ಈಗಿನ ದಿನಗಳಲ್ಲಿ ಒತ್ತಡ ಕಾಮನ್ ಆಗಿದೆ. ಇದ್ರಿಂದ ಹೊರಗೆ ಬರಲು ಅನೇಕ ಚಿಕಿತ್ಸೆ ಕೂಡ ಇದೆ. ವೈದ್ಯರ ಬಳಿ ಹೋಗೋದು ಬೇಡ ಎನ್ನುವವರು ಕೈನಲ್ಲಿ ಹಣವಿದ್ರೆ ಶಾಪಿಂಗ್ ಗೆ ಹೋಗ್ಬಹುದು. ಇದ್ರಿಂದ ಒತ್ತಡ ಕಡಿಮೆಯಾಗುತ್ತದೆ.
ಈ ಒತ್ತಡ ಯಾರಿಗಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಒಂದಲ್ಲ ಒಂದು ಒತ್ತಡ ಕಾಡುತ್ತಿರುತ್ತದೆ. ಬ್ಯುಸಿ ಲೈಫ್ ನಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗ್ತಿಲ್ಲ. ತಮ್ಮನ್ನು ತಾವು ಅರಿಯಲು ಸಮಯವಿಲ್ಲ. ಕೆಲಸ ತಲೆ ಮೇಲಿರುವ ಕಾರಣ, ಸದಾ ಸಮಯದ ಹಿಂದೆ ಓಡುವ ಜನರು ತೀವ್ರ ಒತ್ತಡಕ್ಕೊಳಗಾಗ್ತಿದ್ದಾರೆ. ಈ ಒತ್ತಡ ಹೃದಯಾಘಾತದಂತಹ ಸಮಸ್ಯೆಯನ್ನು ಮಾತ್ರವಲ್ಲದೆ ಕಿರಿಕಿರಿ, ಖಿನ್ನತೆಗೆ ಕಾರಣವಾಗಿದೆ. ಒತ್ತಡದಿಂದ ಹೊರಬರಲು ಅನೇಕ ವಿಧಾನಗಳಿವೆ. ಸಾಕಷ್ಟು ಥೆರಪಿಗಳು ನಮ್ಮಲ್ಲಿವೆ. ಕೆಲವರು ಮಸಾಜ್ ಥೆರಪಿ ಅನುಸರಿಸಿದ್ರೆ ಮತ್ತೆ ಕೆಲವರು ಸಂಗೀತದ ಥೆರಪಿಗೆ ಮೊರೆ ಹೋಗ್ತಾರೆ. ಈ ಥೆರಪಿಯಲ್ಲಿ ಶಾಪಿಂಗ್ ಕೂಡ ಸೇರಿದೆ ಅಂದ್ರೆ ನಿಮಗೆ ಅಚ್ಚರಿಯಾಗಬಹುದು.
