ದಿನಕಳೆದಂತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಂಟಲು, ಮೂಗಿನಲ್ಲಿ ವೈರಸ್ ನಿಂತು ನಂತರ ದೇಹದ ತುಂಬ ಬಾಧಿಸುವುದು ಕೊರೋನಾದ ವೀಶೇಷತೆ. ಎಲ್ಲ ಕೊರೋನಾ ವೈರಸ್‌ಗಳೂ ಅಪಾಯವಲ್ಲ, ಆದರೆ ಸಾರ್ಸ್‌-ಕೊವಿಡ್-2(SARS-CoV-2) ಅಪಾಯಕಾರಿ.

ಇದರಲ್ಲಿ ನೇರವಾಗಿ ಉಸಿರಾಟಕ್ಕೇ ತೊಂದರೆ ಉಂಟಾಗುತ್ತದೆ. ಶ್ವಾಸನಾಳ ವೈರಸ್‌ನಿಂದ ಬಾಧಿಸಲಪಡುತ್ತದೆ. ಕೆಲವರಲ್ಲಿ ಕೊರೋನಾ ಲಕ್ಷಣಗಳೂ ಕಾಣಿಸಿಕೊಂಡರೆ ಇನ್ನು ಕೆಲವರಲ್ಲಿ ಯಾವುದೇ ಲಕ್ಷಣ ಕಾಣಿಸುವುದಿಲ್ಲ.

ವರ್ಷಾಂತ್ಯಕ್ಕೆ ಕೊರೋನಾಗೆ ಲಸಿಕೆ, ಶೀಘ್ರ ದರ ನಿಗದಿ!

ಜ್ವರ ಅಥವಾ ಚಳಿ, ಕೆಮ್ಮು, ಉಸಿರಾಟದ ತೊಂದರೆ, ಮಸಲ್, ದೇಹದ ನೋವು, ತಲೆನೋವು, ನಾಲಗೆಯ ರುಚಿ ಹೋಗುವುದು, ವಾಸನೆ ಗ್ರಹಿಕೆ ಹೋಗುವುದು, ರನ್ನಿ ನೋಸ್‌, ವಾಂತಿ ಕೊರೋನಾದ ಲಕ್ಷಣಗಳು. 

ಇದೀಗ ಕೊರೋನಾ ಲಕ್ಷಣಕ್ಕೆ ಇನ್ನೊಂದು ಅಂಶ ಸೇರ್ಪಡೆಯಾಗಿದೆ. ಅಮೆರಿಕದ ಚಿಕಾಗೋ ವೈದ್ಯರು ನಡೆಸಿದ ಅಧ್ಯಯನದಲ್ಲಿ ಈ ಹೊಸ ಲಕ್ಷಣದ ಬಗ್ಗೆ ತಿಳಿದು ಬಂದಿದೆ. ಇತ್ತೀಚೆಗೆ ಅಲ್ಲಿ 62 ವರ್ಷದ ಕೊರೋನಾ ಸೋಂಕಿತನಲ್ಲಿ ನಿರಂತರ ಬಿಕ್ಕಳಿಕೆಯೂ ಕಂಡು ಬಂದಿದೆ.

ಅಮೆರಿಕ, ಬ್ರೆಜಿಲ್‌ಗಿಂದ ಭಾರತದಲ್ಲೇ ಸೋಂಕು ವೇಗ ಹೆಚ್ಚು!

ಆಸ್ಪತ್ರೆಗೆ ದಾಖಲಾಗುವ ಮುನ್ನ ಈ ಸೋಂಕಿತ ಸತತ ನಾಲ್ಕು ದಿನ ಬಿಕ್ಕಳಿಕೆಯಿಂದ ಬಳಲಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ನಂತರದಲ್ಲಿ ದಿಢೀರನೆ ದೇಹದ ಉಷ್ನಾಂತ ಹೆಚ್ಚಾಗಿ ಜ್ವರ ಕಂಡು ಬಂದಿದೆ.