Asianet Suvarna News Asianet Suvarna News

Healthy Food : ತಿಂದಿದ್ದೇ ತಿನ್ನಬೇಡಿ, ಆರೋಗ್ಯಕ್ಕೆ ಒಳ್ಳೇದಲ್ಲ

ತೂಕ ಇಳಿಸ್ಬೇಕೆಂದ್ರೆ ಡಯಟ್ ಮಾಡ್ಬೇಕು. ಡಯಟ್ ಅಂದ್ರೆ ಒಂದೇ ರೀತಿಯ ಆಹಾರ ಸೇವನೆ. ಪ್ರತಿ ದಿನ ಬೆಳಿಗ್ಗೆ ಒಂದು, ಮದ್ಯಾಹ್ನ ಒಂದು, ರಾತ್ರಿ ಒಂದು ಅಂತಾ ಫಿಕ್ಸ್ ಆಗಿರುತ್ತೆ. ಪ್ರತಿ ದಿನ ನೀವು ಅಷ್ಟೇ ಆಹಾರ ಸೇವನೆ ಮಾಡಿದ್ರೆ ಆರೋಗ್ಯ ಸುಧಾರಿಸೋ ಬದಲು ಹದಗೆಡುತ್ತದೆ.  
 

Side Effects Of Eating Same Food Everyday
Author
First Published Mar 13, 2023, 5:00 PM IST

ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಎಲ್ಲರೂ ನಿಶ್ಚಿತ ಡಯಟ್ ಪ್ಲಾನ್ ಫಾಲೋ ಮಾಡ್ತಿರ್ತಾರೆ. ಇತ್ತೀಚೆಗೆ ಆಹಾರ ಸೇವನೆ ರೀತಿ ನೀತಿಗಳು ಕೂಡ ಒಂದು ರೀತಿಯ ಫ್ಯಾಶನ್ ಆಗ್ಬಿಟ್ಟಿದೆ. ಒಬ್ಬರು ತೂಕ ಇಳಿಸಲು, ಇನ್ನೊಬ್ಬರು ಹೆಚ್ಚಿಸಿಕೊಳ್ಳಲು, ಹೊಟ್ಟೆ ಕರಗಿಸಲು ಹೀಗೆ ಎಲ್ಲರೂ ಒಂದೊಂದು ಬಗೆಯ ಸಮಸ್ಯೆಗಳನ್ನು ನೀಗಿಸಿಕೊಳ್ಳಲು ಡಯಟ್ ಗಳ ಮೊರೆಹೋಗುತ್ತಾರೆ. ಡಯಟ್ ಎಂದಾಕ್ಷಣ ಬೆಳಗ್ಗಿನ ತಿಂಡಿಯಿಂದ ರಾತ್ರಿ ಊಟದವರೆಗೂ ಒಂದೇ ರೀತಿಯ ಆಹಾರ ಸೇವನೆ ಮಾಡಬೇಕಾಗುತ್ತದೆ. ಈ ರುಟಿನ್ ಪ್ರತಿನಿತ್ಯವೂ ಮುಂದುವರೆದಾಗ ನಮ್ಮ ಶರೀರಕ್ಕೆ ಒಂದೇ ರೀತಿಯ ಆಹಾರ ಸಿಕ್ಕಂತಾಗುತ್ತದೆ. ಹೀಗೆ ಒಂದೇ ರೀತಿಯ ಆಹಾರ ಸೇವನೆ ಹಲವಾರು ತೊಂದರೆಗಳಿಗೆ ಎಡೆಮಾಡಿಕೊಡಬಹುದು.

