Asianet Suvarna News Asianet Suvarna News

ನಾವು ಬಳಸೋ ಸೋಪಿನ ಪರಿಮಳಕ್ಕೆ ಸೊಳ್ಳೆ ಆಕರ್ಷಿತವಾಗುತ್ತವೆಯಾ? ಸಂಶೋಧನೆ ಹೇಳೋದೇನು?

ಗುಂಪಲ್ಲಿ ನಿಂತಿರ್ತೇವೆ, ಎಲ್ಲರೂ ಸುಮ್ಮನಿದ್ರೆ ನಾವು ಮಾತ್ರ ಅಲ್ಲಿ ಇಲ್ಲಿ ತುರಿಸಿಕೊಳ್ತಾ ಸೊಳ್ಳೆ ಕಾಟದಿಂದ ಬಳಲ್ತಿರ್ತೇವೆ. ಅರೇ ನಿಮಗೊಂದೇ ಈ ಸೊಳ್ಳೆ ಕಚ್ಚೋದಕ್ಕೆ ಕಾರಣವೇನು ಗೊತ್ತಾ? ತಜ್ಞರು ಏನು ಹೇಳ್ತಾರೆ ಓದಿ.
 

Soaps Fragrance Attracts Mosquitoes According To New Research roo
Author
First Published Jun 8, 2023, 2:22 PM IST

ಮನೆ, ಹಾದಿ-ಬೀದಿ, ಪಾರ್ಕ್ ಹೀಗೆ ಎಲ್ಲೆಂದರಲ್ಲಿ ಇರುವ ಸೊಳ್ಳೆಗಳು ಉಂಟುಮಾಡುವ ತೊಂದರೆಗಳು ಒಂದೆರಡಲ್ಲ. ಅದರಲ್ಲೂ ಜುಲೈ ಆಗಸ್ಟ್ ತಿಂಗಳಿನಲ್ಲಿ ಇವುಗಳ ಸಂಖ್ಯೆ ಇನ್ನೂ ಉಲ್ಬಣವಾಗುತ್ತೆ. ಸೊಳ್ಳೆ ಕಾಟಕ್ಕೆ ಅನೇಕರು ರಾತ್ರಿ ಸರಿಯಾಗಿ ನಿದ್ದೆ  ಮಾಡುವುದಿಲ್ಲ. ಕಿವಿ ಬಳಿ ಗುಂಯ್ ಗುಡುವ ಸೊಳ್ಳೆ ಅಲ್ಲಲ್ಲಿ ಕಚ್ಚಿ ಹಿಂಸೆ ನೀಡುತ್ತದೆ.  ಈ ಚಿಕ್ಕ ಸೊಳ್ಳೆ (Mosquito) ಯಿಂದಾಗಿ ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಮಲೇರಿಯಾದಂತಹ ದೊಡ್ಡ ಕಾಯಿಲೆ (Disease) ಗಳು ಮನುಷ್ಯನನ್ನು ಆವರಿಸುತ್ತವೆ. ಕೇವಲ ಮಳೆಗಾಲದಷ್ಟೇ ಅಲ್ಲ ಎಲ್ಲ ಕಾಲದಲ್ಲಿಯೂ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ ಎಂದು ಅನೇಕ ತಜ್ಞರು (Experts) ಹೇಳುತ್ತಾರೆ. ಸೊಳ್ಳೆಗಳನ್ನು ಹತೋಟಿಯಲ್ಲಿಡಲು ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಕೊಡಬೇಕು. ಏಕೆಂದರೆ ಕೊಳೆತ ಪದಾರ್ಥ ಹಾಗೂ ಮೋರಿಗಳಲ್ಲಿ ಇವುಗಳ ಸಂತಾನೋತ್ಪತ್ತಿ ನಡೆಯುತ್ತದೆ. ಹಾಗಾಗಿ ರಾತ್ರಿಯ ಸಮಯಗಳಲ್ಲಿ ಸೊಳ್ಳೆ ಪರದೆಯನ್ನು ಬಳಸುವುದು ಸುರಕ್ಷಿತ ಎಂದು ವೈದ್ಯರು ಹೇಳುತ್ತಾರೆ.

