Asianet Suvarna News Asianet Suvarna News

ಗರ್ಭಿಣಿಯಾದ್ರೆ ಓಕೆ, ಅಲ್ಲದಿದ್ದರೆ ಬೆಳಗ್ಗೆ ಎದ್ದ ಕೂಡಲೇ ವಾಂತಿಯಾದ್ರೆ ನಿರ್ಲಕ್ಷಿಸಬೇಡಿ!

ಬೆಳಿಗ್ಗೆ ಆದ್ರೆ ಅನೇಕರು ಬಾತ್ ರೂಮಿಗೆ ಓಡ್ತಾರೆ. ಕೆಲವರಿಗೆ ವಾಂತಿ ಬಂದ್ರೆ ಮತ್ತೆ ಕೆಲವರಿಗೆ ವಾಕರಿಕೆಯ ಅನುಭವವಾಗುತ್ತದೆ. ಒಂದೋ ಎರಡೋ ದಿನ ಹೀಗಾದ್ರೆ ಓಕೆ. ಪ್ರತಿ ದಿನ ಬೆಳಿಗ್ಗೆ ವಾಂತಿಯಾಗ್ತಿದ್ದರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. 
 

Reason Behind Vomiting In Morning On Empty Stomach
Author
First Published Feb 4, 2023, 2:27 PM IST

ನಿರಂತರ ಹೊಟೇಲ್ ಆಹಾರ ಸೇವನೆ ಮಾಡಿದಾಗ ಇಲ್ಲವೆ ಸರಿಯಾಗಿ ನೀರು ಸೇವನೆ ಮಾಡದಿದ್ದಾಗ ಆರೋಗ್ಯ ಹದಗೆಡುತ್ತದೆ. ಅತಿಯಾದ ಸೇವನೆ ಮತ್ತು ಅನಾರೋಗ್ಯಕರ ಸೇವನೆ ಕೂಡ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದ್ರಿಂದ ವಾಂತಿ, ವಾಕರಿಕೆ ಕಾಣಿಸಿಕೊಳ್ಳುತ್ತದೆ. ಆಯುರ್ವೇದದ ಪ್ರಕಾರ, ಪಿತ್ತದ ಸಮಸ್ಯೆ ಕಾಣಿಸಿಕೊಂಡಾಗಲೂ ವಾಕರಿಕೆ, ವಾಂತಿ ಸಮಸ್ಯೆ ಕಾಡುತ್ತದೆ. ಆದ್ರೆ ಕೆಲವರಿಗೆ ನಿತ್ಯದ ಜೀವನದಲ್ಲೂ ಈ ಸಮಸ್ಯೆ ಕಾಡುತ್ತದೆ. ಯಾವುದೇ ಅನಾರೋಗ್ಯಕರ ಆಹಾರ ಸೇವನೆ ಮಾಡಿಲ್ಲವೆಂದ್ರೂ ಬೆಳಿಗ್ಗೆ ಎದ್ದ ತಕ್ಷಣ ಸುಸ್ತು, ವಾಂತಿ, ವಾಕರಿಕೆಯನ್ನು ಅವರು ಅನುಭವಿಸುತ್ತಾರೆ.

ಇದು ಸಾಮಾನ್ಯವೆನ್ನಿಸಿದ್ರೂ ಸಾಮಾನ್ಯವಲ್ಲ. ಈ ಬಗ್ಗೆ ಜನರು ಗಂಭೀರವಾಗಬೇಕು. ಪ್ರತಿ ದಿನ ಬೆಳಿಗ್ಗೆ ನಿಮಗೂ ವಾಂತಿ (Vomiting) ಅಥವಾ ವಾಕರಿಕೆ ಕಾಣಿಸಿಕೊಳ್ತಿದ್ದರೆ ನಿರ್ಲಕ್ಷ್ಯ ಮಾಡ್ಬೇಡಿ. ಇದು ಬೇರೆ ಖಾಯಿಲೆ (disease) ಗೆ ಕಾರಣವಾಗಿರಬಹುದು. ಹಾಗಾಗಿ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ನಾವಿಂದು ಬೆಳಿಗ್ಗೆ ವಾಂತಿ ಅಥವಾ ವಾಕರಿಕೆ ಕಾಡಲು ಕಾರಣವೇನು ಎಂಬುದನ್ನು ನಿಮಗೆ ಹೇಳ್ತೆವೆ. 

Train Travel: ಚಳಿಗಾಲದಲ್ಲೂ ಎಸಿ ಕೋಚ್ ಗೆ ಯಾಕೆ ನೀಡ್ಬೇಕು ಹೆಚ್ಚಿನ ಹಣ..!

ಬೆಳಿಗ್ಗೆ ಖಾಲಿ ಹೊಟ್ಟೆ (Stomach) ಯಲ್ಲಿ ವಾಂತಿ – ವಾಕರಿಕೆ ಕಾಡಲು ಕಾರಣ :

