Health Tips: ಈ ರೋಗ ಇರೋರು ಟ್ರೆಡ್ ಮಿಲ್ ಹತ್ತಲೇ ಬಾರದು
ಯೋಗ ಇರಲಿ ವ್ಯಾಯಾಮವಿರಲಿ, ಎಲ್ಲವನ್ನೂ ಎಲ್ಲರೂ ಮಾಡಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ಮಾಡ್ಬಾರದು. ಕೆಲ ಖಾಯಿಲೆ ಇರುವವರಿಗೆ ಕೆಲ ವ್ಯಾಯಾಮಗಳು ನಿಷಿದ್ಧವಾಗಿರುತ್ತವೆ. ತಿಳಿಯದೇ ವರ್ಕ್ ಔಟ್ ಮಾಡಿ ಆಮೇಲೆ ಯಡವಟ್ಟು ಮಾಡಿಕೊಳ್ಳಬಾರದು.
ಆರೋಗ್ಯ (Health) ಕರ ಜೀವನಕ್ಕೆ ವ್ಯಾಯಾಮ (Exercise) ಬಹಳ ಮುಖ್ಯ. ಪ್ರತಿ ದಿನ ದೇಹದಿಂದ ಒಂದಿಷ್ಟು ಬೆವರು (Sweat) ಹೊರಗೆ ಹೋಗ್ಬೇಕು. ಇಲ್ಲವೆಂದ್ರೆ ರೋಗ ನಮ್ಮ ದೇಹವನ್ನು ಆಶ್ರಯಿಸುತ್ತದೆ. ವ್ಯಾಯಾಮ ದೇಹವನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ವಾಕಿಂಗ್ (Walking) ಹಾಗೂ ಜಾಗಿಂಗ್ (Jogging) ಮಾಡುವಂತೆ ತಜ್ಞರು ಸಲಹೆ ನೀಡ್ತಾರೆ. ವ್ಯಾಯಾಮಕ್ಕೆ ಸೂಕ್ತ ಸಮಯ ಅನೇಕರಿಗೆ ಸಿಗುವುದಿಲ್ಲ. ಇದೇ ಕಾರಣಕ್ಕೆ ಜಾಗಿಂಗ್ ಮಾಡುವಂತೆ ಇಲ್ಲವೆ ಕೆಲ ಸಮಯ ರನ್ನಿಂಗ್ ಮಾಡುವಂತೆ ಸಲಹೆ ನೀಡಲಾಗುತ್ತದೆ. ಬೇಗ ದೇಹಕ್ಕೆ ವ್ಯಾಯಾಮ ಸಿಗುತ್ತದೆ ಎನ್ನುವ ಕಾರಣಕ್ಕೆ ಜನರು ಟ್ರೆಡ್ ಮಿಲ್ (Treadmill) ಆಯ್ಕೆ ಮಾಡಿಕೊಳ್ತಾರೆ. ಅನೇಕರ ಮನೆಯಲ್ಲಿಯೇ ಟ್ರೆಡ್ ಮಿಲ್ ಸ್ಥಾನ ಪಡೆದಿರುತ್ತದೆ. ಟ್ರೆಡ್ ಮಿಲ್ (Thread Mill) ನಲ್ಲಿ ಓಡೋದು ಸುಲಭ. ಆದರೆ ಟ್ರೆಡ್‌ಮಿಲ್‌ನಲ್ಲಿ ಓಡುವುದು ಎಲ್ಲರಿಗೂ ಪ್ರಯೋಜನಕಾರಿಯಲ್ಲ ಎಂಬುದು ಅನೇಕರಿಗೆ ತಿಳಿದಿಲ್ಲ. ತಜ್ಞರ ಪ್ರಕಾರ, ಎಲ್ಲರೂ ಟ್ರೆಡ್ ಮಿಲ್ ನಲ್ಲಿ ಓಡುವುದು ಒಳ್ಳೆಯದಲ್ಲ. ಇದ್ರಿಂದ ಅಪಾಯ ಎದುರಿಸಬೇಕಾಗುತ್ತದೆ.