ಒಂದು ಸೊಳ್ಳೆ ಕಾಯಿಲ್ 100 ಸಿಗರೇಟ್‌ಗಳಷ್ಟು ಡೇಂಜರಸ್‌!

ಪರಿಮಳಕ್ಕೆ ಆಕರ್ಷಿತವಾಗುತ್ತೆ ಸೊಳ್ಳೆ : ಕೆಲವು ಜನರಿಗೆ ಮಾತ್ರ ಸೊಳ್ಳೆ ಹೆಚ್ಚು ಕಚ್ಚುತ್ತೆ. ರಕ್ತದ ಗುಂಪನ್ನು ಅವಲಂಬಿಸಿ ಅನೇಕರಿಗೆ ಸೊಳ್ಳೆ ಹೆಚ್ಚು ಕಡಿಯುತ್ತೆ ಎಂಬುದರ ಬಗ್ಗೆ ಅನೇಕ ಅಧ್ಯಯನಗಳು ಈಗಾಗಲೇ ನಡೆದಿವೆ. ಒಬ್ಬ ವ್ಯಕ್ತಿ ಮೈಗೆ ಹಚ್ಚುವ ಸೋಪಿನ ಪರಿಮಳದಿಂದಲೂ ಸೊಳ್ಳೆ ಅವನನ್ನು ಹೆಚ್ಚು ಕಚ್ಚುತ್ತೆ ಎಂಬುದು ಇತ್ತೀಚಿನ ಹೊಸ ಅಧ್ಯಯನದಿಂದ ತಿಳಿದುಬಂದಿದೆ. ಅಂದರೆ ಕೆಲವು ಸಾಬೂನಿನ ಪರಿಮಳಕ್ಕೂ ಸೊಳ್ಳೆ ಹೆಚ್ಚು ಆಕರ್ಷಿತವಾಗುತ್ತವೆ.

ಹೂವು ಮತ್ತು ಹಣ್ಣಿನ ಪರಿಮಳ ಸೊಳ್ಳೆಗೆ ಇಷ್ಟವಾಗುತ್ತೆ : ನಾವು ಮೈ ಗೆ ಹಚ್ಚಿಕೊಳ್ಳುವ ಸೋಪು ಸೊಳ್ಳೆಗಳನ್ನು ಹೇಗೆ ಆಕರ್ಷಿಸುತ್ತೆ ಎಂಬುದನ್ನು ತಿಳಿಯಲು ವರ್ಜೀನಿಯಾದ ತಜ್ಞರು ನಾಲ್ಕು ಜನಪ್ರಿಯ ಸೋಪುಗಳ ಮೇಲೆ ಪರೀಕ್ಷೆ ನಡೆಸಿದರು. ಇವುಗಳ ಪೈಕಿ ಮೂರು ಸೋಪು ಸೊಳ್ಳೆಗಳನ್ನು ಆಕರ್ಷಿಸುತ್ತೆ ಎಂಬುದು ತಿಳಿದುಬಂತು. ಹಣ್ಣು ಮತ್ತು ಹೂವಿನ ಪರಿಮಳ ಹೊಂದಿರುವ ಸಾಬೂನಿನ ಪರಿಮಳವನ್ನು ಸೊಳ್ಳೆಗಳು ಹೆಚ್ಚು ಇಷ್ಟಪಡುತ್ತವೆ ಹಾಗೂ ತೆಂಗಿನ ಕಾಯಿಯ ಪರಿಮಳದಿಂದ ಸೊಳ್ಳೆಗಳು ದೂರ ಇರುತ್ತವೆ ಎಂಬುದು ಸಾಬೀತಾಗಿದೆ. ಆದ್ದರಿಂದ ವ್ಯಕ್ತಿ ಯಾವ ಸೋಪನ್ನು ಬಳಸುತ್ತಾನೆ ಎನ್ನುವುದರ ಮೇಲೆ ಸೊಳ್ಳೆಯ ಆಕ್ರಮಣ ಕೂಡ ಅವಲಂಬಿತವಾಗಿರುತ್ತೆ.

HEALTH TIPS: ರಾತ್ರಿ ಕಾಣಿಸಿಕೊಳ್ಳುವ ಬೆರಳಿನ ನೋವಿಗೆ ಕಾರಣವೇನು? ಪರಿಹಾರ ಹೇಗೆ?

