ಈ ಮನುಷ್ಯ ಹೇಳ್ತಿರೋದು ಸುಳ್ಳುಅಂತ ಪತ್ತೆ ಹಚ್ಚೋದು ಹೇಗೆ ಗೊತ್ತಾ?

ಅತಿಯಾಗಿ ಸುಳ್ಳು ಹೇಳುವ ಸಾಕಷ್ಟು ಜನರನ್ನು ನಾವು ನೋಡುತ್ತೇವೆ.  ಹೇಳುವುದರಲ್ಲಿ ಯಾವುದು ಸುಳ್ಳು, ಯಾವುದು ಸತ್ಯ ಎಂದು ಅರಿವಿಗೆ ಬಾರದಷ್ಟು ಪ್ರಮಾಣದಲ್ಲಿ ಇವರು ಸುಳ್ಳು ಹೇಳುತ್ತಾರೆ. ಅಸಲಿಗೆ, ಈ ಸಮಸ್ಯೆ ಹಲವು ಕಾರಣಗಳಿಂದ ಶುರುವಾಗುತ್ತದೆ. ಸಮಸ್ಯೆ ಪತ್ತೆ ಮಾಡಿ ಸುಳ್ಳಿಗರಿಗೆ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ. ಜತಗೆ, ಇವರ ಬಗ್ಗೆ ಎಚ್ಚರಿಕೆಯಿಂದಿರುವುದೂ ಮುಖ್ಯ. ಹಲವು ವರ್ತನೆಗಳ ಮೂಲಕ ಸುಳ್ಳಿಗರನ್ನು ಪತ್ತೆ ಮಾಡಬಹುದು.

Some behaviors of pathological liar may be like this

ಎಲ್ಲರೂ ಒಂದಿಲ್ಲೊಮ್ಮೆ ಸುಳ್ಳು ಹೇಳುತ್ತೇವೆ. ಆದರೆ ಹೇಳುವುದೆವೂ ಸುಳ್ಳಾಗಿರುವುದಿಲ್ಲ. ಯಾರದ್ದಾದರೂ ಪ್ರಶ್ನೆಗಳ ಸುಳಿಯಿಂದ ಬಚಾವಾಗಲು, ಮರ್ಯಾದೆ ಉಳಿಸಿಕೊಳ್ಳಲು, ಬೈಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು, ಹೀಗೆ ಸುಳ್ಳುಗಳಿಗೆ ಆ ಕ್ಷಣದ ನೂರೆಂಟು ಕಾರಣಗಳಿರುತ್ತವೆ. ಏನೇ ಆದರೂ ಸಾಮಾನ್ಯ, ಸಹಜ ಮನುಷ್ಯರು ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಸುಳ್ಳು ಹೇಳುತ್ತಾರೆ. ಅದನ್ನೇ ಅಭ್ಯಾಸವನ್ನಾಗಿ ಮಾಡಿಕೊಳ್ಳುವುದಿಲ್ಲ. ಆದರೆ, ಕೆಲವು ಜನ ಭಯಂಕರ ಸುಳ್ಳುಗಾರರಾಗಿರುತ್ತಾರೆ. ಇವರು ಹೇಳುವ ಹತ್ತು ವಿಚಾರಗಳಲ್ಲಿ ಬಹುತೇಕ ಎಲ್ಲವೂ ಸುಳ್ಳೇ ಆಗಿರುತ್ತವೆ. ಕೊನೆಕೊನೆಗೆ ಹೇಗಾಗುತ್ತದೆ ಎಂದರೆ, ಇವರು ಹೇಳುವುದನ್ನು ಯಾರೂ ಯಾವಾಗಲೂ ನಂಬುವುದಿಲ್ಲ. ಇವರು ರೋಗಗ್ರಸ್ತ ಸುಳ್ಳಿಗರು. ಸುಳ್ಳು ಹೇಳುವ ವ್ಯಕ್ತಿತ್ವ ರೋಗಗ್ರಸ್ತ ಮನಸ್ಸನ್ನು ಸೂಚಿಸುತ್ತದೆ. ಇಂಥವರನ್ನು ನೀವೆಂದಾದರೂ ಭೇಟಿ ಮಾಡಿದರೆ ಕೆಲವು ದಿನಗಳಲ್ಲೇ ಇವರೆಂತಹ ಸುಳ್ಳಿಗರು ಎನ್ನುವುದನ್ನು ಪತ್ತೆ ಹಚ್ಚಿಬಿಡಬಹುದು. ಏಕೆಂದರೆ, ಅವರ ವರ್ತನೆ, ಮಾತು ಹಾಗಿರುತ್ತದೆ. ಸತತವಾಗಿ 6 ತಿಂಗಳ ಕಾಲ ದಿನಕ್ಕೆ ಕನಿಷ್ಠ 5 ಸುಳ್ಳುಗಳನ್ನು ಹೇಳುತ್ತಿದ್ದರೆ ಅವರು ಅಪ್ಪಟ ಸುಳ್ಳಿಗರು ಎನ್ನುತ್ತದೆ ವಿಜ್ಞಾನ. ಈ ಸಮಸ್ಯೆಯನ್ನು ಸ್ಯೂಡೊಲೊಜಿಯಾ ಫಾಂಟಾಸ್ಟಿಕಾ ಎನ್ನಲಾಗುತ್ತದೆ. ಇದು ವಯಸ್ಕರಾಗುವ ಹಂತದಲ್ಲಿ ಉಂಟಾಗಬಹುದು. ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಲಾಗಿದೆ. ಕೆಲವು ವರ್ತನೆಗಳ ಮೂಲಕ ಸುಳ್ಳಿಗರನ್ನು ಗುರುತಿಸಬಹುದು.

