ನವದೆಹಲಿ(ಆ.11): ಮಾರಕ ಕೊರೋನಾ ವೈರಸ್‌ಗೆ ಈ ವರ್ಷದ ಅಂತ್ಯದ ವೇಳೆಗೆ ಲಸಿಕೆ ಸಿದ್ಧವಾಗಲಿದೆ ಎಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ತಿಳಿಸಿದೆ. ಕೊರೋನಾ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಸಂಬಂಧ ಬ್ರಿಟನ್‌ನ ಅಸ್ಟ್ರಾ ಜೆನೆಕಾ ಸಂಸ್ಥೆಯ ಜೊತೆ ಸೆರಂ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, 2 ತಿಂಗಳಿನಲ್ಲಿ ಲಸಿಕೆಯ ಅಂತಿಮ ದರವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಈ ವರ್ಷದ ಅಂತ್ಯಕ್ಕೆ ನಾವು ಕೊರೋನಾ ಲಸಿಕೆಯನ್ನು ಹೊಂದಲಿದ್ದೇವೆ. ಐಸಿಎಂಆರ್‌ ಜೊತೆಗೂಡಿ ಭಾರತದಲ್ಲಿ ಕೆಲವು ಸಾವಿರ ರೋಗಿಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಲಾಗುವುದು ಎಂದು ಸೆರಂ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಪೂನಾವಾಲಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಲಸಿಕೆ ಪ್ರಯೋಗದ ಭಾಗವಾಗಿ ಪುಣೆ ಹಾಗೂ ಮುಂಬೈನಲ್ಲಿ 4000 ದಿಂದ 5000 ಜನರ ಮೇಲೆ ಆಗಸ್ಟ್‌ನಲ್ಲಿ ಅಂತ್ಯದ ವೇಳೆಗೆ ಲಸಿಕೆಯನ್ನು ಪ್ರಯೋಗಿಸಲು ಸೆರಂ ಸಂಸ್ಥೆ ಉದ್ದೇಶಿಸಿದೆ. ಈ ವರ್ಷದ ಅಂತ್ಯದ ವೇಳೆಗೆ 30ರಿಂದ 40 ಕೋಟಿ ಲಸಿಕೆ ಉತ್ಪಾದಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.