ಅರೋಮಾಥೆರಪಿಯಿಂದ ಹಲವು ರೋಗಗಳು ದೂರ, ಏನಿರುತ್ತೆ ಈ ಥೆರಪಿಯಲ್ಲಿ?
ಅರೋಮಾಥೆರಪಿ ಜನಪ್ರಿಯ ಚಿಕಿತ್ಸೆಯಾಗುತ್ತಿದೆ. ಈ ಸೆಷನ್ ಗಳನ್ನು ತೆಗೆದುಕೊಳ್ಳಲು ಜನರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಅದು ಏನು ಮತ್ತು ಅದು ಮನಸ್ಸು ಮತ್ತು ದೇಹಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತೆ ಎಂಬುದನ್ನು ತಿಳಿದುಕೊಳ್ಳೋಣ.
ಸಾರಭೂತ ತೈಲಗಳು(Essential oil) ಇದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ, ಯಾಕಂದ್ರೆ ಅವುಗಳನ್ನು ಸಸ್ಯ, ಗಿಡಮೂಲಿಕೆ, ಹೂವು, ದಳ, ತೊಗಟೆಯಂತಹ ನೈಸರ್ಗಿಕ ಅಂಶಗಳಿಂದ ಹೊರತೆಗೆಯಲಾಗಿರುತ್ತೆ. ಭಾರತ, ಚೀನಾ ಹೊರತುಪಡಿಸಿ, ಈ ತೈಲಗಳನ್ನು ಪ್ರಾಚೀನ ಕಾಲದಿಂದಲೂ ಗ್ರೀಸ್, ರೋಮನ್, ಪರ್ಷಿಯನ್ ನಂತಹ ವಿವಿಧ ನಾಗರಿಕತೆಗಳಲ್ಲಿ ಬಳಸಲಾಗುತ್ತಿತ್ತು.
ಸಾರಭೂತ ತೈಲಗಳನ್ನು ಮುಖ್ಯವಾಗಿ ಸೌಂದರ್ಯ ಉತ್ಪನ್ನ(Beauty products), ಸುಗಂಧ ದ್ರವ್ಯಗಳು ಮತ್ತು ರೋಗಗಳನ್ನು ಗುಣಪಡಿಸಲು, ಸ್ವಾಸ್ಥ್ಯವನ್ನು ಉತ್ತೇಜಿಸಲು ಮತ್ತು ಇತರ ಚಿಕಿತ್ಸೆಗಳಿಗೆ ಬಳಸಲಾಗುತ್ತೆ. ಆದರೆ ಬಲವಾದ ವಾಸನೆಯಿಂದ ನಿಮಗೆ ತಲೆನೋವಿದ್ದರೆ, ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಅರೋಮಾ ಥೆರಪಿ (Aroma therapy)ಬಗ್ಗೆ ಕೆಲವು ಸೀರಿಯಸ್ ವೈದ್ಯಕೀಯ ಸಂಶೋಧನೆಯ ಕೊರತೆ ಇನ್ನೂ ಇದೆ. ಆದರೆ ಸಾರಭೂತ ತೈಲಗಳ ಬಳಕೆಯು ಮನಸ್ಸನ್ನು ಶಾಂತಗೊಳಿಸೋದು, ಆಯಾಸ ಕಡಿಮೆ ಮಾಡೋದು, ನಿದ್ರೆಯನ್ನು ಸುಧಾರಿಸೋದು ಮುಂತಾದ ಅನೇಕ ಇತರ ಪ್ರಯೋಜನಗಳನ್ನು ಹೊಂದಿದೆ ಎಂದು ಲಿಖಿತ ಪುರಾವೆಗಳು ಸೂಚಿಸುತ್ತವೆ.
ಕೆಲವು ಸಾರಭೂತ ತೈಲಗಳ ಸುವಾಸನೆ ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ. ಅದರ ವಾಸನೆ ಸಾಮಾನ್ಯ ಶೀತ(Cold) ಮತ್ತು ಜ್ವರವನ್ನು ಗುಣಪಡಿಸಲು, ಬ್ಯಾಕ್ಟೀರಿಯಾದ ಸೋಂಕುಗಳನ್ನು ಕಡಿಮೆ ಮಾಡಲು, ಕೆಲಸದ ಮೇಲೆ ಉತ್ತಮವಾಗಿ ಗಮನಹರಿಸಲು ಸಹಾಯ ಮಾಡುತ್ತೆ.
ಇಂದಿನ ಸಮಯದಲ್ಲಿ, ಕೆಲವು ಸುಗಂಧ ದ್ರವ್ಯಗಳು ಸಾಕಷ್ಟು ಜನಪ್ರಿಯವಾಗುತ್ತಿವೆ, ಅವುಗಳನ್ನು ವಿಶೇಷ ಸಂದರ್ಭಕ್ಕೆ ಮನೆಯ ಅಲಂಕಾರಕ್ಕಾಗಿ(Decoration) ಸಹ ಬಳಸಲಾಗುತ್ತೆ. ಅಂತಹ ಕೆಲವು ಸಾರಭೂತ ತೈಲಗಳ ಬಗ್ಗೆ ತಿಳಿಯೋಣ.
