ಕೊರೋನಾ ವೈರಸ್‌ನಲ್ಲಿ ವಿವಿಧ ರೂಪ ಇದೆ. ಈ ಪ್ರತಿ ರೂಪವೂ ತನ್ನ ಶಕ್ತಿ, ಸಾಮರ್ಥ್ಯದಲ್ಲಿ ವ್ಯತ್ಯಸ್ತವಾಗಿದೆ. ಇದೀಗ ಮಲೇಷ್ಯಾದಲ್ಲಿ ನಾರ್ಮಲ್ ಕೊರೋನಾ ವೈರಸ್‌ಗಿಂತ 10 ಪಟ್ಟು ಡೆಡ್ಲಿ ಆಗಿರುವ ವೈರಸ್ ವರ್ಷನ್ ಪತ್ತೆಯಾಗಿದೆ.

ನೊವೆಲ್ ಕೊರೋನಾ ವೈರಸ್‌ನ ಹೊಸ ರೂಪಾಂತರ D614G ಈಗಿರುವ ವೈರಸ್‌ಗಿಂದ 10 ಪಟ್ಟು ಡೆಡ್ಲಿಯಾಗಿದೆ. ಇದು ಈಗಾಗಲೇ ಮಲೇಷ್ಯಾದಲ್ಲಿ ಪತ್ತೆಯಾಗಿರುವುದು ಇನ್ನಷ್ಟು ಆತಂಕದ ವಿಚಾರ. ಆರೋಗ್ಯ ನಿರ್ದೇಶಕ ನೂರ್ ಹಿಶಮ್ ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಸೋಂಕಿನಿಂದ ರಕ್ಷಿಸಿ ಇಮ್ಯೂನಿಟಿ ಹೆಚ್ಚಿಸುವ 9 ಆಹಾರಗಳಿವು

ಈ ಕೊರೋನಾ ರೂಪಾಂತರ ಮಲೇಷ್ಯಾದಲ್ಲಿ ಪತ್ತೆಯಾದ ಮೂರು ಪ್ರಕರಣಗಳಲ್ಲಿ ಕಾಣಿಸಲ್ಪಟ್ಟಿದೆ. ಮೇಷ್ಯಾದ ಹೋಟೆಲ್ ಉದ್ಯಮಿ ಹಾಗೂ ನಿವಾಸಿಯೊಬ್ಬರು ಭಾರತಕ್ಕೆ ಹೋಗಿ ಬಂದ ಮೇಲೆ ಇದು ಪತ್ತೆಯಾಗಿದೆ. ಇದೀಗ ಫಿಪಿಪ್ಪೈನ್ಸ್‌ನಿಂದ ಮರಳುತ್ತಿರುವವರಲ್ಲಿಯೂ ಇದು ಪತ್ತೆಯಾಗುತ್ತಿದೆ ಎಂದಿದ್ದಾರೆ.

ಈ ರೂಪಾಂತರದಿಂದಾಗಿ ಇದೀಗ ನಡೆಸಿದ ಅಧ್ಯಯನ, ಲಸಿಕೆ ಸಂಶೊಧನೆ ಎಲ್ಲವೂ ಪರಿಣಾಮಕಾರಿಯಾಗದಿರುವ ಸಾಧ್ಯತೆ ಇದೆ. ಎಂದಿದ್ದಾರೆ. ಫೀಲ್ಡ್‌ನಲ್ಲಿ ಆರೋಗ್ಯ ಕಾರ್ಯಕರ್ತರ ಶ್ರಮದಿಂದಾಗಿ ಕೊರೋನಾ ನಿಯಂತ್ರಣ ಮಾಡಲಾಗುತ್ತಿದೆ. ಆದರೆ ಇದು ಆರಂಭಿಕ ಪರೀಕ್ಷೆ. ಆ ನಂತರ ಪತ್ತೆಯಾದ ಸೋಂಕಿತರಲ್ಲೂ ವೈರಸ್ ಪರೀಕ್ಷೆ ಮಾಡಲಾಗುತ್ತಿದೆ.

ಸಮುದ್ರ ಆಹಾರ ಪ್ಯಾಕೆಜಿಂಗ್‌ನಲ್ಲಿ ಕೊರೋನಾ ಪತ್ತೆ, ಚೀನಾಕ್ಕೆ ಏನ್ ಹೇಳೋದು ಮತ್ತೆ!

ಜನರು ಹೆಚ್ಚು ಜಾಗೃತರಾಗಿರಬೇಕಾಗಿದೆ. ರೂಪಾಂತರಗೊಂಡ ಕೊರೋನಾ ಇತರ ಜನರಿಗೆ 10 ಪಟ್ಟು ಹೆಚ್ಚು ಸೋಂಕು ತರುತ್ತದೆ. ಒಬ್ಬ ವ್ಯಕ್ತಿ 'ಸೂಪರ್ ಸ್ಪ್ರೆಡರ್' ಆಗಿ ಬದಲಾಗಿ ಸುಲಭವಾಗಿ ಅತಿ ಹೆಚ್ಚು ಜನರಿಗೆ ಕೊರೋನಾ ಹರಡಬಲ್ಲ ಎಂದಿದ್ದಾರೆ.

ಕೊರೋನಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಲೇಷ್ಯಾ ಜನರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಸ್ವಚ್ಛತೆ ಕಾಪಾಡಿ, ಆರೋಗ್ಯ ವೃದ್ಧಿಸಿಕೊಳ್ಳುವಂತೆ ಹೇಳಲಾಗಿದೆ ಎಂದಿದ್ದಾರೆ.