ಟ್ರೆಡ್‌ಮಿಲ್‌ನಲ್ಲಿ ಓಡುವುದು ಎಷ್ಟು ಸುರಕ್ಷಿತ? : ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವ್ಯಾಯಾಮ ಸಾಧನಗಳು ಮಾರುಕಟ್ಟೆಗೆ ಬಂದಿವೆ. ಜನರು ಅನುಕೂಲಕ್ಕೆ ತಕ್ಕಂತೆ ಅದನ್ನು ಖರೀದಿಸಿ ಮನೆಗೆ ತರ್ತಾರೆ. ಅನೇಕರು ಟ್ರೆಡ್‌ಮಿಲ್ ಬಳಸ್ತಾರೆ. ಟ್ರೆಡ್ ಮಿಲ್ ನಲ್ಲಿಯೂ ಅನೇಕ ವಿಧಗಳಿವೆ. ಜಿಮ್ ಗಳಲ್ಲಿ ಟ್ರೆಡ್ ಮಿಲ್ ಸಾಮಾನ್ಯವಾಗಿ ಇರುತ್ತದೆ. ಜಿಮ್ ನಲ್ಲಿ ಟ್ರೆಡ್ ಮಿಲ್ ಬಳಸುವವರ ಸಂಖ್ಯೆಯೂ ಸಾಕಷ್ಟಿದೆ. ಇದು ಏರೋಬಿಕ್ ವ್ಯಾಯಾಮದಂತೆ ಪ್ರಯೋಜನಕಾರಿಯಾಗಿದೆ. ಆದ್ರೆ ಎಲ್ಲರೂ ಟ್ರೆಡ್ ಮಿಲ್ ಬಳಸುವುದು ಸೂಕ್ತವಲ್ಲ. ಕೆಲ ಆರೋಗ್ಯ ಸಮಸ್ಯೆಯಿರುವವರು ಅಪ್ಪಿತಪ್ಪಿಯೂ ಅದನ್ನು ಬಳಸಬಾರದು. ಇಂದು ನಾವು ಯಾರು ಮತ್ತೆ ಯಾಕೆ ಟ್ರೆಡ್ ಮಿಲ್ ನಲ್ಲಿ ಓಡ್ಬಾರದು ಎಂಬುದನ್ನು ನಿಮಗೆ ಹೇಳ್ತೇವೆ.
ಟ್ರೆಡ್ ಮಿಲ್ ನಲ್ಲಿ ಈ ಆರೋಗ್ಯ ಸಮಸ್ಯೆ ಇರೋರು ಓಡ್ಬಾರದು :
ಬೊಜ್ಜು ಹೆಚ್ಚಿರುವ ಮಂದಿ : ತೂಕ ಹೆಚ್ಚಾಗ್ತಿದ್ದಂತೆ ಜನರು ವ್ಯಾಯಾಮಕ್ಕೆ ಶರಣಾಗ್ತಾರೆ. ದಿನದಲ್ಲಿ ಒಂದು ಗಂಟೆಯಾದ್ರೂ ವ್ಯಾಯಾಮ ಮಾಡ್ಬೇಕೆಂಬ ಸಂಕಲ್ಪ ಮಾಡ್ತಾರೆ. ತೂಕ ಹೆಚ್ಚಿರುವ ಮಂದಿ ಟ್ರೆಡ್ ಮಿಲ್ ಹತ್ತುತ್ತಾರೆ. ಆದ್ರೆ ಹೆಚ್ಚು ಬೊಜ್ಜು ಹೊಂದಿದ್ದರೆ ನೀವು ಟ್ರೆಡ್ ಮಿಲ್ ನಲ್ಲಿ ಓಡ್ಬಾರದು. ಏಕೆಂದರೆ ಸ್ಥೂಲಕಾಯದ ಜನರು ಸಾಮಾನ್ಯವಾಗಿ ಕೀಲು ನೋವಿನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೀಲು ನೋವಿರುವ ಜನರಿಗೆ ಟ್ರೆಡ್ ಮಿಲ್ ಒಳ್ಳೆಯದಲ್ಲ. ಕೀಲು ನೋವು ಇದ್ರಿಂದ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಬೊಜ್ಜು ಹೆಚ್ಚಿದ್ದು, ಕೀಲು ನೋವಿನ ಸಮಸ್ಯೆಯಿದೆ ಎನ್ನುವವರು ಅಪ್ಪಿತಪ್ಪಿಯೂ ಟ್ರೆಡ್ ಮಿಲ್ ನಲ್ಲಿ ಓಡಬೇಡಿ.
