Asianet Suvarna News Asianet Suvarna News

Pride Month: LGBTQ ಸಮುದಾಯದ ಜನರನ್ನು ಕಾಡುತ್ತೆ ಈ ಲೈಂಗಿಕ ಅನಾರೋಗ್ಯ

LGBTQ ಸಮುದಾಯದ ಜನರು ಜೂನ್ ತಿಂಗಳಲ್ಲಿ ಪ್ರೈಡ್ ಮಂತ್ ಆಚರಣೆ ಮಾಡಿಕೊಳ್ತಾರೆ. ಅವರಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮ ಈ ತಿಂಗಳು ನಡೆಯುತ್ತಿದೆ. ಈ ಸಮುದಾಯದ ಜನ ಏನೆಲ್ಲ ಆರೋಗ್ಯ ಸಮಸ್ಯೆ ಎದುರಿಸ್ತಾರೆ ಅನ್ನೋದರ ಮಾಹಿತಿ ಇಲ್ಲಿದೆ. 
 

Sexual Health Challenges Faced By LGBTQ Community Members roo
Author
First Published Jun 7, 2023, 1:26 PM IST

ಜೂನ್ ತಿಂಗಳನ್ನು ಪ್ರೈಡ್ ಮಂತ್ ಎಂದೇ ಆಚರಿಸಲಾಗುತ್ತದೆ. ಅನೇಕ ದೇಶಗಳಲ್ಲಿ ಈ ತಿಂಗಳನ್ನು ಎಲ್ ಜಿವಿಎಇಕ್ಯೂ ಪ್ಲಸ್  ಸಮುದಾಯದ ಹೋರಾಟ ಹಾಗೂ ವಿಜಯದ ಸಂಕೇತವಾಗಿ ಆಚರಣೆ ಮಾಡಲಾಗುತ್ತದೆ. ಎಷ್ಟೇ ಅದ್ಧೂರಿಯಾಗಿ ಆಚರಣೆ ನಡೆದ್ರೂ ಈ ಸಮುದಾಯದ ಜನರು ಸಾಮಾಜಿಕ ತಾರತಮ್ಯ ಎದುರಿಸುತ್ತಲೇ ಇದ್ದಾರೆ. ಸಮಾಜ, ಕುಟುಂಬ ಸದಸ್ಯರು ಅಥವಾ ಸ್ನೇಹಿತರಿಂದ ಮಾತ್ರ ತಾರತಮ್ಯವಾಗ್ತಿಲ್ಲ, ಆರೋಗ್ಯ ಮತ್ತು ವೃತ್ತಿ ಜೀವನದಲ್ಲೂ ಇದನ್ನು ನಾವು ಕಾಣಬಹುದಾಗಿದೆ.

ಆರೋಗ್ಯ (Health) ಕ್ಕೆ ಸಂಬಂಧಿಸಿದಂತೆ ತಾರತಮ್ಯದಿಂದಾಗಿ LGBTQ+ ಸಮಯದಾಯದ ಜನರು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಅವರ ಲೈಂಗಿಕ (Sexual) ಆರೋಗ್ಯ ಹದಗೆಡುತ್ತಿದೆ. ಲೈಂಗಿಕ ಚಿಕಿತ್ಸೆ ಅವರಿಗೆ ಅಗತ್ಯವಿರುತ್ತದೆ. ಅದನ್ನು ಅವರು ನಿರ್ಲಕ್ಷ್ಯಿಸಬಾರದು. ನಾವಿಂದು LGBTQ+ ಸಮುದಾಯದ ಜನರು ಯಾವೆಲ್ಲ ಲೈಂಗಿಕ ಸಮಸ್ಯೆ ಎದುರಿಸುತ್ತಾರೆ ಎಂಬುದನ್ನು ನಿಮಗೆ ಹೇಳ್ತೇವೆ.

LGBTಗಾಗಿಯೇ ಮೀಸಲಿರೋ ಪ್ರೈಡ್ ಮಂಥ್, ಭಾರತದಲ್ಲಿ ಈ ಸ್ಥಳಕ್ಕೆ ನೀಡಬಹುದು ಭೇಟಿ!

