ಒತ್ತಡ, ಟೆನ್ಶನ್‌ (Tension), ಕಿರಿಕಿರಿ ಯಾರಿಗೆ ತಾನೇ ಇಲ್ಲ ಹೇಳಿ. ಇದೆಲ್ಲವೂ ಎಲ್ಲರನ್ನೂ ಕಾಡುತ್ತಿರುವ ವಿಷ್ಯ. ಹಾಗಂತ ಯಾವಾಗ್ಲೂ ಬೇಸರದಲ್ಲಿ ಅಳ್ತಾ ಕೂರೋಕೆ ಆಗೋದಿಲ್ಲ ಅಲ್ವಾ. ಬೇಸರದ ಕ್ಷಣಗಳ ಮಧ್ಯೆ ಖುಷಿ (Happy)ಯನ್ನು ಹುಡುಕಿಕೊಳ್ಳಬೇಕು. ಅದ್ರಲ್ಲೂ ಇವತ್ತು ಅಂತಾರಾಷ್ಟ್ರೀಯ ಸಂತೋಷದ ದಿನ (International Day of Happiness).ಸೋ ಸ್ಪಲ್ಪ ನಕ್ಕು ಬಿಡೀಪ್ಪಾ..

ಯಾವಾಗ್ಲೂ ನಗ್ತಾ, ಖುಷಿ (Happy)ಯಾಗಿದ್ರೆ ಆರೋಗ್ಯ (Health) ಚೆನ್ನಾಗಿರುತ್ತೆ, ಆಯಸ್ಸು ಹೆಚ್ಚಾಗುತ್ತೆ ಅಂತಾರೆ. ಆದ್ರೆ ಹಾಗಿರೋಕೆ ಯಾರಿಗೆ ಸಾಧ್ಯವಾಗುತ್ತೆ ಹೇಳಿ. ಪ್ರತಿಯೊಬ್ಬರಿಗೂ, ಪ್ರತಿದಿನ ಏನಾದರೊಂದು ಟೆನ್ಶನ್‌ ಇದ್ದೇ ಇರುತ್ತೆ. ದಿನದ 24 ಗಂಟೆನೂ ಖುಷಿಯಾಗಿರಿ ಅಂದ್ರೆ ಯಾರಿಗೂ ಸಾಧ್ಯವಾಗುವುದಿಲ್ಲ. ಹೀಗಾಗಿ ಇರೋ ಪ್ರಾಬ್ಲೆಮ್ಸ್‌ಗಳ ಮಧ್ಯೆಯೂ ಪಾಸಿಟಿವ್ ಮೈಂಡ್ (Positive Mind) ಇಟ್ಕೊಂಡು ಖುಷಿಯಾಗಿರುವುದನ್ನು ಕಲಿತುಕೊಳ್ಳಬೇಕು. ನಿನ್ನೆಯದ್ದನ್ನು ಮರೆತು, ನಾಳಿನ ಬಗ್ಗೆ ಯೋಚಿಸದೆ ಇಂದು ಖುಷಿಯಿಂದ ಬದುಕಬೇಕು. ಹಾಗೆ ಮಾಡೋದು ಸ್ಪಲ್ಪ ಕಷ್ಟದ ವಿಚಾರನೇ. ಆದ್ರೆ ಆಗದಂಥದ್ದು ಏನಲ್ಲ. ಅದ್ರಲ್ಲೂ ಇವತ್ತಂತೂ ನಗ್ಲೇಬೇಕು. ಯಾಕಂದ್ರೆ ಇಂದು ಅಂತಾರಾಷ್ಟ್ರೀಯ ಸಂತೋಷದ ದಿನ.

ಯಾವಾಗ ಆರಂಭವಾಯಿತು ?
ಇಂದು ಮಾರ್ಚ್‌ 20. ಈ ದಿನವನ್ನು ಅಂತಾರಾಷ್ಟ್ರೀಯ ಸಂತೋಷದ ದಿನ ಅಥವಾ ಇಂಟರ್‌ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ (International Day of Happiness) ಎಂದು ಆಚರಿಸುತ್ತಾರೆ. ಜುಲೈ 12, 2012ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಖುಷಿಯ ದಿನವನ್ನು ಆಚರಿಸುವ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯವನ್ನು ಮೊದಲು ಭೂತಾನ್ ಪ್ರಾರಂಭಿಸಿತು. ರಾಷ್ಟ್ರೀಯ ಆದಾಯಕ್ಕಿಂತ ರಾಷ್ಟ್ರೀಯ ಸಂತೋಷ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಸಾರಿ ಹೇಳಿತು.

Personality Development: ಹ್ಯಾಪ್ ಮೋರೆ ಹಾಕೋದು ಬಿಟ್ವಿಡಿ..ಹ್ಯಾಪಿಯಾಗಿರಿ

ಮಾರ್ಚ್‌ 20. ಈ ದಿನವನ್ನು ಅಂತಾರಾಷ್ಟ್ರೀಯ ಸಂತೋಷದ ದಿನ ಅಥವಾ ಇಂಟರ್‌ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್ ಎಂದು ಆಚರಿಸಲು ಕಾರಣ ಸಹ ಇದೆ. ಯಾವಾಗಲೂ ಖುಷಿಯಾಗಿರುವುದರಿಂದ ಇರುವ ಪ್ರಯೋಜನಗಳನ್ನು ಜನರಿಗೆ ತಿಳಿಸುವುದೇ ಈ ದಿನವನ್ನು ಆಚರಿಸುವ ಪ್ರಮುಖ ಉದ್ದೇಶವಾಗಿದೆ. ಸಂತೋಷದ ಮೌಲ್ಯ ಮತ್ತು ಅದು ವ್ಯಕ್ತಿಯ ಯೋಗಕ್ಷೇಮದ ಮೇಲೆ ಬೀರುವ ಒಟ್ಟಾರೆ ಪ್ರಭಾವದ ಬಗ್ಗೆ ಈ ದಿನ ಜಾಗೃತಿ ಮೂಡಿಸಲಾಗುತ್ತದೆ.

