Asianet Suvarna News Asianet Suvarna News

ಶವ ಸಂಭೋಗಕ್ಕೆ ಕಠಿಣ ಶಕ್ಷೆ?:  ಇಂಥ ಕೃತ್ಯಕ್ಕಿಳಿಯುವಷ್ಟು ಸ್ಯಾಡಿಸ್ಟ್ ಆಗೋದ್ಯಾಕೆ?

ಹೈದರಾಬಾದ್‌ ದಿಶಾ ಅತ್ಯಾಚಾರದ ವೇಳೆ ಆರೋಪಿಗಳು ಶವದೊಂದಿಗೂ ಸಂಭೋಗ ಮಾಡಿದ ಸುದ್ದಿ ಸದ್ದು ಮಾಡಿತ್ತು. ಇದೀಗ ಮತ್ತೆ ಕರ್ನಾಟಕ ಹೈ ಕೋರ್ಟ್ ಶವ ಸಂಭೋಗ ಮಾಡೋರಿಗೆ ಕಠಿಣ ಶಿಕ್ಷೆ ನೀಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದು, ಈ ಬಗ್ಗೆ ಚರ್ಚೆಯಾಗುತ್ತಿದೆ. ಏನಿದು ದುಷ್ಕೃತ್ಯ? 

sex with dead bodies called Necrophilia quite common in animals what is this psychological disorder
Author
First Published Jun 1, 2023, 12:52 PM IST

ಮನುಷ್ಯ ಪ್ರಾಣಿಗಳಿಗಿಂತ ವಿಭಿನ್ನ ಅನ್ನೋದು ಗೊತ್ತು. ಆದರೆ, ಈ ಸೆಕ್ಸ್ ವಿಚಾರದಲ್ಲಿ ಕೆಲವೊಮ್ಮೆ ಪ್ರಾಣಿಗಳಿಗಿಂತಲೂ ಹೀನಾಯವಾಗಿ ನಡೆದುಕೊಳ್ಳುವುದು ಮಾತ್ರವಲ್ಲ, ನಿಸರ್ಗಕ್ಕೇ ವಿರುದ್ಧವಾಗಿ ನಡೆದುಕೊಳ್ಳುತ್ತಾನೆ. ಅದ್ಯಾಕೆ ಇಷ್ಟು ಚಿತ್ರ, ವಿಚಿತ್ರ ತೋರುತ್ತಾನೋ ಅರ್ಥವಾಗೋಲ್ಲ. ಅದೆಷ್ಟು ವಿಕೃತವಾಗಿ ಬಿಹೇವ್ ಮಾಡುತ್ತಾನೆಂಬುದನ್ನು ಇಮ್ಯಾಜೀನ್ ಮಾಡಲೂ ಸಾಧ್ಯವಿಲ್ಲದಂತಾಡುತ್ತಾನೆ ಈ 'ವಿವೇಕಿ'. 

ಹಾಸನದಲ್ಲಿ ಈ ಹಿಂದೆ ಭಿಕ್ಷುಕಿಯೊಬ್ಬಳನ್ನು ಅತ್ಯಾಚಾರವೆಸಿಗದ ದುಷ್ಕರ್ಮಿಗಳು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದರು. ಆ ಮೃತ ದೇಹದೊಂದಿಗೂ ಸಂಭೋಗ ನಡೆಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಗಲೂ ಮನುಷ್ಯನ ಇಂಥ ಕ್ರೂರತ್ವದ ಬಗ್ಗೆ ಚರ್ಚೆಗಳಾಗಿತ್ತು. ಹೈದರಾಬಾದ್‌ ದಿಶಾ ಹತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ವೈದ್ಯೆಯನ್ನು ಗ್ಯಾಂಗ್‌ರೇಪ್ ಮಾಡಿ ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಂದ ಬಳಿಕವೂ ಶವದ ಮೇಲೆಯೇ ಆರೋಪಿಗಳು ಎರಗಿದ್ದರು. ರೇಪ್ ಮಾಡಿದ್ದರು. ಈ ಆಘಾತಕಾರಿ ವಿಚಾರವೂ ಮನುಷ್ಯ ಕ್ರೂರೀಯ ನಡವಳಿಕೆಯನ್ನು ಪ್ರಶ್ನಿಸುವಂತೆ ಮಾಡಿತ್ತು. 