•    ಹೇಳೋದೊಂದು, ಮಾಡೋದೊಂದು
ಭಯಂಕರ ಸುಳ್ಳಿಗರು ತಮ್ಮ ಮಾತು ಮತ್ತು ಕೃತಿಗಳಲ್ಲಿ ತಾಳಮೇಳ ಹೊಂದಿರುವುದಿಲ್ಲ. ಇಷ್ಟೆಲ್ಲ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾರೆ, ಆದರೆ ಅವರು ಅದನ್ನು ಖಂಡಿತವಾಗಿ ಮಾಡಿರುವುದಿಲ್ಲ. ಅಲ್ಲದೆ, ತಮ್ಮ ಜೀವನಶೈಲಿಯ ಬಗ್ಗೆ ಹೇಳುವ ಮಾತುಗಳು ಸಹ ಹೇಳುವುದೊಂದು, ಮಾಡುವುದೊಂದು ಎನ್ನುವಂತೆ ಇರುತ್ತವೆ. 

Mental Health Tips: ಗಡಿಬಿಡಿ ಜೀವನದಿಂದ ಬೇಸತ್ತಿದ್ದರೆ ಇಲ್ಲಿವೆ ಬೆಸ್ಟ್ ಸೊಲ್ಯೂಷನ್

•    ಪಶ್ಚಾತ್ತಾಪ ಇರೋದಿಲ್ಲ
ತಮ್ಮ ಸುಳ್ಳುಗಳು ಇನ್ನೊಬ್ಬರ ಮೇಲೆ ಪರಿಣಾಮ ಉಂಟುಮಾಡಿದರೂ ಅಥವಾ ಯಾರಿಗಾದರೂ ನೋವು ನೀಡಿದರೂ, ಅವುಗಳಿಂದ ಸಮಸ್ಯೆ ಉಂಟಾಗುತ್ತಿದ್ದರೂ ಸುಳ್ಳಿಗರಿಗೆ ಪಶ್ಚಾತ್ತಾಪವಾಗುವುದಿಲ್ಲ. ಇದು ಕೆಟ್ಟದ್ದೆಂದು ಅನಿಸುವುದಿಲ್ಲ ಮತ್ತು ಸುಳ್ಳುಗಳನ್ನು ಮುಂದುವರಿಸುತ್ತಾರೆ.

•    ಬಿಕ್ಕಟ್ಟಿನಲ್ಲಿ ರಕ್ಷಣಾತ್ಮಕ ಧೋರಣೆ
ಯಾರಾದರೂ ಇವರ ಸುಳ್ಳುಗಳ ಬಗ್ಗೆ ನೇರವಾಗಿ ಪ್ರಶ್ನಿಸಿದರೆ ಅಥವಾ ತಿಕ್ಕಾಟ ಉಂಟಾದರೆ ಇವರು ಇತರರನ್ನು ದೂಷಣೆ ಮಾಡುತ್ತಾರೆ. ತಮ್ಮ ವರ್ತನೆಗೆ ನೂರೆಂಟು ಕಾರಣ ನೀಡುತ್ತಾರೆ. ನಿಮ್ಮ ಬಳಿ ಸಾಕ್ಷಿಯಿದ್ದರೂ ಅವರು ತರ್ಕರಹಿತವಾಗಿ ಇತರರನ್ನು ಬ್ಲೇಮ್‌ ಮಾಡುತ್ತಾರೆ.

