ಹಲ್ಲಿನ ಆರೋಗ್ಯಕ್ಕಾಗಿ ಯಾವ ಆಹಾರ ತಿನ್ನೋದು ಒಳ್ಳೆಯದು ?
ಆರೋಗ್ಯ (Health)ವಂತ ಹಲ್ಲುಗಳು (Teeth) ಯಾರಿಗೆ ತಾನೇ ಬೇಡ ಹೇಳಿ. ಹಲ್ಲು ಚೆನ್ನಾಗಿದ್ರೆ ತಾನೇ ನಾವು ಇಷ್ಟಪಟ್ಟಿದ್ದೆನ್ನಲಾ ತಿನ್ನೋಕಾಗೋದು. ಹಾಗಿದ್ರೆ ಅತ್ಯುತ್ತಮ ಹಲ್ಲುಗಳನ್ನು ಕೊನೆವರೆಗೂ ನಿಮ್ಮದಾಗಿಸಿಕೊಳ್ಳಲು ಯಾವ ಆಹಾರ (Food)ಗಳನ್ನು ಸೇವಿಸಬೇಕು ತಿಳ್ಕೊಳ್ಳಿ.
ಹಲ್ಲುಗಳು (Teeth) ಚೆನ್ನಾಗಿರಬೇಕೆಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ. ಆದರೆ ಹಲ್ಲುಗಳು ಸದೃಢವಾಗಿ ಆರೋಗ್ಯ (Health)ವಾಗಿರಬೇಕಾದರೆ ಅದರ ಬಗ್ಗೆ ನಾವು ಹೆಚ್ಚು ಗಮನಹರಿಸಬೇಕು. ಹಲ್ಲಿನ ಆರೋಗ್ಯಕ್ಕಾಗಿ ನಾವು ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಮುಖ್ಯವಾಗುತ್ತದೆ. ಪ್ರತಿದಿನ ಎರಡು ಸಾರಿ ಹಲ್ಲುಗಳನ್ನು ಉಜ್ಜುವುದು, ಕಡಿಮೆ ಸಿಹಿ ಪದಾರ್ಥಗಳನ್ನು ತಿನ್ನುವುದು, ಮೌತ್ ವಾಷ್ (Mouth Wash)ಗಳನ್ನು ಬಳಸುವುದು ಹಾಗೂ ನಿಯಮಿತವಾಗಿ ದಂತವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳ್ಳುವುದು ಇವೆಲ್ಲಾ ಆರೋಗ್ಯವಂತ ಹಲ್ಲುಗಳಿಗೆ ಮುಖ್ಯವಾದ ಕ್ರಮಗಳು. ಆದರೆ, ನಮ್ಮಲ್ಲಿ ನೈಸರ್ಗಿಕವಾಗಿ ಲಭ್ಯವಿರುವ ಹಲವಾರು ಆಹಾರ (Food) ಪದಾರ್ಥಗಳಿಂದ ದಂತ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ
ಹಲ್ಲಿನ ಆರೋಗ್ಯಕ್ಕೆ ಯಾವ ಆಹಾರ ಸೇವಿಸಬೇಕು ?
ಉಪಯುಕ್ತ ಆಹಾರ ಪದಾರ್ಥಗಳು
ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ತಿನ್ನಬೇಕು. ಉದಾಹರಣೆಗೆ ಹಾಲು, ಮೊಟ್ಟೆಯ ಯೋಕ್ (ಮಧ್ಯದ ಭಾಗ) ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿಯನ್ನು ಹೊಂದಿರುವ ಉತ್ತಮ ಆಹಾರ ಪದಾರ್ಥಗಳಾಗಿವೆ. ಸೂರ್ಯನ ಬಿಸಿಲಿನಲ್ಲಿ ದಿನಕ್ಕೆರಡು ಸಾರಿಯಾದರೂ ನಾವು ನಿಂತಿದ್ದೇ ಆದಲ್ಲಿ ದೇಹಕ್ಕೆ ವಿಟಮಿನ್ ‘ಡಿ’ ದೊರಕುತ್ತದೆ. ಇದು ದೇಹದಲ್ಲಿ ಹಾಗೂ ಹಲ್ಲು ಹಾಗೂ ಎಲುಬುಗಳಲ್ಲಿ ಕ್ಯಾಲ್ಸಿಯಂನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿವೆ. ಆದರಿಂದ ಹಾಲು, ಮೊಟ್ಟೆ, ಸೂರ್ಯನ ಕಿರಣಗಳು ಹಲ್ಲುಗಳಿಗೆ ಉಪಯುಕ್ತ.
