ಸ್ವಯಂ ಚಿಕಿತ್ಸೆಗೆ Sound Healing Therapy ಮಾಡಿ ನೋಡಿ!

ಹಲವು ಕಾರಣಗಳಿಂದ ನಮ್ಮ ಆಲೋಚನೆ ಮತ್ತು ಭಾವನೆಯಲ್ಲಿ ಹಾಗೂ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಇದು ಗಾಳಿಯ ಮೂಲಕ ದೇಹವನ್ನು ವೈಬ್ರೇಶನ್ ಮೂಲಕ ಪ್ರವೇಶಿಸುತ್ತದೆ. ಇದನ್ನು ಸೌಂಡ್ ಹೀಲಿಂಗ್‌ನಿAದ ನಮ್ಮ ದೇಹದಲ್ಲಾದ, ಆರೋಗ್ಯದಲ್ಲಾದ ಬದಲಾವಣೆಗಳನ್ನು ಪರಿಹರಿಸಿಕೊಳ್ಳಬಹುದು. ಏನಿದು ಸೌಂಡ್ ಹೀಲಿಂಗ್? ಈ ಬಗ್ಗೆ ಇಲ್ಲಿದೆ ಮಾಹಿತಿ.
 

Sound Healing can helps to heal yourself tips and benefits for healthy life

ಪ್ರತಿಯೊಂದು ಆಲೋಚನೆಯ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು. ವ್ಯಕ್ತಿಯ ಆಲೋಚನೆಗಳು ಕಂಪನಗಳ ರೂಪದಲ್ಲಿ ದೇಹವನ್ನು ಪ್ರವೇಶಿಸುತ್ತವೆ. ನಾವು ಕರೆಯುವ ಭಾವನೆಯು ವಾಸ್ತವವಾಗಿ ಅದು ಶಕ್ತಿ ಮತ್ತು ಚಲನೆಯ ಸಮ್ಮಿಲನವಾಗಿದೆ. ದೇಹವನ್ನು ಪ್ರವೇಶಿಸುವ ಪ್ರತಿಯೊಂದು ಶಕ್ತಿಯು ಉತ್ಪಾದಕ ಅಥವಾ ವಿನಾಶಕಾರಿ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ. ಆಲೋಚನೆ ಮತ್ತು ಭಾವನೆಗಳು ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಅಡ್ಡಿಪಡಿಸುವ ಶಕ್ತಿಯನ್ನು ಹೊಂದಿವೆ. ಈ ತೊಂದರೆಯಿಂದ ಹೊರಬರಲು ಯೋಗ, ಪ್ರಾಣಾಯಾಮದ ಒಂದು ವಿಧಾನವಾದ ಧ್ವನಿ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದೆ. ದೇಹ ಪ್ರವೇಶಿಸುವ ವೈಬ್ರೇಶನ್ ನಮ್ಮ ಯೋಚನೆಯನ್ನು ಪ್ರಕ್ರಿಯೆಗೊಳಿಸುವ ದೀರ್ಘ ಪ್ರಕ್ರಿಯೆ ಇದೆ. ಇದು ಕಿವಿಯ ನರಗಳ ಮೂಲಕ ದೇಹವನ್ನು ಪ್ರವೇಶಿಸಿ ನಂತರ ಮೆದುಳಿಗೆ ತಲುಪುತ್ತದೆ ಹಾಗೂ ಇಡೀ ದೇಹವನ್ನು ಆವರಿಸುತ್ತದೆ. ಈ ವೈಬ್ರೇಷನ್‌ಗೆ ಅನುಗುಣವಾಗಿ ದೇಹವು ಪ್ರತಿಕ್ರಿಯಿಸುತ್ತದೆ. ಈ ಸೌಂಡ್ ಹೀಲಿಂಗ್ ಥೆರಪಿಯು ಮನಸ್ಸು ಮತ್ತು ದೇಹದ ನಡುವೆ ಸಂಪರ್ಕ ಕಲ್ಪಸುವ ಉತ್ತಮ ಮಾರ್ಗವಾಗಿದೆ. ಈ ಸೌಂಡ್ ಹೀಲಿಂಗ್ ಎಂಬುದು ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತದೆ. ಭಾವನೆಗಳ ಹಂತ, ಮಾನಸಿಕ ಹಂತ ಹಾಗೂ ದೈಹಿಕ ಹಂತವಾಗಿವೆ.

