ಸದ್ದಿಲ್ಲದ ಹೃದಯಾಘಾತ ನಿಮಗೂ ಎದುರಾಗಬಹುದು ಹುಷಾರ್‌!

ಸದ್ದಿಲ್ಲದ ಇದು ಸದ್ದಿಲ್ಲದೇ ನಮ್ಮ ದೇಹದಲ್ಲಿ ಆಗಿಬಿಡುವ ಒಂದು ಭಯಾನಕ ಸಂಗತಿ. ನಮ್ಮ ಅರಿವೇ ಇಲ್ಲದೆ ನಡೆದುಬಿಡುವ ಈ ಸೈಲೆಂಟ್‌ ಹಾರ್ಟ್‌ ಅಟ್ಯಾಕ್, ಗೊತ್ತುಮಾಡಿಕೊಳ್ಳಲು ಇಲ್ಲಿದೆ ಸೂಚನೆಗಳು.

ನಿಮ್ಮ ಬಂಧುಗಳಲ್ಲಿ ಯಾರಿಗಾದರೂ ಹಾರ್ಟ್‌ ಅಟ್ಯಾಕ್‌ ಆದಾಗ, ಅವರೊಡನೆ ಆಸ್ಪತ್ರೆಗೆ ಹೋದಾಗ, ವೈದ್ಯರು ಹೇಳುವ ವಿವರಗಳನ್ನು ಒಮ್ಮೆ ಗಮನವಿಟ್ಟು ಕೇಳಿಸಿಕೊಳ್ಳಿ. ಅವರು ಇದು ಎರಡನೇ ಹಾರ್ಟ್‌ ಅಟ್ಯಾಕ್‌ ಅಂದಿರುತ್ತಾರೆ. ಹಾಗಿದ್ದರೆ, ಮೊದಲೇ ಹೃದಯಾಘಾತ ಯಾವಾಗ ಆಯ್ತು? ಎಲ್ಲಿ ಆಯ್ತು? ಯಾಕೆ ಯಾರಿಗೂ ಗೊತ್ತೇ ಆಗಲಿಲ್ಲ? ಸ್ವತಃ ಅನುಭವಿಸಿದವರಿಗೂ ಗೊತ್ತಾಗಲಿಲ್ವೇ? ಇದು ಹೇಗೆ ಸಾಧ್ಯ ಮುಂತಾದ ಪ್ರಶ್ನೆಗಳು ನಿಮ್ಮನ್ನು ಕಾಡಿಸದೆ ಇರದು.

ಸಣ್ಣ ವಯಸ್ಸಲ್ಲೇ ಹೃದಯಾಘಾತ ಕಾಡಿದ್ಯಾಕೆ?

ಅದು ಇರುವುದೇ ಹಾಗೆ. ಎರಡನೇ ಬಾರಿಗೆ ಆಸ್ಪತ್ರೆಗೆ ಹೋದಾಗಲೇ ಗೊತ್ತಾಗುವುದು- ಮೊದಲನೆಯದು ಸಂಭವಿಸಿತ್ತು ಅಂತ. ಇದು ನೀವು ನಿದ್ರೆಯಲ್ಲಿದ್ದಾಗಲೂ ಸಂಭವಿಸಿರಬಹುದು. ಇದೊಂದು ಕೆಟ್ಟ ಕನಸು ಎಂದುಕೊಳ್ಳುತ್ತ ನೀವು ಎದ್ದಿರಬಹುದು. ಬೆವರಿರಬಹುದು. ಅದರೆ ನಿಮಗದು ಗೊತ್ತಾಗಿಯೇ ಇಲ್ಲದಿರಬಹುದು.ಪರಿಣತ ವೈದ್ಯರು ಹೇಳುವಂತೆ ಈ ಫ್ಯಾಕ್ಟರ್‌ಗಳು ಇರುವವರಿಗೆ ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ನ ಸಾಧ್ಯತೆಗಳು ಹೆಚ್ಚು- ಕುಟುಂಬದಲ್ಲಿ ಹಿರಿಯರಿಗೆ ಹಾರ್ಟ್‌ ಅಟ್ಯಾಕ್‌ನ ಹಿನ್ನೆಲೆ ಇದ್ದರೆ, ಅತ್ಯಧಿಕ ಬ್ಲಡ್‌ಪ್ರೆಶರ್‌ ಇದ್ದರೆ, ಡಯಾಬಿಟೀಸ್‌ ಇದ್ದವರಿಗೆ, ಅತ್ಯಧಿಕ ಒತ್ತಡ ಅನುಭವಿಸುತ್ತಿರುವವರಿಗೆ, ಸ್ಮೋಕಿಂಗ್‌ ಅಬ್ಯಾಸ ಇರುವವರಿಗೆ, ಹೆಚ್ಚು ಕೊಲೆಸ್ಟ್ರಾಲ್‌ ಹೊಂದಿರುವವರಿಗೆ. ಹಾಗಿದ್ದರೆ ಈ ಸೈಲೆಂಟ್‌ ಹೃದಯಾಘಾತವನ್ನು ಗುರುತಿಸುವ ಸೂಚನೆ ಯಾವುದು?

