Asianet Suvarna News Asianet Suvarna News

Survey Report : ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ ಈ ಹೆರಿಗೆ ವಿಧಾನ

ಆರೋಗ್ಯಕರ ಮಗು ಜನಿಸ್ಬೇಕು ಎಂಬುದು ಎಲ್ಲರ ಆಶಯ. ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿರಬೇಕೆಂದು ಬಯಸ್ತೇವೆ. ಅದೇ ಕಾರಣಕ್ಕೆ ವೈದ್ಯರು ಹೇಳಿದ ಹೆರಿಗೆಗೆ ಸಿದ್ಧರಾಗ್ತೇವೆ. ಇತ್ತೀಚಿನ ದಿನಗಳಲ್ಲಿ ನಾರ್ಮಲ್ ಡಿಲೇವರಿಗಿಂತ ಸಿಸೇರಿಯನ್ ಹೆಚ್ಚಾಗ್ತಿದೆಯಂತೆ.
 

Survey Shows That 41 Lakh Child Are Born From Cesarean Delivery
Author
Bangalore, First Published May 13, 2022, 6:20 PM IST


ಹೆರಿಗೆ (Delivery) ಮಹಿಳೆಗೆ ಪುನರ್ಜನ್ಮ ಎನ್ನಲಾಗುತ್ತದೆ. ಗರ್ಭಿಣಿ (Pregnant) ಆರೋಗ್ಯ (Health) ಕಾಪಾಡಿಕೊಳ್ಳುವುದು ಬಹಳ ಮುಖ್ಯ.  ಹೆರಿಗೆಯನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ. ಒಂದು ನಾರ್ಮಲ್ (Normal) ಹೆರಿಗೆಯಾದ್ರೆ ಇನ್ನೊಂದು ಸಿಸೇರಿಯನ್ (C-section). ಗರ್ಭಿಣಿ  ಮತ್ತು ಆಕೆಯ ಮಗು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಸಿಸೇರಿಯನ್ನ ಮಾಡಲಾಗುತ್ತದೆ.  ಭಾರತದಲ್ಲಿ ಹಿಂದಿನ ಕಾಲದಲ್ಲಿ ಸಿಸೇರಿಯನ್ ಬಹಳ ಅಪರೂಪವಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆ (Surgery) ಯ ಮೂಲಕ ಜನಿಸುವ ಮಕ್ಕಳ (Children) ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ.  ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ (NHFS)-5 ವರದಿ ಪ್ರಕಾರ, ಸಿಸೇರಿಯನ್ ಹೆರಿಗೆಯ ಪ್ರಕರಣಗಳು ಸದ್ಯ ವೇಗವಾಗಿ ಹೆಚ್ಚುತ್ತಿದೆಯಂತೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ (NHFS)-5 ರ ವರದಿಯಲ್ಲಿ ಏನಿದೆ? : ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ 240 ಮಿಲಿಯನ್ ಶಿಶುಗಳು ಜನಿಸುತ್ತವೆ. ಅದರಲ್ಲಿ ಸುಮಾರು 80 ಪ್ರತಿಶತದಷ್ಟು ಶಿಶುಗಳು ಆಸ್ಪತ್ರೆ (Hospital) ಗಳಲ್ಲಿ ಜನಿಸುತ್ತವೆ. ಅದರಲ್ಲಿ 21.5 ಪ್ರತಿಶತ ಅಂದರೆ ಸುಮಾರು 41 ಲಕ್ಷ ಶಿಶುಗಳು ಪ್ರತಿ ವರ್ಷ ಸಿಸೇರಿಯನ್ ಮೂಲಕ ಜನಿಸುತ್ತವೆಯಂತೆ.

ನೈಟ್​ಶಿಫ್ಟ್​ನಲ್ಲಿ ಕೆಲಸ ಮಾಡುವವರ ಆಹಾರಕ್ರಮ ಹೀಗಿದ್ದರೆ ಆರೋಗ್ಯವಾಗಿರ್ಬೋದು

ಸಮೀಕ್ಷೆ (Survey) ಯ ಪ್ರಕಾರ, 2019-2021ರಲ್ಲಿ ಶೇಕಡಾ 21.5ರಷ್ಟು ಸಿ-ಸೆಕ್ಷನ್‌ ಪ್ರಕರಣ (Case) ಗಳು ದಾಖಲಾಗಿದ್ದವಂತೆ. 2015-2016ರ ಸಮೀಕ್ಷೆಯ ಪ್ರಕಾರ, ನಗರ ಪ್ರದೇಶ (Urban Area) ದ ಖಾಸಗಿ ಆಸ್ಪತ್ರೆ (Private Hospital) ಗಳಲ್ಲಿ 2 ರಲ್ಲಿ 1 ಹೆರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಆಗುತ್ತಿದೆ. ಆದರೆ 2015-2016 ರ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಸಿಸೇರಿಯನ್ ಹೆರಿಗೆ ಪ್ರಕರಣಗಳು ಶೇಕಡಾ 17.2 ರಷ್ಟಿತ್ತು.  ಅಂದರೆ ಈ ಪ್ರಕರಣಗಳು 5 ವರ್ಷಗಳಲ್ಲಿ 4 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಹಿಂದೆ 2005-2006ರ ಸಮೀಕ್ಷೆಯ ಪ್ರಕಾರ, ಸಿಸೇರಿಯನ್ ಹೆರಿಗೆ ಪ್ರಕರಣ  ಶೇಕಡಾ 8.5ರಷ್ಟು ಮಾತ್ರ ದಾಖಲಾಗಿತ್ತು.

ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಕರಣಗಳು ಹೆಚ್ಚು : ಸಮೀಕ್ಷೆ ಪ್ರಕಾರ, ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಹೆಚ್ಚಿನ ಹಣ ವಸೂಲಿ ಮಾಡಲು, ಖಾಸಗಿ ಆಸ್ಪತ್ರೆಗಳು ನಾರ್ಮಲ್ ಹೆರಿಗೆಯನ್ನು ಸಿಸೇರಿಯನ್ ಹೆರಿಗೆಯಾಗಿ ಮಾಡ್ತಿವೆ ಎಂಬ ಸುದ್ದಿಯೂ ಇದೆ.  ಇತ್ತೀಚಿನ ಅಂಕಿಅಂಶಗಳು ಕೂಡ ಅದನ್ನೇ ಸೂಚಿಸುತ್ತವೆ. ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಶೇಕಡಾ 47.4ರಷ್ಟು ಸಿಸೇರಿಯನ್ ಹೆರಿಗೆ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಸರಾಸರಿ ಪ್ರಮಾಣ ನಗರಗಳಲ್ಲಿದೆ. ನಗರದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಶೇಕಡಾ 49.3ರಷ್ಟಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 46ರಷ್ಟಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. 

NHFS-5 ಸಮೀಕ್ಷೆಯ ಪ್ರಕಾರ, ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಶೇಕಡಾ 14.3 ರಷ್ಟು ಸಿಸೇರಿಯನ್ ಹೆರಿಗೆ ನಡೆಯುತ್ತಿದೆ.  ಮತ್ತೊಂದೆಡೆ, NHFS-4 ರ ಸಮೀಕ್ಷೆಯಲ್ಲಿ, ಈ ದರವು ಶೇಕಡಾ 11.9ರಷ್ಟಿತ್ತು. ಅಂಕಿ ಅಂಶಗಳ ಪ್ರಕಾರ, ಸರಕಾರಿ ಆರೋಗ್ಯ ಕೇಂದ್ರಗಳಲ್ಲೂ ಸಿಸೇರಿಯನ್ ಹೆರಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಈ ಅಂಕಿಅಂಶಗಳು ಖಾಸಗಿ ಆಸ್ಪತ್ರೆಗೆ ಹೋಲಿಸಿದ್ರೆ ಕಡಿಮೆಯಿದೆ.   

ಮೊಟ್ಟೆ ಮಾತ್ರವಲ್ಲ, ಅದರ ಸಿಪ್ಪೆಗಳಲ್ಲಡಗಿದೆ ಆರೋಗ್ಯ…. ಕೂದಲಿಗೆ ಬೆಸ್ಟ್

NHFS-5 ರ ಸಮೀಕ್ಷೆಯ ಪ್ರಕಾರ, ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಶೇಕಡಾ 32.3 ರಷ್ಟು ಹೆರಿಗೆಗಳು ಸಿಸೇರಿಯನ್ ಮೂಲಕ ಆಗುತ್ತಿವೆಯಂತೆ. ಅಂದರೆ ಮೂರರಲ್ಲಿ ಒಂದು ಮಗು ಸಿಸೇರಿಯನ್ ಮೂಲಕ ಜನಿಸುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 17.6ರಷ್ಟು  ಹೆರಿಗೆಗಳು ಶಸ್ತ್ರಚಿಕಿತ್ಸೆಯಿಂದ ನಡೆಯುತ್ತಿವೆ. NHFS-4 ಸಮೀಕ್ಷೆಯ ಅಂಕಿಅಂಶಗಳನ್ನು ನೋಡಿದರೆ, ಸಿಸೇರಿಯನ್ ಹೆರಿಗೆಗಳು ನಗರಗಳಲ್ಲಿ ಶೇಕಡಾ 28.2 ಪ್ರತಿಶತ ಮತ್ತು ಗ್ರಾಮೀಣದಲ್ಲಿ 12.8 ಪ್ರತಿಶತದಷ್ಟು ನಡೆದಿದೆ. 

Follow Us:
Download App:
  • android
  • ios