ಸಂಶೋಧನೆ ಹೀಗೆ ಹೇಳುತ್ತೆ : ತಜ್ಞರು ಅಮೆರಿಕದ ಪ್ರತಿಶತ 53ರಷ್ಟು ಜನರ ಮೇಲೆ ಸಂಶೋಧನೆ ನಡೆಸಿದರು. ಸಂಶೋಧನೆಯ ಪ್ರಕಾರ ವ್ಯಕ್ತಿಯ ಶರೀರದ ವಾಸನೆಯ ಸುಮಾರು 60ರಷ್ಟು ಭಾಗ ಆತ ಬಳಸುವ ಸಾಬೂನನ್ನು ಅವಲಂಬಿಸುತ್ತದೆ. ಇನ್ನುಳಿದ 40 ರಷ್ಟು ಭಾಗ ಶರೀರದ ಸಹಜ ವಾಸನೆಯಾಗಿರುತ್ತದೆ. ಸಂಶೋಧನೆಯಲ್ಲಿ ಭಾಗವಹಿಸುವವರು ವಿವಿಧ ಬ್ರ್ಯಾಂಡ್ ಗಳ ಸೋಪ್ ಗಳನ್ನು ಬಳಸಿದರು. ನಂತರ ಅವರ ದೇಹದ ವಾಸನೆಯನ್ನು ಉಪಕರಣಗಳ ಮೂಲಕ ಕಂಟೇನರ್ ನಲ್ಲಿ ಸಂಗ್ರಹಿಸಿ ವಿವಿಧ ಜಾರ್ ಗಳಲ್ಲಿ ಇರಿಸಲಾದ ಸೊಳ್ಳೆಗಳ ನಡುವೆ ಬಿಡಲಾಯಿತು.

ಸೊಳ್ಳೆ ದೂರ ಇರ್ಬೇಕೆಂದ್ರೆ ಈ ಸೋಪ್ ಬಳಸಿ  : ಯಾವ ಜಾರ್ ನಲ್ಲಿರುವ ಸೋಪು ಹೂವು, ಹಣ್ಣಿನ ಪರಿಮಳವನ್ನು ಬೀರುತ್ತದೆಯೋ ಆ ಜಾರ್ ನಲ್ಲಿ ಇರುವ ಸೊಳ್ಳೆಗಳು ಅತೀ ಸಕ್ರಿಯವಾಗಿ ಹಾರಾಡುತ್ತಿರುವುದು ಸಂಶೋಧನೆಯಲ್ಲಿ ತಿಳಿದುಬಂತು. ಆದರೆ ತೆಂಗಿನ ಕಾಯಿಯ ಪರಿಮಳವನ್ನು ಹೊಂದಿದ ಜಾರ್ ನಲ್ಲಿರುವ ಸೊಳ್ಳೆಗಳು ಹೆಚ್ಚು ಪ್ರತಿಕ್ರಿಯಿಸದೇ ಶಾಂತವಾಗಿರುವುದು ಕಂಡುಬಂತು. 

ಮೊಟ್ಟಮೊದಲು ತಜ್ಞರು ವ್ಯಕ್ತಿಯ ಶರೀರದಿಂದ ಹೊರಬರುವ ವಾಸನೆಗೆ ಅನುಗುಣವಾಗಿ ಸೊಳ್ಳೆಗಳು ಆಕರ್ಷಿತವಾಗುತ್ತೆ ಎಂಬುದರ ಕುರಿತು ಹೆಚ್ಚು ಒತ್ತು ನೀಡಿದ್ದರು. ನಂತರದ ಸಂಶೋಧನೆಗಳಲ್ಲಿ ಸಾಬೂನಿನ ಬಳಕೆ ಸೊಳ್ಳೆಯನ್ನು ಎಷ್ಟು ಆಕರ್ಷಿಸುತ್ತೆ ಎನ್ನುವುದರ ಕುರಿತು ಅಧ್ಯಯನಗಳು ನಡೆದವು. ಈಗ ಸಂಶೋಧಕರು ವಿವಿಧ ರೀತಿಯ ಡಿಯೋಡ್ರಂಟ್ ಗಳು ಸೊಳ್ಳೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತೆ ಎನ್ನುವುದರ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

Follow Us:
Download App:
  • android
  • ios