Asianet Suvarna News Asianet Suvarna News

Throat Pain: ಚಳಿಗಾಲದಲ್ಲಿ ಕಾಮನ್ ಬಿಡಿ, ಹೇಳಿ ಬೈ ಬೈ ಹೀಗೆ

ಚಳಿಗಾಲದಲ್ಲಿ ದೇಹ ವಿವಿಧ ರೀತಿಯ ಸೋಂಕಿಗೆ ತುತ್ತಾಗುವುದು ಹೆಚ್ಚು. ಅದರಲ್ಲೂ ಗಂಟಲು ನೋವು, ಶೀತದ ಸಮಸ್ಯೆ ಈ ಸಮಯದಲ್ಲಿ ಅತಿ ಸಾಮಾನ್ಯ. ಸ್ವಲ್ಪ ಕಾಳಜಿ ವಹಿಸಿದರೆ ಗಂಟಲು ನೋವಿಗೆ ಸುಲಭವಾಗಿ ಬೈ ಹೇಳಬಹುದು. 
 

Say goodbye to throat pain easily
Author
First Published Dec 10, 2022, 1:33 PM IST

ಚಳಿಗಾಲದಲ್ಲಿ ವಿವಿಧ ರೀತಿಯ ನೋವುಗಳು ದೇಹವನ್ನು ಬಾಧಿಸುತ್ತವೆ. ನೆಗಡಿ, ಅಲರ್ಜಿಯಿಂದ ಮೂಗು ಸೋರುವುದು, ಮಂಡಿನೋವು, ಕೀಲು ನೋವು, ಗಂಟಲು ನೋವು...ಒಂದೇ ಎರಡೇ? ಗಂಟಲು ನೋವು ಚಳಿಗಾಲದಲ್ಲಿ ಅತಿ ಸಾಮಾನ್ಯ. ಗಂಟಲಿನಲ್ಲಿ ಕೆರೆತ, ಕಫ ಕಟ್ಟುವುದು ಹೆಚ್ಚು. ಪರಿಣಾಮವಾಗಿ ತಿಂಗಳಾನುಗಟ್ಟಲೆ ನೆಗಡಿ, ಕೆಮ್ಮು ಕಡಿಮೆ ಆಗುವುದೇ ಇಲ್ಲ. ಇದರಿಂದ ಸಾಕಷ್ಟು ಕಿರಿಕಿರಿಯಾಗುತ್ತದೆ. ಹೀಗಾಗಿ, ಇವೆಲ್ಲದರಿಂದ ಬಚಾವಾಗಲು ಸ್ವಲ್ಪ ಗಮನ ನೀಡುವುದು ಅಗತ್ಯ. ಅದರಲ್ಲೂ ಗಂಟಲು ನೋವಿನ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಸಮಸ್ಯೆ ವಿಪರೀತಕ್ಕೆ ಹೋಗುವ ಸಾಧ್ಯತೆ ಅಧಿಕವಾಗಿರುವುದರಿಂದ ಮನೆಯಲ್ಲೇ ಇರುವ ಸಾಮಾನ್ಯ ಅಡುಗೆ ಪದಾರ್ಥ ಹಾಗೂ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡುತ್ತ ಗಂಟಲು ನೋವನ್ನು ಕಡಿಮೆ ಮಾಡಿಕೊಳ್ಳಬಹುದು, ದೂರವಿಡಬಹುದು. ಆಹಾರದಲ್ಲಿ ಬೆಳ್ಳುಳ್ಳಿ ಸೇರಿದಂತೆ ಹಲವು ರೀತಿಯ ಪದಾರ್ಥಗಳನ್ನು ಚಳಿಗಾಲದಲ್ಲಿ ಬಳಕೆ ಮಾಡುತ್ತಿರಬೇಕು. ತಣ್ಣನೆ ತಿನಿಸು ತಿನ್ನುವುದರಿಂದ, ಕರಿದ ತಿಂಡಿಗಳಿಂದ ದೂರವಿರಬೇಕು. ಈ ಸಮಯದಲ್ಲಿ ಬ್ಯಾಕ್ಟೀರಿಯಾ, ಅಲರ್ಜಿ ಹಾವಳಿ ಹೆಚ್ಚು. ಹೀಗಾಗಿ, ದೇಹದಲ್ಲಿ ರೋಗ ನಿರೋಧಕ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಗಂಟಲನ್ನು ಸುರಕ್ಷಿತವಾಗಿಟ್ಟುಕೊಂಡರೆ ಶೀತ, ನೆಗಡಿ, ಕೆಮ್ಮು ಸುಲಭದಲ್ಲಿ ಕಾಡುವುದಿಲ್ಲ. 

