ಸದ್ಯ ಅಸಂಖ್ಯ ಪಿಪಿಇ ಕಿಟ್, ಗ್ಲೌಸ್, ಮಾಸ್ಕ್‌ನಿಂದ ವೇಸ್ಟ್ ತುಂಬಿ ಹೋಗಿದೆ. ಈ ಸಂದರ್ಭ ಭಾರತದ ಯುವಕನೊಬ್ಬ ಇದನ್ನೇ ಬಂಡವಾಳ ಮಾಡಿಕೊಂಡು ಪರಿಸರ ಸ್ನೇಹಿ ಇಟ್ಟಿಗೆಗಳನ್ನು ತಯಾರಿಸುತ್ತಿದ್ದಾನೆ.

ದಿನದಿಂದ ದಿನಕ್ಕೆ ಮಾಲೇನ್ಯ ಹೆಚ್ಚಾಗುತ್ತಿರುವ ಸಂದರ್ಭ ಕೊರೋನಾದಿಂದಾಗಿ ಮೆಡಿಕಲ್ ವೇಸ್ಟ್ ಕೂಡಾ ಹೆಚ್ಚಾಗಿದೆ. ಆದರೆ ಯುವಕನ ಹೊಸ ಐಡಿಯಾ ಈ ವೇಸ್ಟ್ ನಿರ್ವಹಣೆಗೆ ಸುಲಭ ದಾರಿ ಮಾಡಿಕೊಟ್ಟಿದೆ.

10 ಪಟ್ಟು ಶಕ್ತಿಯುತವಾಗಿ ಬಂದಿದೆ ಹೊಸ ಕೊರೋನಾ D614G: ಮಲೇಷ್ಯಾದಲ್ಲಿ ಸಿಕ್ತು ಡೆಡ್ಲಿ ವೈರಸ್ ಸೂಚನೆ

ಗುಜಾತಿನ 27 ವರ್ಷದ ಯುವಕ ಈ ಸಮಸ್ಯೆಗೆ ಹೊಸ ಪರಿಹಾರದ ಜೊತೆ ಬಂದಿದ್ದಾನೆ. ರಿಸೈಕಲ್ ಮ್ಯಾನ್ ಆಫ್ ಇಂಡಿಯಾ ಎಂದೇ ಕರೆಯಲ್ಪಡುವ ಬಿನೀಶ್ ದೇಸಾಯ್ ಫ್ಯಾಬ್ರಿಕ್ ಮೂಲಕ ಈಗ ಪರಿಸರ ಸ್ನೇಹಿ ಇಟ್ಟಿಗೆ ತಯಾರಿಸುತ್ತಿದ್ದಾನೆ.

ದೇಶದಲ್ಲಿ ಒಂದು ದಿನಕ್ಕೆ ಕೊರೋನಾಗೆ ಸಂಬಂಧಿಸಿ 101 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎಂದು ಕೇಂದ್ರ ಮಾಲೀನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಕೊರೋನಾಗಿಂತ ಮುಂಚೆ ದಿನಕ್ಕೆ 609 ಮೆಟ್ರಿಕ್ ಕೆಜಿ ತ್ಯಾಜ್ಯಾ ಉತ್ಪಾದನೆಯಾಗುತ್ತಿತ್ತು. ಇದೀಗ ಒಟ್ಟು 710 ಮೆಟ್ರಿಕ್ ಟನ್ ತ್ಯಾಜ್ಯ ಪ್ರತಿದಿನ ಉತ್ಪಾದನೆಯಾಗುತ್ತಿದೆ. ಈ ಹಿಂದೆ ಬಿನೀಶ್ ಪೇಪರ್ ವೇಸ್ಟ್, ಚ್ಯೂಯಿಂಗ್ ಗಮ್ ಹಾಗೂ ಇತರ  ಜೈವಿಕ ವಸ್ತುಗಳಿಂದ ಪಿ-ಬ್ರಿಕ್ಸ್ ಇಟ್ಟಿಗೆ ತಯಾರಿಸಿದ್ದ.

ಪಿ-ಬ್ರಿಕ್ಸ್ 2.0

ಇಟ್ಟಿಗೆ ತಯಾರಿಸುವ ವಿಧಾನ ಮೊದಲನಿದ್ದೇ ಆಗಿದೆ. ಆದರೆ ಈಗ ಮಸ್ಕ್, ಪಿಪಿಇ ಕಿಟ್, ಗ್ಲೌಸ್ ಬಳಸಲಾಗುತ್ತಿದೆ. ಮನೆಯಲ್ಲೇ ಲ್ಯಾಬ್‌ನಲ್ಲಿ ಪರೀಕ್ಷೆ  ನಡೆಸಿದೆ. ನಂತರ ನನ್ನ ಫ್ಯಾಕ್ಟರಿಯಲ್ಲಿ ಮಾಡಿದೆ ಎಂದಿದ್ದಾರೆ ಬಿನೀಶ್.

ಇಟ್ಟಿಗೆ 12*8*4 ಇಂಚು ಅಳತೆಯ ಗಾತ್ರವಿದೆ. ಪಿ ಬ್ಲಾಕ್‌ಗೆ ಹೋಲಿಸಿದಲ್ಲಿ ಇದು ಕಡಿಮೆ ಭಾರತ ಮತ್ತು ಗಟ್ಟಿಯಾಗಿದೆ ಎನ್ನಲಾಗಿದೆ. ಒಂದು ಇಟ್ಟಿಗೆ ಬೆಲೆ 2.8 ರೂಪಾಯಿ. ಬಿನೀಶ್ ಪರಿಸರ ಸ್ನೀಹಿ ಬಿನ್ ತಯಾರಿಸಲು ಉದ್ದೆಶಿಸಿದ್ದು, ಇದರಲ್ಲಿ ಮೆಡಿಕಲ್ ವೇಸ್ಟ್ ಹಾಕಿ 72 ಗಂಟೆ ಕಳೆದು ಅದನ್ನು ಮುಟ್ಟಲಾಗುತ್ತದೆ. ನಂತರ ಇದರಿಂದ ಇಟ್ಟಿಗೆ ತಯಾರಿಸುವ ಪ್ಲಾನ್ ಹೊಂದಿದ್ದಾರೆ ಬಿನೀಶ್