ಇದೇನು ಮಾನಸಿಕ ರೋಗವೇ?
ಅತ್ಯಾಚರವೆಸಗುವುದು ಕ್ರೂರತ್ವದ ಪರಮಾವಧಿ. ಅಂಥದಲ್ಲಿ ಶವದೊಂದಿಗೂ ಸಂಭೋಗ ನಡೆಸುವುದು ಅಂದ್ರೆ ಆ ಮನುಷ್ಯನ (Human Being) ಮನಸ್ಸಲ್ಲಿ ಅದೇನು ನಡೆಯುತ್ತಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಅಬ್ಬಾ ಏನು ಹೇಳುವುದು ಈ ಕ್ರೂರತೆಗೆ? ಇದೊಂದು ಮಾನಸಿಕ ಕಾಯಿಲೆಯೇ? ವಿಕೃತ ಮನಸ್ಸುಗಳು ಒಂದೆಡೆ ಸೇರಿದಾಗ ಇಂಥ ಪೈಶಾಚಿಕ ವರ್ತನೆಗಳು ಎಲ್ಲೆ ಮೀರುತ್ತವೆಯೇ? ಈ ರೀತೆ ಶವದೆಡೆಗೆ ಆಕರ್ಷಿತರಾಗಿ ಸಂಭೋಗ ನಡೆಸುವ ವಿಕೃತ್ಯಕ್ಕೆ ಮನೋ ವೈದ್ಯಕೀಯ ಭಾಷೆಯಲ್ಲಿ (Medical Term) ನೆಕ್ರೋಫೀಲಿಯಾ (Necrophilia)ಎನ್ನುತ್ತಾರೆ. 

ಶವಗಳ ಅತ್ಯಾಚಾರ ಮಾಡುವ ಕಾಮುಕರಿಗೆ ಶಿಕ್ಷೆಯ ಚೌಕಟ್ಟು ರೂಪಿಸಿ: ಕೇಂದ್ರಕ್ಕೆ ಕರ್ನಾಟಕ ಹೈಕೋರ್ಟ್‌ ಶಿಫಾರಸು

ಏನಿದು ನೆಕ್ರೋಫೀಲಿಯಾ ?
ಶವಗಳೆಡೆ ಆಕರ್ಷಿತರಾಗಿ, ಅದರೊಂದಿಗೆ ಸಂಭೋಗ ನಡೆಸುವುದಕ್ಕೆ ನೆಕ್ರೋಫೀಲಿಯಾ ಎನ್ನುವುದು. ಕಪ್ಪೆ, ಸರೀಸೃಪ (Reptiles), ಪಕ್ಷಿಗಳು ಅದರಲ್ಲಿಯೂ ವಿಶೇಷವಾಗಿ ಕಾಗೆಗಳಲ್ಲಿ ಹೆಚ್ಚು ಹಾಗೂ ಹಲವು ಪ್ರಾಣಿಗಳಲ್ಲೂ ಕಂಡುಬರುತ್ತದೆ. ಕಾಗೆಗಳ ಶವ ಸಂಭೋಗವೂ ಹಿಂದೊಮ್ಮೆ ದೊಡ್ಡ ಸುದ್ದಿಯಾಗಿತ್ತು. ಆದರೆ, ಮನುಷ್ಯರಲ್ಲಿ ಈ ವರ್ತನೆ ಬಹಳ ಅಪರೂಪ. ಹಾಗಂಥ ಇಲ್ಲವೇ ಇಲ್ಲವೆಂದೇನಲ್ಲ. ಇತಿಹಾಸ ಕೆದಕಿದರೆ, ಸೈಕೋಗಳ ಕ್ರೈಂ ಫೈಲ್ ತೆಗೆದರೆ ಇಂಥ ವಿಕೃತಿಯ ಒಂದಿಷ್ಟು ಉದಾಹರಣೆಗಳು ಸಿಗುತ್ತವೆ. 