•    ಬೇರೆಯವರ ಕೆಲಸಕ್ಕೆ ಕ್ರೆಡಿಟ್ ತಗೊಳ್ತಾರೆ
ಯಾರಾದರೂ ಥ್ರಿಲ್‌ ಎನಿಸುವ ಅನುಭವ ಹಂಚಿಕೊಂಡಾಗ, ಇನ್ನೊಬ್ಬರು ಮಾಡಿರುವ ಕೆಲಸಗಳ ಯಶಸ್ಸಿನ ಕತೆಯನ್ನೆಲ್ಲ ತಾವು ಮಾಡಿದ್ದೆಂದು ಹೇಳಿಕೊಳ್ಳುವುದು ಸುಳ್ಳಿಗರ ಲಕ್ಷಣ. ತಮ್ಮಲ್ಲಿ ಇಲ್ಲದ ಗುಣವನ್ನು ಇದೆ ಎಂದು ಹೇಳಿಕೊಳ್ಳುತ್ತಾರೆ. ತಾವು ಏನಾದರೂ ಹೇಳಹೊರಟರೆ ಅದಕ್ಕೆ ಭಾರೀ ವಿವರಣೆಯನ್ನೂ ನೀಡುತ್ತಾರೆ. ಮತ್ತೊಬ್ಬರಿಗೆ ನಂಬಿಕೆ ಬರಲೆನ್ನುವುದು ಅವರ ಪ್ರಯತ್ನ.

ಅರೋಮಾಥೆರಪಿಯಿಂದ ಹಲವು ರೋಗಗಳು ದೂರ, ಏನಿರುತ್ತೆ ಈ ಥೆರಪಿಯಲ್ಲಿ?

•    ಸಿಕ್ಕಿಬೀಳುವ ಭಯ ಇಲ್ಲ
ಸುಳ್ಳಿಗರಿಗೆ ತಾವು ಸುಳ್ಳು ಹೇಳಿ ಸಿಕ್ಕಿಕೊಳ್ಳುವ ಭಯವೂ ಕಾಡುವುದಿಲ್ಲ. ಅಧ್ಯಯನಗಳ ಪ್ರಕಾರ, ಹೆಚ್ಚು ಹೆಚ್ಚು ಪದೇ ಪದೆ ಸುಳ್ಳು ಹೇಳಿದಂತೆಲ್ಲ ಅವರಿಗೆ ಸುಳ್ಳಿನ ಕುರಿತಾದ ಭಯ ದೂರವಾಗುತ್ತದೆ. ಹೀಗಾಗಿ, ಇನ್ನಷ್ಟು ಸಲೀಸಾಗಿ ಸುಳ್ಳುಗಳನ್ನು ಹೇಳಬಲ್ಲರು.

•    ತಮ್ಮ ಬಗ್ಗೆಯೇ ಮಾತು
ಸುಳ್ಳಿಗರಿಗೆ ತಮ್ಮದೇ ಕತೆಗಳನ್ನು ಹೇಳಿಕೊಳ್ಳುವುದೆಂದರೆ ಭಾರೀ ಖುಷಿ. ತಮ್ಮನ್ನು ಬುದ್ಧಿವಂತರು, ವಿನೋದದ ವ್ಯಕ್ತಿತ್ವವುಳ್ಳವರು, ಧೈರ್ಯ-ಸಾಹಸಿಗಳು ಎಂದು ತೋರಿಸಿಕೊಳ್ಳುವ ಯತ್ನ ಮಾಡುತ್ತಾರೆ. 

•    ಕಾರಣವಿಲ್ಲದೆಯೂ ಸುಳ್ಳು
ಸುಳ್ಳಿಗರಿಗೆ ಸುಳ್ಳು ಹೇಳಲು ಕಾರಣವೇ ಬೇಕಾಗುವುದಿಲ್ಲ. ತಮಗೆ ಸಂಬಂಧಿಸಿಯೇ ಇರದ ವಿಷಯಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ, ಯಾವುದೇ ರೀತಿಯ ಸುಳ್ಳನ್ನಾದರೂ ಹೇಳಬಲ್ಲರು. 

ಸುಳ್ಳಿಗರ ಮತ್ತಷ್ಟು ಲಕ್ಷಣಗಳು
•    ಯಾರ ಬಗ್ಗೆಯೂ ಖುಷಿ ಇರುವುದಿಲ್ಲ.
•    ಸಂಬಂಧದಲ್ಲಿ ಸಮಸ್ಯೆ
•    ಗಾಸಿಪ್‌ ಎಂದರೆ ಇಷ್ಟ
•    ಕತೆ ಆಗಾಗ ಬದಲಾಗುತ್ತದೆ
  
 

Latest Videos
Follow Us:
Download App:
  • android
  • ios