ಪೌಷ್ಠಿಕಾಂಶ (Nutrition) ಗಳ ಕೊರತೆ ನಿಮ್ಮನ್ನು ಕಾಡಬಹುದು : ದಿನವೂ ಒಂದೇ ರೀತಿಯ ಆಹಾರ (Food) ಸೇವಿಸುವುದರಿಂದ ನಮ್ಮ ಶರೀರಕ್ಕೆ ಬೇಕಾದ ಎಲ್ಲ ಪೌಷ್ಠಿಕಾಂಶಗಳು ಸಿಗಲು ಸಾಧ್ಯವಿಲ್ಲ. ಏಕೆಂದರೆ ಒಂದರಲ್ಲಿ ಪ್ರೋಟೀನ್ (Protein) ಅಂಶ ಅಧಿಕವಾಗಿದ್ದರೆ, ಇನ್ನೊಂದರಲ್ಲಿ ಐರನ್ ಪ್ರಮಾಣ ಹೆಚ್ಚಿರುತ್ತದೆ. ಒಂದು ತರಕಾರಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದರೆ ಇನ್ನೊಂದರಲ್ಲಿ ವಿಟಮಿನ್ ಎ ಇರುತ್ತದೆ. ಒಂದೇ ರೀತಿಯ ಆಹಾರ ಎಲ್ಲರ ಶರೀರಕ್ಕೂ ಆಗಿಬರುವುದಿಲ್ಲ. ಇದರಿಂದ ಅಜೀರ್ಣ, ಮಲಬದ್ಧತೆ ಮತ್ತು ಶರೀರದ ತಾಪಮಾನದಲ್ಲಿ ಕೂಡ ವ್ಯತ್ಯಾಸವಾಗಬಹುದು. ಆದ್ದರಿಂದ ನೀವು ನಿತ್ಯವೂ ಒಂದೇ ರೀತಿಯ ಆಹಾರ ಸೇವಿಸಿದರೆ ನಿಮಗೆ ಪೋಷಕಾಂಶಗಳ ಕೊರತೆಯಾಗುವುದು ನಿಶ್ಚಿತ. 

Health Tips : ಧೂಮಪಾನದಷ್ಟೇ ಖತರ್ನಾಕ್ ಈ ವ್ಯಾಪಿಂಗ್.. ಹೊಗೆ ಬಿಡೋದನ್ನು ಇಂದೇ ಬಿಟ್ಬಿಡಿ

ನ್ಯೂಟ್ರಿಶನ್ ಟಾಕ್ಸಿಸಿಟಿ ಉಂಟಾಗಬಹುದು : ಪ್ರತಿ ದಿನವೂ ಒಂದೇ ರೀತಿಯ ಆಹಾರ ಸೇವಿಸುವುದರಿಂದ ಶರೀರಕ್ಕೆ ಕೂಡ ಒಂದೇ ರೀತಿಯ ಪೋಷಕಾಂಶಗಳು ಸಿಗುತ್ತದೆ. ಅತಿಯಾದರೆ ಅಮೃತವೂ ವಿಷ ಅನ್ನೋ ಹಾಗೆ ಒಂದೇ ರೀತಿಯ ಪೋಷಕಾಂಶದಿಂದ ಶರೀರದಲ್ಲಿ ಪೌಷ್ಠಿಕಾಂಶದ ವಿಷತ್ವ ಉಂಟಾಗಬಹುದು. ಶರೀರಕ್ಕೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದ ನ್ಯೂಟ್ರಿಶನ್ ಸೇರಿದಾಗ ನ್ಯೂಟ್ರಿಶನ್ ಟಾಕ್ಸಿಸಿಟಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನೀವು ಡಯಟ್ ನಲ್ಲಿ ಎಲ್ಲ ರೀತಿಯ ಆಹಾರವನ್ನು ಸೇರಿಸಿಕೊಳ್ಳುವುದು ಉತ್ತಮ. ಶರೀರದಲ್ಲಿ ಅನೇಕ ರೀತಿಯ ಸಮಸ್ಯೆಗಳು ಹೊಂದಿರುವವರಿಗಂತೂ ಒಂದೇ ರೀತಿಯ ಆಹಾರ ಮಾರಕವಾಗಿ ಪರಿಣಮಿಸಬಹುದು. ರಕ್ತದೊತ್ತಡ, ಮಧುಮೇಹ, ಉದರ ಸಮಸ್ಯೆ ಹೊಂದಿರುವವರು ಮೊದಲ ಹಂತದಲ್ಲೇ ವೈದ್ಯರಿಂದ ಸೂಕ್ತ ಸಲಹೆ ಪಡೆದುಕೊಳ್ಳುವುದು ಉತ್ತಮ.