ಯಾಕೆ ಇಂಥ ವಿಕೃತಿ?
ಶವ ಯಾವುದೇ ತಿರಸ್ಕಾರ ತೋರಿಸುವುದಿಲ್ಲ ಎಂಬೊಂದು ಕಾರಣಕ್ಕೆ ಮನುಷ್ಯ ಇಂಥದ್ದೊಂದು ವಿಕೃತ್ಯಕ್ಕೆ ಕೈ ಹಾಕುತ್ತಾನೆ. ತಮ್ಮ ಬಯಕೆಗಳನ್ನು ರಿಜೆಕ್ಟ್ ಮಾಡೋಲ್ಲ ಎನ್ನುವ ಒಂದೇ ಕಾರಣಕ್ಕೆ ಇಂಥ ಕೆಲಸ ಮಾಡುತ್ತಾನೆ. ಈ ನೆಕ್ರೋಫೈಲ್‌ಗಳ ವರ್ತನೆ ಅಧ್ಯಯನ ಮಾಡಿದವರಿಗೆ ಇನ್ನೂ ಕಾರಣಗಳೂ ಸಿಕ್ಕಿವೆ. ಅವುಗಳಲ್ಲಿ ಈ ಕೆಳಗಿನವು ಮುಖ್ಯವಾದದ್ದು...

- ಶೇ.68ರಷ್ಟು ಈ ವಿಕೃತಕಾಮಿಗಳು ಯಾವುದಕ್ಕೂ ತಡೆಯೊಡ್ಡದ ಸಂಗಾತಿ (Partner) ಬೇಕೆಂಬ ಕಾರಣಕ್ಕೆ ಶವದೊಂದಿಗೆ ಸಂಭೋಗಿಸುತ್ತಾರೆ. 
- ಶೇ.21ರಷ್ಟು ಶವಸಂಭೋಗಿಗಳು ತಾವು ಕಳೆದುಕೊಂಡ ಸಂಗಾತಿ ಜೊತೆ ಸೇರುವ, ಅವರ ನಿಧನದ ನಂತರವೂ ಹೊಂದುವ ಬಯಕೆ ಇರುತ್ತದೆ.
- ಇನ್ನು ಶೇ.15ರಷ್ಟು ಮಂದಿ ಸತ್ತ ದೇಹಗಳೆಡೆ ವಿಚಿತ್ರ ಆಕರ್ಷಣೆಗೆ ಒಳಗಾಗಿರುತ್ತಾರೆ. 
- ಶೇ.15ರಷ್ಟು ನೆಕ್ರೋಫೈಲ್‌ಗಳು loneliness ಓವರ್ ಕಮ್ ಮಾಡಿಕೊಳ್ಳಲು ಶವದೊಂದಿಗೆ ಬದುಕಿದ್ದಿದೆ.
- ಇನ್ನು ಶೇ.12ರಷ್ಟು ಈ ವಿಕೃತಿಯವರು ಶವದ ಮೇಲಾದರೂ ತಮ್ಮ ಅಧಿಕಾರ ಚಲಾಯಿಸಿ Confidence ಹೆಚ್ಚಿಸಿಕೊಳ್ಳುವ ಇಚ್ಛೆ ಹೊಂದಿರುತ್ತಾರಂತೆ. 

