World Alzheimers Day: ಮರೆವಿನ ಕಾಯಿಲೆ ಇರೋರ ಆರೈಕೆ ಮಾಡೋದು ಹೇಗೆ ?

ಪ್ರಪಂಚದಲ್ಲಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಅಲ್ಝೈಮರ್  ಸಹ ಒಂದಾಗಿದೆ. ಅಲ್ಝೈಮರ್ ಕಾಯಿಲೆಯು ಮುಂದುವರೆದಂತೆ, ರೋಗಿಯ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ಹೀಗಿದ್ದಾಗ ಅಲ್ಝೈಮರ್ ರೋಗಿಯನ್ನು ಮನೆಯಲ್ಲೇ ಆರೈಕೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Take Care Of Alzheimers Patient In These Ways At Home Vin

ಅಲ್ಝೈಮರ್‌ ಕಾಯಿಲೆ ಮೆದುಳಿನ ಕೋಶಗಳನ್ನು ನಾಶಪಡಿಸುತ್ತದೆ ಮತ್ತು ವ್ಯಕ್ತಿಯ ಸ್ಮರಣೆ, ​​ಆಲೋಚನೆಗಳು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, ಅಲ್ಝೈಮರ್ ಕಾಯಿಲೆಯು ಮುಂದುವರೆದಂತೆ, ರೋಗಿಯ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತವೆ. ಈ ಸಂದರ್ಭದಲ್ಲಿ ಎದುರಾಗುವ ದೊಡ್ಡ ಸಮಸ್ಯೆಯೆಂದರೆ ರೋಗಿಯನ್ನು ನೋಡಿಕೊಳ್ಳುವುದು ಹೇಗೆ ಎಂಬುದು. ಅಲ್ಝೈಮರ್‌ ಕಾಯಿಲೆಯ ಸೌಮ್ಯ ಅಥವಾ ಆರಂಭಿಕ ಹಂತಗಳನ್ನು ಹೊಂದಿರುವ ಜನರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬಹುದು. ಮಧ್ಯಮ ಅಲ್ಝೈಮರ್‌ನ ಕಾಯಿಲೆಯು ಮೆಮೊರಿ ನಷ್ಟ, ಗೊಂದಲ ಮತ್ತು ದೈಹಿಕ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಕುಟುಂಬದ ಸದಸ್ಯರು ಮತ್ತು ನಿಕಟ ಸ್ನೇಹಿತರನ್ನು ಗುರುತಿಸುವಲ್ಲಿ ತೊಂದರೆ, ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುವಲ್ಲಿ ತೊಂದರೆ, ಗೊತ್ತಿಲ್ಲದೇ ಮೂತ್ರ ವಿಸರ್ಜನೆ ಮೊದಲಾದ ಸಮಸ್ಯೆಗಳು ಕಂಡು ಬರಬಹುದು. 

ಪ್ರತಿ ವರ್ಷ ಸೆಪ್ಟೆಂಬರ್ 21ನ್ನು ವಿಶ್ವ ಆಲ್ಝೈಮರ್ ದಿನ (World Alzheimers Day)ವೆಂದು ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಉದ್ದೇಶವು ಅಲ್ಝೈಮರ್‌ ಕಾಯಿಲೆಯ ಕಾರಣಗಳು ಮತ್ತು ಅದರೊಂದಿಗೆ ಬರುವ ಎಲ್ಲಾ ಅಪಾಯಗಳ (Danger) ಬಗ್ಗೆ ಜಾಗೃತಿ (Awareness) ಮೂಡಿಸುವುದಾಗಿದೆ. ಈ ಸಂದರ್ಭದಲ್ಲಿ, ದೆಹಲಿಯ ಕರುಣಾ ಆಸ್ಪತ್ರೆಯ ಹಿರಿಯ ಸಲಹೆಗಾರರಾದ ಡಾ.ಅರ್ಚನಾ ಗುಪ್ತಾ ಅವರು ಅಲ್ಝೈಮರ್‌ ರೋಗಿಯ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ತಿಳಿಸಿದ್ದಾರೆ.