ಈ ಸೌಂಡ್ ಹೀಲಿಂಗ್ ವಿಧಾನ
ಈ ವೈಬ್ರೇಶನ್ (Vibration) ಸಮಸ್ಯೆಯಿಂದ ಅನುಭವಿಸುವ ತೊಂದರೆಯಿಂದ ಹೊರಬರಲು ಮಾರ್ಗಗಳು ಇಲ್ಲಿವೆ. 
1.ಭ್ರಮರಿ ಪ್ರಾಣಾಯಾಮ (ಹಮ್ಮಿಂಗ್ ಬೀ ಬ್ರೀತ್ ವ್ಯಾಯಾಮ) ಮಾಡಿ. 
2.ಇದು ಉಸಿರಾಟದ ವ್ಯಾಯಾಮವಾಗಿದ್ದು, ಮನಸ್ಸು ಮತ್ತು ದೇಹವನ್ನು (Mind and Body) ಜೋಡಿಸಲು ಉತ್ತಮ ಮಾರ್ಗವಾಗುದೆ. 
3.ಈ ವ್ಯಾಯಾಮ ಮಾಡುವುದಕ್ಕೆ ಇಂತಹದ್ದೇ ಸಮಯ ಎಂದೇನಿಲ್ಲ. ಯಾವುದೇ ಸಮಯದಲ್ಲಾದರೂ ಅಭ್ಯಾಸ ಮಾಡಬಹುದು.
4.ಈ ವ್ಯಾಯಾಮ ಮಾಡುವಾಗ ಬೆನ್ನು ಮೂಳೆ ನೇರವಾಗಿರಬೇಕು. ಅಂದರೆ ನೇರ ಭಂಗಿಯಲ್ಲಿ ಕಾಲ ಮಡಚಿ ಕುಳಿತುಕೊಳ್ಳಬೇಕು.
5.ಹೆಬ್ಬರಳು ಕಿವಿಯನ್ನು ಹಾಗೂ ಉಳಿದ ನಾಲ್ಕು ಬೆರಳು ಕಣ್ಣುಗಳನ್ನು ಮುಚ್ಚಿರಬೇಕು.
6.ಮೂಗಿನಲ್ಲಿ ಉಸಿರಾಡಬೇಕು ಹಾಗೂ ಜೇನುನೊಣದಂತೆ ಜುಯ್ ಎಂದು ಝೇಂಕರಿಸುವ ಶಬ್ದ ಮಾಡುತ್ತಾ ಉಸಿರು ಬಿಡಬೇಕು.
7.ಈ ಸಮಯದಲ್ಲಿ ದೇಹದಲ್ಲಾಗುವ ವೈಬ್ರೇಶನ್ ಅನ್ನು ಅನುಭವಿಸಬೇಕು ಹಾಗು ಈ ವ್ಯಾಯಾಮವನ್ನು ೩-೫ ನಿಮಿಷಗಳ ಕಾಲ ಮಾಡಬೇಕು.

ಎದ್ದಾಗ, ಕುಳಿತಾಗ ಮೂಳೆಗಳಿಂದ ಸೌಂಡ್ ಕೇಳುತ್ತಿದ್ಯಾ? ಹಾಗಿದ್ರೆ ಹುಷಾರ್!