LGBTQ+ ಸಮಯದಾಯದ ಜನರಿಗೆ ಲೈಂಗಿಕ ಸಮಸ್ಯೆ : LGBTQ+ ಯುವಕರಲ್ಲಿ ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಲೈಂಗಿಕವಾಗಿ ಹರಡುವ STIಯಂತಹ ಸೋಂಕುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸಲಿಂಗಕಾಮಿ ಮತ್ತು ಉಭಯಲಿಂಗಿ ಪುರುಷರು ಮತ್ತು ಮಹಿಳೆಯರಲ್ಲಿ  HIV/AIDS ಸೋಂಕಿಗೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೆಚ್ ಐವಿ/ ಏಡ್ಸ್ ನಂತಹ ಗಂಭೀರ ಖಾಯಿಲೆ ಕಾಣಿಸಿಕೊಳ್ಳುತ್ತದೆ. ಇನ್ನು  ಲೆಸ್ಬಿಯನ್ನರು, ಟ್ರಾನ್ಸ್ಜೆಂಡರ್ ಪುರುಷರು ಮತ್ತು ದ್ವಿಲಿಂಗಿಗಳು ಸ್ತನ ಕ್ಯಾನ್ಸರ್ ನಿಂದ ಬಳಲುವ ಅಪಾಯ ಹೆಚ್ಚಿರುತ್ತದೆ. ಇಷ್ಟೇ ಅಲ್ಲದೆ ಈ ಸಮುದಾಯದ ಜನರನ್ನು ಇನ್ನೂ ಅನೇಕ ಗಂಭೀರ ಖಾಯಿಲೆ ಕಾಡುತ್ತದೆ. ಅವರು ಹೆಚ್ ಪಿವಿ (HPV) ಸೋಂಕು ಮತ್ತು ಗರ್ಭಕಂಠದ ಅಥವಾ ಗುದದ ಕ್ಯಾನ್ಸರ್ ಮತ್ತು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ. ಈ ಸಮುದಾಯದ ವೃದ್ಧರು ವೈದ್ಯಕೀಯ ತಪಾಸಣೆಯಿಂದ ವಂಚಿತರಾಗ್ತಾರೆ. ಅವರಿಗೆ ಹೃದಯರಕ್ತನಾಳದಂತಹ ಗಂಭೀರ ಕಾಯಿಲೆಗಳ ಅಪಾಯ ಕಾಡುತ್ತದೆ. ಬರೀ ದೈಹಿಕ ರೋಗ ಮಾತ್ರವಲ್ಲದೆ ಅವರು ಮಾನಸಿಕ ಖಾಯಿಲೆಗೂ ತುತ್ತಾಗುತ್ತಾರೆ. ಈ ಸಮುದಾಯದ ಜನರಲ್ಲೂ ಮದ್ಯಪಾನ ಹಾಗೂ ತಂಬಾಕು ಸೇವನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ದುಷ್ಚಟದಿಂದಾಗಿ ಅವರ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಒತ್ತಡದಿಂದಾಗಿ ಮೂಡ್ ಡಿಸಾರ್ಡರ್, ಆತಂಕ, ಬೊಜ್ಜು ಸೇರಿದಂತೆ ಅನೇಕ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. 

LGBTQ+ ಸಮುದಾಯದ ಜನರು ಆರೋಗ್ಯ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು? : 
• ಈ ಸಮುದಾಯದ ಜನರು ಸುರಕ್ಷಿತ ಲೈಂಗಿಕ ಚಟುವಟಿಕೆಗೆ ಆದ್ಯತೆ ನೀಡಬೇಕಾಗುತ್ತದೆ. ಕಾಂಡೋಮ್‌ ಬಳಕೆ, ಗರ್ಭನಿರೋಧಕ ಬಳಕೆ, ಆಟಿಕೆ ಹಾಗೂ ಖಾಸಗಿ ಅಂಗಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಹಾಗೆಯೇ ಎಸ್ ಟಿಡಿ ಪರೀಕ್ಷೆಗೆ ಒಳಪಡಬೇಕು. ಆರೋಗ್ಯಕ ಲೈಂಗಿಕ ಜೀವನದ ಬಗ್ಗೆ ಮಾಹಿತಿ ಹೊಂದಿರಬೇಕು.

ತೃತೀಯ ಲಿಂಗಿಗಳು ಪೂಜಿಸುವ ಈ ಶಕ್ತಿ ಮಾತೆಗೆ ಹುಂಜವೇ ವಾಹನ!

• ಸ್ತನ ಅಥವಾ ಗರ್ಭಕಂಠದ ಕ್ಯಾನ್ಸರ್‌ ನಿಂದ ರಕ್ಷಣೆ ಪಡೆಯಲು ನಿಯಮಿತ ತಪಾಸಣೆಗೆ ಒಳಪಡಬೇಕು. ಇದಕ್ಕಾಗಿ ಮ್ಯಾಮೊಗ್ರಾಮ್ ಅಥವಾ ಪ್ಯಾಪ್ ಸ್ಮೀಯರ್ ಪರೀಕ್ಷೆಯನ್ನು ಮಾಡಬಹುದು.
• ಮಧುಮೇಹ, ಹೃದಯ ಸಂಬಂಧಿ ಖಾಯಿಲೆ ಬರದಂತೆ ನೋಡಿಕೊಳ್ಳಬೇಕು. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಲು ಹಿಂಜರಿಯಬಾರದು.
• ಲಿಂಗ ಬದಲಾವಣೆ ಬಗ್ಗೆ ಆಲೋಚನೆ ಮಾಡ್ತಿದ್ದರೆ ಮೊದಲು ವೈದ್ಯರನ್ನು ಭೇಟಿಯಾಗಿ, ಸೂಕ್ತ ಮಾಹಿತಿ ಪಡೆದ ನಂತ್ರವೇ ಮುಂದಿನ ಹೆಜ್ಜೆ ಇಡಬೇಕು. 
• ಮಾನಸಿಕ ಸಮಸ್ಯೆಗಳನ್ನು ಎಂದಿಗೂ ನಿರ್ಲಕ್ಷ್ಯಿಸಬಾರದು.

ವೈದ್ಯರ ಕೆಲಸವೇನು? : ಸಮಾಜ ನೋಡಿದಂತೆ ಯಾವುದೇ ವೈದ್ಯ ಈ ಸಮುದಾಯದವರನ್ನು ಭಿನ್ನ ದೃಷ್ಟಿಯಲ್ಲಿ ನೋಡುವಂತಿಲ್ಲ. ಎಲ್ಲ ರೋಗಿಗಳಂತೆ ಇವರಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಅವರ ಮನಸ್ಸಿಗೆ ನೋವಾಗದಂತೆ ಎಲ್ಲ ಮಾಹಿತಿ ಸಂಗ್ರಹಿಸಿ, ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯವಾಗಿದೆ. 

Follow Us:
Download App:
  • android
  • ios