ಹೆಣದೊಂದಿಗೆ 7 ವರ್ಷ ಸಂಸಾರ!
ಹೆಣದೊಂದಿಗೇ ಸಂಸಾರ ನಡೆಸಿದ, ಹಲವು ದಿನಗಳು ಕಾಲ ಬದುಕಿದ ಸುದ್ದಿ ಕೇಳಿರುತ್ತೀರಿ. ಅವಕ್ಕೂ ಇದೇ ಮನಸ್ಥಿತಿ ಕಾರಣ. ಜರ್ಮನಿಯ 52 ವರ್ಷದ ರೇಡಿಯಾಲಜಿ ಟೆಕ್ನಾಲಜಿಸ್ಟ್ ಕಾರ್ಲ್ ತಾಂಜ್ಲರ್ ಎಂಬಾತ ಚಿಕಿತ್ಸೆ ಬೇಡಿ ಬಂದ 21 ವರ್ಷದ ಅಮೆರಿಕನ್ ಬೆಡಗಿ ಎಲೆನಾ ಹೆಲೆನ್ ಎಂಬಾಕೆಯನ್ನು ವಿಪರೀತವಾಗಿ ಹಚ್ಚಿಕೊಂಡಿದ್ದ. ಆಕೆ ಈತನೆಡೆಗೆ ಯಾವುದೇ ರೀತಿಯಲ್ಲಿಯೂ ಆಕರ್ಷಿತಳಾಗಿರಲಿಲ್ಲ. ಆದರೆ, ಟಿಬಿ ಅವಳನ್ನು ಬಲಿ ತೆಗೆದುಕೊಂಡಿತ್ತು. ಆಕೆ ಸತ್ತ ಎರಡು ವರ್ಷಗಳ ನಂತರ ತಾಂಜ್ಲರ್ ಅವಳ ಕೊಳೆತ ಶವವನ್ನು ಹೊರ ತೆಗೆದು, ಮನೆಗೆ ತೆಗೆದುಕೊಂಡು ಹೋಗಿದ್ದು. ಹೆಣಕ್ಕೇ ಬಟ್ಟೆ ತೊಡಿಸಿ, ವಾಸನೆ ಬಾರದಂತೆ ಒಂದಿಷ್ಟು ಔಷಧಿ ಸಿಂಪಡಿಸಿ, ಅದರೊಟ್ಟಿಗೆ ಏಳು ವರ್ಷಗಳು ಜೀವನ ನಡೆಸಿದ್ದ! ಅಬ್ಬಾ ಕೇಳಲೂ ಹಿಂಸೆಯಾಗುತ್ತೆ ಅಲ್ಲವೇ? ಅಷ್ಟೇ ಅಲ್ಲ ಈ ವಿಕೃತ ಕಾಮಿ, ಎಲೆನಾ ಯೋನಿಗೆ (Vagina) ಪೇಪರ್ ಕೊಳವೆ ಇಟ್ಟು ಸಂಭೋಗ ನಡೆಸುತ್ತಿದ್ದನಂತೆ.  ಈ ವಿಷಯ ವೈದ್ಯಲೋಕವನ್ನೇ (Medical World) ಬೆಚ್ಚಿ ಬೀಳಿಸಿತ್ತು. 

Shocking! ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್‌ ಲಾಕ್‌! ನೆರೆಯ ದೇಶದಲ್ಲಿ ಇದೆಂತಾ ದುಸ್ಥಿತಿ..

