Asianet Suvarna News Asianet Suvarna News

Sexomnia : ರಾತ್ರಿ ನಿದ್ರೆಯಲ್ಲಿ ಸಂಗಾತಿ ಜೊತೆ ಮಾಡ್ತಿರಾ ಈ ಕೆಲಸ ?

ನಿದ್ರೆಯಲ್ಲಿ ಓಡಾಡೋರನ್ನು ನೀವು ನೋಡಿರ್ತಿರ. ಗಾಢ ನಿದ್ರೆಯಲ್ಲಿ ಕೆಲವರು ಇಡೀ ಮನೆ ಸುತ್ತಾಡಿದ್ರೆ ಮತ್ತೆ ಕೆಲವರು ಬೆಳಿಗ್ಗೆ ಹೇಳಿದ್ದೆಲ್ಲ ಮತ್ತೆ ಹೇಳ್ತಾರೆ. ಇನ್ನು ಕೆಲವರು ಕಿರುಚಾಡ್ತಾರೆ. ಇವೆಲ್ಲ ಒಂದ್ಕಡೆಯಾದ್ರೆ ಒಂದಿಷ್ಟು ಜನರಿಗೆ ರಾತ್ರಿಯಲ್ಲಿ ಸಂಭೋಗ ಬೆಳೆಸಿದ್ದು ಬೆಳಿಗ್ಗೆ ನೆನಪಿರಲ್ಲ.  
 

Sexomnia Common Symptoms Causes And Treatment
Author
Bangalore, First Published Jan 11, 2022, 12:58 PM IST
  • Facebook
  • Twitter
  • Whatsapp

ಆರೋಗ್ಯ(Health)ಕರ ದಾಂಪತ್ಯ ಜೀವನಕ್ಕೆ ಸೆಕ್ಸ್ (Sex )ಅತ್ಯವಶ್ಯಕ. ಸಂಭೋಗ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಸಂಭೋಗ ಬೆಳೆಸುವ ವೇಳೆ ಇಬ್ಬರ ಒಪ್ಪಿಗೆ ಅಗತ್ಯವಾಗುತ್ತದೆ. ಹಾಗೆಯೇ ಇಬ್ಬರು ಎಚ್ಚರವಿದ್ದಾಗ ಮಾತ್ರ ಶಾರೀರಿಕ ಸಂಬಂಧ ಬೆಳೆಸುವುದು ಒಳ್ಳೆಯದು. ಆದ್ರೆ ನಿದ್ರೆ(Sleep)ಯಲ್ಲಿ ಬೆಳೆಸುವ ಸಂಭೋಗ ಸಾಮಾನ್ಯವಲ್ಲ. ನಿದ್ರೆಯಲ್ಲಿ ಸಂಗಾತಿ ಜೊತೆ ಸಂಭೋಗ ಬೆಳೆಸಲು ಮುಂದಾಗುವ ಅಥವಾ ಹಸ್ತಮೈಥುನ ನಡೆಸುವುದನ್ನು ಸೆಕ್ಸೋಮೇನಿಯಾ (Sexomania) ಎನ್ನಲಾಗುತ್ತದೆ. ಸೆಕ್ಸೋಮೇನಿಯಾ ಒಂದು ಮಾನಸಿಕ ಅಸ್ವಸ್ಥತೆಯಾಗಿದೆ. ಸದಾ  ಲೈಂಗಿಕತೆಯ ಬಗ್ಗೆ ಯೋಚಿಸುವುದು ಮತ್ತು ಅದಕ್ಕೆ ಹಾತೊರೆಯುವುದು ಸೆಕ್ಸೋಮೇನಿಯಾದ ಪ್ರಮುಖ ಲಕ್ಷಣವಾಗಿದೆ. ಇದನ್ನು ಸ್ಲೀಪ್ ಸೆಕ್ಸ್ (Sleep sex )ಎಂದೂ ಕರೆಯುತ್ತಾರೆ. ಸೆಕ್ಸೋಮೇನಿಯಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದು ನಾವಿಲ್ಲಿ ಹೇಳ್ತೆವೆ. 