World Alzheimers Day: ಮರೆವು ಹೆಚ್ಚಾದ್ರೆ ಸಾವಿಗೂ ಕಾರಣವಾಗುತ್ತೆ ಹುಷಾರ್

ದೈನಂದಿನ ಚಟುವಟಿಕೆ ಮಾಡಲು ನೆರವಾಗಿ: ಅಲ್ಝೈಮರ್‌ನ ಕಾಯಿಲೆಯ ಕೊನೆಯ ಹಂತದಲ್ಲಿರುವ ಜನರು ತಮ್ಮ ಮೂಲಭೂತ ದೈನಂದಿನ ಚಟುವಟಿಕೆಗಳಾದ ಕುಳಿತುಕೊಳ್ಳುವುದು, ನಡೆಯುವುದು ಮತ್ತು ತಿನ್ನಲು ಸಹಾಯ (Help) ಮಾಡಬೇಕಾಗುತ್ತದೆ. ಈ ಹಂತದಲ್ಲಿ, ಜನರು ಸಂವಹನ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು. ಅಗಿಯಲು ಅಥವಾ ನುಂಗಲು ಕಷ್ಟಪಡಬಹುದು.

ದಿನಚರಿಯನ್ನು ರಚಿಸಿ: ಆರೈಕೆದಾರರು ಸ್ಥಿರವಾದ ದೈನಂದಿನ ದಿನಚರಿಯನ್ನು ಸ್ಥಾಪಿಸುವ ಮೂಲಕ ಯಾರಾದರೂ ಹೆಚ್ಚು ಆರಾಮದಾಯಕವಾಗಲು ಸಹಾಯ ಮಾಡಬಹುದು. ಹೀಗೆ ಮಾಡುವುದರಿಂದ ಆ ವ್ಯಕ್ತಿಯಲ್ಲಿ ಆತ್ಮೀಯತೆ ಹೆಚ್ಚುತ್ತದೆ. ಆರೈಕೆ (Care) ಮಾಡುವವರು ದಿನಚರಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಬೇಕು, ಏಕೆಂದರೆ ಇದು ಯಾರಿನ್ನಾದರೂ ಗೊಂದಲಕ್ಕೊಳಪಡಿಸಬಹುದು. 

ಚಟುವಟಿಕೆಗಳ ಸಂಪೂರ್ಣ ಯೋಜನೆ ಮಾಡಿ: ಸಂಗೀತವನ್ನು ಕೇಳುವಂತಹ ಚಟುವಟಿಕೆಗಳು ಅಲ್ಝೈಮರ್‌ ಇರುವ ವ್ಯಕ್ತಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿ ಮಾತ್ರವಲ್ಲದೆ ಬೇರೆ ರೀತಿಯಲ್ಲಿಯೂ ರೋಗಿ (Patient)ಯನ್ನು ಬಿಝಿಯಾಗಿ ಇರಿಸಬಹುದು. ಉದಾಹರಣೆಗೆ ಅಡುಗೆ ಮತ್ತು ಬೇಕಿಂಗ್, ವ್ಯಾಯಾಮ (Exercise), ವಾಕಿಂಗ್, ಸ್ಟ್ರೆಚಿಂಗ್ ಮತ್ತು ಕಡಿಮೆ ತೂಕದ ತರಬೇತಿ, ನೃತ್ಯ, ಸಂಗೀತವನ್ನು ಆಲಿಸುವುದು, ಸರಳವಾದ ಬೋರ್ಡ್ ಆಟವನ್ನು ಆಡುವುದು, ತೋಟಗಾರಿಕೆ ಮೊದಲಾದವುಗಳನ್ನು ಮಾಡಿಸಬಹುದು.

Brain Health: ಬುದ್ಧಿಗೆ ಮಂಕು ಕವಿದಿದ್ಯಾ? ಹೀಗೆ ದೂರ ಮಾಡಿ

ಸಂವಹನವನ್ನು ಉತ್ತೇಜಿಸಿ: ಅಲ್ಝೈಮರ್‌ ಕಾಯಿಲೆಯು ಇತರರೊಂದಿಗೆ ಸಂವಹನ (Communication) ನಡೆಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ನಿರ್ದಿಷ್ಟ ಪದಗಳನ್ನು ಅರ್ಥೈಸಲು ಅಥವಾ ನೆನಪಿಟ್ಟುಕೊಳ್ಳಲು ಅವರಿಗೆ ಕಷ್ಟವಾಗಬಹುದು. ಒಂದು ವಾಕ್ಯದ ಮಧ್ಯದಲ್ಲಿ ಅವರು ತಮ್ಮ ಆಲೋಚನಾ ಶಕ್ತಿಯನ್ನು ಕಳೆದುಕೊಳ್ಳಬಹುದು. ಕಣ್ಣಿನ ಸಂಪರ್ಕವನ್ನು ಕಾಪಾಡಿಕೊಳ್ಳುವುದು ಮತ್ತು ನಗುವುದು, ಒಂದೇ ಬಾರಿಗೆ ಒಂದೇ ಪ್ರಶ್ನೆಯನ್ನು ಕೇಳುವುದು, ಇತರ ವ್ಯಕ್ತಿಯ ಹೆಸರನ್ನು ಬಳಸುವುದು, ಮುಕ್ತ ಮತ್ತು ಶಾಂತವಾದ ದೇಹ ಭಾಷೆ (Body language)ಯನ್ನು ಬಳಸುವುದು, ಮೃದುವಾದ, ಶಾಂತವಾದ ಧ್ವನಿಯನ್ನು ಬಳಸುವುದು ಮುಂತಾದ ಹಲವಾರು ವಿಷಯಗಳನ್ನು ನೀವು ಪ್ರಯತ್ನಿಸಬಹುದು. 