ಈ ವಿಕೃತ್ಯಕ್ಕೆ ಆರ್ಥಿಕ ಕಾರಣವೂ ಇರಬಹುದು!
ತಾಯಿಗೆ ಬರುತ್ತಿದ್ದ ಪೆನ್ಷನ್ ಹಣಕ್ಕಾಗಿ ಅಮೆರಿಕನ್ ಮಹಿಳೆಯೊಬ್ಬಳು ತಾಯಿ ಸತ್ತು ಎರಡು ವರ್ಷಗಳಾದರೂ ಅಮ್ಮನ ಮೃತ ದೇಹವನ್ನು ಸೋಫಾ ಮೇಲೆ ಕೂರಿಸಿ, ನೋಡಿದವರನ್ನೂ  ವಂಚಿಸುತ್ತಿದ್ದ ಸುದ್ದಿ ಕೂಡಾ ಸದ್ದು ಮಾಡಿತ್ತು. ಒಮ್ಮೆ ಕರಾಚಿಯಲ್ಲೊಬ್ಬ ಮಹಿಳಾ ಮೃತ ದೇಹಗಳನ್ನು ಸಮಾಧಿಯಿಂದ ಹೊರತೆಗೆದು ಅದರೊಂದಿಗೆ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದ. ಪಾಕಿಸ್ತಾನದಲ್ಲೂ ಇಂಥ ಕೃತ್ಯ ನಡೆದಿದೆ. ಪ್ರಾಚೀನ ಈಜಿಪ್ಟಿಯನ್ನರ ಕಾಲದಲ್ಲಿಯೂ ಇಂಥ ವರ್ತನೆಯ ಉದಾಹರಣೆಗಳಿವೆ. ಕಿಂಗ್ ಹೆರೋಡ್ ಎಂಬಾತ ತನ್ನ 2ನೇ ಮಡದಿ ನಂತರ ಆಕೆಯನ್ನು ಜೇನಿನಲ್ಲಿ ಕೋಟೋ ಮಾಡಿ ಸುಮಾರು 7 ವರ್ಷಗಳ ಕಾಲ ಶವದೊಂದಿಗೆ ಬದುಕಿದ್ದನಂತೆ. ಈ ರೀತಿ  ನೆಕ್ರೋಫೀಲಿಯಾ ಇರುವ ಅರ್ಧದಷ್ಟು ಜನರಿಗೆ ಪರ್ಸನಾಲಿಟಿ ಡಿಸಾರ್ಡರ್ (Personality Disorder) ಇದ್ದರೆ, ಶೇ.11ರಷ್ಟು ಜನರು ಸಂಪೂರ್ಣ ಸೈಕೋಟಿಕ್ ಆಗಿದ್ದರು.

ಪ್ರಾಣಿಗಳಲ್ಲುಂಟು 
1960ರಲ್ಲಿ ಸತ್ತ ಅಳಿಲಿನ ಜೊತೆ ಸಂಭೋಗ ಮಾಡುತ್ತಿದ್ದ ಡೇವ್ ಎಂಬ ಅಳಿಲನ್ನು ನೋಡಿದ ರಾಬರ್ಟ್ ಡಿಕರ್‌ಮ್ಯಾನ್ ಎಂಬುವವನು ಇದಕ್ಕೆ ಡೇವಿಯನ್ ಬಿಹೇವಿಯರ್ ಎಂದೇ ಹೆಸರಿಟ್ಟ. ಈಗಲೂ ಪ್ರಾಣಿಗಳಲ್ಲಿ ಈ ಶವ ಸಂಭೋಗ ಕಾಣಸಿದರೆ, ಡೇವಿಯನ್ ಬಿಹೇವಿಯರ್ ಎಂದೇ ಕರೆಯಲಾಗುತ್ತದೆ. ಶೇ.4ರಷ್ಟು ಸಂದರ್ಭಗಳಲ್ಲಿ ಕಾಗೆಗಳು ಈ ಶವ ಸಂಭೋಗ ನಡೆಸುತ್ತವೆ. ಕೆಲವು ಹೆಣ್ಣು ಕೀಟಗಳೂ ಗಂಡನ್ನು ಸಾಯಿಸಿ ಅದರೊಂದಿಗೆ ಸಂಭೋಗ ನಡೆಸುವುದಲ್ಲೇ, ತಿನ್ನುವುದನ್ನೂ ಮಾಡುತ್ತವೆ. 

Follow Us:
Download App:
  • android
  • ios