ಯೂಟ್ಯೂಬ್‌ ವಿಡಿಯೋ ನೋಡಿ ಮೆದುಳಿಗೆ ಚಿಪ್‌ ಅಳವಡಿಸಿಕೊಳ್ಳಲು ಸ್ವಯಂ ಆಪರೇಷನ್‌ ಮಾಡ್ಕೊಂಡ ಭೂಪ: ಆಮೇಲೇನಾಯ್ತು ನೋಡಿ..

ತನ್ನ ಗುರಿ ಸಾಧಿಸುವ ಪ್ರಯತ್ನದ ಭಾಗವಾಗಿ ಮೆದುಳಿನಲ್ಲಿ ಮೈಕ್ರೋಚಿಪ್ ಅಳವಡಿಸುವುದು ಆತನ ಯೋಜನೆಯಾಗಿತ್ತು. ನರಶಸ್ತ್ರಚಿಕಿತ್ಸಕರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸುವ ವಿಡಿಯೋಗಳನ್ನು ಆತ ಯೂಟ್ಯೂಬ್‌ನಲ್ಲಿ ವೀಕ್ಷಿಸುತ್ತಿದ್ದ ಎಂದೂ ಹೇಳಿಕೊಂಡಿದ್ದ. 

russian man almost dies after drilling chip inside brain in surgery at home ash

ಮಾಸ್ಕೋ (ಜುಲೈ 21, 2023):  ಒಬ್ಬ ವ್ಯಕ್ತಿಯು ತನ್ನ ಮೆದುಳಿಗೆ ಸ್ವಯಂ ಆಪರೇಷನ್ ಮಾಡಿಕೊಳ್ಳಲು ಹೋಗಿ ಬಹುತೇಕ ಸಾಯುವ ಸ್ಥಿತಿ ತಲುಪಿರುವ ಘಟನೆ ರಷ್ಯಾದಲ್ಲಿ ನಡೆದಿದೆ. ಹ್ಯಾಂಡ್‌ಹೆಲ್ಡ್‌ ಡ್ರಿಲ್‌ ಬಳಸಿಕೊಂಡು ಸರ್ಜರಿ ಮಾಡಿಕೊಳ್ಳಲು ಹೋಗಿ ಈಗ ಆಸ್ಪತ್ರೆಗೆ ಸೇರಿದ್ದು, ಸಾವು - ಬದುಕಿನ ನಡುವೆ ಹೋರಾಟ ಮಾಡ್ತಿದ್ದಾನೆ ಎಂದು ನ್ಯೂಸ್‌ವೀಕ್‌ ವರದಿ ಹೇಳುತ್ತದೆ. 

ಮಿಖೇಲ್‌ ರಾಡುಗಾ ಎಂಬ ವ್ಯಕ್ತಿ ತನ್ನ ಕನಸುಗಳನ್ನು ನಿಯಂತ್ರಿಸಲು ಅಪಾಯಕಾರಿ ಕುಶಲತೆಯನ್ನು ಪ್ರದರ್ಶಿಸಿದ್ದಾನೆ ಎಂದೂ ಮಾಧ್ಯಮ ತಿಳಿಸಿದೆ. ತನ್ನ ಗುರಿ ಸಾಧಿಸುವ ಪ್ರಯತ್ನದ ಭಾಗವಾಗಿ ಮೆದುಳಿನಲ್ಲಿ ಮೈಕ್ರೋಚಿಪ್ ಅಳವಡಿಸುವುದು ಆತನ ಯೋಜನೆಯಾಗಿತ್ತು. ಇನ್ನು, ರಷ್ಯಾದ ನೊವೊಸಿಬಿರ್ಸ್ಕ್ ನಗರದ ವ್ಯಕ್ತಿ ತನ್ನ ಪ್ರಯತ್ನದ ಚಿತ್ರಗಳನ್ನು ತನ್ನ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾನೆ. ನರಶಸ್ತ್ರಚಿಕಿತ್ಸಕರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ತೋರಿಸುವ ವಿಡಿಯೋಗಳನ್ನು ಆತ ಯೂಟ್ಯೂಬ್‌ನಲ್ಲಿ ವೀಕ್ಷಿಸುತ್ತಿದ್ದ ಎಂದೂ  ಹೇಳಿಕೊಂಡಿದ್ದ.

