಬಿಸಿನೀರಿನ್ನೇ ಹೆಚ್ಚು ಸೇವಿಸಿ. ಇದರಿಂದ ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ.