Health Tips : ಮಲಗುವಾಗ ಆರಾಮಾಗಿಯೇ ಇದ್ದೀರಿ, ಆದರೆ ಏಳಲು ಆಗೋಲ್ಲವೆಂದರೆ ಅದೊಂದು ರೋಗ!

ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ. ಆದ್ರೆ ನಾವು ನಿದ್ರೆ ಮಾಡುವ ಭಂಗಿ ಅಥವಾ ನಮ್ಮನ್ನು ಕಾಡುವ ಟೆನ್ಷನ್ ನಿದ್ರೆಯಲ್ಲಿ, ನಿದ್ರೆ ನಂತ್ರವೂ ನಮ್ಮನ್ನು ಕಾಡುತ್ತದೆ. ಸುಖವಾಗಿ ನಿದ್ರೆ ಮಾಡಿದ್ರೂ ಬೆಳಿಗ್ಗೆ ಏಳೋದು ಕಷ್ಟವಾಗುತ್ತದೆ. ಇಂಥ ಸಮಸ್ಯೆ ನಿಮಗೂ ಇದ್ರೆ ನಿರ್ಲಕ್ಷ್ಯ ಮಾಡ್ಬೇಡಿ.
 

Sleep Paralysis Signs Symptoms How To Avoid It

ಒಳ್ಳೆಯ ನಿದ್ರೆ ನಮ್ಮ ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಬೆಳ್ಳಿಗ್ಗೆಯಿಂದ ರಾತ್ರಿಯ ತನಕ ಕ್ರಿಯಾಶೀಲರಾಗಿರಬೇಕೆಂದರೆ ಒಬ್ಬ ವ್ಯಕ್ತಿಗೆ ಎಂಟು ಗಂಟೆಯ ನಿದ್ದೆ ಬೇಕು. ಅವರವರ ದೇಹಸ್ಥಿತಿಗೆ ಅನುಗುಣವಾಗಿ ನಿದ್ದೆಯ ಸಮಯ ಬದಲಾಗುತ್ತದೆ. ಕೆಲವರಿಗೆ ಎಂಟು ಗಂಟೆಗಿಂತಲೂ ಹೆಚ್ಚು ನಿದ್ದೆ ಬೇಕಾಗುತ್ತದೆ. ಕೆಲವರಿಗೆ ಅದಕ್ಕಿಂತಲೂ ಕಡಿಮೆ ನಿದ್ದೆ ಸಾಕು.

ನಿದ್ರೆ (Sleep) ಯಿಂದ ನಮ್ಮ ಶರೀರದಲ್ಲಿ ಎಷ್ಟೋ ಬದಲಾವಣೆಗಳು ನಡೆಯುತ್ತವೆ. ಮೆದುಳು (Brain) ಮತ್ತು ನಮ್ಮ ಅಂಗಾಂಗಗಳು ವಿಶೇಷ ಆರೈಕೆಗೆ ಒಳಗಾಗುವ ಸಮಯ ಅದು. ಚೆನ್ನಾಗಿ ನಿದ್ದೆ ಮಾಡದೇ ಇರುವುದರಿಂದ ಮೆದುಳಿನ ಮೇಲೆ ಅಡ್ಡಪರಿಣಾಮಗಳಾಗುತ್ತವೆ. ಇದರಿಂದ ಮಾನಸಿಕ (Mental) ಆರೋಗ್ಯದಲ್ಲಿ ಕೂಡ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿದ್ದೆಯ ಅವಧಿ ಸರಿಯಾಗಿದ್ದಾಗ ಮಾತ್ರ ದೇಹ ಸುಸ್ಥಿತಿಯಲ್ಲಿರುತ್ತದೆ. ಕೆಲವೊಮ್ಮೆ ಬಹಳ ಹೊತ್ತು ನಿದ್ದೆ ಮಾಡಿ ಎಚ್ಚರವಾದಾಗ ಮೈ ಕೈಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ನಿದ್ದೆಯಿಂದ ಎಚ್ಚರವಾದಾಗ ಒಮ್ಮೆಲೇ ಏಳಲು ಕಷ್ಟವಾಗುತ್ತದೆ. ಅವರಿಗೆ ತಲೆ ಸುತ್ತುವುದು, ಶರೀರ ಆಚೀಚೆ ವಾಲುವುದು ಮುಂತಾದ ಸಮಸ್ಯೆಗಳು ಕಾಣುತ್ತವೆ. ಅಂತವರು ಸ್ವಲ್ಪ ಸಮಯ ತಮ್ಮನ್ನು ತಾವು ಸಾವರಿಸಿಕೊಂಡು ನಿಧಾನವಾಗಿ ಏಳುತ್ತಾರೆ.

Health Tips: ದ್ರಾಕ್ಷಿ ಮಾತ್ರವಲ್ಲ, ಅದರ ಎಲೆಯಿಂದಲೂ ಇದೆ ಪ್ರಯೋಜನ!

ಸ್ಲೀಪ್ ಪ್ಯಾರಾಲಿಸಿಸ್ ಬಗ್ಗೆ ನಿಮಗೆ ಗೊತ್ತಾ? : ಮಲಗಿ ಎದ್ದಾಕ್ಷಣ ಶರೀರವನ್ನು ಅಥವಾ ಶರೀರದ ಕೆಲವು ಭಾಗಗಳನ್ನು ಅಲುಗಾಡಿಸಲು ಸಾಧ್ಯವೇ ಆಗುವುದಿಲ್ಲ. ಈ ಪರಿಸ್ಥಿತಿಯನ್ನು ಸಹಿಸಿಕೊಳ್ಳುವುದು ಬಹಳ ಕಷ್ಟಕರವಾಗುತ್ತದೆ. ಸದ್ಯದಲ್ಲಿ ಇಂತಹ ಪರಿಸ್ಥಿತಿ ಬಹಳ ಜನರಲ್ಲಿ ಕಾಡುತ್ತಿದೆ. ಇದನ್ನು ‘ಸ್ಲೀಪ್ ಪ್ಯಾರಾಲಿಸಿಸ್’ (ನಿದ್ದೆಯ ಪಾರ್ಶ್ವವಾಯು)ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ನಿದ್ದೆಯಿಂದ ಒಮ್ಮೆಲೇ ಎದ್ದ ನಂತರ ಕನಸು ಮತ್ತು ವಾಸ್ತವದ ನಡುವಿನ ಅಂತರವನ್ನು ಗುರುತಿಸುವ ಸಾಮರ್ಥ್ಯ ಶರೀರಕ್ಕೆ ಇರುವುದಿಲ್ಲ. ಆಗ ಶರೀರವನ್ನು ಅಲುಗಾಡಿಸುವುದು ಕೂಡ ಅಸಾಧ್ಯವಾಗುತ್ತೆ. ಇಂತಹ ಪರಿಸ್ಥಿತಿಯನ್ನು ಸ್ಲೀಪ್ ಪ್ಯಾರಾಲಿಸಿಸ್ ಎನ್ನಲಾಗುತ್ತದೆ.
ನಿದ್ದೆಯ ಪಾರ್ಶ್ವವಾಯುವಿನಲ್ಲಿ ನೀವು ಸ್ಲೀಪ್ ಮೋಡ್ ನಲ್ಲಿ ಇರುತ್ತೀರಿ ಆದರೆ ನಿಮ್ಮ ಮೆದುಳು ಸಕ್ರಿಯವಾಗಿರುತ್ತದೆ. ಅಮೆರಿಕಾದ ನ್ಯಾಶನಲ್ ಸ್ಲೀಪ್ ಫೌಂಡೇಶನ್ ಪ್ರಕಾರ ನಿದ್ದೆಯ ಪಾರ್ಶ್ವವಾಯುವಿನಲ್ಲಿ ಜನರು ಪ್ರಜ್ಞಾವಸ್ಥೆಯಲ್ಲಿ ಇದ್ದರೂ ಭ್ರಮೆ ಮತ್ತು ಉಸಿರುಗಟ್ಟುವಿಕೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಹಾಗಾದರೆ ಈ ಸ್ಲೀಫ್ ಪ್ಯಾರಾಲಿಸಿಸ್ ಸಮಯದಲ್ಲಿ ಏನಾಗುತ್ತದೆ? ಯಾವ ಕಾರಣಕ್ಕೆ ಈ ತೊಂದರೆ ಉಂಟಾಗುತ್ತದೆ? ಅದನ್ನು ಹೇಗೆ ಗುಣಪಡಿಸಬಹುದು ಎಂಬುದನ್ನು ತಿಳಿಯೋಣ.