ಹಳದಿ ಹಲ್ಲಿಗೆ ನೀಡಿ ಮುಕ್ತಿ, ಪಡೆಯಿರಿ ಬಿಳಿ ದಂತಪಂಕ್ತಿ
ಮೊಸರು ಹಾಗೂ ಚೀಜ್
ಕ್ಯಾಲ್ಸಿಯಂ ಹಾಗೂ ಪೊಸ್ಫೋರಸ್ ಅಂಶವನ್ನು ಹೇರಳವಾಗಿ ಹೊಂದಿರುವ ಮೊಸರು (Curd) ಹಾಗೂ ಚೀಜ್‌ಗಳು ನಮ್ಮ ಹಲ್ಲುಗಳಿಗೆ ತುಂಬಾ ಒಳ್ಳೆಯದು. ಹಲ್ಲಿನ ಮೇಲ್ಪದರಾದ ಎನಾಮೆಲ್‌ನ್ನು ಗಟ್ಟಿಯಾಗಿ ಕಾಪಾಡಿಕೊಂಡು ಹೋಗಲು ಚೀಜ್‌ನಲ್ಲಿರುವ ಕೆಸೀನ್ ಎಂಬ ಪ್ರೋಟಿನ್ ಸಹಾಯಕ.
ಹಣ್ಣುಗಳು
ಋತುಗಳಿಗೆ ಅನುಗುಣವಾಗಿ ಲಭ್ಯವಿರುವ ಯಾವುದೇ ಹಣ್ಣುಗಳು (Fruits) ನಮ್ಮ ದೇಹಕ್ಕೆ ಬೇಕಾಗಿರುವ ಜೀವಸತ್ವಗಳನ್ನು, ಸಸಾರಜನಕಗಳನ್ನು ಹಾಗೂ ಖನಿಜಗಳನ್ನು ಒದಗಿಸುತ್ತವೆ. ಹಲ್ಲುಗಳನ್ನು ಶುಭ್ರವಾಗಿ ಇಡುವುದಲ್ಲದೆ ನಮ್ಮ ಒಸಡುಗಳನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಅವು ಕಾರಣವಾಗುತ್ತವೆ. ಹಲ್ಲುಗಳ ಸಂಧಿಗಳನ್ನು ಶುಭ್ರವಾಗಿಡಲು ಅವು ಸಹಾಯ ಮಾಡುತ್ತದೆ. ಅಲ್ಲದೆ ಬಾಯಿಯ ದುರ್ವಾಸನೆಯನ್ನೂ ಅದು ತಡೆಗಟ್ಟುತ್ತದೆ.
ಮಾಂಸ ಹಾಗೂ ಮೀನು
ಮಾಂಸ ಹಾಗೂ ಮೀನು (Fish) ಫಾಸ್ಫೊರಸ್ ಹಾಗೂ ಕ್ಯಾಲ್ಸಿಯಂ ಅಂಶಗಳನ್ನು ಹೊಂದಿದ್ದು, ಹಲ್ಲುಗಳು ಹಾಗೂ ಎಲುಬುಗಳ ಆರೋಗ್ಯಕ್ಕೆ ತುಂಬಾ ಉತ್ತಮ
ವಿಸ್ಡಮ್ ಟೂತ್ ತೆಗಿಸಿಕೊಳ್ಳದಿದ್ದರೆ, ಬುದ್ಧಿಶಕ್ತಿ ಕಡಿಮೆಯಾಗುತ್ತಾ?
ಸೊಪ್ಪು ತರಕಾರಿಗಳು
ಇವಿಷ್ಟೇ ಅಲ್ಲದೆ, ಬ್ರೊಕೋಲಿ, ಪಾಲಕ್ ಮೊದಲಾದ ಹಸಿರು ತರಕಾರಿಗಳು (Vegetables) ದೇಹಕ್ಕೆ, ನಮ್ಮ ಹಲ್ಲಿನ ಆರೋಗ್ಯಕ್ಕೆ ಬೇಕಾಗುವ ಅನೇಕ ಖನಿಜಗಳನ್ನು, ಜೀವಸತ್ವಗಳನ್ನು ಒದಗಿಸುತ್ತವೆ. ಗಜ್ಜರಿ, ಸೌತೆಕಾಯಿ, ಬೀಟ್‌ರೂಟ್, ಸಿಹಿಗೆಣಸು ಇನ್ನಿತರ ಗಡ್ಡೆಗಳ ಸೇವನೆಯಿಂದ ನಮ್ಮ ದೇಹಕ್ಕೆ ಬೇಕಾಗಿರುವ ನಾರಿನಂಶ ಜೊತೆಗೆ ಜೀವಸತ್ವಗಳು ಹೆಚ್ಚಿಸುತ್ತವೆ. ಇಂತಹ ಗಡ್ಡೆಗಳನ್ನು ಹಸಿಯಾಗಿ ಸೇವಿಸಿದಾಗ ನಮ್ಮ ಲಾಲಾರಸ, ಉತ್ಪತ್ತಿಯಾಗಿ ಹಲ್ಲುಗಳ ಸಂದುಗಳಲ್ಲಿ ಕುಳಿತಿರುವ ಆಹಾರ ಕಣಗಳನ್ನು ಶುಭ್ರಗೊಳಿಸಿ ಹಲ್ಲುಗಳು ಹೊಳೆಯುವಂತೆ ಮಾಡುತ್ತವೆ.
ಲೇಖಕರು: ಡಾ. ರಾಘವೇಂದ್ರ ಕಟ್ಟಿ