•    ಬೆಳ್ಳುಳ್ಳಿ (Garlic) ಬಳಕೆ
ಚಳಿಗಾಲದಲ್ಲಿ (Winter) ಅಡುಗೆಗೆ (Food) ಬೆಳ್ಳುಳ್ಳಿಯನ್ನು ಹೆಚ್ಚು ಬಳಕೆ ಮಾಡುವುದು ಉತ್ತಮ. ಇದರಲ್ಲಿರುವ ಎಲಿಸಿನ್ ಎನ್ನುವ ಅಂಶ ಆಂಟಿ-ಇನ್ ಫ್ಲಮೇಟರಿ (Anti-Inflammatory) ಗುಣ ಹೊಂದಿದ್ದು, ಗಂಟಲಿನಲ್ಲಿ ನೆಲೆಯಾಗಿರುವ ಬ್ಯಾಕ್ಟೀರಿಯಾ ವಿರುದ್ಧ ಸಶಕ್ತವಾದ ಹೋರಾಟ ನಡೆಸುತ್ತದೆ. ಹಾಗೆಯೇ, ದೇಹದ ವಿವಿಧೆಡೆ ಉಂಟಾಗುವ ನೋವು (Pain) ಶಮನಕ್ಕೂ ಬೆಳ್ಳುಳ್ಳಿ ಉತ್ತಮ.

ಚಳಿಗಾಲದಲ್ಲಿ ಹರಡುವ ರೋಗಗಳಿಗೆ ಮನೆಮದ್ದು ಇಲ್ಲಿವೆ

•    ಉಪ್ಪು (Salt) ನೀರಿನಲ್ಲಿ ಬಾಯಿ ಮುಕ್ಕಳಿಸಿ
ಚಳಿಗಾಲದ ಬ್ಯಾಕ್ಟೀರಿಯಾ (Bacteria) ದೇಹ ಪ್ರವೇಶಿಸುವುದು ಮೂಗು, ಗಂಟಲಿನ ಮುಖಾಂತರವೇ ಆದ್ದರಿಂದ ಮೊದಲು ಮೂಗು ಸೋರಲು ಶುರುವಾಗಬಹುದು ಅಥವಾ ಗಂಟಲು ಕೆರೆತ ಆರಂಭವಾಗಬಹುದು. ಸಣ್ಣ ಲಕ್ಷಣ (Symptom) ಕಂಡುಬಂದರೂ ಹದವಾದ ಬಿಸಿ ನೀರಿಗೆ (Hot Water) ಉಪ್ಪು ಬೆರೆಸಿ ಗಂಟಲು ಮುಕ್ಕಳಿಸಿ. ಇದರಿಂದ ಬ್ಯಾಕ್ಟೀರಿಯಾ ಪ್ರಭಾವ ಕಡಿಮೆ ಆಗುತ್ತದೆ. ಎಷ್ಟೋ ಬಾರಿ ನೆಗಡಿ (Cold) ಆಗುವುದು ತಪ್ಪುತ್ತದೆ. 

•    ಶುಂಠಿ ಚಹಾ (Ginger)
ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಏನಾದರೂ ಕುಡಿಯುವ ಆಸೆ ಸಹಜ. ಅದಕ್ಕಾಗಿ, ಟೀ ಮತ್ತು ಕಾಫಿ ಕುಡಿಯುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದೇನೂ ಅಲ್ಲ. ಬದಲಿಗೆ ಶುಂಠಿ ಬೆರೆಸಿದ ಕಷಾಯ ಅಥವಾ ಟೀ ಮಾಡಿಕೊಂಡು ಕುಡಿಯುವುದು ಉತ್ತಮ. ಶುಂಠಿಯಿಂದ ದೇಹಕ್ಕೆ ಉಷ್ಣತೆ ದೊರೆತು ನೋವು ಕಡಿಮೆ ಆಗುತ್ತದೆ. ತುಳಸಿ ಎಲೆಗಳನ್ನೂ ಬೆರೆಸಿ ಕುಡಿಯಬಹುದು.