ಉಸಿರಿಗಾಗಿ ಚಡಪಡಿಕೆ
ಇದ್ದಕ್ಕಿದ್ದಂತೆ ನಿಮ್ಮ ಶ್ವಾಸಕೋಶ ಉಸಿರಿಗಾಗಿ ಚಡಪಡಿಸಲು ಆರಂಭಿಸಿದರೆ ನೀವು ಹುಷಾರಾಗಬೇಕು. ಅದು ಉಸಿರಾಟದ ಸಮಸ್ಯೆಯಿಂದಲೂ ಇರಬಹುದು. ನಿಮ್ಮ ಶ್ವಾಸಕೋಶ ಹಾಗೂ ಹೃದಯಗಳು ಪ್ರತಿ ಕ್ಷಣವೂ ರಕ್ತಕ್ಕೆ ಸಾಕಷ್ಟು ಆಮ್ಲಜನಕ ಒದಗಿಸಲಲು ಯತ್ನಿಸುತ್ತಾ ಇರುತ್ತವೆ. ಹೃದಯದ ಪೂರೈಕೆಯಲ್ಲಿ ಏನಾದರೂ ವ್ಯತ್ಯಾಸವಾದರೆ ಸಹಜವಾಗಿಯೇ ಶ್ವಾಸಕೋಶ ಒದ್ದಾಡಲು  ಆರಂಭಿಸುತ್ತದೆ.

ಹೃದಯದಲ್ಲಿ ಡಬಡಬ
ಉಸಿರಿನಲ್ಲಿ ಉಂಟಾಗುವ ವ್ಯತ್ಯಾಸ, ರಕ್ತನಾಳಗಳು ಆಮ್ಲಜನಕಕ್ಕಾಗಿ ಒದ್ದಾಟ ಮಾಡುವುದರಿಂದ ಸಹಜವಾಗಿಯೇ ಹೃದಯ ಅತಿ ವೇಗವಾಗಿ ರಕ್ತ ಪಂಪ್‌ ಮಾಡಲು ಶುರು ಮಾಡುತ್ತದೆ. ಹೃದಯದ ಪಂಪ್‌ಗಳು ತೀವ್ರ ವೇಗದಲ್ಲಿ ದುಡಿಯಲು ಶುರು ಮಾಡುತ್ತವೆ. ಇದು ನಿಮ್ಮ ಅರಿವಿಗೇ ಬರುತ್ತದೆ.

ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಂಡರೆ ಹಾರ್ಟ್ ಅಟ್ಯಾಕ್ ಸಮಸ್ಯೆ ಹೆಚ್ಚು

ದಣಿವು, ಸುಸ್ತು
ಹೃದಯ ಚಡಪಡಿಕೆಯ ಜೊತೆಗೆ ದಣಿವುಮ ಸುಸ್ತು ದಾಳಿ ಮಾಡುತ್ತದೆ. ಹಿಂಗಾಲುಗಳ ಶಕ್ತಿಯಎಲ್ಲ ಸೋರಿಹೋದಂತೆ ಆಗಿ, ಕುಸಿದು ಕೂರುವ ಅನಿಸಬಹುದು. ಹಿಮ್ಮಡಿಗಳಲ್ಲಿ ನಡೆಯುವುದೇ ಕಷ್ಟವಾಗಬಹುದು. ತೊಡೆಗಳು ದಣಿಯಬಹುದು. ಇವು ಹೀಗೆಲ್ಲ ಆಗುವುದು ಯಾಕೆಂದರೆ, ಇಡೀ ದೇಹದ ಶಕ್ತಿಯೆಲ್ಲ ಹೃದಯ ಕಡೆಗೆ ಸಾಗುವುದು. ಆಗ ಬೇರೇನೂ ಚಟುವಟಿಕೆ ಸಾಧ್ಯವಿಲ್ಲ.

ವಾಕರಿಕೆ, ಎದೆಯುರಿ
ಹೃದಯಾಘಾತದ ಪರಿಣಾಮ ಜೀರ್ಣಾಂಗ ವ್ಯೂಹದಲ್ಲೂ ಕಾಣಿಸುತ್ತದೆ. ಅದಕ್ಕೆ ಕಾರಣ, ಹೃದಯದಿಂದ ಕಡಿಮೆ ಆಮ್ಲಜನಕವಿರುವ ರಕ್ತದ ಪೂರೈಕೆಯಾಗುವುದು. ಇದರಿಂದ ವಾಂತಿ ಬರುವಂತೆ ಆಗಬಹುದು, ಅಜೀರ್ಣ ಆಗಬಹುದು. ಹೊಟ್ಟೆನೋವು ಶುರುವಾಗಬಹುದು. ಗ್ಯಾಸ್ಟ್ರಿಕ್‌ನ ಹಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಎದೆಯ ಉರಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಗ್ಯಾಸ್ಟ್ರಿಕ್‌ ಅಲ್ಲ.

ಅಮಲು, ತೊದಲು
ಆಮ್ಲಜನಕ ಕಡಿಮೆ ಇರುವ ರಕ್ತದ ಪೂರೈಕೆ ಆಗುವುದರಿಂದ ಮೆದುಳು ಸುತ್ತಮುತ್ತ ಏನಾಗುತ್ತಿದೆ ಎಂದು ಗ್ರಹಿಸುವ ಶಕ್ತಿ ಕಳೆದುಕೊಳ್ಳುತ್ತದೆ. ಯೋಚನೆಗಳು ಸ್ಪಷ್ಟತೆ ಕಳೆದುಕೊಳ್ಳುತ್ತವೆ. ದೇಹ ತೂರಾಡಬಹುದು. ಮಾತುಗಳೂ ತೊದಲಬಹುದು.

ಹಾಗಿದ್ದರೆ ಇದರಿಂದ ಪಾರಾಗುವ ಬಗೆ ಹೇಗೆ? ಲೈಫ್‌ಸ್ಟೈಲ್‌ ಬದಲಾವಣೆಗಳೇ ಮುಖ್ಯ. ಆರೋಗ್ಯಕರ ಆಹಾರ, ಸಾಕಷ್ಟು ವ್ಯಾಯಾಮ, ಸಾಕೆನಿಸುವಷ್ಟು ನಿದ್ರೆ.