ಕರಿದ ತಿಂಡಿ, ಸ್ವೀಟ್ಸ್ ತಿಂದ ಬಳಿಕ ಬಿಸಿ ನೀರು ಕುಡಿದ್ರೆ ತೂಕ ಇಳಿಯುತ್ತೆ!
ಅಸ್ಥಿರಂಧ್ರತೆ (ಆಸ್ಟಿಯೊಪೊರೋಸಿಸ್) ನಿಂದ ಬಳಲುವ ಜನರು : ಅಸ್ಥಿರಂಧ್ರತೆ ಅಂದ್ರೆ ಆಸ್ಟಿಯೊಪೊರೋಸಿಸ್ ಮೂಳೆಗೆ ಸಂಬಂಧಿಸಿದ ರೋಗವಾಗಿದೆ. ಇದ್ರಲ್ಲಿ ಮೂಳೆಗಳು ಬಿರುಕುಬಿಡುವ ಹಾಗೂ ಮುರಿಯುವ ಅಪಾಯವಿರುತ್ತದೆ. ಅಸ್ಥಿರಂಧ್ರತೆ ಸಮಸ್ಯೆಯನ್ನು ಎದುರಿಸುತ್ತಿರುವವರು ತೂಕ ಇಳಿಕೆ ಕಾರಣಕ್ಕೆ ಟ್ರೆಡ್ ಮಿಲ್ ಹತ್ತಿದ್ರೆ ಅಪಾಯ ನಿಶ್ಚಿತ. ಮೊದಲೇ ದುರ್ಬಲವಾಗಿರುವ ಮೂಳೆ ಟ್ರೆಡ್ ಮಿಲ್ ಏರಿದಾಗ ಮುರಿಯುವ ಸಾಧ್ಯತೆಯಿರುತ್ತದೆ.
ಪುರುಷರಿಗೆ ಆತಂಕಕಾರಿ ಸುದ್ದಿ: ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ..!
ಮಂಡಿ ನೋವಿನ ಸಮಸ್ಯೆ : ಮೊದಲೇ ಹೇಳಿದಂತೆ ಎಲ್ಲ ವ್ಯಾಯಾಮವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಹಾಗೆ ಮಂಡಿ ನೋವಿರುವವರು ಕೆಲ ವ್ಯಾಯಾಮಗಳನ್ನು ಮಾಡಬಾರದು. ಅವರಿಗೆ ರನ್ನಿಂಗ್ ಸೂಕ್ತವಲ್ಲ. ಹಾಗೆ ಟ್ರೆಡ್ ಮಿಲ್ ವ್ಯಾಯಾಮ ಕೂಡ ಒಳ್ಳೆಯದಲ್ಲ. ಮಂಡಿ ನೋವು ಇದ್ರಿಂದ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಟ್ರೆಡ್ ಮಿಲ್ ನಲ್ಲಿ ಓಟ ಶುರು ಮಾಡುವ ಮೊದಲು ಈ ಎಲ್ಲ ಸಮಸ್ಯೆ ನಿಮಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಯಾವುದೇ ಸಮಸ್ಯೆಯಿಲ್ಲವೆಂದಾದ್ರೆ ಟ್ರೆಡ್ ಮಿಲ್ ಏರಿ.