Asianet Suvarna News Asianet Suvarna News

ವರ್ಷಗಟ್ಟಲೇ ಕುಟುಂಬ ನಿಯಂತ್ರಣ ಮಾತ್ರೆ ತಿಂದ್ರೆ ಬಂಜೆತನ ಉಂಟಾಗುತ್ತಾ?

ಬಂಜೆತನಕ್ಕೆ ಕಾರಣಗಳು ಅನೇಕ. ಆದರೆ, ಕಾರಣವೇನೇ ಇರಲಿ, ಇದರ ಕುರಿತು ನಮ್ಮ ಸಮಾಜದಲ್ಲಿ ವಿವಿಧ ಭ್ರಮೆಗಳೂ ಸಾಕಷ್ಟಿವೆ. ಸಂತಾನೋತ್ಪತ್ತಿ ಸಮಸ್ಯೆಗೆ ಸಂಬಂಧಿಸಿ ಸಮಾಜದಲ್ಲಿ ನಂಬಿಕೆಗಳು ನಂಬಲು ಯೋಗ್ಯವಲ್ಲ. 
 

Some myths about infertility is in our society, know the reality
Author
First Published Nov 9, 2022, 10:46 AM IST

ಬಂಜೆತನಕ್ಕೆ ಕಾರಣಗಳು ಅನೇಕ. ಆದರೆ, ಕಾರಣವೇನೇ ಇರಲಿ, ಇದರ ಕುರಿತು ನಮ್ಮ ಸಮಾಜದಲ್ಲಿ ವಿವಿಧ ಭ್ರಮೆಗಳೂ ಸಾಕಷ್ಟಿವೆ. ಸಂತಾನೋತ್ಪತ್ತಿ ಸಮಸ್ಯೆಗೆ ಸಂಬಂಧಿಸಿ ಸಮಾಜದಲ್ಲಿ ನಂಬಿಕೆಗಳು ನಂಬಲು ಯೋಗ್ಯವಲ್ಲ. 

ಸಂತಾನೋತ್ಪತ್ತಿ ಸಮಸ್ಯೆ ಇಂದಿನ ದಿನಗಳಲ್ಲಿ ಸಾಮಾನ್ಯ. ಬದಲಾದ ಜೀವನಶೈಲಿಯಿಂದಾಗಿ ಸಂತಾನೋತ್ಪತ್ತಿ ಸಮಸ್ಯೆ ಹೆಚ್ಚಾಗಿದೆ ಎನ್ನುವುದು ಹಲವು ಅಧ್ಯಯನಗಳಿಂದ ಸಾಬೀತಾಗಿರುವ ಸಂಗತಿ. ಹಾಗೆಯೇ, ಇಂದು ಲಭ್ಯವಿರುವ ವಿವಿಧ ವೈದ್ಯಕೀಯ ನೆರವಿನಿಂದಾಗಿ ನೈಸರ್ಗಿಕವಾಗಿ ಮಗುವನ್ನು ಪಡೆಯಲು ಸಾಧ್ಯವಾಗದೆ ಇದ್ದರೂ ತಮ್ಮದೇ ರಕ್ತ-ಮಾಂಸ ಹೊಂದಿದ ಮಗುವನ್ನು ಪಡೆಯಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಅಷ್ಟರಮಟ್ಟಿಗೆ ವೈದ್ಯಕೀಯ ಜಗತ್ತು ಆಧುನಿಕ ಸವಲತ್ತುಗಳನ್ನು ಕಲ್ಪಿಸಿದೆ. ಆದರೆ, ಸಾಮಾನ್ಯವಾಗಿ ಮಗುವನ್ನು ಹೊಂದಬೇಕೆಂಬ ಬಯಕೆಯಿಂದ ದಂಪತಿ ಪ್ರಯತ್ನಿಸಿದರೂ ಸಾಧ್ಯವಾಗದೆ ಇದ್ದಾಗ ಅದೊಂದು ಕೊರಗಾಗಿ ಕೆಲ ಕಾಲವಾದರೂ ಕಾಡುತ್ತದೆ. ಅಂತಹ ಸಮಯದಲ್ಲಿ ದಂಪತಿ ಪರಸ್ಪರ ದೂಷಿಸಿಕೊಳ್ಳಲು ಆರಂಭಿಸಬಹುದು. ಎದುರಲ್ಲೇ ಟೆಸ್ಟ್‌ ರಿಪೋರ್ಟ್‌ ಇದ್ದರೂ ನಿನ್ನದೇ ಸಮಸ್ಯ ಎಂಬಂತೆ ಇಬ್ಬರೂ ವರ್ತಿಸಬಹುದು. ಅದರಲ್ಲೂ ಸಾಮಾನ್ಯವಾಗಿ, ಸಂತಾನೋತೊತ್ತಿ ಸಮಸ್ಯೆ ಎಂದಾಕ್ಷಣ ನಮ್ಮ ಸಮಾಜ ಹಲವು ಭ್ರಮೆಗಳನ್ನು ಅಳವಡಿಸಿಕೊಂಡು ವರ್ತಿಸುತ್ತದೆ. ದಂಪತಿಗೆ ಬೇಸರವಾಗುವಂತೆ ಕೆಲವರಾದರೂ ಮಾತನಾಡುತ್ತಾರೆ. ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆ ನೇರವಾಗಿ ಮಹಿಳೆಗೆ ಸಂಬಂಧಿಸಿದ್ದು ಎನ್ನುವ ಧೋರಣೆ ತೋರುವುದು ಮೊದಲ ಸಮಸ್ಯೆ. ಜತೆಗೇ ಹಲವಾರು ಭ್ರಮೆಗಳು, ಸುಳ್ಳು ನಂಬಿಕೆಗಳು ಸಮಾಜದಲ್ಲಿ ಬೇರೂರಿವೆ. ಅವುಗಳನ್ನು ಅರಿತು ನಿವಾರಣೆ ಮಾಡಿಕೊಳ್ಳುವ ಮುಖ್ಯ.