ಪಠಿಸುವುದು
ಪಠಿಸುವುದು ಒಂದು ಆಧ್ಯಾತ್ಮಿಕ ಅಭ್ಯಾಸಕ್ಕಿಂತ ಹೆಚ್ಚು. ಪಠಿಸುವುದರಿಂದ ದೇಹಕ್ಕೆ ಧನಾತ್ಮಕ ಕಂಪನ ಅಂದರೆ ವೈಬ್ರೇಶನ್ ಕಳುಹಿಸುವುದು ಎಂದು. ಇದು ದೇಹಕ್ಕೆ ಕಲವು ಶಕ್ತಿಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಪಠಿಸುವಾಗ ಸಕಾರಾತ್ಮಕ ಹಾಗೂ ಶಾಂತಿಯ ಭಾವನೆ ಅನುಭವಕ್ಕೆ ಬರುತ್ತದೆ.
ಓಂ ಅಥವಾ ಔಮ್ ಎಂದು ಪಠಿಸುವಾಗ ನಿಮ್ಮ ನಂಬಿಕೆಗೆ ಸರಿಹೊಂದುವ ಯಾವುದೇ ಜಪ ಮಾಡಬಹುದು. ಉದಾಹರಣೆಗೆ "ಓಂ ನಮಃ ಶಿವಾಯ". ಓಂ ಈ ರೀತಿಯ ಶಬ್ದವು ದೇಹದಲ್ಲಿ ವೈಬ್ರೇಶನ್ ಮೂಡಿಸುತ್ತದೆ. ತೆರೆದ ಹೃದಯ, ಮುಕ್ತ ಮನಸ್ಸು ಮತ್ತು ತೆರೆದ ಕಂಠದಿAದ ಪಠಿಸಬೇಕು. ಪಠಿಸುವಾಗ ಹೆಚ್ಚು ತೆರೆದ ಮತ್ತು ಜೋರಾಗಿ ಹೇಳುವುದರಿಂದ ಹಲವು ಆರೋಗ್ಯ ಗುಣಗಳನ್ನು ತಿಳಿಯದೇ ಪಡೆಯಬಹುದು.

ಮಂತ್ರ ಧ್ಯಾನ (Chanding Shloka)
ವೈದಿಕ ಸಂಪ್ರದಾಯದಲ್ಲಿ, ಮಂತ್ರಗಳು ಧಾರ್ಮಿಕ ಆಚರಣೆಯಾಗಿದ್ದು, ದೇವತೆಗಳಿಗೆ ಅರ್ಪಿಸುವ ಒಂದು ಕೊಂಡಿಯಾಗಿದ್ದು, ಆ ಮಂತ್ರವನ್ನು ಪಠಿಸುವುದರಿಂದ ಅವುಗಳಿಗೆ ಸಂಬಂಧಿಸಿದ ಶಕ್ತಿಯು ದೊರಕುತ್ತದೆ. ಎಲ್ಲಾ ಮಂತ್ರಗಳು ಆಂತರಿಕ ಶಕ್ತಿಯನ್ನು ಪ್ರಸಾರ ಮಾಡುವ ಗುಣಗಳಿವೆ. ಇಷ್ಟ ಪಡುವ ಮಂತ್ರವನ್ನು ಜಪಿಸಿ ಹಾಗೂ ಅದನ್ನು ಧ್ಯಾನದ ಭಂಗಿಯಲ್ಲಿ ಕುಳಿತೇ ಮಾಡುವುದರಿಂದ ಆತ್ಮ ಜಾಗೃತಿಗೆ ಸಹಾಯವಾಗುತ್ತದೆ. ಎಲ್ಲಾ ಶಕ್ತಿಯ ಅಡೆತಡೆಗಳು ತೆರವುಗೊಳ್ಳುತ್ತವೆ ಹಾಗೂ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಮರಳಿ ಪಡೆಯಬಹುದು.