ಅರೋಮಾಥೆರಪಿಗಾಗಿ ಕೆಲವು ಜನಪ್ರಿಯ ಸಾರಭೂತ ತೈಲ ಸುಗಂಧ ದ್ರವ್ಯಗಳು-
ಲೆಮನ್ ಗ್ರಾಸ್(Lemon grass): ಇದು ಅತ್ಯಂತ ಜನಪ್ರಿಯ ತೈಲಗಳಲ್ಲಿ ಒಂದು. ಅರೋಮಾಥೆರಪಿಗಾಗಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತೆ. ಲೆಮನ್ ಗ್ರಾಸ್ ಅದರ ನಿಂಬೆ, ಸಿಟ್ರಿಕ್ ಮತ್ತು ತಾಜಾ ಪರಿಮಳಕ್ಕೆ ಹೆಸರುವಾಸಿಯಾಗಿದೆ ಮತ್ತು ಆಯಾಸದ ವಿರುದ್ಧ ಹೋರಾಡುವಲ್ಲಿ ಮತ್ತು ಒತ್ತಡ ಮತ್ತು ಆತಂಕದ ರೋಗಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಲೆಮನ್ ಗ್ರಾಸ್ ನ ಪರಿಮಳ ಮೈಗ್ರೇನ್ ಮತ್ತು ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ ಎಂದು ಕೆಲವರು ನಂಬುತ್ತಾರೆ.
ನೀಲಗಿರಿ: ಇದು ತುಂಬಾ ಕಟುವಾದ, ಕರ್ಪೂರ(Comphor) ಮತ್ತು ಪುದೀನ ವಾಸನೆಯನ್ನು ಹೊಂದಿದೆ. ನೀಲಗಿರಿಯ ಸಾರಭೂತ ತೈಲ ಪರಿಮಳವು ಗಂಟಲನ್ನು ತೆರವುಗೊಳಿಸಲು ಮತ್ತು ಕೆಮ್ಮನ್ನು ಗುಣಪಡಿಸಲು ಸಹಾಯ ಮಾಡುತ್ತೆ. ನೀಲಗಿರಿ ಸಾರಭೂತ ತೈಲವನ್ನು ಬಿಸಿಯಾಗಿಯೂ ಬಳಸಬಹುದು ಮತ್ತು ವ್ಯಾಯಾಮದ ನಂತರ ನೋವನ್ನು ಕಡಿಮೆ ಮಾಡಲು ಬಳಸಬಹುದು.
ಬಿಳಿ ಮಲ್ಲಿಗೆ(Jasmine): ಬಿಳಿ ಮಲ್ಲಿಗೆಯ ಪರಿಮಳವು ಸ್ವಲ್ಪ ಸಿಹಿ ಮತ್ತು ರೊಮ್ಯಾಂಟಿಕ್ ಆಗಿದೆ. ಅದರ ಪರಿಮಳವು ಆರಾಮ ಮತ್ತು ಉಲ್ಲಾಸ ಅನುಭವಿಸಲು ಸಹಾಯ ಮಾಡುತ್ತೆ. ಬಿಳಿ ಮಲ್ಲಿಗೆ ಖಿನ್ನತೆಯ ರೋಗಲಕ್ಷಣಗಳನ್ನು ನಿವಾರಿಸುತ್ತೆ ಮತ್ತು ಒಟ್ಟಾರೆ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತೆ ಎಂದು ಕೆಲವರು ನಂಬುತ್ತಾರೆ.
ರೋಸ್ಮರಿ(Rosemary): ಇದು ತುಂಬಾ ಪುದೀನಾ, ವುಡ್, ರೆಫ್ರೆಶಿಂಗ್ ಮತ್ತು ಗಿಡಮೂಲಿಕೆಯ ಸುವಾಸನೆಯನ್ನು ಹೊಂದಿದೆ, ಇದು ಒತ್ತಡ ಮತ್ತು ಮಾನಸಿಕ ಆಯಾಸ ಕಡಿಮೆ ಮಾಡುತ್ತೆ. ರೋಸ್ಮರಿ ಅರೋಮಾಥೆರಪಿ ಮನಸ್ಥಿತಿಯನ್ನು ಸುಧಾರಿಸುವ ಮೂಲಕ ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ. ಇದು ಕೀಲು ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತೆ.
ಲ್ಯಾವೆಂಡರ್(Lavender): ಲ್ಯಾವೆಂಡರನ್ನು ಪ್ರಾಚೀನ ಕಾಲದಿಂದಲೂ ಚಿಕಿತ್ಸೆಗಳಲ್ಲಿ ಬಳಸಲಾಗುತ್ತೆ. ಇಂದಿಗೂ, ಲ್ಯಾವೆಂಡರ್ ಅರೋಮಾ ಥೆರಪಿಯನ್ನು ಒತ್ತಡ, ಆತಂಕ ಮತ್ತು ಮನಸ್ಥಿತಿಯನ್ನು ಗುಣಪಡಿಸಲು ವ್ಯಾಪಕವಾಗಿ ಬಳಸಲಾಗುತ್ತೆ. ಲ್ಯಾವೆಂಡರ್ ಅದರ ಹೂವಿನ, ಸಿಹಿ ಮತ್ತು ಹಿತವಾದ ಪರಿಮಳಕ್ಕೆ ಹೆಸರುವಾಸಿ ಮತ್ತು ಮನಸ್ಸಿನ ಶಾಂತಿಯನ್ನು ಉತ್ತೇಜಿಸುತ್ತೆ. ಇದನ್ನು ಸೋಪ್, ಲೋಷನ್, ಶಾಂಪೂ ಮತ್ತು ಇತರ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಸಹ ಬಳಸಲಾಗುತ್ತೆ. ಲ್ಯಾವೆಂಡರ್ ನಿದ್ರೆಗೆ ಸಹಾಯ ಮಾಡುತ್ತೆ ಮತ್ತು ನಿದ್ರಾಹೀನತೆಯನ್ನು ಗುಣಪಡಿಸುತ್ತೆ.