•    ಬಂಜೆತನ (Infertility) ಎಂದರೆ ಅದು ಮಹಿಳೆಗೆ (Woman) ಸಂಬಂಧಿಸಿದ ಸಮಸ್ಯೆ
ಈ ಕುರಿತ ಧೋರಣೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಬದಲಾಗಿದೆ. ಆದರೂ ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆ ಕಂಡಾಕ್ಷಣ ಮಹಿಳೆಯರನ್ನು ನೇರವಾಗಿ ದೂಷಿಸುವುದು (Blame) ಕಂಡುಬರುತ್ತದೆ. ಈ ವಿಚಾರದಲ್ಲಿ ಜಾರಿಕೊಳ್ಳಲು ಹಲವು ಪುರುಷರು (Male) ಯತ್ನಿಸುತ್ತಾರೆ. ತನ್ನಲ್ಲೇ ಸಮಸ್ಯೆ (Problem) ಇದ್ದರೂ ಪತ್ನಿಯ ಸಮಸ್ಯೆ ಎನ್ನುವಂತೆ ಬಿಂಬಿಸಲು ಯತ್ನಿಸಬಹುದು. ಅಂತಹ ಸಮಯದಲ್ಲಿ ಪತ್ನಿಯಾದವಳು ಪತಿಯ ಮರ್ಯಾದೆ ವಿಚಾರ ಎಂದುಕೊಳ್ಳದೆ ಇರುವ ಸಮಸ್ಯೆಯನ್ನು ಕುಟುಂಬದವರಿಗೆ ತಿಳಿಸುವುದು ಅಗತ್ಯ. ಏಕೆಂದರೆ, ಇದರಿಂದ ಆಕೆಯ ಮೇಲಿರುವ ಹೊರೆ ಕಡಿಮೆ ಆಗುತ್ತದೆ. ಇಲ್ಲಿ ಮರ್ಯಾದೆ ಹೋಗುವಂಥದ್ದೇನೂ ಇರುವುದಿಲ್ಲ. ಸಮಸ್ಯೆ ಎದುರಿಸುವುದು ಹೇಗೆಂದು ಚಿಂತಿಸಬೇಕಷ್ಟೆ. 

Parenting Tips: ಮಗಳಿಗೇನಾದರೂ ಮುಟ್ಟಿನ ಸಮಸ್ಯೆ ಇದ್ಯಾ, ಹುಷಾರಾಗಿ ಹೇಗೆ ಹ್ಯಾಂಡಲ್ ಮಾಡಬಹುದು?

•    ಮಹಿಳೆಯ ವಯಸ್ಸು (Age) ಬಂಜೆತನಕ್ಕೆ ಕಾರಣ
ವಯಸ್ಸು ಬಂಜೆತನಕ್ಕೆ ಕೊಡುಗೆ ನೀಡುವುದು ಹೌದಾದರೂ ಇದಕ್ಕೆ ಮಹಿಳೆಯ ವಯಸ್ಸೊಂದೇ ಕಾರಣವಲ್ಲ. ಪುರುಷರ ವಯಸ್ಸೂ ಪರಿಣಾಮ ಬೀರುತ್ತದೆ. 40 ವರ್ಷ ಮೀರಿದ ಪುರುಷರಲ್ಲಿ ವೀರ್ಯದ (Sperm) ಸಮಸ್ಯೆ ಉಂಟಾಗಬಹುದು. ವೀರ್ಯದ ಗುಣಮಟ್ಟ ಕುಸಿಯಬಹುದು, ಸಂಖ್ಯೆ ಕಡಿಮೆ ಆಗಬಹುದು. ಹೀಗಾಗಿ, ಈ ಕುರಿತ ಭ್ರಮೆ ಬೇಕಾಗಿಲ್ಲ.