ಕೆಲವರು ಅನಿವಾರ್ಯವಾಗಿ ಶಾಪಿಂಗ್ (Shopping) ಮಾಡ್ತಾರೆ. ಶಾಪಿಂಗ್ ಮಾಡಿದ ನಂತ್ರ ಹಣ (Money) ಖಾಲಿಯಾಯ್ತು ಎನ್ನುವ ಬೇಸರ ಅವರನ್ನು ಕಾಡುತ್ತದೆ. ಇನ್ನು ಕೆಲವರು ಮೋಜಿಗಾಗಿ ಶಾಪಿಂಗ್ ಮಾಡ್ತಾರೆ. ಇದ್ರಿಂದ ಸಾಕಷ್ಟು ಸಂತೋಷ (Happiness ) ಅವರಿಗೆ ಸಿಗುತ್ತದೆ. ಮತ್ತೆ ಕೆಲವರು ಶಾಪಿಂಗ್ ಮಾಡದೆ ಇದ್ರೂ ವಿಂಡೋ ಶಾಪಿಂಗ್ ಗೆ ಹೋಗಿ ಬರ್ತಾರೆ. ಇದು ಕೂಡ ಅವರನ್ನು ರಿಫ್ರೆಶ್ ಮಾಡುತ್ತದೆ. ಒತ್ತಡದಿಂದ ರಿಲ್ಯಾಕ್ಸ್ ಬೇಕು ಎನ್ನುವವರು ನೀವಾಗಿದ್ದರೆ ನೀವು ಕೂಡ ಶಾಪಿಂಗ್ ಥೆರಪಿ (Therapy) ಟ್ರೈ ಮಾಡ್ಬಹುದು. ನಾವಿಂದು ಅದ್ರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. ಶಾಪಿಂಗ್ ಥೆರಪಿ ಈಗ ಬಂದಿದ್ದಲ್ಲ. 2014ರಲ್ಲಿಯೇ ಇದ್ರ ಬಗ್ಗೆ ಅಧ್ಯಯನ ನಡೆದಿತ್ತು. ಕೊರೊನಾ ನಂತ್ರ ಇದು ಹೆಚ್ಚು ಮಾನ್ಯತೆ ಪಡೆದಿದೆ ಅಂದ್ರೆ ತಪ್ಪಾಗೋದಿಲ್ಲ.
ಬೋನ್ ಸೂಪ್ ಬಾಯಿಗೆ ರುಚಿ ಮಾತ್ರವಲ್ಲ ಕುಡಿದ್ರೆ ಕಾಯಿಲೆನೂ ಹತ್ರ ಸುಳಿಯಲ್ಲ
ಶಾಪಿಂಗ್ ಥೆರಪಿಯಿಂದಾಗುವ ಲಾಭಗಳು :
ಸಂತೋಷ ಸಿಗುತ್ತದೆ : ನೋವಿನಲ್ಲಿರುವಾಗ ನೀವು ಶಾಪಿಂಗ್ ಗೆ ಹೋಗಿ. ನಿಮ್ಮಿಷ್ಟದ ವಸ್ತುವನ್ನು ಖರೀದಿ ಮಾಡಿದಾಗ ದೇಹ ಮತ್ತು ಮೆದುಳಿನ ಕೆಲವು ಭಾಗಗಳು ಪ್ರಚೋದಿಸಲ್ಪಡುತ್ತವೆ. ಇದರಿಂದಾಗಿ ಡೋಪಮೈನ್ ಬಿಡುಗಡೆಯಾಗುತ್ತದೆ. ಇದು ಸಂತೋಷವನ್ನು ಹೆಚ್ಚಿಸುವ ಅಂಶವಾಗಿದೆ. ಇದರಿಂದ ಮೂಡ್ ಸುಧಾರಿಸುತ್ತದೆ. ಮನಸ್ಸಿಗೆ ಸಂತೋಷ ಸಿಗುತ್ತದೆ. ತಮ್ಮಿಷ್ಟದ ವಸ್ತುವನ್ನು ಖರೀದಿ ಮಾಡ್ತಿದ್ದಂತೆ ಅನೇಕರ ಮುಖದಲ್ಲಿ ನಗು ಅರಳೋದನ್ನು ನೀವು ನೋಡಬಹುದು.
ಸಕಾರಾತ್ಮಕ ಭಾವ (Positive Thought): ನಿಮ್ಮಿಷ್ಟದ ವಸ್ತುವನ್ನು ಖರೀದಿ ಮಾಡಿ ಅದನ್ನು ಬಳಸಲು ಶುರು ಮಾಡಿದಾಗ ಧನಾತ್ಮಕ ಭಾವನೆ ಮೂಡುತ್ತದೆ. ಇದ್ರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ.