ಇದನ್ನು ಓದಿ; ರಾಜಸ್ಥಾನದ ಕೋಟಾದ ರಸ್ತೆಗಳಲ್ಲಿ ಬೃಹತ್‌ ಮೊಸಳೆಗಳ ತಿರುಗಾಟ: ವಿಡಿಯೋ ವೈರಲ್‌

"ನಾನು ಡ್ರಿಲ್ ಅನ್ನು ಖರೀದಿಸಿದೆ, ನನ್ನ ತಲೆಯಲ್ಲಿ ರಂಧ್ರವನ್ನು ಕೊರೆದು ನನ್ನ ಮೆದುಳಿನಲ್ಲಿ ಎಲೆಕ್ಟ್ರೋಡ್ ಅನ್ನು ಅಳವಡಿಸಿದೆ" ಎಂದು ಆತ ನ್ಯೂಸ್‌ವೀಕ್‌ಗೆ ಉಲ್ಲೇಖಿಸಿದ್ದಾರೆ. ದೇಹದಿಂದ ತೀವ್ರ ರಕ್ತ ಸೋರಿಕೆಯಾಗಿದ್ದರೂ ಹಾಗೂ ಆಪರೇಷನ್‌ ಸಮಯದಲ್ಲಿ ಬಹುತೇಕ ಸಾಯುತ್ತಿದ್ದರೂ, ಇದರ ಫಲಿತಾಂಶಗಳು ಭವಿಷ್ಯದ ಕನಸಿನ ನಿಯಂತ್ರಣ ತಂತ್ರಜ್ಞಾನಗಳಿಗೆ ಅದ್ಭುತ ನಿರೀಕ್ಷೆಗಳನ್ನು ತೆರೆದಿವೆ ಎಂದು ಮಿಖೇಲ್‌ ರಾಡುಗಾ ನ್ಯೂಸ್‌ವೀಕ್‌ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.

"ಮೇ 17, 2023 ರಂದು, ನನ್ನ ಮೆದುಳಿಗೆ ಟ್ರೆಪನೇಶನ್, ಎಲೆಕ್ಟ್ರೋಡ್ ಇಂಪ್ಲಾಂಟೇಶನ್ ಮತ್ತು ಮೆದುಳಿನ ಮೋಟಾರು ಕಾರ್ಟೆಕ್ಸ್‌ನ ವಿದ್ಯುತ್ ಪ್ರಚೋದನೆಯನ್ನು ನಾನೇ ಮಾಡಿಕೊಂಡಿದ್ದೇನೆ. ಸ್ಪಷ್ಟವಾದ ಕನಸು ಕಾಣುವ ಸಮಯದಲ್ಲಿ ಮೆದುಳಿನ ಪ್ರಚೋದನೆ ಪರೀಕ್ಷಿಸಲು ನನಗೆ ಇದು ಅಗತ್ಯವಿದೆ" ಎಂದು ಅವರು ಜುಲೈ 18 ರಂದು ಫೋಟೋಗಳ  ಜೊತೆಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಮುಖಂಡನ ಅಶ್ಲೀಲ ವಿಡಿಯೋ ವೈರಲ್‌: ತನಿಖೆಗೆ ಮಹಾರಾಷ್ಟ್ರ ಡಿಸಿಎಂ ಆದೇಶ