•    ಒಂದು ವರ್ಷ ಪ್ರಯತ್ನಿಸಿದ ಬಳಿಕ ವೈದ್ಯರಲ್ಲಿಗೆ ಹೋಗುವುದು ಸರಿ.
ಇದು ಸಹ ಸಂಪೂರ್ಣವಾಗಿ ಸರಿಯಲ್ಲ. ಏಕೆಂದರೆ, ಚಿಕ್ಕ ವಯಸ್ಸಿನ ದಂಪತಿಯಾದರೆ ಸಹಜವಾಗಿ ಗರ್ಭ (Pregnancy) ಧರಿಸಲು ಯತ್ನಿಸುವುದರಲ್ಲಿ ತಪ್ಪಿಲ್ಲ. ಆದರೆ, ದಂಪತಿಯ (Couple) ವಯಸ್ಸು 35ನ್ನು ಮೀರಿದ್ದರೆ ಗರ್ಭ ಧರಿಸುವ ವಿಚಾರ ಮಾಡುವುದಕ್ಕೂ ಮುನ್ನವೇ ವೈದ್ಯರನ್ನು (Doctor) ಕಾಣುವುದು ಉತ್ತಮ. ಏಕೆಂದರೆ, ಮಹಿಳೆ ಅಥವಾ ಪುರುಷರಲ್ಲಿ ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರಬಹುದು. ಅವುಗಳ ಬಗ್ಗೆ ಮೊದಲೇ ಕಾಳಜಿ ವಹಿಸುವುದು ಸೂಕ್ತ.

ಪುರುಷರನ್ನು ಕಾಡುವ andropause, ಕೇರ್ ಲೆಸ್ ಮಾಡಿದ್ರೆ ಸೆಕ್ಸ್ ಲೈಫ್‌ಗೆ ಡೇಂಜರ್ !

•    ಕುಟುಂಬ ನಿಯಂತ್ರಣ ಮಾತ್ರೆ (Birth Control Pills) ಬಂಜೆತನಕ್ಕೆ ಕಾರಣವಾಗುತ್ತದೆ.
ಕುಟುಂಬ ನಿಯಂತ್ರಣಕ್ಕಾಗಿ ತೆಗೆದುಕೊಳ್ಳುವ ಮಾತ್ರೆಗಳು ಹಾರ್ಮೋನ್‌ (Hormone) ಸ್ರವಿಕೆಯ ಮೇಲೆ ಪರಿಣಾಮ ಬೀರುವುದರಿಂದ ಬಂಜೆತನಕ್ಕೆ ಕಾರಣವಾಗುತ್ತವೆ ಎನ್ನುವ ನಂಬಿಕೆ ಸಮಾಜದಲ್ಲಿ ಆಳವಾಗಿದೆ. ಆದರೆ, ಇದು ಸತ್ಯವಲ್ಲ ಎನ್ನುತ್ತಾರೆ ತಜ್ಞರು. ಬಂಜೆತನಕ್ಕೂ ಮಾತ್ರೆಗಳಿಗೂ ಸಂಬಂಧವಿಲ್ಲ. ಅಸಲಿಗೆ, ಈ ಔಷಧಿಯಿಂದ ಮಹಿಳೆಯ ಮಾಸಿಕ ಋತುಸ್ರಾವ (Period) ನಿಯಮಿತವಾಗಿ ಆಗುತ್ತದೆ. ಅಂದರೆ, ಹಾರ್ಮೋನ್‌ ಸ್ರವಿಕೆ ಸರಿಯಾಗುತ್ತದೆ. ಮಾತ್ರೆ ನಿಲ್ಲಿಸಿದ ಕೆಲ ಸಮಯದಲ್ಲೇ ಗರ್ಭ ಧರಿಸಲು ಸಮಸ್ಯೆ ಉಂಟಾಗುವುದಿಲ್ಲ. 

•    ಬಂಜೆತನಕ್ಕೂ ಆರೋಗ್ಯ ಸ್ಥಿತಿಗೂ (Health Condition) ಸಂಬಂಧವಿಲ್ಲ.
ಅಸಲಿಗೆ, ನಮ್ಮ ಆರೋಗ್ಯಕ್ಕೂ ಬಂಜೆತನಕ್ಕೂ ನೇರವಾದ ಸಂಬಂಧವಿದೆ. ಜೀವನಶೈಲಿ (Lifestyle), ದೀರ್ಘಕಾಲದ ಸಮಸ್ಯೆಗಳಿಂದ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಸಹಜ. 

Follow Us:
Download App:
  • android
  • ios