2013ರಲ್ಲಿ, ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು ಮೊದಲ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಿತು. 2015ರಲ್ಲಿ, ವಿಶ್ವಸಂಸ್ಥೆಯು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ರಚಿಸಿತು, ಬಡತನ, ಅಸಮಾನತೆ ಮತ್ತು ಪರಿಸರವನ್ನು ರಕ್ಷಿಸುವ ಗುರಿಯೊಂದಿಗೆ ಸಂತೋಷ ಮತ್ತು ಯೋಗಕ್ಷೇಮಕ್ಕೆ ಕಾರಣವಾಗುವ ಮೂರು ನಿರ್ಣಾಯಕ ಅಂಶಗಳು ಎಂದು ಘೋಷಿಸಿತು.

2022ರ ಇಂಟರ್‌ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್‌ನ ಥೀಮ್‌
'ಬಿಲ್ಡ್ ಬ್ಯಾಕ್ ಹ್ಯಾಪಿಯರ್' ಎಂಬುದು 2022ರ ಇಂಟರ್‌ನ್ಯಾಷನಲ್ ಡೇ ಆಫ್ ಹ್ಯಾಪಿನೆಸ್‌ನ ವಿಷಯವಾಗಿದೆ ಮತ್ತು ಇದು COVID-19 ಸಾಂಕ್ರಾಮಿಕ ರೋಗದಿಂದ ಜಾಗತಿಕ ಚೇತರಿಕೆ ಸಾಧಿಸುವ ಗುರಿಯನ್ನು ಹೊಂದಿದೆ. ಲಾಕ್‌ಡೌನ್‌ಗಳು ಮತ್ತು ಸಾಂಕ್ರಾಮಿಕ-ಸಂಬಂಧಿತ ಮಾನದಂಡಗಳಿಂದಾಗಿ ಕುಟುಂಬಗಳು ಮತ್ತು ಸ್ನೇಹಿತರು ದೀರ್ಘಕಾಲದವರೆಗೆ ಒಟ್ಟಿಗೆ ಇರಲು ಸಾಧ್ಯವಾಗುತ್ತಿಲ್ಲ. ಆರ್ಥಿಕತೆ ಮತ್ತು ಜನರ ಜೀವನೋಪಾಯಕ್ಕೆ ತೀವ್ರ ಹಾನಿಯಾಗಿದೆ. ಹೀಗಾಗಿ ಅನೇಕ ಪ್ರದೇಶಗಳಲ್ಲಿ, ಸಂತೋಷವು ಸಾರ್ವಕಾಲಿಕ ಕಡಿಮೆಯಾಗಿದೆ. ಇದನ್ನು ಮರುಸ್ಥಾಪಿಸುವ ಉದ್ದೇಶವನ್ನು ಈ ವರ್ಷದ ಅಂತಾರಾಷ್ಟ್ರೀಯ ಖುಷಿಯ ದಿನ ಇಟ್ಟುಕೊಂಡಿದೆ.

Food And Mood: ಮೂಡ್‌ ಕೆಟ್ಟಾಗ ಹ್ಯಾಪಿಯಾಗೋಕೆ ಬೆಸ್ಟ್ ಆಹಾರವಿದು

ಮಹತ್ವ
ಇದೀಗ, ಪ್ರಪಂಚದಾದ್ಯಂತ, ಉಕ್ರೇನ್, ಯೆಮೆನ್, ಗಾಜಾ ಮತ್ತು ಇತರೆಡೆ ಸೇರಿದಂತೆ ಅನೇಕ ಬಿಕ್ಕಟ್ಟಿನ ಸಂದರ್ಭಗಳಿವೆ. ಜನರು ಸಂತೋಷವಾಗಿರುವುದು ಹೆಚ್ಚು ಕಷ್ಟಕರವಾಗುತ್ತಿದೆ. ಆದ್ದರಿಂದ, ಇಂದು, ಅಂತರಾಷ್ಟ್ರೀಯ ಸಂತೋಷದ ದಿನದಂದು, ಖುಷಿಯಾಗಿರುವುದು ಮುಖ್ಯವೆಂದು ನಮಗೆ ಮತ್ತು ನಮ್ಮ ಸುತ್ತಲಿರುವ ಪ್ರತಿಯೊಬ್ಬರಿಗೂ ನೆನಪಿಸೋಣ ಮತ್ತು ನಾವು ಎಲ್ಲೇ ಇದ್ದರೂ ನಮ್ಮಲ್ಲಿ ಪ್ರತಿಯೊಬ್ಬರೂ ಹೆಚ್ಚು ಸಹಾನುಭೂತಿಯನ್ನು ಜಗತ್ತಿಗೆ ಕೊಡುಗೆ ನೀಡಬಹುದು. 2021ರ ವರದಿಯ ಪ್ರಕಾರ ವಿಶ್ವದಲ್ಲಿ ಹೆಚ್ಚು ಸಂತೋಷವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ 156 ದೇಶಗಳಲ್ಲಿ 144ನೇ ಸ್ಥಾನದಲ್ಲಿದೆ.