ನಿಮ್ಮ ತನಕ್ಕೆ ಆದ್ಯತೆ : ಶಾಪಿಂಗ್ ಗೆ ಹೋದಾಗ ನಿಮ್ಮಿಷ್ಟದ ವಸ್ತುಗಳನ್ನು ನೀವು ಖರೀದಿ ಮಾಡುತ್ತೀರಿ. ಕೆಲವರಿಗೆ ಬಾಲ್ಯದಲ್ಲಿ ಖರೀದಿ ಮಾಡಲು ಸಾಧ್ಯವಾಗದ ವಸ್ತುಗಳನ್ನು ಈಗ ಪಡೆಯುವ ಆಸೆಯಿರುತ್ತದೆ. ಕೈಗೆ ಹಣ ಬರ್ತಿದ್ದಂತೆ ಅವರು ಅದನ್ನು ಖರೀದಿ ಮಾಡುವುದ್ರ ಜೊತೆಗೆ ಬಾಲ್ಯದ ನೋವನ್ನು ಮರೆತು ಈಗ ಸಂಭ್ರಮಿಸುತ್ತಾರೆ.
ತೃಪ್ತಿ ಪ್ರಾಪ್ತಿ (Satisfaction) : ಶಾಪಿಂಗ್ ಕೆಲವರಿಗೆ ಇತರ ಥೆರಪಿಗಿಂತ ಹೆಚ್ಚು ಫಲ ನೀಡಿದೆ. ಶಾಪಿಂಗ್ ಮಾಡಿದಾಗ ತೃಪ್ತಿ ಸಿಗುತ್ತದೆಯಂತೆ. ಮನಸ್ಸು ರೋಮಾಂಚನಗೊಳ್ಳುತ್ತದೆಯಂತೆ. ಭೌತಿಕ ವಸ್ತುಗಳಿಂದ ನೀವು ಸಂತೋಷ, ಸೌಕರ್ಯ ಅಥವಾ ತೃಪ್ತಿಯನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ ವಸ್ತುಗಳನ್ನು ಖರೀದಿ ಮಾಡಿದಾಗ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಆ ಕ್ಷಣಕ್ಕೆ ತೃಪ್ತಿ ನೀಡುತ್ತದೆ.
ಬದಲಾಗುವ ಆಲೋಚನೆ : ಶಾಪಿಂಗ್ ಮಾಡ್ತಿರುವ ವೇಳೆ ನಿಮ್ಮ ಆಲೋಚನೆ ಬದಲಾಗುತ್ತದೆ. ಯಾವುದು ಅವಶ್ಯಕ, ಯಾವುದ್ರ ಬೆಲೆ ಎಷ್ಟು, ಯಾವುದು ಆಫರ್ ನಲ್ಲಿ ಸಿಗ್ತಿದೆ ಹೀಗೆ ನಾನಾ ಆಲೋಚನೆಗಳನ್ನು ಮಾಡಲು ಶುರು ಮಾಡ್ತೀರಿ. ಆಗ ನಿಮ್ಮ ನೋವಿಗೆ ಕಾರಣವಾಗಿದ್ದ ವಿಷ್ಯ ಸುಲಭವಾಗಿ ಆ ಕ್ಷಣಕ್ಕೆ ಮರೆಯುತ್ತದೆ. ಇದ್ರಿಂದ ನೀವು ಸ್ವಲ್ಪ ರಿಲ್ಯಾಕ್ಸ್ ಆಗ್ತೀರಿ.
ಹಾಸಿಗೆಯಿಂದ ಎದ್ದ ಕೂಡಲೇ ಸೀನುತ್ತಲೇ ಇರುತ್ತೀರಾ? ಕಾರಣವಿದಿರಬಹುದು
ಶಾಪಿಂಗ್ ನಿಂದೆ ಇಷ್ಟೆಲ್ಲ ಪ್ರಯೋಜನ ಇದೆ ಅಂತಾ ಯರ್ರಾಬಿರ್ರಿ ಖರ್ಚು ಮಾಡ್ಬೇಡಿ. ಇದ್ರಿಂದ ಮತ್ತೊಂದು ಸಮಸ್ಯೆ ಶುರುವಾಗುತ್ತದೆ.