ಸೆಕ್ಸೋಮೇನಿಯಾ ಎಂದರೇನು?
ಸೆಕ್ಸೋಮೇನಿಯಾ ಇತ್ತೀಚೆಗೆ ಗುರುತಿಸಲ್ಪಟ್ಟ ನಿದ್ರಾಹೀನತೆಯಾಗಿದೆ. ಅನೇಕರು ನಿದ್ರೆಯಲ್ಲಿ ನಡೆಯುವುದು ಅಥವಾ ಮಾತನಾಡುವುದನ್ನು ನಾವು ನೋಡಿರ್ತೇವೆ. ಆದ್ರೆ ಜನರು ನಿದ್ರೆಯಲ್ಲಿರುವಾಗ ಸಂಭೋಗ ಬೆಳೆಸಲು ಮುಂದಾಗ್ತಾರೆ. ಇದನ್ನು ಸೆಕ್ಸೋಮೇನಿಯಾ ಎಂದು ಕರೆಯಲಾಗುತ್ತದೆ. ಒಟ್ಟಾವಾ ವಿಶ್ವವಿದ್ಯಾನಿಲಯದ ಕೆನಡಾದ ವೈದ್ಯ ಜೇ ಪಾಲ್ ಫೆಡೋರೊಫ್ 1996 ರಲ್ಲಿ  ಸೆಕ್ಸೋಮೇನಿಯಾ ಎಂಬ ಪದವನ್ನು ನೀಡಿದರು. ಸೆಕ್ಸೋಮೇನಿಯಾ ಮೋಜಿನ ಜೊತೆಗೆ ಅಪಾಯಕಾರಿಯೂ ಹೌದು. ಯಾಕೆಂದ್ರೆ ನಿದ್ರೆಯಲ್ಲಿ ಸಂಭೋಗ ಬೆಳೆಸುವ ವ್ಯಕ್ತಿಗೆ ಇದ್ರ ಬಗ್ಗೆ ನೆನಪಿರುವುದಿಲ್ಲ. ಸೆಕ್ಸೋಮೇನಿಯಾ ಗಂಭೀರ ಮಾನಸಿಕ ಕಾಯಿಲೆಯಾಗಿದ್ದು ಅದು ಕೋಪ, ಭಯ, ದ್ವೇಷಕ್ಕೆ ಕಾರಣವಾಗುತ್ತದೆ. 

ಸೆಕ್ಸೋಮೇನಿಯಾದ ಲಕ್ಷಣಗಳು
ಸೆಕ್ಸೋಮೇನಿಯಾದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಕೆಲವು ರೋಗಿಗಳು ಕತ್ತಲೆಯಲ್ಲಿ ಅಥವಾ ನಿದ್ರೆಯಲ್ಲಿ ದೇಹವನ್ನು ತಡಕಾಡುತ್ತಾರೆ. ವಿಚಿತ್ರವಾದ ಶಬ್ದಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಅವರು ಹಸ್ತಮೈಥುನದೊಂದಿಗೆ ಲೈಂಗಿಕತೆಯನ್ನು ಪ್ರಾರಂಭಿಸುತ್ತಾರೆ. ಸಂಗಾತಿ ಜೊತೆ ನಿದ್ರೆಯಲ್ಲಿಯೇ ಸಂಭೋಗ ಬೆಳೆಸುತ್ತಾರೆ. ಆದರೆ ಬೆಳಿಗ್ಗೆ ಅವರು ಏನೂ ನೆನಪಿರುವುದಿಲ್ಲ. ನಿದ್ರೆಯಲ್ಲಿ ಅವರಿಗೆ ಸಂಭೋಗ ಬೆಳೆಸಲು ಸಾಧ್ಯವಾಗಿಲ್ಲವೆಂದರೆ ಅವರು ಹಿಂಸೆಗೆ ಇಳಿಯುವ ಸಾಧ್ಯತೆಯಿರುತ್ತದೆ.

ಸೆಕ್ಸೋಮೇನಿಯಾ ಲಾಭ ಮತ್ತು ನಷ್ಟ
ಸಂಗಾತಿ ಮಧ್ಯೆ ಒಪ್ಪಿಗೆಯಿದ್ದು ಸಂಭೋಗ ನಡೆದಾಗ ಸುಖ ಹೆಚ್ಚಿರುತ್ತದೆ. ಸಂಗಾತಿ ಸೆಕ್ಸೋಮೇನಿಯಾದಿಂದ ಬಳಲುತ್ತಿದ್ದಾನೆ ಎಂಬುದು ಗೊತ್ತಾದ ನಂತ್ರವೂ ಆತನ ಜೊತೆ ಸಂಭೋಗ ಬೆಳೆಸಲು ಸಂಗಾತಿ ಸಿದ್ಧವಿದ್ದರೆ ಇದ್ರಿಂದ ಲಾಭವಿದೆ. ನಿದ್ರೆಯಲ್ಲಿ ಸಂಭೋಗ ಬೆಳೆಸಿದ್ರೆ ಹೆಚ್ಚಿನ ಸಂತೋಷ ಪ್ರಾಪ್ತಿಯಾಗುತ್ತದೆ ಎನ್ನುವವರಿದ್ದಾರೆ. ಕೆಲವರ ಲೈಂಗಿಕ ಸಮಸ್ಯೆಯನ್ನು ಇದು ಬಗೆಹರಿಸಲಿದೆ. ಆದ್ರೆ ಸಂಗಾತಿ ಒಪ್ಪಿಗೆಯಿಲ್ಲದೆ ಹೋದಾಗ ಇದು ದಾಂಪತ್ಯ ವಿರಸಕ್ಕೆ ಕಾರಣವಾಗುತ್ತದೆ. 