ಫುಡ್ ಕ್ರೇವಿಂಗ್ (Food Craving) ಸಮಸ್ಯೆ : ನಿಯಮಿತವಾಗಿ ಒಂದೇ ರೀತಿಯ ಆಹಾರವನ್ನು ಸೇವಿಸಿದಾಗ ಆ ಆಹಾರದ ಬಗ್ಗೆ ನಿಮಗೆ ವೈರಾಗ್ಯ ಮೂಡುತ್ತದೆ. ಡಯಟ್ ಸಮಯದಲ್ಲಿ ಸೇವಿಸಿದ ಆಹಾರ ನೋಡಿದಾಗ ವಾಕರಿಕೆ ಕೂಡ ಉಂಟಾಗಬಹುದು. ಆಗ ನೀವು ಹೊರಗಿನ, ಆರೋಗ್ಯಕ್ಕೆ ಹಾನಿಮಾಡುವ ಜಂಕ್ ಫುಡ್ ಗಳನ್ನು ತಿನ್ನಲು ಇಷ್ಟಪಡುತ್ತೀರಿ ಮತ್ತು ಮೊದಲಿಗಿಂತಲೂ ಹೆಚ್ಚು ಜಂಕ್ ಫುಡ್ ಗಳನ್ನು ಸೇವಿಸಲು ಆರಂಭಿಸುತ್ತೀರಿ. ಇದರಿಂದ ನಿಮ್ಮ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಜಂಕ್ ಫುಡ್ ಗಳ ಸೇವನೆಯಿಂದ ನಿಮ್ಮ ಶರೀರದ ತೂಕ ಗಣನೀಯವಾಗಿ ಏರಬಹುದು.

ಜೆಲ್ ರೂಪದಲ್ಲಿ ಬರಲಿದೆ ಹೊಸ ಪುರುಷ ಗರ್ಭ ನಿರೋಧಕ; ಭುಜಕ್ಕೆ ಹಚ್ಚಿದ್ರೆ ಸಾಕು ಆಗುತ್ತೆ ಜನನ ನಿಯಂತ್ರಣ!

ತೂಕ ಇಳಿಸಲು (Weight Loose) ಸಮಸ್ಯೆ : ಹೆಚ್ಚಿನ ಜನರು ತೂಕ ಇಳಿಸುವ ಸಲುವಾಗಿಯೇ ಡಯಟ್ ಗಳ ಮೊರೆಹೋಗುತ್ತಾರೆ. ತೂಕವನ್ನು ನಿಯಂತ್ರಣದಲ್ಲಿಡಲು ನಿರ್ದಿಷ್ಟ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಅವರ ಶರೀರ ಕೂಡ ಅದಕ್ಕೆ ಹೊಂದಿಕೊಂಡಿರುತ್ತದೆ. ಡಯಟ್ ಅವಧಿಯಲ್ಲಿ ತೂಕ ಕೂಡ ಕಡಿಮೆಯಾಗಬಹುದು. ಆದರೆ ಆ ಅವಧಿ ಮುಗಿದ ತಕ್ಷಣ ಆಹಾರದ ಏರುಪೇರಿನಿಂದ ತೂಕ ಇಳಿಕೆ ನಿಧಾನವಾಗುತ್ತದೆ. ಹಾಗಾಗಿ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಡಯಟ್ ಮಾಡಬೇಕಾದರೆ ನಿಮ್ಮ ಡಯಟೀಶಿಯನ್ ಅನ್ನು ಸಂಪರ್ಕಿಸಿ ಆಗಾಗ್ಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.
ಆಹಾರದಲ್ಲಿನ ಬದಲಾವಣೆಯಿಂದ ನಿಮಗೂ ಬೇಸರಬರುವುದಿಲ್ಲ ಮತ್ತು ಶರೀರಕ್ಕೆ ಬೇಕಾದ ಎಲ್ಲ ಪೌಷ್ಠಿಕಾಂಶಗಳೂ ಸಿಕ್ಕಂತಾಗುತ್ತದೆ. ಹಾಗಾಗಿ ಎಲ್ಲ ರೀತಿಯ ಹಣ್ಣು, ತರಕಾರಿ, ಸೊಪ್ಪುಗಳನ್ನು ನಿಯಮಿತವಾಗಿ ನಮ್ಮ ಜೀವನದಲ್ಲಿ ಬಳಸಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ತಾವಾಗಿಯೇ ದೂರವಾಗುತ್ತದೆ.

Follow Us:
Download App:
  • android
  • ios