ಪೌಷ್ಟಿಕ ಆಹಾರ ನೀಡಿ: ಅಲ್ಝೈಮರ್ಸ್ ಇರುವವರು ಆರೋಗ್ಯಕರ ಆಹಾರ ತಿನ್ನುವುದು ಮುಖ್ಯವಾಗಿದೆ. ಅಲ್ಝೈಮರ್ ಹೊಂದಿರುವ ಜನರು ಅವರು ಕೊನೆಯ ಬಾರಿಗೆ ಯಾವಾಗ ತಿಂದರು ಎಂದು ನೆನಪಿಲ್ಲದಿದ್ದರೆ, ಅಡುಗೆ ಮಾಡಲು ಮರೆತಿದ್ದಾರೆ, ಪ್ರತಿದಿನ ಒಂದೇ ರೀತಿಯ ಆಹಾರವನ್ನು ಸೇವಿಸಿದರೆ, ಆಹಾರದ ಬಗ್ಗೆ ತಿಳಿದಿರದಿದ್ದರೆ, ವಾಸನೆ (Smell) ಮತ್ತು ರುಚಿಯ ಸಾಮರ್ಥ್ಯವನ್ನು ಕಳೆದುಕೊಂಡರೆ ತೂಕವನ್ನು ಕಳೆದುಕೊಳ್ಳಬಹುದು. ಹೀಗಿದ್ದಾಗ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಮುಖ್ಯ.

Amnesia Brain Problem: ದಿನ ಬೆಳಗ್ಗೆ ಎದ್ದಾಗ ಗಂಡನ ನೆನಪೂ ಇರಲ್ಲ ಈಕೆಗೆ!

ಅಲ್ಝೈಮರ್‌ ರೋಗಿಗಳ ಕಾಳಜಿ ವಹಿಸೋದು ಹೇಗೆ ?
ಉತ್ತಮ ಭಾವನೆಯು ವ್ಯಕ್ತಿಯನ್ನು ಆರೋಗ್ಯ (Health)ವಾಗಿಡಲು ಸಹಾಯ ಮಾಡುತ್ತದೆ. ಆರೈಕೆದಾರರು ರೋಗಿಯ ನೈರ್ಮಲ್ಯ ಮತ್ತು ಅಂದಗೊಳಿಸುವಿಕೆಗೆ ಸಹಾಯ ಮಾಡಬಹುದು. ಹೀಗಾಗಿ ಅವರ ಹಲ್ಲುಗಳನ್ನು ಹಲ್ಲುಜ್ಜುವುದು, ಮೇಕಪ್ ಇಷ್ಟಪಡುವವರು ಆಗಿದ್ದರೆ, ಮೇಕ್ಅಪ್ ಹಾಕಲು ಸಹಾಯ ಮಾಡುವುದು, ಕ್ಷೌರ ಮಾಡಲು ವ್ಯಕ್ತಿಯನ್ನು ಪ್ರೋತ್ಸಾಹಿಸುವುದು, ಉಗುರುಗಳನ್ನು ಚಿಕ್ಕದಾಗಿ ಇಡುವುದು, ಡ್ರೆಸ್ಸಿಂಗ್‌ಗೆ ಹೆಚ್ಚುವರಿ ಸಮಯವನ್ನು ಅನುಮತಿಸುವುದು ಮೊದಲಾದ ರೀತಿ ಅವರು ಖುಷಿಯಾಗಿರುವಂತೆ ನೋಡಿಕೊಳ್ಳಬಹುದು.

Latest Videos
Follow Us:
Download App:
  • android
  • ios