ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯೊಳಗಿದ್ದ 13 ಹೇರ್‌ಪಿನ್‌, 5 ಸೇಫ್ಟಿಪಿನ್‌ ಮತ್ತು 8 ರೇಜರ್‌ ಬ್ಲೇಡ್‌ಗಳನ್ನು ಎಂಡೋಸ್ಕೋಪಿಕ್‌ ವಿಧಾನದಿಂದ ವೈದ್ಯರು ಹೊರತೆಗೆದ ವಿಚಿತ್ರ ಘಟನೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. 

ಪುದುಚೇರಿ: ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯೊಳಗಿದ್ದ 13 ಹೇರ್‌ಪಿನ್‌, 5 ಸೇಫ್ಟಿಪಿನ್‌ ಮತ್ತು 8 ರೇಜರ್‌ ಬ್ಲೇಡ್‌ಗಳನ್ನು ಎಂಡೋಸ್ಕೋಪಿಕ್‌ ವಿಧಾನದಿಂದ ವೈದ್ಯರು ಹೊರತೆಗೆದ ವಿಚಿತ್ರ ಘಟನೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವ್ಯಕ್ತಿ ಬಹಳ ಕಾಲದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಕೆಲವು ದಿನಗಳಿಂದ ಭಾರಿ ಹೊಟ್ಟೆನೋವಿಂದ ಬಳಲುತ್ತಿದ್ದ ಕಾರಣ ಸ್ಕ್ಯಾನ್ (scan)ಮಾಡಿದಾಗ ಪಿನ್‌ ಹಾಗೂ ಬ್ಲೇಡ್‌ ಹೊಟ್ಟೆಯೊಳಗಿರುವುದು ಪತ್ತೆಯಾಗಿದೆ. ಅದೃಷ್ಟವಶಾತ್‌ ಈ ಚೂಪಾದ ವಸ್ತುಗಳು ಯಾವುದೂ ಕೂಡ ಆತನ ಹೊಟ್ಟೆಯ ಒಳಗೆ ಯಾವುದೇ ಗಾಯ ಮಾಡಿರಲಿಲ್ಲ. ಸುಮಾರು 2 ಗಂಟೆಗಳ ಕಾಲ ಎಂಡೋಸ್ಕೋಪಿ ನಡೆಸಿದ ವೈದ್ಯರು, ಯಶಸ್ವಿಯಾಗಿ ಎಲ್ಲಾ ವಸ್ತುಗಳನ್ನು ಹೊರ ತೆಗೆದಿದ್ದಾರೆ. ಇವುಗಳನ್ನು ಆಹಾರದ ಜೊತೆ ಬೆರೆಸಿ ತಿಂದಿರಬೇಕು ಎಂದು ವೈದ್ಯರು ಹೇಳಿದ್ದು, ಆರೋಗ್ಯ ಸ್ಥಿರವಾಗಿರುವ ಕಾರಣದಿಂದ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ವೈದ್ಯಲೋಕಕ್ಕೆ ಅಚ್ಚರಿ.. ಹುಟ್ಟಿದ ಮಗುವಿನ ಹೊಟ್ಟೆಯಲ್ಲಿತ್ತು ಭ್ರೂಣ!

ಅಬ್ಬಬ್ಬಾ..ಮೂರು ಹೊತ್ತು ಕೂದಲನ್ನೇ ತಿನ್ತಿದ್ಲಾ? ಬಾಲಕಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 1 ಕೆಜಿ ಕೂದಲು!