ಆತಂಕ (Anxiety) ದಿಂದ ಹೆಚ್ಚಾಗುತ್ತೆ ಸಮಸ್ಯೆ : ಆತಂಕ ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ನಮಗೆ ಆತಂಕವಾಗಿದೆ ಎನ್ನುವುದು ತಿಳಿಯೋದಿಲ್ಲ. ಆದ್ರೆ ಸಣ್ಣ ಸಣ್ಣ ವಿಷ್ಯಕ್ಕೆ ನಾವು ಒತ್ತಡಕ್ಕೆ ಒಳಗಾಗ್ತೇವೆ. ಇದು ನಮ್ಮ ಮನಸ್ಸಿನ ಮೇಲೆ ಮಾತ್ರವಲ್ಲದೆ ದೇಹದ ಆರೋಗ್ಯವನ್ನೂ ಹಾಳು ಮಾಡುತ್ತದೆ.  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕರಿಕೆ ಅಥವಾ ವಾಂತಿ ಕಾಡ್ತಿದ್ದರೆ ಇದರ ಹಿಂದಿನ ಕಾರಣ ಆತಂಕವಾಗಿರಬಹುದು. ಆತಂಕದಿಂದ ನಿಮಗೆ ಮತ್ತೆ ಮತ್ತೆ ವಾಂತಿ ಬರುತ್ತಿದೆ. ಪ್ರತಿ ದಿನ ಬೆಳಿಗ್ಗೆ ಇದೇ ಸಮಸ್ಯೆ ನಿಮ್ಮನ್ನು ಹೈರಾಣ ಮಾಡಿದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. 

ಲೋ ಬ್ಲಡ್ ಶುಗರ್ (Low Blood Sugar) : ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಿದ್ದಾಗ್ಲೂ ವಾಂತಿ, ವಾಕರಿಕೆ ಸಮಸ್ಯೆ ಕಾಡುತ್ತದೆ. ವಾಂತಿ ಜೊತೆ ತಲೆಸುತ್ತು ಕೂಡ ನಿಮ್ಮನ್ನು ಕಾಡಬಹುದು. ಕೆಲವರು ಪ್ರಜ್ಞೆ ತಪ್ಪುತ್ತಾರೆ. ನಿಮಗೆ ಲಫ ಬ್ಲಡ್ ಶುಗರ್ ಸಮಸ್ಯೆಯಿದ್ದು, ಬೆಳಿಗ್ಗೆ ವಾಂತಿಯಾಗ್ತಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.

ದೀರ್ಘ ಕಾಲ ಉಪಹಾರ ಸೇವನೆ ಮಾಡದಿರುವುದು : ಬೆಳಿಗ್ಗೆ ಉಪಹಾರ ಸೇವನೆಯನ್ನು 8 ಗಂಟೆಗೆ ಮಾಡ್ಬೇಕೆಂದು ತಜ್ಞರು ಹೇಳ್ತಾರೆ. ಕೆಲಸದ ಕಾರಣ ಅನೇಕರು ಬೆಳಿಗ್ಗೆ ಬೇಗ ಆಹಾರ ಸೇವನೆ ಮಾಡೋದಿಲ್ಲ. ಬೆಳಿಗ್ಗೆ ಬೇಗ ಎದ್ದರೂ ಉಪಹಾರ ಸೇವನೆಯನ್ನು ಬೆಳಿಗ್ಗೆ 10 – 11 ಗಂಟೆಗೆ ಮಾಡುವವರಿದ್ದಾರೆ. ದೀರ್ಘಕಾಲ ಖಾಲಿ ಹೊಟ್ಟೆಯಲ್ಲಿ ಇರುವುದ್ರಿಂದ ವಾಂತಿ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಹಸಿವಿನಿಂದ ತಲೆಸುತ್ತು ಬರಬಹುದು. ಹಾಗಾಗಿ ಪ್ರತಿ ದಿನ ಆದಷ್ಟು ಬೇಗ ಉಪಹಾರ ಸೇವನೆ ಮಾಡಿ. ಯಾವುದೇ ಕಾರಣಕ್ಕೂ ಬೆಳಿಗ್ಗೆ ಉಪಹಾರ ಸೇವನೆ ಮಾಡದೆ ಕೆಲಸಕ್ಕೆ ಹೋಗ್ಬೇಡಿ.

ಬೊಜ್ಜು ಹೆಚ್ತಾ ಇದ್ಯಾ, ಇಗ್ನೋರ್ ಮಾಡ್ಬೇಡಿ ಅನಾರೋಗ್ಯ ಲಕ್ಷಣ ಇದಾಗಿರಬಹುದು!

ಮೈಗ್ರೇನ್ ಕೂಡ ಕಾರಣವಿರಬಹುದು : ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ವಾಂತಿ ಅಥವಾ ವಾಕರಿಕೆ ಕಾಣಿಸಿಕೊಳ್ತಿದ್ದರೆ ಇದಕ್ಕೆ ಮೈಗ್ರೇನ್ ಅಥವಾ ತಲೆನೋವಿನ ಕಾರಣವಿರಬಹುದು. ಕೆಲ ಜನರು ಕ್ಲಸ್ಟರ್ ತಲೆನೋವಿನಿಂದ ವಾಕರಿಕೆ ಅನುಭವಿಸುತ್ತಾರೆ. ವಾಂತಿಯಾಗ್ತಿದ್ದರೆ ಅದನ್ನು ನಿರ್ಲಕ್ಷ್ಯಿಸಬೇಡಿ. ಅದಕ್ಕೆ ಕಾರಣವೇನು ಎಂಬುದನ್ನು ಮೊದಲು ಪತ್ತೆ ಮಾಡಿ. ನಂತ್ರ ಸೂಕ್ತ ಚಿಕಿತ್ಸೆ ಪಡೆಯಿರಿ. ಇಲ್ಲವೆಂದ್ರೆ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು. ನಿರಂತರ ವಾಂತಿ ನಮ್ಮ ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿರುವ ನೀರಿನಾಂಶ ಕಡಿಮೆಯಾಗುತ್ತದೆ. ಇದ್ರಿಂದ ಮತ್ತೊಂದಿಷ್ಟು ಹೊಸ ಖಾಯಿಲೆ ಹುಟ್ಟಿಕೊಳ್ಳುತ್ತದೆ.  
 

Follow Us:
Download App:
  • android
  • ios