ಇನ್ನು, ಈ ಸ್ವಯಂ ಆಪರೇಷನ್‌ ಮಾಡಿಕೊಂಡ ಬಳಿಕ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮಿಖೇಲ್‌ ರಾಡುಗಾ ಅವರು ಪೋಸ್ಟ್ ಮಾಡಿದ ಫೋಟೋಗಳನ್ನು ನೋಡಿದ್ರೆ ರಷ್ಯಾ ಮೂಲದ ವ್ಯಕ್ತಿಯ ಮುಖದ ಮೇಲೆ ಹಲವು ಬ್ಯಾಂಡೇಜ್‌ಗಳನ್ನು ತೋರಿಸುತ್ತವೆ ಮತ್ತು ತಲೆಯೊಳಗಿನ ಎಲೆಕ್ಟ್ರೋಡ್ ಅನ್ನು ತೋರಿಸುವ ಎಕ್ಸ್-ರೇ ಅನ್ನು ಫೋಟೋದಲ್ಲಿ ನೋಡಬಹುದು.

ಮಿಖೇಲ್‌ ರಾಡುಗಾ ಅವರಿಗೆ 40 ವರ್ಷ ವಯಸ್ಸಾಗಿದೆ ಮತ್ತು ಒಂದು ವರ್ಷದ ಹಿಂದೆಯೇ ತಮ್ಮ ಮೆದುಳಿನಲ್ಲಿ ಎಲೆಕ್ಟ್ರೋಡ್ ಅನ್ನು ಸ್ಥಾಪಿಸಿಕೊಳ್ಳುವ ಕಲ್ಪನೆಯನ್ನು ಪಡೆದರು. ಇವರು ನಿದ್ರಾ ಪಾರ್ಶ್ವವಾಯು, ದೇಹದ ಹೊರಗಿನ ಸ್ಥಿತಿಗಳು ಮತ್ತು ಆಸ್ಟ್ರಲ್ ಪ್ರೊಜೆಕ್ಷನ್ ಕುರಿತು ಮಾಹಿತಿಯನ್ನು ಪೋಸ್ಟ್ ಮಾಡುತ್ತಾರೆ ಎಂದು ರಷ್ಯಾ ಟುಡೇ (RT) ಹೇಳಿದೆ. 

ಇದನ್ನೂ ಓದಿ: ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕೂತ ಯುವತಿಯಿಂದ ಬೈಕ್‌ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್‌

ಇನ್ನು, ತನ್ನ ಪ್ರಯೋಗಗಳಿಗೆ ಪರೀಕ್ಷಾ ವಿಷಯವಾಗಿ ಜೂನ್‌ ತಿಂಗಳಲ್ಲಿ ತನ್ನನ್ನು ಆರಿಸಿಕೊಂಡಿರುವುದನ್ನು ಬಹಿರಂಗಪಡಿಸಿದ್ದಾರೆ. ಅವರು ಆರಂಭದಲ್ಲಿ ನರಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸುವ ಬಗ್ಗೆ ಯೋಚಿಸಿದ್ದರು, ಆದರೆ ಕಾರ್ಯಾಚರಣೆಯನ್ನು ನಡೆಸಿದ ವೈದ್ಯರಿಗೆ ಸಂಭವನೀಯ ಕ್ರಿಮಿನಲ್ ಹೊಣೆಗಾರಿಕೆಯಂತಹ ಅಂಶಗಳಿಂದಾಗಿ, ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲವನ್ನೂ ಸ್ವತಃ ಮಾಡಲು ನಿರ್ಧರಿಸಿದರು ಎಂದು RT ವರದಿ ಹೇಳುತ್ತದೆ. 
 
ಈ ಮಧ್ಯೆ, ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರು ಸುಮಾರು ಒಂದು ಲೀಟರ್ ರಕ್ತವನ್ನು ಕಳೆದುಕೊಂಡರು ಎಂದೂ ಮಾಧ್ಯಮದ ವರದಿ ತಿಳಿಸಿದೆ.

ಇದನ್ನೂ ಓದಿ: ನನಗಾಗಿ ಕಾಯ್ಬೇಡ, ಇನ್ನೊಂದು ಮದ್ವೆಯಾಗು: ಪತ್ನಿಗೆ ಸಂದೇಶ ನೀಡಿದ ಹಂತಕ!

Latest Videos
Follow Us:
Download App:
  • android
  • ios