ನಿದ್ದೆಯ ಪಾರ್ಶ್ವವಾಯುವಿನಲ್ಲಿ ಏನಾಗುತ್ತದೆ? : ಒಬ್ಬ ವ್ಯಕ್ತಿಯು ನಿದ್ದೆಯ ಪಾರ್ಶ್ವವಾಯುವಿಗೆ ಒಳಗಾದಾಗ ಎಚ್ಚರವಾಗಿದ್ದರೂ ಕೂಡ ಚಲಿಸಲು ಆಗುವುದಿಲ್ಲ. ಅವನಿಗೆ ಮಾತನಾಡಲು ಮತ್ತು ಕಣ್ಣು ಬಿಡಲು ಕೂಡ ಆಗುವದಿಲ್ಲ. ತಾನು ಎಲ್ಲೋ ಸಿಕ್ಕಿಕೊಂಡುಬಿದ್ದಂತೆ ತನಗೆ ಏನೋ ಅಪಾಯವಾದಂತೆ ಅವನಿಗೆ ಅನಿಸುತ್ತದೆ. ಆಗ ಅವನು ಇನ್ನಷ್ಟು ಹೆದರುತ್ತಾನೆ. ಕೆಲವು ನಿಮಿಷಗಳು ಅವನು ಅದೇ ಸ್ಥಿತಿಯಲ್ಲೇ ಇರುತ್ತಾನೆ.

ಸ್ಲೀಪ್ ಪ್ಯಾರಾಲಿಸಿಸ್ ಏಕಾಗುತ್ತದೆ? : ಸ್ಲೀಪ್ ಪ್ಯಾರಾಲಿಸಿಸ್ ಯಾವ ಕಾರಣಕ್ಕೆ ಆಗುತ್ತದೆ ಎಂಬುದಕ್ಕೆ ನಿಶ್ಚಿತವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ನಿದ್ರಾ ಹೀನತೆ, ಮಲಗುವ ಭಂಗಿಯಲ್ಲಿನ ಬದಲಾವಣೆ, ಯಾವುದೋ ಒಂದು ವಿಷಯದ ಬಗ್ಗೆ ಟೆನ್ಶನ್ ಅಥವಾ ಕುಟುಂಬದವರಲ್ಲಿ ಯಾರಿಗಾದರೂ ಈ ತೊಂದರೆ ಇದ್ದಲ್ಲಿ ನಿದ್ದೆಯ ಪಾರ್ಶ್ವವಾಯು ಉಂಟಾಗುವ ಸಾಧ್ಯತೆಯಿದೆ.

ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿ, ಹೃದಯದ ಆರೋಗ್ಯಕ್ಕಿಲ್ಲ ವಯಸ್ಸಿನ ಮಿತಿ

ಸ್ಲೀಪ್ ಪ್ಯಾರಾಲಿಸಿಸ್ ನಿಂದ ಹೇಗೆ ಬಚಾವಾಗಬಹುದು? : ನಿಮ್ಮ ನಿದ್ದೆಯ ವೇಳಾವಟ್ಟಿಯನ್ನು ಬದಲಾಯಿಸುವುದರಿಂದ ಸ್ಲೀಪ್ ಪ್ಯಾರಾಲಿಸಿಸ್ ಖಾಯಿಲೆಯಿಂದ ನಮ್ಮನ್ನು ನಾವು ದೂರವಿಡಬಹುದು. ಪ್ರತಿನಿತ್ಯ 7-9 ಗಂಟೆಯ ನಿದ್ದೆ ಮಾಡಲು ಪ್ರಯತ್ನಿಸಬೇಕು. ನಿತ್ಯವೂ ಒಂದೇ ಸಮಯಕ್ಕೆ ಮಲಗುವುದು ಮತ್ತು ಏಳುವುದರಿಂದ ನಿದ್ದೆಯ ಪಾರ್ಶ್ವವಾಯುವಿನಿಂದ ಬಚಾವಾಗಬಹುದು. ದಿನವೂ ವ್ಯಾಯಾಮ ಮಾಡಿ, ಮಲಗುವ ಮುನ್ನ ಮಾದಕ ದ್ರವ್ಯ ಸೇವನೆಯನ್ನು ತಪ್ಪಿಸಿ ಹಾಗೂ ಬೆನ್ನಿನ ಮೇಲೆ ಮಲಗುವುದರಿಂದ ನಿದ್ದೆಯ ಪಾರ್ಶ್ವವಾಯುವನ್ನು ದೂರವಿಡಬಹುದು.
 

Latest Videos
Follow Us:
Download App:
  • android
  • ios