•    ಜ್ಯೇಷ್ಠಮಧು (Jeshtamadhu)
ಜ್ಯೇಷ್ಠಮಧು ಗಂಟಲು ನೋವಿಗೆ (Throat Pain) ಅತ್ಯುತ್ತಮ ಪರಿಹಾರ. ಇದನ್ನು ಮಾಡಿಕೊಳ್ಳುವುದು ಸಹ ಸುಲಭ. ಜ್ಯೇಷ್ಠಮಧುವಿನ ಚಿಕ್ಕ ಚೂರನ್ನು ಬಾಯಿಯಲ್ಲಿ ಹಲ್ಲುಗಳ (Teeth) ನಡುವೆ ಇರಿಸಿಕೊಂಡು ಸ್ವಲ್ಪಸ್ವಲ್ಪವೇ ಅಗಿಯುತ್ತಿರಿ. ನಿಧಾನವಾಗಿ ಜ್ಯೇಷ್ಠಮಧುವಿನ ರಸ ಗಂಟಲನ್ನು ಸ್ಪರ್ಶಿಸುತ್ತಿದ್ದರೆ ಅಲ್ಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ. ರಾತ್ರಿ ಮಲಗುವ ಸಮಯದಲ್ಲಿ ಬಾಯಲ್ಲಿ ಇದನ್ನು ಇರಿಸಿ ಮಲಗಿದರೆ ಗಂಟಲು ಕೆರೆತದ ಸಮಸ್ಯೆಯಾಗದೆ ನಿದ್ರೆ ಬರುತ್ತದೆ. 

ಶೀತ – ಜ್ವರಕ್ಕೆ ಈ ಯೋಗ ಮುದ್ರೆ ಬೆಸ್ಟ್

•    ಬಿಸಿನೀರು (Warm Water) 
ಗಂಟಲು ಸೋಂಕಿಗೆ (Infection) ಒಳಗಾಗಿರುವ ಸಮಯದಲ್ಲಿ ತಣ್ಣನೆಯ ನೀರನ್ನು ಕುಡಿಯಬೇಡಿ. ಬಿಸಿನೀರು ಸೇವನೆಯಿಂದ ಸಮಸ್ಯೆ ಹೆಚ್ಚದಂತೆ ನೋಡಿಕೊಳ್ಳಬಹುದು. ತೀರ ಬಿಸಿಯಾಗಿರಬೇಕು ಎಂದೇನೂ ಇಲ್ಲ. ಸ್ವಲ್ಪ ಬೆಚ್ಚಗಿದ್ದರೆ ಸಾಕು. ಹಾಗೆಯೇ, ಬಿಸಿನೀರಿನ ಹಬೆ ತೆಗೆದುಕೊಳ್ಳುವುದು ಉತ್ತಮ.

•    ಫ್ರೆಶ್ ಜ್ಯೂಸ್ (Fresh Juice)
ಚಳಿಗಾಲದಲ್ಲಿ ಜ್ಯೂಸ್ ಸೇವನೆ ಬೇಕೇ ಎನಿಸಬಹುದು. ಆದರೆ, ತಾಜಾ ಹಣ್ಣುಗಳ ಜ್ಯೂಸ್ ನಿಂದ ಸಾಕಷ್ಟು ಲಾಭವಿದೆ. ಅರಿಶಿಣ (Turmeric), ತಾಜಾ ಹಣ್ಣು, ಓಟ್ ಮೀಲ್, ಶುಂಠಿ ಬೆರೆಸಿ ಜ್ಯೂಸ್ ಮಾಡಿಕೊಳ್ಳಬಹುದು. ಇದರಿಂದ ದೇಹಕ್ಕೆ ಬೇಕಾದ ಮಿನರಲ್ಸ್, ವಿಟಮಿನ್ (Vitamin) ದೊರೆತು ಸೋಂಕಿನ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. 

Follow Us:
Download App:
  • android
  • ios