Relationship Tips: ಸಂಬಂಧ ಚೆನ್ನಾಗಿರಬೇಕಾದ್ರೆ ಈ ಕ್ರಿಯೆಗಳು ಬೇಕೇ ಬೇಕು!

ಸೆಕ್ಸೋಮೇನಿಯಾಕ್ಕೆ ಕಾರಣ 

ಮದ್ಯಪಾನ : ಇದಕ್ಕೆ ಕಾರಣವೇನು ಎಂಬುದರ ಕುರಿತು ಸಂಶೋಧಕರು ಸ್ಪಷ್ಟತೆ ನೀಡಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಮಾದಕ ವಸ್ತು ಮತ್ತು ಆಲ್ಕೋಹಾಲ್ ಸೇವನೆ ಲೈಂಗಿಕ ನಿದ್ರಾಹೀನತೆಗೆ ಮುಖ್ಯ ಕಾರಣವೆಂದು ಹೇಳಲಾಗುತ್ತದೆ. ಅತಿಯಾದ ಮದ್ಯಪಾನ ಮಾಡುವವರಲ್ಲಿ ಇದು ಹೆಚ್ಚಾಗಿ ಕಾಡುವ ಸಾಧ್ಯತೆಯಿದೆ.

ಒತ್ತಡ : ಇದು ತುಂಬಾ ವಿಚಿತ್ರವಾದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಹೆಚ್ಚು ಒತ್ತಡದಲ್ಲಿರುವ, ಸದಾ ಆತಂಕದಲ್ಲಿರುವ ಜನರಿಗೆ ಈ ಸಮಸ್ಯೆ ಕಾಡುವುದು ಹೆಚ್ಚು. 

Healthy Food For Children: ದೊಡ್ಡವರು ತಿನ್ನುವ ಆಹಾರವನ್ನೆಲ್ಲಾ ಮಕ್ಕಳಿಗೂ ಕೊಡಬಹುದಾ ?

ಅಗತ್ಯವಿದೆ ಶಸ್ತ್ರಚಿಕಿತ್ಸೆ : ಈ ರೋಗವು ಸಂಪೂರ್ಣವಾಗಿ ಮಾನಸಿಕವಾಗಿದೆ. ರೋಗದ ಬಗ್ಗೆ  ರೋಗಿಗೆ ತಿಳಿದಿರುವುದಿಲ್ಲ. ಸಂಗಾತಿ ನಿದ್ರೆಯಲ್ಲಿ ಏನಾಯ್ತು ಎಂಬುದನ್ನು ಹೇಳುವವರೆಗೂ ಅವರಿಗೆ ಇದರ ಅರಿವಿರುವುದಿಲ್ಲ. ಪಾಲುದಾರರಲ್ಲಿ ಸ್ಲೀಪ್ ಸೆಕ್ಸ್ ಲಕ್ಷಣ ಕಾಣಿಸಿಕೊಂಡಿದೆ ಎಂಬ ಸಂದರ್ಭದಲ್ಲಿ ಅವರನ್ನು ಎಚ್ಚರಿಸುವ ಅಗತ್ಯವಿದೆ. ರಾತ್ರಿ ನಡೆದ ಘಟನೆಯನ್ನು ವಿವರಿಸಬೇಕಾಗುತ್ತದೆ. ಅಲ್ಲದೆ   ಲೈಂಗಿಕಶಾಸ್ತ್ರಜ್ಞ ಅಥವಾ ಮನಶ್ಶಾಸ್ತ್ರಜ್ಞರನ್ನು ಭೇಟಿ ಮಾಡುವ ಅಗತ್ಯವಿದೆ. ಆರಂಭದಲ್ಲಿಯೇ ಇದಕ್ಕೆ ಚಿಕಿತ್ಸೆ ಸಿಕ್ಕಲ್ಲಿ ಇದನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದು.  

Follow Us:
Download App:
  • android
  • ios