ಟ್ರೈ ಮಾಡಿ Aroma Therapy, ಮನಸ್ಸಾಗುವುದು ಹ್ಯಾಪಿ ಹ್ಯಾಪಿ

ಟೋನಿಂಗ್ ಸೌಂಡ್ಸ್ (Toning Sound)
ಶಬ್ದ ಎಂದರೆ ಕೇವಲ ಬಾಯಿಯಿಂದ ಬರುವಂತಹದ್ದಲ್ಲ. ದೇಹದ ಎಲ್ಲಾ ಭಾಗಗಳಿಗೆ ತಮ್ಮದೇ ಆದ ಶಬ್ದಗಳಿವೆ. ನಿರ್ದಿಷ್ಟ ಭಾಗವನ್ನು ಗುಣಪಡಿಸಲು ಬಯಸಿದಾಗ ಆ ಭಾಗಜ್ಜೆ ಸಂಬAಧಿಸಿದ ನಾದದ ಧ್ವನಿಯನ್ನು ಪಠಿಸಬಹುದು. ಈ ಟೋನಿಂಗ್ ಶಬ್ದಗಳ ಕೆಲ ಉದಾಹರಣೆಗಳು. ನಿರ್ದಿಷ್ಟ ದೇಹದ ಭಾಗಗಳಿಗೆ ನಿರ್ದಿಷ್ಟ ಶಬ್ದಗಳಿವೆ. ನೀವು ನಿರ್ದಿಷ್ಟ ಭಾಗವನ್ನು ಗುಣಪಡಿಸಲು ಬಯಸಿದಾಗ, ಆ ಭಾಗಕ್ಕೆ ಸಂಬAಧಿಸಿದ ನಾದದ ಧ್ವನಿಯನ್ನು ನೀವು ಪಠಿಸಬಹುದು. 

ಬಟ್ಟಲು ಮತ್ತು ಗಂಟೆ (Vessels and Bell)
ಮ್ಯೂಸಿಕಲ್ ಇನ್‌ಸ್ಟುçಮೆಂಟ್‌ಗಳಲ್ಲಿ (Musical Instrument) ಇತ್ತೀಚೆಗೆ ಮನೆ ಮುಂದೆ ನೇತು ಹಾಕುವ ವಿಂಡ್ ಬೆಲ್  (Wind Bell) ಅಥವಾ ಮ್ಯೂಸಿಕ್‌ನಲ್ಲಿ ಇತ್ತೀಚೆಗೆ ಬಳಸುವ ವಾಟರ್ ಬೌಲ್ ಶಬ್ದದ ಧ್ವನಿಯು ವೈಬ್ರೇಶನ್ ಮೂಡಿಸುತ್ತದೆ.ಲೋಹದ ಗಂಟೆ ಮತ್ತು ಬಟ್ಟಲುಗಳ ಶಬ್ದಗಳನ್ನು ಕೇಳಿದಾಗ ಶಕ್ತಿಯು ಹೆಚ್ಚಾಗುತ್ತದೆ. ಇದು ಅದರ ಧ್ವನಿ ಎಕೋದಿಂದಾಗಿ ಆಂತರಿಕ ಕಂಪನಗಳನ್ನು ಸಕ್ರಿಯಗೊಳಿಸುತ್ತದೆ. ಸ್ವ ಚಿಕಿತ್ಸೆಗಾಗಿ ಧ್ವನಿಯನ್ನು ಬಳಸಲು, ಲೋಹದ ಬಟ್ಟಲುಗಳನ್ನು ಪ್ರಯತ್ನಿಸಬಹುದು. ಇದನ್ನು ಹಾಡುವ ಬಟ್ಟಲುಗಳು ಎಂದೂ ಕರೆಯುತ್ತಾರೆ. ಇದನ್ನು ಧ್ಯಾನದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಏಕೆಂದರೆ ಇದುಚ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಈ ಸೌಂಡ್ ಥೆರಪಿಯ ಪ್ರಯೋಜನವನ್ನು ತಜ್ಞರ ಮಾರ್ಗದರ್ಶನದಲ್ಲಿ ಪಡೆದರೆ ಇನ್ನಷ್ಟು ಒಳ್ಳೆಯ ಫಲಿತಾಂಶ ಪಡೆಯಬಹುದು.

 

Sound Healing can helps to heal yourself tips and benefits for healthy life

 

Latest Videos
Follow Us:
Download App:
  • android
  • ios